ಪುನೀತ್ ರಾಜ್‌ಕುಮಾರ್‌ಗೆ ಗೌರವ ಸೂಚಿಸಲು ಅಮೆಜಾನ್ ಪ್ರೈಮ್ ಸಜ್ಜು: ಒಂದು ತಿಂಗಳು ವೀಕ್ಷಣೆ ಉಚಿತ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಮೂರು ತಿಂಗಳು ಸಮೀಸುತ್ತಿದೆ. ಅಪ್ಪು ಇಲ್ಲದ ನೋವು ಇನ್ನೂ ಅಭಿಮಾನಿಗಳ ಜನ ಮಾನಸದಿಂದ ಮರೆಯಾಗಿಲ್ಲ. ಹೀಗಾಗಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಅಪ್ಪು ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ನೆನಪನ್ನು ಮತ್ತಷ್ಟು ಜೀವಂತವಾಗಿಡಲು ಯತ್ನಿಸುತ್ತಿದ್ದಾರೆ. ತಮಗೆ ಅವರಿಗೆ ಬಂದಂತೆ ಸಾಮಾಜಿಕ ಸೇವೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮುಂದುವರಿದ ಭಾಗವಾಗಿ ಓಟಿಟಿ ವೇದಿಕೆ ಅಮೆಜಾನ್ ಪ್ರೈಮ್ ಕೂಡ ಅಪ್ಪುಗೆ ಗೌರವ ಸೂಚಿಸಲು ಸಜ್ಜಾಗಿದೆ.

ಪುನೀತ್ ರಾಜ್‌ಕುಮಾರ್ ವ್ಯಕ್ತಿತ್ವವೇ ಹಾಗೇ. ಸದಾ ನಗುತ್ತಲೇ ಇರುತ್ತಿದ್ದ ಕರ್ನಾಟಕ ರತ್ನ. ಅಪ್ಪನಂತೆಯೇ ಸರಳತೆಯನ್ನು ರೂಢಿಸಿಕೊಂಡಿದ್ದ ರಾಜಕುಮಾರ. ಸಿನಿಮಾಗಷ್ಟೇ ಅಲ್ಲ ಸಮಾಜಕ್ಕೂ ತನ್ನ ಕೈಲಾದ ಸಹಾಯ ಮಾಡಿ ಮಾದರಿಯಾದವರು ಅಪ್ಪು. ಸದಾ ಹೊಸ ಪ್ರತಿಭೆಗಳಿಗೆ ಅಪ್ಪು ಬೆನ್ನುಲುಭಾಗಿ ನಿಲ್ಲುತ್ತಿದ್ದರು. ಹೀಗಾಗಿಯೇ ಪುನೀತ್ ನಿರ್ಮಿಸಿದ ಸಿನಿಮಾಗಳ ಮೂಲಕ ಗೌರವ ಸೂಚಿಸಲು ಅಮೆಜಾನ್ ಪ್ರೈಮ್‌ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಅಮೆಜಾನ್ ಪ್ರೈಮ್ ವತಿಯಿಂದ ಅಪ್ಪುಗೆ ಗೌರವ

ಅಮೆಜಾನ್ ಪ್ರೈಮ್ ವತಿಯಿಂದ ಅಪ್ಪುಗೆ ಗೌರವ

ಪುನೀತ್ ರಾಜ್‌ಕುಮಾರ್ ಓಟಿಟಿ ಸಂಸ್ಥೆ ಅಮೆಜಾನ್ ಪ್ರೈಮ್ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದರು. ತಮ್ಮದೇ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ ಸಾಕಷ್ಟು ಸಿನಿಮಾಗಳು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿವೆ. ಹೊಸಬರಿಗಾಗಿ ಅಪ್ಪು ನಿರ್ಮಿಸುತ್ತಿದ್ದ ಸಿನಿಮಾಗಳಿಗೆ ಅಮೆಜಾನ್ ಪ್ರೈಮ್ ವೇದಿಕೆಯಾಗುತ್ತಿತ್ತು. ಹೀಗಾಗಿ ಯಾವಾಗ ಅಪ್ಪು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದರೋ ಅಲ್ಲಿಂದ ಅಮೆಜಾನ್ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಈ ಕಾರಣಕ್ಕಾಗಿಯೇ ಅಮೆಜಾನ್ ಪ್ರೈಮ್ ಅಪ್ಪಗೆ ಗೌರವ ಸೂಚಿಸಲು ಮುಂದಾಗಿದೆ.

