ಬೆಡ್ ರೂಂ ಸೀನ್‌ಗಳಲ್ಲಿ ನಟಿಸಲು ತಮನ್ನಾಗೆ ದುಬಾರಿ ಸಂಭಾವನೆ:'ಟೆಸ್ಟ್ ಡ್ರೈವ್' ಎಂದು ಕೋಟಿ ಬಾಚಿದ ಅಜ್ಜಿ
ಕಳೆದೊಂದು ವಾರದಿಂದ ಮಿಲ್ಕಿ ಬ್ಯೂಟಿ ತಮನ್ನಾ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಎರಡು ವೆಬ್ ಸೀರಿಸ್‌ಗಳಲ್ಲಿ ನಟಿಸಿರೋ ತಮನ್ನಾ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದ್ದಾರೆ. ಅದಕ್ಕೆ ಕಾರಣ ಕೇವಲ ವೆಬ್ ಸೀರಿಸ್ ಅಷ್ಟೇ ಅಲ್ಲ. ಅದರಲ್ಲಿರೋ ಬೋಲ್ಡ್ ಸೀನ್ಸ್.
ತಮನ್ನಾ ಕೇವಲ ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದರೆ, ಇಷ್ಟೊಂದು ಚರ್ಚೆಯಲ್ಲಿ ಇರುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ, ಎರಡೂ ವೆಬ್ ಸೀರಿಸ್‌ನಲ್ಲೂ ಬೋಲ್ಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆಜಾನ್ ಪ್ರೈಂ ವೆಬ್ ಸೀರಿಸ್ 'ಜೀ ಕರ್ದಾ' ಒಂದಾದ್ರೆ, ಇನ್ನೊಂದು ನೆಟ್‌ಫ್ಲಿಕ್ಸ್ ಸೀರಿಸ್ 'ಲಸ್ಟ್ ಸ್ಟೋರೀಸ್ 2'.

ಈ ಎರಡೂ ವೆಬ್ ಸೀರಿಸ್‌ನಲ್ಲೂ ತಮನ್ನಾ ಹಿಂದೆಂದಿಗಿಂತಲೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ನೆಟ್‌ಫ್ಲಿಕ್ಸ್‌ನ ವೆಬ್ ಸೀರಿಸ್ 'ಲಸ್ಟ್ ಸ್ಟೋರಿಸ್ 2'ನಲ್ಲಿ ತಮನ್ನಾ ಪಾತ್ರದ ಬಗ್ಗೆನೇ ಚರ್ಚೆಯಾಗುತ್ತಿದೆ. ಇಂತಹ ಬೋಲ್ಡ್ ಸೀನ್‌ಗಳಲ್ಲಿ ನಟಿಸುವುದಕ್ಕೆ ತಮನ್ನಾ ಪಡೆದ ಸಂಭಾವನೆ ಎಷ್ಟು ಅನ್ನೋದೂ ಚರ್ಚೆಯಾಗುತ್ತಿದೆ.
ತಮನ್ನಾ ಸಂಭಾವನೆ ಎಷ್ಟು?
ತಮನ್ನಾ ಸುಮಾರು ಎರಡು ದಶಕಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಆದರೂ, 'ಲಸ್ಟ್ ಸ್ಟೋರೀಸ್ 2'ನಲ್ಲಿ ಸಿಕ್ಕಷ್ಟು ಸಂಭಾವನೆ ಸಿಕ್ಕಿಲ್ಲ ಅನ್ನೋ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದ್ದಾರೆ. ಅಲ್ಲದೆ, ನಯನತಾರಾ, ಸಮಂತಾ ಸಮಕಾಲೀನರಾದರೂ, ಅವರಷ್ಟು ಸಂಭಾವನೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಜೈಲರ್'ನಲ್ಲೂ ನಟಿಸಿದ್ದಾರೆ. ಅಂತಹ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸೋಕೆ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಅದೇ 'ಲಸ್ಟ್ ಸ್ಟೋರೀಸ್ 2'ನಂತಹ ಸ್ಮಾಲ್ ಬಜೆಟ್ ವೆಬ್ ಸೀರಿಸ್‌ಗೂ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆಂದು ವರದಿಯಾಗಿದೆ. ವೆಬ್ ಸೀರಿಸ್‌ನಲ್ಲಿ ಬೋಲ್ಡ್ ಸೀನ್‌ಗಳಲ್ಲಿ ನಟಿಸಿದ್ದೇ ಇಷ್ಟೊಂದು ದೊಡ್ಡ ಮೊತ್ತ ಸಿಗಲು ಕಾರಣ ಎನ್ನಲಾಗಿದೆ.

