Unstoppable with NBK: ಟಾಕ್ ಶೋ ನಿರೂಪಣೆ ಮಾಡಲು ಬಾಲಕೃಷ್ಣ ಪಡೆದ ಸಂಭಾವನೆ ಎಷ್ಟು ಕೋಟಿ?

ಟಾಲಿವುಡ್‌ನಲ್ಲಿ ಬಾಲಕೃಷ್ಣ ಅಬ್ಬರ ಮತ್ತೆ ಶುರುವಾಗಿದೆ. ಇತ್ತ ಸಿನಿಮಾನೂ ರಿಲೀಸ್ ಆಗುತ್ತಿದೆ. ಅತ್ತ ಮೊದಲ ಟಾಕ್ ಶೋ ಕೂಡ ಸೂಪರ್‌ ಹಿಟ್ ಆಗಿದೆ. ಎರಡರಲ್ಲೂ ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಗೆದ್ದು ಬೀಗುತ್ತಿದ್ದಾರೆ. ಸಿನಿಮಾ ಮಂದಿ ಬಾಲಕೃಷ್ಣ ಜೊತೆ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಒಂದು ಸಿನಿಮಾ ರಿಲೀಸ್ ಆದರೆ, ಟಾಕ್ ಶೋ ಹಿಟ್ ಆದರೆ, ದಿಢೀರನೇ ಆ ಸೂಪರ್‌ ಸ್ಟಾರ್ ಬಗ್ಗೆ ಬೇಡಿಕೆ ಹೆಚ್ಚಾಗುತ್ತೆ. ಬಾಲಕೃಷ್ಣ ಕೂಡ ಈಗ ಬಹು ಬೇಡಿಕೆಯ ನಟನಾಗಿದ್ದಾರೆ.

ಒಂದಿಷ್ಟು ದಿನ ಲೆಜೆಂಡ್ ಬಾಲಕೃಷ್ಣ ನಟಿಸಿದ 'ಅಖಂಡ' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಸುದ್ದಿಯಾಗಿತ್ತು. ಈಗ ಬಾಲಕೃಷ್ಣ ನಿರೂಪಣೆ ಮಾಡಿದ ಟಾಕ್ ಶೋ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ಗೆ ಪಡೆದ ಸಂಭಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಟಾಲಿವುಡ್ ಮೂಲಗಳ ಪ್ರಕಾರ, ಆಹಾ ಓಟಿಟಿಯಲ್ಲಿ ಪ್ರಸಾರವಾದ ಟಾಕ್‌ ಶೋಗೆ ಬಾಲಕೃಷ್ಣ ದೊಡ್ಡ ಮೊತ್ತದ ಹಣವನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಬಾಲಕೃಷ್ಣ ಟಾಕ್ ಶೋ ಮೆಚ್ಚಿದ ವೀಕ್ಷಕರು

ಬಾಲಕೃಷ್ಣ ಟಾಕ್ ಶೋ ಮೆಚ್ಚಿದ ವೀಕ್ಷಕರು

'ಅನ್‌ಸ್ಟಾಪಬಲ್ ವಿಥ್ ಎನ್‌ಬಿಕೆ' ಬಾಲಕೃಷ್ಣ ಇದೇ ಮೊದಲ ಬಾರಿಗೆ ನಿರೂಪಣೆ ಮಾಡಿದ ಟಾಕ್‌ ಶೋ. ಆಹಾ ಓಟಿಟಿ ವೇದಿಕೆಯಲ್ಲಿ ಈ ಶೋ ಪ್ರಸಾರವಾಗಿತ್ತು. ಟಾಲಿವುಡ್‌ನ ದಿಗ್ಗಜರೆಲ್ಲಾ ಈ ಶೋನಲ್ಲಿ ಭಾಗವಹಿಸಿದ್ದರು. ಬಾಲಕೃಷ್ಣ ಕೇಳಿದ ನೇರಾ ನೇರ ಪ್ರಶ್ನೆಗಳಿಗೆ ನಿರ್ಭಯವಾಗಿಯೇ ಉತ್ತರ ನೀಡಿದ್ದರು. ಇತ್ತೀಚೆಗಷ್ಟೇ ಈ ಟಾಕ್ ಶೋದ ಮೊದಲ ಸೀಸನ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಟಾಲಿವುಡ್ ಮೂಲಗಳ ಪ್ರಕಾರ, ಈ ಶೋ ಬ್ಲಾಕ್‌ಬಸ್ಟರ್ ಆಗಿದೆ ಎನ್ನಲಾಗಿದೆ.