ಒಂದು ತಿಂಗಳು ಪುನೀತ್ ಸಿನಿಮಾ ಉಚಿತ

ಒಂದು ತಿಂಗಳು ಪುನೀತ್ ಸಿನಿಮಾ ಉಚಿತ

ಅಮೆಜಾನ್ ಪ್ರೈಮ್ ಅಪ್ಪುಗೆ ಗೌರವ ಸೂಚಿಸುವುದರೊಂದಿಗೆ ಅಭಿಮಾನಿಗಳಿಗೆ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಅನುವು ಮಾಡಿ ಕೊಟ್ಟಿದೆ. ಫೆಬ್ರವರಿ 1 ರಿಂದ ಫೆಬ್ರವರಿ 28ರ ವರೆಗೆ ಅಮೆಜಾನ್‌ನಲ್ಲಿ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣಗೊಂಡು, ಅಮೆಜಾನ್ ಖರೀದಿಸಿದ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅನುಮತಿ ನೀಡಲಿದೆ. ಈ ವಿಷಯವನ್ನು ಸ್ವತ: ಅಮೆಜಾನ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. 5 ಸಿನಿಮಾಗಳನ್ನು ಫ್ರಿಯಾಗಿ ವೀಕ್ಷಣೆ ಮಾಡುವುದಾಗಿ ಹೇಳಿಕೊಂಡಿದೆ.

ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ಫ್ರೀ

ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ಫ್ರೀ

ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಿಸಿದ ನಾಲ್ಕು ಸಿನಿಮಾ ಹಾಗೂ ಹೊಂಬಾಳೆ ಫಿಲಂಸ್‌ನ ಒಂದು ಚಿತ್ರವನ್ನು ಒಂದು ತಿಂಗಳು ಉಚಿತವಾಗಿ ನೋಡಬಹುದಾಗಿದೆ. ಹೇಮಂತ್ ರಾವ್ ನಿರ್ದೇಶನದಲ್ಲಿ ರಿಷಿ ನಟಿಸಿದ ಸಿನಿಮಾ ಕವಲುದಾರಿ, ವಸಿಷ್ಠ ಸಿಂಹ ಅಭಿನಯದ ಮಯಾಬಜಾರ್, ಪ್ರಜ್ವಲ್ ಪತ್ನಿ ರಾಗಿಣಿ ಅಭಿನಯದ ಲಾ ಹಾಗೂ ಪನ್ನಗ ಭರಣ ನಿರ್ದೇಶಿಸಿದ ದಾನಿಶ್ ಸೇಠ್ ಚಿತ್ರ ಫ್ರೆಂಚ್ ಬಿರಿಯಾನಿಯನ್ನು ಉಚಿತವಾಗಿ ನೋಡಬಹುದು. ಇದರೊಂದಿಗೆ ಯುವರತ್ನ ಕೂಡ ಫ್ರೀಯಾಗಿ ವೀಕ್ಷಿಸಬಹುದಾಗಿದೆ.

ಪುನೀತ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಸಜ್ಜು

ಪುನೀತ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಸಜ್ಜು

ಮಾರ್ಚ್ 17ಕ್ಕೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಈ ಕಾರಣಕ್ಕೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೆನಪಿಗಾಗಿ ಬರ್ತ್ ಡೇ ಆಚರಣೆ ಮಾಡಲು ಸಜ್ಜಾಗಿದ್ದಾರೆ. ಇದೇ ದಿನ ಪುನೀತ್ ನಟನೆಯ 'ಜೇಮ್ಸ್' ಸಿನಿಮಾ ಕೂಡ ಬಿಡುಗಡೆಯಾಗುತ್ತಿದ್ದು, ಅದ್ಧೂರಿ ಓಪನಿಂಗ್ ನೀಡಲು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Amazon Prime tribute to Puneeth Rajkumar from Febraury 1st to 28th 5 movies can watch free. Kavaludaari, Mayabazar, Yuvarathna, Law, French Biriyani can watch one hole month for free.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X