ನೇರವಾಗಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿವೆ ಏಳು ಸಿನಿಮಾಗಳು: ಇಲ್ಲಿದೆ ಮಾಹಿತಿ

ಚಿತ್ರಮಂದಿರಗಳು ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಾರಂಭ ಮಾಡಲು ಅವಕಾಶವಿಲ್ಲದಿರುವುದರಿಂದ ಅನೇಕ ನಿರ್ಮಾಣ ಸಂಸ್ಥೆಗಳು ನೇರವಾಗಿ ಒಟಿಟಿಯಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿವೆ. ಇವುಗಳಿಗೆ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರಿಂದ ವಿರೋಧವೂ ವ್ಯಕ್ತವಾಗಿವೆ.

Recommended Video

ಗಾಡ್ ಫಾದರ್ ಗಳಿಗೇ ಗಾಡ್ ಫಾದರ್ ಮುತ್ತಪ್ಪ ರೈ | Muthappa Rai | Ram Gopa Varma

ಆದರೆ ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಲು ಅನೇಕ ನಿರ್ಮಾಪಕರಿಗೆ ಒಟಿಟಿ ಬಿಡುಗಡೆ ಅನಿವಾರ್ಯವಾಗಿವೆ. ಮುಂದಿನ ತಿಂಗಳಿನಿಂದ ವಿವಿಧ ಭಾಷೆಗಳ, ಪ್ರಮುಖ ನಟರು ನಟಿಸಿರುವ ಚಿತ್ರಗಳು ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಾಣುತ್ತಿವೆ. ಈ ಕುರಿತು ಅಮೆಜಾನ್ ಪ್ರೈಮ್ ಹಾಗೂ ನಿರ್ಮಾಣ ಸಂಸ್ಥೆಗಳು ಅಧಿಕೃತವಾಗಿ ಘೋಷಣೆ ಮಾಡಿವೆ.

ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ನಟನೆಯ ಶೂಜಿತ್ ಸಿರ್ಕಾರ್ ಅವರ 'ಗುಲಾಬೊ ಸಿತಾಬೊ' ವಿದ್ಯಾಬಾಲನ್ ನಾಯಕಿಯಾಗಿ ನಟಿಸಿರುವ 'ಶಕುಂತಲಾ ದೇವಿ', ಆರ್. ಜ್ಯೋತಿಕಾ ನಟನೆಯ 'ಪೊನ್‍ಮಗಳ್ ವಂದಾಳ್', ಕನ್ನಡದ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಎರಡು ಚಿತ್ರಗಳು ಸೇರಿದಂತೆ ಐದು ಭಾಷೆಗಳ ಭಾರತೀಯ ಭಾಷೆಗಳ ಚಿತ್ರಗಳು ಅಮೆಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗಲಿವೆ. ಅವುಗಳು ಯಾವುವು? ಮುಂದೆ ಓದಿ...

ಪೊನ್‌ಮಗಳ್ ವಂದಾಳ್

ಪೊನ್‌ಮಗಳ್ ವಂದಾಳ್

ತಮಿಳು ಚಿತ್ರ 'ಪೊನ್‌ಮಗಳ್ ವಂದಾಳ್' ಮೇ 29ರಿಂದ, ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ.

ಜ್ಯೋತಿಕಾ, ಪಾರ್ಥಿಬನ್, ಭಾಗ್ಯರಾಜ್, ಪ್ರತಾಪ್ ಪೊತೆನ್ ಮತ್ತು ಪಾಂಡಿರಾಜ್ ನಟನೆಯ ಪೊನ್‌ಮಗಳ್ ವಂದಾಳ್, ಕಾನೂನು ಸಂಬಂಧಿತ ವಸ್ತುವಿರುವ ಚಿತ್ರ. ಜೆ.ಜೆ. ಫ್ರೆಡರಿಕ್ ಇದನ್ನು ಬರೆದು ನಿರ್ದೇಶಿಸಿದ್ದಾರೆ. ಸೂರ್ಯ ಮತ್ತು ರಾಜಶೇಖರ್ ಕರ್ಪೂರಸುಂದರಪಾಂಡಿಯನ್ ಇದರ ನಿರ್ಮಾಪಕರು.

ಗುಲಾಬೊ ಸಿತಾಬಿ

ಗುಲಾಬೊ ಸಿತಾಬಿ

'ಗುಲಾಬೊ ಸಿತಾಬಿ' ಹಿಂದಿ ಚಿತ್ರ ಜೂನ್ 12ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಕಾಣಲಿದೆ. ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ನಟನೆಯ ಗುಲಾಬೊ ಸಿತಾಬೊ, ಒಬ್ಬ ಸಾಮಾನ್ಯ ಮನುಷ್ಯನ ದಿನನಿತ್ಯದ ಜಂಜಾಟಗಳನ್ನು ತೋರಿಸುವ ಕೌಟುಂಬಿಕ ಹಾಸ್ಯಚಿತ್ರ. ಈ ಚಿತ್ರಕಥೆಯನ್ನು ಜೂಹಿ ಚತುರ್ವೇದಿ ಬರೆದಿದ್ದು, ಶೂಜಿತ್ ಸಿರ್ಕಾರ್ ನಿರ್ದೇಶಿಸಿದ್ದಾರೆ. ರಾನ್ನೀ ಲಹಿರಿ ಹಾಗು ಶೀಲ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ರಘು ಸಮರ್ಥ ಅವರ 'ಲಾ'

ರಘು ಸಮರ್ಥ ಅವರ 'ಲಾ'

ರಘು ಸಮರ್ಥ್ ನಿರ್ದೇಶನದ ಕನ್ನಡ ಚಿತ್ರ 'ಲಾ' ಜೂನ್ 26ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯ.