ಮೃಣಾಲ್, ಕಾಜೋಲ್‌ಗೂ ಸಂಬಳ ದೊಡ್ಡದೇ
ಇನ್ನು ತೆಲುಗಿನ ಸೂಪರ್ ಹಿಟ್ ಸಿನಿಮಾ 'ಸೀತಾ ರಾಮಂ'ನಲ್ಲಿ ನಟಿಸಿದ್ದ ಮೃಣಾಲ್ ಠಾಕೂರ್ 'ಲಸ್ಟ್ ಸ್ಟೋರಿಸ್ 2'ನಲ್ಲಿ ನಟಿಸಿದ್ದಾರೆ. ಈಕೆ ಕೂಡ ಬೋಲ್ಡ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಟಿ ಕೂಡ ಸುಮಾರು 3 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.
ಬಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟಿ ಕಾಜೋಲ್. ಆದರೆ, ಇತ್ತೀಚೆಗೆ ಸಿನಿಮಾಗಳಿಂದ ಕೊಂಚ ದೂರ ಉಳಿದ್ದರು. ಆದ್ರೀಗ 'ಲಸ್ಟ್ ಸ್ಟೋರೀಸ್ 2'ನಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗೂ ಸುಮಾರು 3 ಕೋಟಿ ರೂ. ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.
ಟೆಸ್ಟ್ ಡ್ರೈವ್ ಅಜ್ಜಿಗೂ ಕೋಟಿ ಸಂಭಾವನೆ
'ಲಸ್ಟ್ ಸ್ಟೋರಿಸ್ 2' ವೆಬ್ ಸೀರಿಸ್‌ನ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಅದರ ಮೊದಲ ಡೈಲಾಗ್ ಓಟಿಟಿ ಪ್ರಿಯರ ಕಣ್ಣು ಅರಳಿಸಿತ್ತು. ಅಜ್ಜಿ ಪಾತ್ರದಲ್ಲಿ ನಟಿಸಿರೋ ಬಾಲಿವುಡ್ ನಟಿ ನೀನಾ ಗುಪ್ತಾ ಮದುವೆಗೂ ಮುನ್ನ ಟೆಸ್ಟ್ ಡ್ರೈವ್ ಯಾಕೆ ಮಾಡಬಾರದು ಅನ್ನೋ ಅರ್ಥದಲ್ಲಿ ಡೈಲಾಗ್ ಬಿಟ್ಟಿದ್ದರು. ಈ ಡೈಲಾಗ್ ಬಗ್ಗೆನೇ ಮೊದಲು ಚರ್ಚೆ ಶುರುವಾಗಿತ್ತು.
ಟೆಸ್ಟ್ ಡ್ರೈವ್ ಡೈಲಾಗ್ ಬಿಟ್ಟ ನೀನಾ ಗುಪ್ತಾ ಕೂಡ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ. ಇವರಿಗೆ ಸುಮಾರು ಒಂದು ಕೋಟಿ ಸಂಭಾವನೆ ಕೊಡಲಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ ಬೋಲ್ಡ್ ದೃಶ್ಯಗಳಿರುವ ವೆಬ್ ಸೀರಿಸ್‌ನಲ್ಲಿ ನಟಿಸಿದರೆ, ದೊಡ್ಡ ಮೊತ್ತದ ಸಂಭಾವನೆಯಂತೂ ಖಚಿತ.


Click it and Unblock the Notifications











