100 ಕೋಟಿ ಗಳಿಸುತ್ತಿದ್ದಂತೆ ಸೂರ್ಯವಂಶಿ ಒಟಿಟಿಗೆ ಸೇಲ್?

ಬಾಲಿವುಡ್ ಸೂರ್ಯವಂಶಿ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ನಟಿಸಿರುವ ಸಿನಿಮಾಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ. ಟಿಪಿಕಲ್ ರೋಹಿತ್ ಶೆಟ್ಟಿ ಸಿನಿಮಾ ಸೂರ್ಯವಂಶಿ ಪೊಲೀಸ್ ಆಕ್ಷನ್ ಡ್ರಾಮ. ವಿಶೇಷ ಅಂದರೆ, ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ಜೊತೆ ವಿಶೇಷ ಪಾತ್ರದಲ್ಲಿ ಅಜಯ್ ದೇವಗನ್ ಹಾಗೂ ರಣ್‌ವೀರ್ ಸಿಂಗ್ ಕೂಡ ನಟಿಸಿದ್ದಾರೆ.

ರಿಲಯನ್ಸ್ ಎಂಟರ್‌ಟೈನ್ಮೆಂಟ್ ಹಾಗೂ ನಿರ್ಮಾಪಕ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಸೂರ್ಯವಂಶಿಯನ್ನು ನಿರ್ಮಾಣ ಮಾಡಿದೆ. ಕಳೆದ ಒಂದೂವರೆ ವರ್ಷದಿಂದ ಸಿನಿಮಾ ಬಿಡುಗಡೆಗಾಗಿ ಕಾದು ಕೂತಿದ್ದ ಸೂರ್ಯವಂಶಿ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿತ್ತು. ಕೇವಲ ಐದು ದಿನಗಳಲ್ಲೇ ನೂರು ಕ್ಲಬ್ ಸೇರಿದೆ. ಈ ಖುಷಿಯಲ್ಲಿ ತೇಲಾಡುತ್ತಿರುವ ಬಾಲಿವುಡ್‌ನಲ್ಲಿ ಸೂರ್ಯವಂಶಿ ಓಟಟಿಗೆ ಸೇಲ್ ಅನ್ನುವ ಸುದ್ದಿ ಹರಿದಾಡುತ್ತಿದೆ.

Akshay Kumar Sooryavanshi sold to Netflix for big Amount will stream OTT platform on this date

65-70 ಕೋಟಿಗೆ ಡೀಲ್ ಮುಗಿಸಿದೆ ಸೂರ್ಯವಂಶಿ?

ಸೂರ್ಯವಂಶಿ ತೆರೆಕಂಡ ದಿನದಿಂದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಮರ್ಶಕರಿಂದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದರೂ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಕೆಲವೆಡೆ ಶೇ.50ರಷ್ಟು ಆಸನ ವ್ಯವಸ್ಥೆಗೆ ಅವಕಾಶ ನೀಡಲಾಗಿತ್ತು. ಹೀಗಿದ್ದರೂ ಐದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿ ಬಾಲಿವುಡ್ ಹೊಸ ಚೈತನ್ಯ ನೀಡಿದೆ. ಬಾಲಿವುಡ್ ಸಿನಿಮಾಗಳನ್ನು ಪ್ರದರ್ಶನ ಮಾಡುವ ಥಿಯೇಟರ್ ಮಾಲೀಕರು ಫುಲ್ ಖುಷಿಯಾಗಿದ್ದರು. ಆದರೆ, ಸೂರ್ಯವಂಶಿ ನಿರ್ಮಾಪಕರು ಓಟಿಟಿ ಜೊತೆ ಭಾರೀ ಮೊತ್ತಕ್ಕೆ ಡೀಲ್ ಮಾಡಿಕೊಂಡಿದ್ದರೆ. 65 ರಿಂದ 70 ಕೋಟಿಗೆ ಸಿನಿಮಾ ಸೇಲ್ ನೆಟ್‌ಫ್ಲಿಕ್ಸ್‌ಗೆ ಸೇಲ್ ಆಗಿದೆ ಅನ್ನುವ ಮಾತುಗಳು ಕೇಳಿಬರುತ್ತಿವೆ.

