ತೆಲುಗು ನಟ ನಿಖಿಲ್ ಸಿದ್ದಾರ್ಥ್ 'ಸ್ಪೈ' ಸಿನಿಮಾಗೆ ಮುಗಿಬಿದ್ದ ಅಮೆಜಾನ್,ಸ್ಟಾರ್: ಸೇಲ್ ಆದ ಮೊತ್ತವೆಷ್ಟು?

ಟಾಲಿವುಡ್‌ನ ಯುವ ನಾಯಕ ನಿಖಿಲ್ ಸಿದ್ಧಾರ್ಥ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಜನಪ್ರಿಯರಾಗಿದ್ದಾರೆ. ಅದಕ್ಕೆ ಕಾರಣ ಒಂದೇ ಒಂದು ಸಿನಿಮಾ 'ಕಾರ್ತಿಕೇಯ 2'. ಈ ಪ್ಯಾನ್ ಇಂಡಿಯಾ ಸಿನಿಮಾ ನಿಖಿಲ್ ಸಿದ್ಧಾರ್ಥ್ ಕೆರಿಯರ್ ಅನ್ನೇ ಬದಲಿಸಿಬಿಟ್ಟಿದೆ.

ನಿಖಿಲ್ ಸಿದ್ಧಾರ್ಥ್ ಟಾಲಿವುಡ್‌ ಎಂಟ್ರಿ ಕೊಟ್ಟಾಗಲೇ ಸಕ್ಸಸ್‌ಫುಲ್ ಸಿನಿಮಾಗಳನ್ನು ಕೊಟ್ಟಿದ್ದರು. ಆದರೆ, ನಂತರ ಆಯ್ಕೆ ಮಾಡಿಕೊಂಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದ್ದವು. ಇನ್ನೇನು ನಿಖಿಲ್ ಸಿದ್ಧಾರ್ಥ್ ಕೆರಿಯರ್ ಮುಗೀತು ಅನ್ನುವಾಗಲೇ 'ಕಾರ್ತಿಕೇಯ 2' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲ. ಬಾಕ್ಸಾಫೀಸ್‌ ದೋಚಿತ್ತು.

After Karthikeya 2 Nikhil Siddharths Spy film Ott and satellite rights sold for 40 Cr.

ಇಲ್ಲಿದ ನಿಖಿಲ್ ಸಿದ್ಧಾರ್ಥ್ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದಾರೆ. ಇಡೀ ದೇಶವೇ 'ಕಾರ್ತಿಕೇಯ 2' ಸಿನಿಮಾವನ್ನು ಹಾಡಿ ಹೊಗಳಿಸಿದೆ. ಈ ಗೆಲುವಿನ ಬಳಿಕ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ. ಅದುವೇ 'ಸ್ಪೈ' (Spy). ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಖರೀದಿ ಮಾಡಲಾಗಿದೆ. ಅದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ನಿಖಿಲ್ ಸಿದ್ಧಾರ್ಥ್ 'ಸ್ಪೈ' ಸಿನಿಮಾಗ್ಯಾಕಿಷ್ಟು ಬೇಡಿಕೆ?

ನಿಖಿಲ್ ಸಿದ್ಧಾರ್ಥ್ ಈ ಬಾರಿ 'ಸ್ಪೈ' ಸಿನಿಮಾಗೆ ಕೈ ಹಾಕಿದ್ದಾರೆ. ಈಗಾಗಲೇ ಹೊರಬಿದ್ದಿರೋ ಒಂದು ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ಅಲ್ಲದೆ ಈ ಸಿನಿಮಾವನ್ನು ತೆಲುಗಿನ ಪತ್ತೆದಾರಿ ಸಿನಿಮಾಗಳ ಎಡಿಟರ್ ಗ್ಯಾರಿ ಬಿಎಚ್ ಇದೇ ಮೊದಲ ಬಾರಿಗೆ ನಿರ್ದೇಶಕನಕ್ಕೆ ಕೈ ಹಾಕಿದ್ದಾರೆ.

'ಗೂಢಾಚಾರಿ', 'ಎವರು', 'ಹಿಟ್', 'ಪಾಗಲ್' ಹಾಗೂ 'ಹಿಟ್ 2' ಅಂತಹ ಸಿನಿಮಾಗಳಿಗೆ ಕತ್ತರಿ ಹಾಕಿರೋ ಗ್ಯಾರಿ 'ಸ್ಪೈ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಾರಿ ಥ್ರಿಲ್ಲರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ನಿಖಿಲ್ ಸಿದ್ಧಾರ್ಥ ರೆಡಿಯಾಗಿದ್ದಾರೆ. ಈ ಸಿನಿಮಾದ ಥಿಯೇಟರ್ ಬಿಟ್ಟು ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಖರೀದಿ ಮಾಡಲಾಗಿದೆ.

