OTT Releases This Week:ಮಾರ್ಚ್ 2ನೇ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿರೋ ಸಿನಿಮಾಗಳ ಲಿಸ್ಟ್
ಈ ವಾರ ಥಿಯೇಟರ್‌ಗಳಲ್ಲಿ ಸೂಪರ್‌ಸ್ಟಾರ್‌ಗಳ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿರುವ ಸಿನಿಮಾಗಳು ಕೂಡ ರಿಲೀಸ್ ಆಗುತ್ತಿಲ್ಲ. ಆದರೆ, ಓಟಿಟಿಯಲ್ಲಿ ಕೆಲವು ಇಂಟ್ರೆಸ್ಟಿಂಗ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲೂ ದಕ್ಷಿಣ ಭಾರತದ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳು ಓಟಿಟಿಗೆ ಲಗ್ಗೆ ಇಡುತ್ತಿವೆ.
ಈ ವಾರ ಓಟಿಟಿ ವೇದಿಕೆಗಳಾದ ಜಿಯೋ ಹಾಟ್‌ಸ್ಟಾರ್, ಸೋನಿ ಲೈವ್, ಆಹಾ ತಮಿಳು, ಪ್ರೈಮ್ ವಿಡಿಯೋದಲ್ಲಿ ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗುತ್ತಿವೆ. ಕಳೆದ ವಾರ ಕೂಡ ದಕ್ಷಿಣ ಭಾರತದಲ್ಲಿ ಒಳ್ಳೊಳ್ಳೆ ಕಂಟೆಂಟ್‌ಗಳು ರಿಲೀಸ್ ಆಗಿದ್ದವು. ಈ ಬಾರಿ ಕನ್ನಡದ ಯಾವುದೇ ಸಿನಿಮಾ ಓಟಿಟಿಗ ಬರುತ್ತಿಲ್ಲ ಅನ್ನೋದು ನಿರಾಸೆಯ ನಡುವೆ ಓಟಿಟಿ ಪ್ರಿಯರಿಗೆ ಸೂಪರ್ ಗುಡ್ ಮೂವಿಗಳು ನೋಡುವುದಕ್ಕೆ ಸಿಗುತ್ತಿವೆ. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿದೆ.

ಸಿನಿಮಾ: 'ಏಜೆಂಟ್' (ಅಖಿಲ್ ಅಕ್ಕಿನೇನಿ)
ಓಟಿಟಿ: ಸೋನಿ ಲೈವ್
ತೆಲುಗಿನ ಅಕ್ಕಿನೇನಿ ಕುಟುಂಬದ ಕುಡಿ ಅಖಿಲ್ ಅಕ್ಕಿನೇನಿ ನಟಿಸಿರುವ 'ಏಜೆಂಟ್' ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ. ಥಿಯೇಟರ್‌ನಲ್ಲಿ ಈ ಸಿನಿಮಾ ಫ್ಲಾಪ್ ಆಗಿದ್ದರೂ, ಅಖಿಲ್ ಅಕ್ಕಿನೇನಿ ಈ ಸಿನಿಮಾಗಾಗಿ ಸಿಕ್ಕಾಪಟ್ಟೆ ಎಫರ್ಟ್ ಹಾಕಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಈ ಥ್ರಿಲ್ಲರ್ ಸಿನಿಮಾದ ಕಾಂಬಿನೇಷನ್ ಇಂಟ್ರೆಸ್ಟಿಂಗ್ ಆಗಿದೆ. ಅಖಿಲ್ ಅಕ್ಕಿನೇನಿ ಜೊತೆ ಮಮ್ಮುಟ್ಟಿ ಕೂಡ ನಟಿಸಿದ್ದರಿಂದ ಈ ಕಾಂಬಿನೇಷನ್ ಅನ್ನು ಥಿಯೇಟರ್‌ನಲ್ಲಿ ನೋಡುವುದಕ್ಕೆ ಮಿಸ್ ಮಾಡಿಕೊಂಡವರಿಗೆ ಮಾರ್ಚ್ 14ರಿಂದ ಸೋನು ಲೈವ್‌ನಲ್ಲಿ ಈ ಸಿನಿಮಾ ಲಭ್ಯವಿದೆ. ಅಂದ್ಹಾಗೆ ಈ ಸಿನಿಮಾ 2023ರಲ್ಲಿಯೇ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಎರಡು ವರ್ಷಗಳ ಬಳಿಕ ಈ ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ.
ಸಿನಿಮಾ: ಪೊನ್ಮನ್ (ಬೆಸಿಲ್ ಜೋಸೆಫ್)
ಓಟಿಟಿ: ಜಿಯೋ ಹಾಟ್‌ಸ್ಟಾರ್
ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ ಬೆಸಿಲ್ ಜೋಸೆಫ್. ಇತ್ತೀಚೆಗೆ ಈ ನಟ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿವೆ. ಅದರಲ್ಲಿ ಇತ್ತೀಚೆಗೆ ತೆರೆಕಂಡಿರುವ ಪೊನ್ಮನ್ ಸಿನಿಮಾ ಕೂಡ ಒಂದು. ಸಿನಿಮಾದ ಹೀರೋ (ಬೆಸಿಲ್) ಕಡೆಯಿಂದ ವಧುವಿನ ಮನೆಯವರು ತೆಗೆದುಕೊಂಡಿ ಚಿನ್ನವನ್ನು ಹಿಂತಿರುಗಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆಮೇಲೆ ಏನಾಗುತ್ತೆ ಅನ್ನೋದೆ 'ಪೊನ್ಮನ್' ಸಿನಿಮಾದ ಕಥೆ. ಈ ಸಿನಿಮಾ ಇದೇ ಮಾರ್ಚ್ 14ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ವಾರದ ಓಟಿಟಿಯಲ್ಲಿ ನೋಡಬಹುದಾದ ಬೆಸ್ಟ್ ಸಿನಿಮಾ ಆಗಬಹುದು.
ಸಿನಿಮಾ: ರಾಮಂ ರಾಘವಂ
ಓಟಿಟಿ: ಈಟಿವಿ ವಿನ್
'ರಾಮಂ ರಾಘವಂ' ತೆಲುಗಿನ ಅಪ್ಪನ ಮಗನ ಕಥೆಯನ್ನು ಹೇಳುವ ಸಿನಿಮಾ. ಸಮುಥಿರಕಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ತೆಲುಗು ಮಂದಿಗೆ ಅಷ್ಟಾಗಿ ಇಷ್ಟ ಆಗಿರಲಿಲ್ಲ. ಕೆಟ್ಟದಾರಿಯನ್ನು ಹಿಡಿದಾಗ ಮಗನನ್ನು ಅಪ್ಪ ಮನೆಯಿಂದ ಹೊರಗೆ ಹಾಕುತ್ತಾನೆ. ಮುಂದೆ ಏನಾಗುತ್ತೆ ಅನ್ನೋದೆ ಸಿನಿಮಾದ ಕಥೆ. ಧನರಾಜ್ ಕೊರನನಿ ನಿರ್ದೇಶಿಸಿದ ಈ ಸಿನಿಮಾ ಥಿಯೇಟರ್‌ನಲ್ಲಿ ಜನರನ್ನು ಇಂಪ್ರೆಸ್ ಮಾಡುವುದಕ್ಕೆ ಸೋತಿತ್ತು. ಈಗ ಮಾರ್ಚ್ 14ರಂದು ಈಟಿವಿ ವಿನ್‌ನಲ್ಲಿ ಬಿಡುಗಡೆಯಾಗುತ್ತಿದ್ದು, ಇಲ್ಲಿ ಜನರ ಮನಸ್ಸು ಗೆಲ್ಲುತ್ತಾ ನೋಡಬೇಕಿದೆ.