ಪ್ರದರ್ಶಕರಿಗೆ 50 ರಿಂದ 60 ಕೋಟಿ ಲಾಭ

ಸೂರ್ಯವಂಶಿ ಸಿನಿಮಾ ತೆರೆಕಂಡಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಂಡಿದೆ. ಒಂದೂವರೆ ವರ್ಷದಿಂದ ಚಿತ್ರಮಂದಿರದ ತುಂಬಾ ಪ್ರೇಕ್ಷಕರನ್ನು ನೋಡದೆ ಇರುವ ಮಾಲೀಕರು ನಾಲ್ಕೈದು ದಿನಗಳಿಂದ ಖುಷಿಯಾಗಿದ್ದರು. ಕೇವಲ 5 ದಿನಗಳಲ್ಲೇ 50 ರಿಂದ 60 ಕೋಟಿ ಥಿಯೇಟರ್ ಮಾಲೀಕರ ಜೇಬು ಸೇರಿದೆ. ಸೂರ್ಯವಂಶಿ ಸಿನಿಮಾ ಇನ್ನು 30 ರಿಂದ 40 ಕೋಟಿ ಗಳಿಕೆ ಮಾಡಿದ್ರೆ, ಸಿನಿಮಾ ಹಿಟ್ ಅಂತ ಘೋಷಣೆಯಾಗುತ್ತೆ. ಅಷ್ಟರಲ್ಲೇ ಓಟಿಟಿಗೆ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪ್ರದರ್ಶಕರಿಗೆ ಬೇಸರ ತಂದಿದೆ.

Akshay Kumar Sooryavanshi sold to Netflix for big Amount will stream OTT platform on this date

ದೇಶದಲ್ಲಿ 100 ಕೋಟಿ.. ವಿದೇಶದಲ್ಲಿ 31 ಕೋಟಿ

ಸೂರ್ಯವಂಶಿ ದೇಶಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ದಿನ 26.29 ಕೋಟಿ, ಎರಡನೇ ದಿನ 23.85 ಕೋಟಿ, ಮೂರನೇ ದಿನ 26.94 ಕೋಟಿ, ನಾಲ್ಕನೇ ದಿನ 14.51 ಕೋಟಿ ಹಾಗೂ ಐದನೇ ದಿನ 11.22 ಕೋಟಿ ಗಳಿಕೆ ಆಗಿತ್ತು. ಒಟ್ಟು ಐದು ದಿನದಲ್ಲಿ 102.81 ಕೋಟಿ ಬಾಕ್ಸಾಫೀಸ್‌ನಿಂದ ದೋಚಿದೆ. ಇತ್ತ ವಿದೇಶದಲ್ಲೂ ಅದ್ಭುತ ಕಲೆಕ್ಷನ್ ಮಾಡಿದೆ. 5 ದಿನದಲ್ಲಿ 31.39 ಕೋಟಿ ಗಳಿಸಿ ನಿರ್ಮಾಪಕರ ಜೇಬು ತುಂಬಿಸಿದೆ.

ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್, ಸ್ಯಾಟಲೈಟ್ ರೈಟ್ಸ್, ಆಡಿಯೋ ರೈಟ್ಸ್ ಎಲ್ಲಾ ಸೇರಿ ಈಗಾಗಲೇ 200 ಕೋಟಿ ಗಡಿ ದಾಟಿದೆ. ಸಿನಿಮಾ ಈಗಾಗಲೇ ನಿರ್ಮಾಪಕರ ಜೇಬು ತುಂಬಿಸಿದೆ. ಹೀಗಾಗಿ ಓಟಿಟಿ ಕಡೆ ಚಿತ್ರತಂಡ ಮುಖ ಮಾಡಿದೆ. ಸೂರ್ಯವಂಶಿ ಬಿಡುಗಡೆಯಾದ ಒಂದು ತಿಂಗಳಿಗೆ ಸರಿಯಾಗಿ, ಅಂದರೆ ಡಿಸೆಂಬರ್ 5ರಂದು ನೆಟ್‌ಫ್ಲಿಕ್ಸ್‌ನಲ್ಲಿ ಗ್ರ್ಯಾಂಡ್ ಆಗಿ ಬಿಡುಗಡೆ ಆಗಲಿದೆ. ಮಲ್ಟಿಪ್ಲೆಕ್ಸ್ ಮಾಲೀಕರು ಮಾತ್ರ ಸೂರ್ಯವಂಶಿ ಚಿತ್ರದ ನಿರ್ಮಾಪಕರ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದು, ಇನ್ನು ಕೆಲವು ದಿನಗಳು ಮುಂದೂಡಬೇಕೆಂದು ಕೇಳಿಕೊಂಡಿದ್ದಾರೆ.

More from Filmibeat

English summary
Akshay Kumar and Katrina Kaif starrer Sooryavanshi has sold for the big price of Rs. 65-70 crore from its OTT deal. which will be premier in Netflix.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X