After Karthikeya 2 Nikhil Siddharths Spy film Ott and satellite rights sold for 40 Cr.

'ಕಾರ್ತಿಕೇಯಾ 2' ಕಿಕ್.. 'ಸ್ಪೈ'ಗೆ ಜಾಕ್‌ಪಾಟ್

ನಿಖಿಲ್ ಸಿದ್ಧಾರ್ಥ್ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಸ್ಪೈ'(Spy) ಬಿಡುಗಡೆಗೂ ಮುನ್ನ ಭಾರಿ ಮೊತ್ತಕ್ಕೆ ಸೇಲ್ ಆಗಿದೆ. ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಬರೋಬ್ಬರಿ 40 ಕೋಟಿ ರೂ. ವೆಚ್ಚದಲ್ಲಿ ಅಮೆಜಾನ್ ಪ್ರೈಂ ವಿಡಿಯೋ ಹಾಗೂ ಸ್ಟಾರ್ ನೆಟ್‌ವರ್ಕ್ ಜಂಟಿಯಾಗಿ ಖರೀದಿ ಮಾಡಿದೆ. ಇದು ನಿಖಿಲ್ ಸಿದ್ಧಾರ್ಥ್ ಕೆರಿಯರ್‌ನಲ್ಲೇ ದಾಖಲೆ ಮೊತ್ತಕ್ಕೆ ಮಾರಾಟವಾದ ಸಿನಿಮಾ.

'ಸ್ಪೈ' ಸಿನಿಮಾದಲ್ಲಿ ನಿಖಿಲ್ ಸಿದ್ಧಾರ್ಥ್ ಜೊತೆ ಐಶ್ವರ್ಯಾ ಮೆನನ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರ್ಯನ್ ರಾಜೇಶ್ ಸ್ಪೆಷಲ್ ಲೋಲ್‌ನಲ್ಲಿ ನಟಿಸುತ್ತಿದ್ದಾರೆ. ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಸ್ಪೈ' ಅನ್ನು ಕೆ ರಾಜಶೇಖರ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾಗೆ ಕಥೆಯನ್ನೂ ಕೂಡ ಬರೆದಿದ್ದಾರೆ.

'ಸ್ಪೈ' ಹಾಲಿವುಡ್ ತಂತ್ರಜ್ಞರ ಮೆರುಗು

ನಿಖಿಲ್ ಸಿದ್ಧಾರ್ಥ್ ಹಿಂದಿ ಬೆಲ್ಟ್‌ನಲ್ಲೂ ಜನಪ್ರಿಯರಾಗಿದ್ದಾರೆ. ಹೀಗಾಗಿ ಐದು ಭಾಷೆಗಳಿಗೂ ಸರಿಹೊಂದುವಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 'ಸ್ಪೈ' ಸಿನಿಮಾ ತೆಲುಗು, ಹಿಂದಿ, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ ಎನ್ನಲಾಗಿದೆ.

ನಿಖಿಲ್ ಸಿದ್ಧಾರ್ಥ್ 'ಕಾರ್ತಿಕೇಯ 2' ಕೇವಲ 15 ಕೋಟಿ ರೂ.ಯಲ್ಲಿ ನಿರ್ಮಾಣ ಆಗಿತ್ತು. ಆದರೆ, ಈ ಸಿನಿಮಾ ಗಳಿಸಿದ್ದು, ಬರೋಬ್ಬರಿ 121 ಕೋಟಿ ರೂ. ಹೀಗಾಗಿ 'ಸ್ಪೈ' ಸಿನಿಮಾ 'ಕಾರ್ತಿಕೇಯ 2'ಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳು ಭಾರೀ ಮೊತ್ತಕ್ಕೆ ಸೇಲ್ ಆಗಿದ್ದು ಟೀಂಗೆ ಹೊಸ ಹುರುಷು ಸಿಕ್ಕಂತಾಗಿದೆ.

More from Filmibeat

English summary
After Karthikeya 2 Nikhil Siddharth's Spy film Ott and satellite rights sold for 40 Cr. Amazon Prime Video and Star Network together brought rights, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X