Pushpa 2 OTT: 56 ದಿನಗಳ ಬಳಿಕ ಓಟಿಟಿಗೆ 'ಪುಷ್ಪ 2' ಲಗ್ಗೆ; ಇದೇ ದಿನ ರಿಲೀಸ್

ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ಬಾಕ್ಸಾಫೀಸ್‌ ಅನ್ನೇ ಉಡಾಯಿಸಿತ್ತು. 'ಬಾಹುಬಲಿ 2', 'ಕೆಜಿಎಫ್ 2' ಬಾಕ್ಸಾಫೀಸ್ ದಾಖಲೆಗಳನ್ನು ಉಡೀಸ್ ಮಾಡಿತ್ತು. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು. 2024 ಡಿಸೆಂಬರ್ ತಿಂಗಳಿನಲ್ಲಿ ತೆರೆಕಂಡಿದ್ದ 'ಪುಷ್ಪ 2' ಇನ್ನೂ ಚಿತ್ರಮಂದಿರದಲ್ಲಿ ಸದ್ದು ಮಾಡುತ್ತಿರುವಾಗಲೇ ಓಟಿಟಿ ರಿಲೀಸ್ ಬಗ್ಗೆ ಸುದ್ದಿಯಾಗುತ್ತಿದೆ.

'ಪುಷ್ಪ 2' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಈ ಹಿಂದೆನೇ ನಿರ್ಮಾಣ ಸಂಸ್ಥೆ ಸ್ಪಷ್ಟನೆ ನೀಡಿತ್ತು. ಡಿಸೆಂಬರ್ 5 ರಂದು ರಿಲೀಸ್ ಆಗಿದ್ದ 'ಪುಷ್ಪ 2' ಬರೋಬ್ಬರಿ 56 ದಿನಗಳವರೆಗೂ ಓಟಿಟಿಯಲ್ಲಿ ರಿಲೀಸ್ ಆಗುವುದಿಲ್ಲ ಎಂದು ಹೇಳಿತ್ತು. ಅದೇ ಲೆಕ್ಕಾಚಾರವನ್ನೇ ಇಟ್ಟುಕೊಂಡು 'ಪುಷ್ಪ 2' ಓಟಿಟಿ ರಿಲೀಸ್ ಬಗ್ಗೆ ಸುದ್ದಿಯಾಗುತ್ತಿತ್ತು. ಆದರೆ, ಇನ್ನೂ ಥಿಯೇಟರ್‌ನಲ್ಲಿ 'ಪುಷ್ಪ 2' ಪ್ರದರ್ಶನ ಕಾಣುತ್ತಿರುವುದರಿಂದ ನಿರೀಕ್ಷೆ ಮಾಡಿದ ದಿನವೇ ಓಟಿಟಿಗೆ ಲಗ್ಗೆ ಇಡುತ್ತಾ? ಅನ್ನೋದು ಪ್ರಶ್ನೆನೂ ಕಾಡುತ್ತಿತ್ತು. ಅದಕ್ಕೀಗ ತೆರೆಬಿದ್ದಿದೆ.

Allu Arjun Pushpa 2 film streaming after 56 days of release may be January 30th

'ಪುಷ್ಪ 2' ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಇತ್ತೀಚೆಗೆ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಿದ್ದರು. ಅಲ್ಲಿಂದ ರಿಲೋಡ್ ಆಗಿರುವ 'ಪುಷ್ಪ 2' ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ 'ಪುಷ್ಪ 2' ಓಟಿಟಿ ರಿಲೀಸ್ ಬಗ್ಗೆ ದೊಡ್ಡದಾಗಿಯೇ ಸುದ್ದಿಯಾಗಿತ್ತು. ಅಷ್ಟಕ್ಕೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ಓಟಿಟಿಗೆ ಲಗ್ಗೆ ಇಡುವುದು ಯಾವಾಗ? ಎಲ್ಲಿ ಸ್ಟ್ರೀಮಿಂಗ್ ಆಗುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಸಿನಿಮಾ 'ಪುಷ್ಪ 2' ರಿಲೀಸ್ ಆಗಿ ಇಂದಿಗೆ 50 ದಿನಗಳನ್ನು ಪೂರೈಸಿದೆ. ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನೆಟ್‌ಫ್ಲಿಕ್ಸ್‌ನಲ್ಲಿ 'ಪುಷ್ಪ 2' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಇದೇ ತಿಂಗಳು ಅಂದರೆ, ಜನವರಿ 30ರಂದು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Allu Arjun Pushpa 2 film streaming after 56 days of release may be January 30th

ಇತ್ತ ಅಲ್ಲು ಅರ್ಜುನ್ ಅಭಿಮಾನಿಗಳು ಹಾಗೂ ಓಟಿಟಿ ಪ್ರಿಯರು 'ಪುಷ್ಪ 2'ಗಾಗಿ ಎದುರು ನೋಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆ ರಿಲೀಸ್ ಡೇಟ್‌ ಅನ್ನು ಅನೌನ್ಸ್ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ ಸಿಕ್ಕಿದೆ. ಇದೇ ಜನವರಿ 30ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ 'ಪುಷ್ಪ 2' ರಿಲೀಸ್ ಆಗುತ್ತಿದೆ. ಜೊತೆಗೆ 20 ನಿಮಿಷಗಳ ದೃಶ್ಯವನ್ನು ಸೇರಿಸಿ ರಿಲೋಡ್ ಮಾಡಿದ ವರ್ಷನ್‌ ಅನ್ನೇ ಓಟಿಟಿಯಲ್ಲಿ ಬಿಡುಗಡೆ ಮಾಡಬಹುದೇ? ಎಂಬ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು 'ಪುಷ್ಪ 2' 49ನೇ ದಿನ ಬಾಕ್ಸಾಫೀಸ್‌ನಲ್ಲಿ 50 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. 50ನೇ ದಿನಗಳ ಹೊಸ್ತಿಲಲ್ಲಿ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿದೆ. ಹೀಗಾಗಿ ಪ್ಯಾನ್ ಇಂಡಿಯಾ ರಿಲೀಸ್ ಕಂಡಿರುವ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಮೊದಲ ಒಪ್ಪಂದ ಆದಂತೆ 56 ದಿನಗಳ ಬಳಿಕ ಅಂದ್ರೆ, ಜನವರಿ 30 ಇಲ್ಲವೇ ಜನವರಿ 31ಕ್ಕೆ ಬಿಡುಗಡೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.

ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ಫಹಾದ್ ಫಾಸಿಲ್ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದರು. 'ಪುಷ್ಪ 2' ತೆಲುಗು ಹಾಗೂ ಹಿಂದಿ ಏರಿಯಾಗಳಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಈ ಬೆನ್ನಲ್ಲೇ ಓಟಿಟಿಯಲ್ಲೂ ಸದ್ದು ಮಾಡಬಹುದೆಂಬ ನಿರೀಕ್ಷೆಯಿದೆ.

More from Filmibeat

English summary
Allu Arjun Pushpa 2 film streaming after 56 days of release may be January 30th.
Read more about: allu arjun pushpa 2 ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X