ರಾಗಿಣಿ ಚಂದ್ರನ್, ಸಿರಿ ಪ್ರಹ್ಲಾದ್, ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನಟನೆಯ ಲಾ ಚಿತ್ರದ ಕಥೆಯನ್ನು ರಘು ಸಮರ್ಥ್ ಬರೆದು ನಿರ್ದೇಶಿಸಿದ್ದಾರೆ. ಅಶ್ವಿನಿ ಮತ್ತು ಪುನೀತ್ ರಾಜ್ ಕುಮಾರ್ ಇದರ ನಿರ್ಮಾಪಕರು.

ಪೆಂಗ್ವಿನ್

ಪೆಂಗ್ವಿನ್

'ಪೆಂಗ್ವಿನ್' ಚಿತ್ರವು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜುಲೈ 17ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ. ಕೀರ್ತಿ ಸುರೇಶ್ ನಟನೆಯ 'ಪೆಂಗ್ವಿನ್‍'ಅನ್ನು ಈಶ್ವರ್ ಕಾರ್ತಿಕ್ ಬರೆದು ನಿರ್ದೇಶಿಸಿದ್ದಾರೆ. ಸ್ಟೋನ್ ಬೆಂಚ್ ಫಿಲಂಸ್ ಹಾಗೂ ಕಾರ್ತಿಕ್ ಸುಬ್ಬರಾಜ್ ಇದರ ನಿರ್ಮಾಣ ಮಾಡಿದ್ದಾರೆ.

ಫ್ರೆಂಚ್ ಬಿರಿಯಾನಿ

ಫ್ರೆಂಚ್ ಬಿರಿಯಾನಿ

ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಮತ್ತೊಂದು ಚಿತ್ರ ಫ್ರೆಂಚ್ ಬಿರಿಯಾನಿ ಜುಲೈ 24ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ. ದಾನಿಶ್ ಸೇಠ್, ಸಾಲ್ ಯೂಸುಫ್ ಹಾಗು ಪಿತೋಬಶ್ ಮುಖ್ಯ ಪಾತ್ರದಲ್ಲಿದ್ದಾರೆ. ಅವಿನಾಶ್ ಬಳೇಕ್ಕಳ ಚಿತ್ರಕಥೆಯನ್ನು ಬರೆದಿದ್ದರೆ, ಪನ್ನಗಾಭರಣ ನಿರ್ದೇಶಿಸಿದ್ದಾರೆ.

ಶಕುಂತಲಾದೇವಿ

ಶಕುಂತಲಾದೇವಿ

ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಖ್ಯಾತ ಗಣಿತಜ್ಞೆ ಶಕುಂತಲಾದೇವಿ ಅವರ ಜೀವನವನ್ನಾಧರಿಸಿದ 'ಶಕುಂತಲಾದೇವಿ' ಹಿಂದಿ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಮೊದಲು ತೆರೆಕಾಣಲಿದೆ. ಇದರ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ನಟಿ ವಿದ್ಯಾ ಬಾಲನ್ ಅವರು ಶಕುಂತಲಾ ದೇವಿ ಪಾತ್ರದಲ್ಲಿ ನಟಿಸಿದ್ದಾರೆ. ನಯನಿಕಾ ಮೆಹ್ತಾನಿ ಮತ್ತು ಅನು ಮೆನನ್ ಬರೆದಿರುವ ಚಿತ್ರವನ್ನು ಅನುಮೆನನ್ ನಿರ್ದೇಶನ ಮಾಡಿದ್ದಾರೆ. ಅಬಂಡನ್ಶಿಯಾ ಎಂಟರ್‍ಟೇನ್ಮೆಂಟ್ ಪ್ರೈ ಲಿ., ಮತ್ತು ಸೋನಿ ಪಿಕ್ಚರ್ಸ್ ನೆಟ್‍ವರ್ಕ್ಸ್ ಇಂಡಿಯಾ ನಿರ್ಮಿಸಿದ್ದಾರೆ.

ಸೂಫಿಯುಮ್ ಸುಜಾತೆಯುಮ್

ಸೂಫಿಯುಮ್ ಸುಜಾತೆಯುಮ್

ಮಲಯಾಳಂನ 'ಸೂಫಿಯುಮ್ ಸುಜಾತೆಯುಮ್' ಚಿತ್ರದ ಬಿಡುಗಡೆ ದಿನಾಂಕ ಘೋಷಿಸಬೇಕಾಗಿದೆ ಅದಿತಿ ರಾವ್ ಹೈದರಿ ಮತ್ತು ಜಯಸೂರ್ಯ ನಟನೆಯ ಈ ಚಿತ್ರದ ಕಥೆಯನ್ನು ನಾರಣಿಪುರ ಶಾನವಾಸ್ ಬರೆದು ನಿರ್ದೇಶಿಸಿದ್ದಾರೆ. ವಿಜಯ್ ಬಾಬು ಅವರ ಫ್ರೈಡೇ ಫಿಲಮ್ ಹೌಸ್ ನಿರ್ಮಿಸಿದೆ.

More from Filmibeat

English summary
Amazon Prime Video has announced release of seven new movies directly on its OTT platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X