Jana Nayagan: 'ಜನ ನಾಯಗನ್‌ಗೆ ಮತ್ತೊಂದು ಹಿನ್ನಡೆ; ಓಟಿಟಿ ಡೀಲ್ ಮುರಿದ ಪ್ರೈಂ ವಿಡಿಯೋ.. ಕಾರಣಗಳೇನು?

ತಮಿಳು ನಟ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್' ರಿಲೀಸ್‌ಗೆ ಮುಹೂರ್ತ ಕೂಡಿ ಬಂದಿಲ್ಲ. ತಮಿಳುನಾಡು ಚುನಾವಣೆಗೂ ಮುನ್ನವೇ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ಅಭಿಮಾನಿಗಳ ಆಸೆಗೆ ಇನ್ನೂ ಈಡೇರಿಲ್ಲ. ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಪ್ರಡ್ಯೂಸ್ ಮಾಡಿರುವ ಈ ಸಿನಿಮಾಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಲೇ ಇದೆ.

'ಜನ ನಾಯಗನ್' ಸಿನಿಮಾ ಈ ವರ್ಷದ ಆರಂಭದಲ್ಲಿಯೇ ರಿಲೀಸ್ ಆಗಬೇಕಿತ್ತು. ಪೊಂಗಲ್‌ಗೆ ಸಿನಿಮಾ ಬಿಡುಗಡೆ ಎಂದು ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ, ಸಿನಿಮಾ ತಂಡ ಹಾಗೂ ಸೆನ್ಸಾರ್ ಮಂಡಳಿ ನಡುವಿನ ಭಿನ್ನಾಭಿಪ್ರಾಯದಿಂದ 'ಜನ ನಾಯಗನ್' ಇನ್ನೂ ಬಿಡುಗಡೆಯಾಗಿಲ್ಲ. ಆರಂಭದಲ್ಲಿ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ, ಅದನ್ನು ಪ್ರಶ್ನಿಸಿ ನಿರ್ಮಾಣ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು.

Amid Release delay Amazon Prime Video has withdrawn OTT deal of Thalapathy Vijay s Jana Nayagan film report

ಇಲ್ಲಿಂದ 'ಜನ ನಾಯಗನ್' ತಂಡ ಹಾಗೂ ಸೆನ್ಸಾರ್ ಮಂಡಳಿ ನಡುವೆ ಸದ್ದಿಲ್ಲದ ಜಟಾಪಟಿ ನಡೆಯುತ್ತಲೇ ಇದೆ. ಕೆವಿಎನ್ ಕೇಸ್ ಹಿಂಪಡೆದಿದ್ದರೂ ಅದು ಸೆನ್ಸಾರ್ ಆಗೋದು ಮಾತ್ರ ಇನ್ನೂ ಬಾಕಿಯಿದೆ. ಇದೇ ಮಾರ್ಚ್ 9ರಂದು ಸೆನ್ಸಾರ್ ಮಂಡಳಿ ಅಧಿಕಾರಿಗಳು ಸಿನಿಮಾ ನೋಡಬೇಕಿತ್ತು. ಆದರೆ, ಸದಸ್ಯರೊಬ್ಬರು ಅನಾರೋಗ್ಯದಿಂದ ಅದೂ ರದ್ದಾಗಿದೆ. ಹೀಗಾಗಿ ಬಿಡುಗಡೆ ಅತಂತ್ರದಲ್ಲಿದೆ. ಈ ಮಧ್ಯೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಅಮೆಜಾನ್ ಪ್ರೈಂ ವಿಡಿಯೋ ಓಟಿಟಿ ಹಕ್ಕುಗಳನ್ನು ಖರೀದಿ ಮಾಡಿತ್ತು. ಅದನ್ನೀಗ ಮುರಿದುಕೊಂಡಿದೆ ಎನ್ನಲಾಗುತ್ತಿದೆ. ಹಾಗಿದ್ದರೆ, ಅಮೆಜಾನ್ ಓಟಿಟಿ ಡೀಲ್ ಮುರಿದುಕೊಳ್ಳಲು ಕಾರಣಗಳಿವು.

ಡೀಲ್ ಆಗಿದ್ದು ಎಷ್ಟಕ್ಕೆ?

ದಳಪತಿ ವಿಜಯ್ ಕೊನೆಯ ಸಿನಿಮಾ ಆಗಿದ್ದರಿಂದ ಅಮೆಜಾನ್ ಪ್ರೈಂ ವಿಡಿಯೋ ದುಬಾರಿ ಮೊತ್ತಕ್ಕೆ ಖರೀದಿ ಮಾಡಿತ್ತು. ಈಗಾಗಲೇ ಆಗಿರುವ ಹಲವು ವರದಿಗಳ ಪ್ರಕಾರ, ಅಮೆಜಾನ್ ಪ್ರೈಂ ವಿಡಿಯೋ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದ 'ಜನ ನಾಯಗನ್' ಸಿನಿಮಾವನ್ನು ಸುಮಾರು 120 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು ಎಂದು ವರದಿಯಾಗಿತ್ತು. ಇದು ವಿಜಯ್ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಓಟಿಟಿ ಡೀಲ್‌ಗಳಲ್ಲೊಂದಾಗಿತ್ತು. ಕ್ರೇಜ್ ಇದ್ದರೂ ಡೀಲ್ ಮುರಿದುಕೊಂಡಿದ್ದಕ್ಕೆ ಹತ್ತು ಹಲವು ಕಾರಣಗಳಿವೆ.