ಟಾಕ್‌ ಶೋಗೆ ಪಡೆದ ಸಂಭಾವನೆ 2.5 ಕೋಟಿ

ಟಾಕ್‌ ಶೋಗೆ ಪಡೆದ ಸಂಭಾವನೆ 2.5 ಕೋಟಿ

ಬಾಲಕೃಷ್ಣ ಟಾಕ್ ಶೋ ನಿರೂಪಣೆ ಮಾಡುವುದಕ್ಕೆ ಭಾರೀ ಸಂಭಾವನೆ ಪಡೆದಿದ್ದಾರೆ. 'ಅನ್‌ಸ್ಟಾಪಬಲ್ ವಿಥ್ ಎನ್‌ಬಿಕೆ' ಟಾಕ್‌ ಶೋ ಪ್ರತಿಯೊಂದು ಎಪಿಸೋಡ್‌ಗೆ 25 ಲಕ್ಷದಷ್ಟು ಸಂಭಾವನೆ ಪಡೆದಿದ್ದಾರೆ. ಈ ಸೀಸನ್‌ನಲ್ಲಿ ಸುಮಾರು 10 ಎಪಿಸೋಡ್‌ಗಳಿಗೆ ಬಾಲಕೃಷ್ಣ ನಿರೂಪಣೆ ಮಾಡಿದ್ದರು. ಅದರಂತೆ ಸುಮಾರು 2.5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಓಟಿಟಿಯಲ್ಲಿ ಪ್ರಸಾರವಾದ ಟಾಕ್ ಶೋ ಒಂದಕ್ಕೆ ಬಾಲಕೃಷ್ಣ ಪಡೆದ ಸಂಭಾವನೆ ದೊಡ್ಡದೇ ಎಂದು ನಂಬಲಾಗಿದೆ.

ಟಾಲಿವುಡ್ ದಿಗ್ಗಜರ ಎಂಟ್ರಿ

ಟಾಲಿವುಡ್ ದಿಗ್ಗಜರ ಎಂಟ್ರಿ

ಬಾಲಕೃಷ್ಣ ಟಾಕ್ ಶೋದ ಮೊದಲ ಎಪಿಸೋಡ್‌ನಲ್ಲಿ ಬಾಲಯ್ಯ ಜೊತೆ ಮೋಹನ್ ಬಾಬು ಆಗಮಿಸಿದ್ದರು. ಈ ಶೋನಲ್ಲಿ ಸಿನಿಮಾ ಇಂಡಸ್ಟ್ರಿ, ರಾಜಕೀಯ, ಬಾಲ್ಯ, ವಿವಾದಗಳ ಬಗ್ಗೆ ಮಾತಾಡಿದ್ದರು. ಬಾಲಯ್ಯ ಹಾಗೂ ಮೋಹನ್ ಬಾಬು ಚಿತ್ರರಂಗದಲ್ಲಿ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಇವರೊಂದಿಗೆ ಎಸ್‌ ಎಸ್ ರಾಜಮೌಳಿ, ಬ್ರಹ್ಮಾನಂದಂ, ರವಿತೇಜಾ, ಮಹೇಶ್ ಬಾಬು ಸೇರಿದಂತೆ ಟಾಲಿವುಡ್ ದಿಗ್ಗಜರು ಆಗಮಿಸಿದ್ದಾರೆ.

ಬಾಕ್ಸಾಫೀಸ್‌ನಲ್ಲಿ 'ಅಖಂಡ' ಕಮಾಲ್

ಬಾಕ್ಸಾಫೀಸ್‌ನಲ್ಲಿ 'ಅಖಂಡ' ಕಮಾಲ್

ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಬೇಜಾನ್ ಸದ್ದು ಮಾಡಿದೆ. 36ನೇ ದಿನ ವಿಶ್ವದಾದ್ಯಂತ ಈ ಸಿನಿಮಾ ಬರೋಬ್ಬರಿ 127.24 ಕೋಟಿ ಗಳಿಕೆ ಕಂಡಿದೆ. ನಂದಮೂರಿ ಬಾಲಕೃಷ್ಣ, ಪ್ರಗ್ಯ ಜೈಸ್ವಾಲ್, ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೇ ಯಶಸ್ಸಿನ ಬೆನ್ನಲ್ಲೇ ಬಾಲಕೃಷ್ಣ 107ನೇ ಸಿನಿಮಾ ಕೂಡ ಸೆಟ್ಟೇರಲು ಸಜ್ಜಾಗಿದೆ. ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಈ ಸಿನಿಮಾದಲ್ಲಿ ಸೂಪರ್ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Akhanda Actor Balakrishna is receiving huge remuneration for his talk show Unstoppable with NBK. It is to be said that Balakrishan charging 25 lakhs per episode and 10 episodes 2.5 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X