ಸಿನಿಮಾ:ಒರು ಜಾತಿ ಜಾತಕಂ
ಓಟಿಟಿ: ಪ್ರೈಂ ವಿಡಿಯೋ
ಈ ವಾರ ರಿಲೀಸ್ ಆಗುತ್ತಿರುವ ಮತ್ತೊಂದು ಮಲಯಾಳಂ ಸಿನಿಮಾ 'ಒರು ಜಾತಿ ಜಾತಕಂ'. ವಿನೀತ್ ಶ್ರೀನಿವಾಸಂ ನಟಿಸಿರುವ ಈ ಸಿನಿಮಾ ಮಲಯಾಳಿಗಳ ಮನಸ್ಸನ್ನು ಗೆದ್ದಿತ್ತು. ಸಿನಿಮಾ ಹೀರೋ ವಿನೀತ್ ಶ್ರೀನಿವಾಸನ್ ವಧುವನ್ನು ಹುಡುಕಿಕೊಂಡು ಹೋಗುವ ಈ ಕಾಮಿಡಿ ಸಿನಿಮಾ ಮಲಯಾಳಂ ಹಿಟ್ ಆಗಿತ್ತು. ಇದು ಈವಾರ ಅಂದರೆ, ಮಾರ್ಚ್ 14ರಂದು ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಸಿನಿಮಾ:2ಕೆ ಲವ್ ಸ್ಟೋರಿ
ಓಟಿಟಿ: ಆಹಾ ತಮಿಳು
ತಮಿಳಿನಲ್ಲಿ ಆಕ್ಷನ್, ಥ್ರಿಲ್ಲರ್ ಸಿನಿಮಾಗಳ ಮಧ್ಯೆ ರೊಮ್ಯಾಂಟಿಕ್ ಸಿನಿಮಾ ಸದ್ದು ಮಾಡಿತ್ತು. ಅದುವೇ '2ಕೆ ಲವ್ ಸ್ಟೋರಿ'. ಸುಸೀಂಥಿರನ್ ನಿರ್ದೇಶಿಸಿದ ಈ ಸಿನಿಮಾ ಮಾಡರ್ನ್ ಡೇ ರಿಲೇಷನ್‌ಶಿಪ್ ಕಥೆಯನ್ನು ಹೇಳಿತ್ತು. ಇಬ್ಬರು ಬಾಲ್ಯದ ಸ್ನೇಹಿತರ ಕಥೆ ತಮಿಳರ ಮನಸ್ಸನ್ನು ಗೆದ್ದಿತ್ತು. ಆ ಸಿನಿಮಾ ಆಹಾ ತಮಿಳಿನಲ್ಲಿ ರಿಲೀಸ್ ಆಗುತ್ತಿದೆ.


Click it and Unblock the Notifications











