ಬಿಗ್‌ಬಾಸ್: ಕಮಲ್ ಹಾಸನ್ ಬದಲಿಗೆ ಮತ್ತೊಬ್ಬ ಸ್ಟಾರ್ ನಟ ನಿರೂಪಕ

ತಮಿಳು ಬಿಗ್‌ಬಾಸ್‌ನಿಂದ ನಟ ಕಮಲ್ ಹಾಸನ್ ಹಿಂದೆ ಸರಿದಿದ್ದಾರೆ. ಡೇಟ್ಸ್ ಸಮಸ್ಯೆಯಿಂದಾಗಿ ತಾವು ಬಿಗ್‌ಬಾಸ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದ್ದರು.

ಕಮಲ್ ಹಾಸನ್ ಬದಲಿಗೆ ಯಾರು ನಿರೂಪಣೆ ಮಾಡಲಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಹಲವು ನಟ-ನಟಿಯರ ಹೆಸರುಗಳು ನಿರೂಪಕ ಸ್ಥಾನಕ್ಕೆ ಕೇಳಿ ಬಂದಿತ್ತು. ಕಮಲ್ ಮಗಳು ಶೃತಿ ಹಾಸನ್ ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿತ್ತು ಆದರೆ ಅದೆಲ್ಲ ಸುಳ್ಳಾಗಿದೆ.

ಕಮಲ್ ಹಾಸನ್ ಸ್ಥಾನಕ್ಕೆ ತಮಿಳಿನ ಜನಪ್ರಿಯ ನಟ ಸಿಲಂಬರಸನ್ ಅವರನ್ನು ಕರೆತರಲಾಗಿದೆ. ಸಿಂಭು ಅವರು ಈ ಸೀಸನ್‌ನ ಬಿಗ್‌ಬಾಸ್ ತಮಿಳು ಶೋ ಅನ್ನು ನಡೆಸಿಕೊಡಲಿದ್ದಾರೆ.

Actor Simbhu To Anchor Bigg Boss Tamil Ultimate

ಬಿಗ್‌ಬಾಸ್ ಅಲ್ಟಿಮೇಟ್ ಶೋ ಅನ್ನು ಕಮಲ್ ನಡೆಸಿಕೊಡುತ್ತಿದ್ದರು. ಈ ಶೋ ಜನವರಿ 30 ರಂದು ಪ್ರಾರಂಭವಾಗಿತ್ತು. ಶೋ ಕೇವಲ ಒಟಿಟಿಯಲ್ಲಿ ಮಾತ್ರವೇ ಪ್ರಸಾರವಾಗುತ್ತಿದೆ. ಇದೀಗ ಕಮಲ್ ಹಠಾತ್ತನೆ ಶೋನಿಂದ ಹೊರಗೆ ಹೋದ ಕಾರಣ ಆ ಸ್ಥಾನಕ್ಕೆ ಸಿಂಭು ಬಂದಿದ್ದಾರೆ.

ರಮ್ಯ ಕೃಷ್ಣ ಅಥವಾ ಶರತ್ ಕುಮಾರ್ ಅವರುಗಳ ಹೆಸರು ಆರಂಭದಲ್ಲಿ ಕೇಳಿ ಬಂದಿತ್ತು. ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹೆಸರು ಸಹ ಜೋರಾಗಿಯೇ ಕೇಳಿ ಬಂತು ಆದರೆ ಕೊನೆಯದಾಗಿ ಸಿಂಭು ಅನ್ನು ಆಯೋಜಕರು ಖಾತ್ರಿಗೊಳಿಸಿದ್ದಾರೆ.

ಸಿಂಬು ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಕರಾಗಿ ಬರುತ್ತಿರುವ ಪ್ರೊಮೋ ಇಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿಂಬು ಒಳ್ಳೆಯ ಮಾತುಗಾರರಾಗಿದ್ದು ಶೋ ಅನ್ನು ಚೆನ್ನಾಗಿ, ಆಸಕ್ತಿದಾಯಕವಾಗಿ ನಡೆಸಿಕೊಂಡು ಹೋಗಲಿದ್ದಾರೆ ಎಂಬ ನಿರೀಕ್ಷೆ ಆಯೋಜಕರದ್ದು.

''ಲಾಕ್‌ಡೌನ್ ಹಾಗೂ ಇತರೆ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ 'ವಿಕ್ರಂ' ಸಿನಿಮಾದ ಚಿತ್ರೀಕರಣದಿಂದಾಗಿ ಇದೀಗ ಗೊಂದಲ ಏರ್ಪಟ್ಟಿದೆ. ಬಿಗ್‌ಬಾಸ್‌ಗೆ ನಾನು ಕೊಡಬೇಕಾಗಿರುವ ಸಮಯ ಹಾಗೂ 'ವಿಕ್ರಂ' ಸಿನಿಮಾಕ್ಕೆ ಕೊಟ್ಟಿದ್ದ ಸಮಯದ ನಡುವೆ 'ಕ್ಲ್ಯಾಶ್' ಆಗಿದೆ. ನನ್ನ ಹಾಗೂ ಸಿನಿಮಾದ ಇತರೆ ಪ್ರಮುಖ ನಟರ ನಡುವಿನ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ಮಾಡಬೇಕಾಗಿದ್ದು, ನನಗೆ ಡೇಟ್ಸ್ ಹೊಂದಾಣಿಕೆ ಆಗಲಿಲ್ಲವೆಂದು ಪ್ರಮುಖ ನಟರು, ತಂತ್ರಜ್ಞರನ್ನು ನನಗಾಗಿ ಕಾಯಿಸುವುದು ಸೂಕ್ತವಲ್ಲ. ಅವರೆಲ್ಲ ಅತ್ಯುತ್ತಮ ನಟರು, ತಂತ್ರಜ್ಞರಾಗಿದ್ದಾರೆ. ನನಗಾಗಿ ಅವರ ಸಮಯವನ್ನು ವ್ಯರ್ಥ ಮಾಡುವುದು ಸೂಕ್ತವಲ್ಲ ಹಾಗಾಗಿ ಬಿಗ್‌ಬಾಸ್‌ನ ಈ ಸೀಸನ್‌ನಿಂದ ನಾನು ಹೊರಗೆ ಉಳಿಯಲಿದ್ದೇನೆ'' ಎಂದಿದ್ದಾರೆ ಕಮಲ್.

More from Filmibeat

English summary
Actor Simbhu replacing Kamal Haasan in Bigg Boss ultimate. Kamal Haasan left the show to complete his Vikram movie shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X