'ಶೈತಾನ್'ನಾಗಿ ಓಟಿಟಿಗೆ ಲಗ್ಗೆ ಇಟ್ಟ 'ಆಪರೇಷನ್ ಅಲಮೇಲಮ್ಮ' ರಿಷಿ: ಎಲ್ಲಿ? ಯಾವಾಗ ರಿಲೀಸ್?
ಈಗ ಸಿನಿಪ್ರಿಯರ ಮನರಂಜನೆಗೆ ಹೊಸ ಅಡ್ಡಾ ಸಿಕ್ಕಿಬಿಟ್ಟಿದೆ. ಅದುವೇ ಓಟಿಟಿ. ಅವರಿಗಾಗಿಯೇ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕೂಡ ವಾರಕ್ಕೆ ಒಂದಾದರೂ ವೆಬ್ ಸೀರಿಸ್‌ಗಳನ್ನು ರಿಲೀಸ್ ಮಾಡುತ್ತಲೇ ಇದೆ. ಸೂಪರ್‌ಸ್ಟಾರ್‌ಗಳೇ ಈಗ ಓಟಿಟಿ ಕಡೆ ಮುಖ ಮಾಡುತ್ತಿದ್ದಾರೆ.
ಬಾಲಿವುಡ್ ಹಾಗೂ ಹಾಲಿವುಡ್‌ನಲ್ಲಿ ವೆಬ್ ಸೀರಿಸ್‌ಗಳ ಹಾವಳಿ ಜೋರಾಗಿತ್ತು. ಅದೀಗ ದಕ್ಷಿಣ ಭಾರತಕ್ಕೂ ನಿಧಾನವಾಗಿ ವ್ಯಾಪಿಸುತ್ತಿದೆ. ತೆಲುಗು, ತಮಿಳಿನಲ್ಲಿ ವೆಬ್ ಸೀರಿಸ್‌ಗಳು ಈಗಾಗಲೇ ಕ್ಲಿಕ್ ಆಗಿವೆ. ಆದರೆ, ಕನ್ನಡದಲ್ಲಿ ಈಗ ತಾನೇ ಇಂತಹದ್ದೊಂದು ಪ್ರಯತ್ನಕ್ಕೆ ಒಗ್ಗಿಕೊಳ್ಳುತ್ತಿದೆ.

ಅಸಲಿಗೆ ಮ್ಯಾಟರ್ ಏನಂದ್ರೆ, ಕನ್ನಡದ ತಾರೆಯರು ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಕ್ರಮ್ ರವಿಚಂದ್ರನ್, ಅದಿತಿ ಪ್ರಭುದೇವ ಇತ್ತೀಚೆಗಷ್ಟೇ ಜಿಯೋ ಸಿನಿಮಾದ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದರು. ಆದ್ರೀಗ ಮತ್ತೊಬ್ಬ ನಟ ರಿಷಿ ವೆಬ್ ಸೀರಿಸ್ ಮೂಲಕ ಓಟಿಟಿಗೆ ಲಗ್ಗೆ ಇಟ್ಟಿದ್ದಾರೆ.
ಕನ್ನಡದ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ರಿಷಿ ಓಟಿಟಿಗೂ ಲಗ್ಗೆ ಇಟ್ಟಿದ್ದಾರೆ. ಆದರೆ, ಇದು ಕನ್ನಡ ಅಲ್ಲ. ತೆಲುಗು ವೆಬ್ ಸೀರಿಸ್. ಆದರೆ, ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಆ ವೆಬ್ ಸೀರಿಸ್ ಹೆಸರೇ 'ಶೈತಾನ್'.

