ಕನ್ನಡದಲ್ಲೂ ನೋಡಬಹುದು ಮಕ್ಕಳ ಅಚ್ಚು ಮೆಚ್ಚಿನ ಆನಿಮೆಟೆಡ್ ಸಿನಿಮಾ 'ಕುಂಗ್ ಫೂ ಪಾಂಡ 4' : ಎಲ್ಲಿ? ಯಾವಾಗ?
ಜನಪ್ರಿಯ ಆನಿಮೆಡ್ ಸಿನಿಮಾ 'ಕುಂಗ್ ಫೂ ಪಾಂಡ' ಮಕ್ಕಳಿಗೆ ಅಚ್ಚು ಮೆಚ್ಚು. ಆನಿಮೆಷನ್ ಇಷ್ಟು ಪಡುವವರೂ ಕೂಡ ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದಿದೆ. ವಿಶ್ವದಾದ್ಯಂತ 'ಕುಂಗ್ ಫೂ ಪಾಂಡ' ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಈಗ್ಯಾಕೆ ಈ ಮಾತು ಅಂದರೆ, 'ಕುಂಗ್ ಫೂ ಪಾಂಡ' ಸರಣಿಯ ನಾಲ್ಕನೇ ಭಾಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.
'ಕುಂಗ್ ಫೂ ಪಾಂಡ 4' ಜುಲೈ 15 ರಿಂದ ಓಟಿಟಿಯಲ್ಲಿ ಪ್ರಸಾರ ಆಗಲಿದೆ. ಜಿಯೋ ಸಿನಿಮಾದಲ್ಲಿ ಈ ಜನಪ್ರಿಯ ಸಿನಿಮಾ ನೋಡುಗರಿಗೆ ಲಭ್ಯವಿರುತ್ತೆ. ಮೈಕ್ ಮಿಷೆಲ್ ಮತ್ತು ಸ್ಟೀಫನಿ ಸ್ಟೈನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಈಗಾಗಲೇ ಈ ಸಿನಿಮಾ ಥಿಯೇಟರ್‌ಗೂ ಲಗ್ಗೆ ಇಟ್ಟಿದೆ. ಇದೇ ವರ್ಷ ಮಾರ್ಚ್ 15ರಂದು ಭಾರತದಾದ್ಯಂತ ಈ ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆಯಾಗಿತ್ತು.

'ಕುಂಗ್ ಫೂ ಪಾಂಡ 4' ಸಿನಿಮಾ ವಿಶೇಷತೆ ಅಂದರೆ, ಇಲ್ಲಿ ಪೋ ತನ್ನ ಉತ್ತರಾಧಿಕಾರಿ ಹೊಸ ಡ್ರ್ಯಾಗನ್ ವಾರಿಯರ್ ಅನ್ನು ಹುಡುಕಬೇಕು. ಹಾಗೇ ತರಬೇತಿಯನ್ನು ನೀಡಬೇಕು. ಚೀನಾದ ಎಲ್ಲಾ ಕುಂಗ್-ಫೂ ಮಾಸ್ಟರ್‌ಗಳ ಸಾಮರ್ಥ್ಯಗಳನ್ನು ಕದಿಯುವ ಮೊದಲು ಡಕಾಯಿತ ನರಿ ಝೆನ್ ಜೊತೆಗೂಡಿ ದುಷ್ಟ ಮಾಂತ್ರಿಕ ಗೋಸುಂಬೆ (Chameleon) ಅನ್ನು ಸೋಲಿಸಬೇಕಿದೆ. ಈ ಎಳೆಯನ್ನು ಇಟ್ಟುಕೊಂಡು ಸಿನಿಮಾದ ಕಥೆಯನ್ನು ಹೆಣೆಯಾಗಿದ್ದು, ಮಕ್ಕಳಿಗೆ ಇಷ್ಟ ಆಗಲಿದೆ.