ರಿಲೀಸ್ ಡೇಟ್ ಮಿಸ್

'ಜನ ನಾಯಗನ್' ಸಿನಿಮಾದ ಓಟಿಟಿ ಡೀಲ್‌ನಿಂದ ಅಮೆಜಾನ್ ಪ್ರೈಂ ವಿಡಿಯೋ ಹಿಂದೆ ಸರಿಯುವುದಕ್ಕೆ ಕೆಲವು ಕಾರಣಗಳನ್ನು ಟ್ರೇಡ್‌ ಎಕ್ಸ್‌ಪರ್ಟ್‌ಗಳು ಲಿಸ್ಟ್ ಮಾಡಿದ್ದಾರೆ. ಸಿನಿಮಾದ ರಿಲೀಸ್ ಡೇಟ್ ಮಿಸ್ ಆಗಿದ್ದರಿಂದ ಕ್ರೇಜ್ ಕಮ್ಮಿಯಾಗುವ ಸಾಧ್ಯತೆಯಿದೆ. ಚುನಾವಣೆಗೂ ಮುನ್ನ ರಿಲೀಸ್ ಆದರೆ, 'ಜನ ನಾಯಗನ್' ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತೆ. ಇದು ಓಟಿಟಿಯಲ್ಲಿ ರಿಲೀಸ್ ಆಗುವಾಗಲೂ ಅದೇ ಕ್ರೇಜ್ ಅನ್ನು ಕ್ರಿಯೇಟ್ ಮಾಡಬಹುದು. ಆದ್ರೀಗ ರಿಲೀಸ್ ಬಗ್ಗೆ ಕ್ಲಾರಿಟಿ ಇಲ್ಲ.

Amid Release delay Amazon Prime Video has withdrawn OTT deal of Thalapathy Vijay s Jana Nayagan film report

ಸಿನಿಮಾ ರಿಲೀಸ್ ಕ್ಲಾರಿಟಿ ಇಲ್ಲ

ಹೌದು, 'ಜನ ನಾಯಗನ್' ರಿಲೀಸ್ ಅತಂತ್ರದಲ್ಲಿದೆ. ಒಂದು ವೇಳೆ ಚುನಾವಣೆ ಆದ್ಮೇಲೆ ರಿಲೀಸ್ ಆದರೆ, ಕೆಲವು ದೃಶ್ಯಗಳಿಗೆ ಕತ್ತರಿ ಹಾಕಬೇಕಿದೆ. ಯಾಕಂದ್ರೆ, ಚುನಾವಣೆಗೆ ಅನುಕೂಲ ಆಗುವಂತೆ ಕೆಲವು ದೃಶ್ಯಗಳನ್ನು ಈ ಸಿನಿಮಾದಲ್ಲಿ ಇಡಲಾಗಿದ್ದು, ಅದು ಎಲೆಕ್ಷನ್ ಮುಗಿದ ಬಳಿಕ ಅಪ್ರಸ್ತುತ ಆಗಲಿದೆ. ಅಲ್ಲದೇ ಇದೇ ದೃಶ್ಯಗಳ ಮೇಲೆ ಸೆನ್ಸಾರ್ ಬೋರ್ಡ್ ಆಕ್ಷೇಪ ವ್ಯಕ್ತಪಡಿಸಿದೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಕ್ಲಾರಿಟಿ ಇಲ್ಲದೇ ಇರೋದ್ರಿಂದ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಡೀಲ್ ಮೊತ್ತ ಕಡಿತಕ್ಕೆ ಕೆವಿಎನ್ ನಕಾರ

ಇನ್ನು ಕೆಲವು ಮೂಲಗಳ ಪ್ರಕಾರ, ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆಜಾನ್ ಪ್ರೈಂ ವಿಡಿಯೋ ಶೇ.30ರಷ್ಟು ಮೊತ್ತವನ್ನು ಕಡಿತ ಮಾಡಿಕೊಳ್ಳುವಂತೆ ಬೇಡಿಕೆ ಇಟ್ಟಿತ್ತು. ಆದರೆ, ಅದಕ್ಕೆ ಕೆವಿಎನ್ ಸಂಸ್ಥೆ ಒಪ್ಪಲಿಲ್ಲ. ಹೆಚ್ಚು ಕಡಿಮೆ 30 ರಿಂದ 40 ಕೋಟಿ ರೂಪಾಯಿ ಕಡಿತ ಮಾಡಬೇಕಾದ ಪರಿಸ್ಥಿತಿ ಇದ್ದಿದ್ದರಿಂದ ಕೆವಿಎನ್ ಒಪ್ಪಲಿಲ್ಲ ಎನ್ನಲಾಗಿದೆ. ಹೀಗಾಗಿ ಅಮೆಜಾನ್ ಪ್ರೈಂ ವಿಡಿಯೋ ಹೊರ ಬಂದಿದೆ ಅನ್ನೋದು ಸುದ್ದಿ.

More from Filmibeat

English summary
Amid Release delay Amazon Prime Video has withdrawn OTT deal of Thalapathy Vijay's Jana Nayagan film report.
Read more about: vijay tamil movie amazon prime
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X