ರಿಷಿ, ಸಸ್ಪೆನ್ಸ್, ಕಾಮಿಡಿ, ಲವ್ ಸ್ಟೋರಿ ಯಾವುದೇ ಇರಲಿ ಎಲ್ಲದಕ್ಕೂ ಸರಿಹೊಂದುವ ನಟ. 'ಅಪರೇಷನ್ ಅಲಮೇಲಮ್ಮ', 'ಕವಲುದಾರಿ', 'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಅಂತಹ ಸಿನಿಮಾಗಳೇ ಉತ್ತಮ ಉದಾಹರಣೆ. ಈಗ ವೆಬ್ ಸೀರಿಸ್ ಮೂಲಕ ಸಿಕ್ಕಾಪಟ್ಟೆ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ರಿಷಿ 'ರಾಮನ ಅವತಾರ' ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದರೊಂದಿಗೆ ಇನ್ನೂ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ ಈಗ ವೆಬ್ ಸಿರೀಸ್ ಜಗತ್ತಿನಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ.
ತೆಲುಗಿನ ಜನಪ್ರಿಯ ನಿರ್ದೇಶಕ ಮಹಿ ರಾಘವ್ ಆಕ್ಷನ್ ಕಟ್ ಹೇಳಿರುವ ಕ್ರೈಮ್ ಡ್ರಾಮಾ 'ಶೈತಾನ್' ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.ಈ ಮೂಲಕ ರಿಷಿ ತೆಲುಗು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವೆಬ್ ಸರಣಿಯಲ್ಲಿ ಬಾಲಿ ಎಂಬ ಪಾತ್ರದಲ್ಲಿ ರಿಷಿ ಕಾಣಿಸಿಕೊಂಡಿದ್ದಾರೆ. ನಾಯಕ ಹಾಗೂ ಖಳನಾಯಕ ಎರಡು ಶೇಡ್‌ನಲ್ಲಿರುವ ಬಾಲಿ ಪಾತ್ರದ ಸಣ್ಣ ಝಲಕ್ ರಿಲೀಸ್ ಆಗಿದ್ದು, ಮಾಸ್ ಲುಕ್‌ನಲ್ಲಿ ಬೆಚ್ಚಿಬೀಳಿಸಿದ್ದಾರೆ.
ಅಂದ್ಹಾಗೆ 'ಶೈತಾನ್' ಜೂನ್ 15ರಿಂದ ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತೆಲುಗು ಭಾಷೆಯಲ್ಲಿ ನಿರ್ಮಾಣಗೊಂಡಿದ್ದರೂ, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿಯೂ ವೆಬ್ ಸೀರಿಸ್ ನೋಡಲು ಸಿಗಲಿದೆ. ರಿಷಿಯೊಂದಿಗೆ, ರವಿಕಾಳೆ, ಜಾಫರ್ ಸಾದಿಕ್, ಲೀನಾ, ಮಣಿಕಂದನ್ ಮುಂತಾದವರು 'ಶೈತಾನ್' ಸೀರಿಸ್‌ನಲ್ಲಿ ಕಾಣ ಸಿಗುತ್ತಾರೆ.
ತೆಲುಗು ಚಿತ್ರರಂಗದಲ್ಲಿ ಪ್ರತಿಭಾವಂತ ಕಲಾವಿದರು ಇದ್ದರೂ, ರಿಷಿಯನ್ನೇ ಆಯ್ಕೆ ಮಾಡಲಾಗಿದೆ. ಈ ಹಿಂದೆ ರಿಷಿ ನಟಿಸಿದ ಸಿನಿಮಾಗಳನ್ನು ನೋಡಿದ 'ಶೈತಾನ್' ನಿರ್ದೇಶಕರು ಈ ವೆಬ್ ಸೀರಿಸ್‌ಗೆ ಇವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬಿಗ್ ಬಜೆಟ್‌ನಲ್ಲಿ 'ಶೈತಾನ್' ಸಿನಿಮಾ ನಿರ್ಮಾಣ ಆಗಿದೆ. ಈ ವೆಬ್ ಸೀರಿಸ್ ಮೂಲಕ ಓಟಿಟಿ ಪ್ರಪಂಚಕ್ಕೆ ರಿಷಿ ಪರಿಚಯ ಆಗಲಿದೆ. ಒಂದು ವೇಳೆ ರಿಷಿ ಅಭಿನಯದ ಈ ವೆಬ್ ಸೀರಿಸ್ ಗೆದ್ದರೆ, ಕನ್ನಡದಲ್ಲೂ ವೆಬ್ ಸೀರಿಸ್ ನಿರ್ಮಾಣ ಮಾಡುವುದಕ್ಕೆ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಬರಬಹುದು.


Click it and Unblock the Notifications