ಪೊ ಪಿಂಗ್ ಪಾತ್ರಕ್ಕೆ ಜಾಕ್ ಬ್ಲಾಕ್ ಧ್ವನಿಯನ್ನು ನೀಡಲು ಮತ್ತೆ ಈ ತಂಡದೊಂದಿಗೆ ಸೇರಿಕೊಂಡಿದ್ದಾರೆ. ಅವರೊಂದಿಗೆ ಏಂಜಲೀನಾ ಜೂಲಿ ಸೇಥ್ ರೋಜೆನ್, ಲೂಸಿ ಲಿಯು, ಡೇವಿಡ್ ಕ್ರಾಸ್ ಮತ್ತು ಜಾಕಿ ಚಾನ್ ಅಂತಹ ದಿಗ್ಗಜರು 'ಕುಂಗ್ ಫೂ ಪಾಂಡ 4' ಅನಿಮೆಟೆಡ್ ಸಿನಿಮಾಗೆ ಧ್ವನಿಯನ್ನು ನೀಡಿದ್ದಾರೆ. ಇವರೊಂದಿಗೆ ಹೊಸದಾಗಿ ಕೆ ಹುಯ್ ಕ್ವಾನ್, ವಿಯೋಲಾ ಡೇವಿಸ್ ಮತ್ತು ಅಕ್ವಾಫಿನಾ ಈ ಸಿನಿಮಾಗೆ ಧ್ವನಿಯನ್ನು ನೀಡಿದ್ದಾರೆ.
'ಕುಂಗ್ ಫೂ ಪಾಂಡ 4' ಸಿನಿಮಾವನ್ನು ಡ್ರೀಮ್ ವರ್ಕ್ಸ್ ಅನಿಮೇಷನ್ ನಿರ್ಮಾಣ ಸಂಸ್ಥೆ ನಿರ್ಮಿಸಿದೆ. ಇದೊಂದು ಹಾಸ್ಯ ಹಾಗೂ ಸಾಹಸಮಯ ಅನಿಮೆಟೆಡ್ ಸಿನಿಮಾ ಆಗಿದೆ. ಟಿವಿಗಿಂತ ಮುಂಚಿತವಾಗಿ ಓಟಿಟಿಯಲ್ಲಿ ರಿಲೀಸ್ ಆಗುತ್ತಿದ್ದು, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮರಾಠಿ ಮತ್ತು ಬಂಗಾಳಿ ಭಾಷೆ ಸೇರಿದಂತೆ ಒಟ್ಟು ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಹೊಸದಾಗಿ ಬಿಡುಗಡೆಯಾಗಲಿರುವ 'ಕುಂಗ್ ಫೂ ಪಾಂಡ 4' ಜಿಯೊ ಸಿನಿಮಾದಲ್ಲಿ ಜುಲೈ 15ರಿಂದ ಸ್ಟ್ರೀಮಿಂಗ್ ಆಗಲಿದೆ. ಈ ಅನಿಮೆಟೆಡ್ ಸಿನಿಮಾವನ್ನು ಸ್ಥಳೀಯ ಭಾಷೆಗಳಲ್ಲಿ ನೀಡಲು ಮುಂದಾಗಿದೆ. ಮಕ್ಕಳು ಇಷ್ಟ ಪಡುವ ಈ ಸಿನಿಮಾವನ್ನು ಕುಟುಂಬದ ಜೊತೆ ಕೂಡ ನೋಡಬಹುದಾಗಿದೆ. ಅಂದ್ಹಾಗೆ 'ಕುಂಗ್ ಫೂ ಪಾಂಡ' ಮೊದಲ ಪಾರ್ಟ್ 2008ರಲ್ಲಿ ರಿಲೀಸ್ ಆಗಿತ್ತು. ಹಾಗೇ ಮೂರನೇ ಭಾಗ 2016ರಲ್ಲಿ ಬಿಡುಗಡೆಯಾಗಿತ್ತು. ನಾಲ್ಕನೇ ಪಾರ್ಟ್ 2024, ಮಾರ್ಚ್ ತಿಂಗಳಲ್ಲಿ ರಿಲೀಸ್ ಆಗಿದೆ.
'ಕುಂಗ್ ಫೂ ಪಾಂಡ 4' ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಭಾರತದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಇಂಗ್ಲಿಷ್, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ 49 ಕೋಟಿ ರೂಪಾಯಿ ಕಲೆ ಹಾಕಿತ್ತು. ಸುಮಾರು 20 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 100 ದಿನಗಳ ಪ್ರದರ್ಶನ ಕಂಡಿತ್ತು. 'ಕುಂಗ್ ಫೂ ಪಾಂಡ 3' ರಿಲೀಸ್ ಆದ ಎಂಟು ವರ್ಷಗಳ ಬಳಿಕ ಪಾರ್ಟ್ 4 ರಿಲೀಸ್ ಆಗುತ್ತಿದ್ದರಿಂದ ಮಕ್ಕಳಲ್ಲಿ ಕುತೂಹಲ ಹೆಚ್ಚಾಗಿದೆ.


Click it and Unblock the Notifications











