Ghaati OTT: ಥಿಯೇಟರ್ ಮಕಾಡೆ ಮಲಗಿದ ಅನುಷ್ಕಾ ಶೆಟ್ಟಿ 'ಘಾಟಿ' ಓಟಿಟಿ ರಿಲೀಸ್; ಕನ್ನಡದಲ್ಲೂ ನೋಡ್ಬಹುದು!

ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದ ಸ್ಟಾರ್ ನಟಿ. ಅಲ್ಲಿನ ಸೂಪರ್‌ಸ್ಟಾರ್‌ಗಳಿಗೆ ಇರುವಷ್ಟೇ ಕ್ರೇಜ್ ಇವರಿಗೂ ಇದೆ. ಆದರೆ, 'ಬಾಹುಬಲಿ' ಸಿನಿಮಾದ ಬಳಿಕ ಅನುಷ್ಕಾ ಶೆಟ್ಟಿ ಅದೃಷ್ಟ ಕೈ ಕೊಟ್ಟಂತೆ ಇದೆ. ಅವರೇ ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲವೋ? ಇಲ್ಲ ಒಳ್ಳೆ ಸ್ಕ್ರೀಪ್ಟ್ ಅವರನ್ನು ಹುಡುಕಿಕೊಂಡು ಬರುತ್ತಿಲ್ಲವೋ ಗೊತ್ತಿಲ್ಲ. ಅನುಷ್ಕಾ ಅಭಿಮಾನಿಗಳು ಒಂದೊಳ್ಳೆ ಸಿನಿಮಾಗಾಗಿ ಕಾದು ಕೂರುವುದು ಮಾತ್ರ ನಿಂತಿಲ್ಲ.

ಇತ್ತೀಚೆಗೆ ಅನುಷ್ಕಾ ಶೆಟ್ಟಿ ನಟಿಸಿದ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿತ್ತು. ಮತ್ತೆ ರಗಡ್ ಲುಕ್‌ನಲ್ಲಿ ಅನುಷ್ಕಾ ಶೆಟ್ಟಿಯನ್ನು ಕಂಡು ತೆಲುಗು ಮಂದಿ ಥ್ರಿಲ್ ಆಗಿದ್ದೇನೋ ನಿಜ. ಆದರೆ, ಅವರು ನಟಿಸಿದ 'ಘಾಟಿ' ಟೀಸರ್, ಟ್ರೈಲರ್‌ನಿಂದ ಗಮನ ಸೆಳೆದಿತ್ತು. ಇದು ಅನುಷ್ಕಾ ಶೆಟ್ಟಿಯ ಕಮ್‌ ಬ್ಯಾಕ್ ಸಿನಿಮಾ ಆಗುತ್ತೆ ಎಂದು ಫ್ಯಾನ್ಸ್ ನಿರೀಕ್ಷೆ ಮಾಡಿದ್ದರು. ಆದರೆ, ಥಿಯೇಟರ್‌ ಆಗಿದ್ದು ಮಾತ್ರ ನಿರಾಸೆ.

Anushka Shetty and Krish Jagarlamudi movie Ghaati Ott Release details When And Where to Watch

ಕ್ರಿಶ್ ಜಗರ್ಲಮುಡಿ ನಿರ್ದೇಶಿಸಿದ 'ಘಾಟಿ' ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಇದೇ ವೇಳೆ ಶಿವಕಾರ್ತಿಕೇಯನ್ ಹಾಗೂ ಎ.ಆರ್. ಮುರುಗದಾಸ್ ಕಾಂಬಿನೇಷನ್‌ ಸಿನಿಮಾ 'ಮದರಾಸಿ' ಸಿನಿಮಾ ಕೂಡ ರಿಲೀಸ್ ಆಗಿತ್ತು. ಹೀಗಾಗಿ ಎರಡು ಸಿನಿಮಾಗಳು ಬಾಕ್ಸಾಫೀಸ್‌ ಕಿತ್ತಾಡಿದ್ದವು. ಈ ಜಟಾಪಟಿಯಲ್ಲಿ ಅನುಷ್ಕಾ ಶೆಟ್ಟಿಯ ಸಿನಿಮಾ ಸೋತು ಸುಣ್ಣವಾಗಿತ್ತು. ಈಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಹಾಗಿದ್ರೆ, ಯಾವಾಗ? ಎಲ್ಲಿ ರಿಲೀಸ್ ಆಗುತ್ತೆ ಅನ್ನೋದ ಡಿಟೈಲ್ಸ್ ಇಲ್ಲಿದೆ.

'ಘಾಟಿ' ರಿಲೀಸ್‌ಗೆ ಮುಹೂರ್ತ ಫಿಕ್ಸ್

ಇತ್ತೀಚೆಗೆ ಥಿಯೇಟರ್‌ನಲ್ಲಿ ಗೆದ್ದ ಸಿನಿಮಾಗಳು, ಓಟಿಟಿಯಲ್ಲಿ ಸೋಲುತ್ತಿವೆ. ಹಾಗೇ ಚಿತ್ರಮಂದಿರದಲ್ಲಿ ಸೋತ ಸಿನಿಮಾಗಳು ಓಟಿಟಿ ಮೆಗಾ ಸಕ್ಸಸ್ ಕಂಡಿವೆ. ಹಾಗೆ ಅನುಷ್ಕಾ ಶೆಟ್ಟಿಯ 'ಘಾಟಿ' ಥಿಯೇಟರ್‌ನಲ್ಲಿ ಸೋತಿರಬಹುದು. ಆದರೆ, ಓಟಿಟಿಯಲ್ಲಿ ಗೆದ್ದು ಬೀಗುವ ನಿರೀಕ್ಷೆಯಿದೆ. ಹೀಗಾಗಿ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗುತ್ತಿರುವ 'ಘಾಟಿ' ಮೇಲೂ ಇದೇ ನಿರೀಕ್ಷೆಯಿದೆ. ಒಟ್ಟು ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಒಟ್ಟು ಐದು ಭಾಷೆಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.

'ಘಾಟಿ'ಯನ್ನು ಎಲ್ಲಿ? ಯಾವಾಗ?

ಸೆಪ್ಟೆಂಬರ್ 5ರಂದು 'ಘಾಟಿ' ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಒಂದು ತಿಂಗಳು ಕಳೆಯುವುದರೊಳಗೆ ಈ ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ. ಅನುಷ್ಕಾ ಶೆಟ್ಟಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರೂ ತೆಲುಗು ಮಂದಿ ಯಾಕೋ ಇಷ್ಟ ಪಟ್ಟಿಲ್ಲ. ಹೀಗಾಗಿ ಕೇವಲ 21 ದಿನಗಳಲ್ಲಿ ಓಟಿಟಿಗೆ ಲಗ್ಗೆ ಇಡುತ್ತಿದೆ. ನಾಳೆ (ಸೆಪ್ಟೆಂಬರ್ 26) 'ಘಾಟಿ' ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Anushka Shetty and Krish Jagarlamudi movie Ghaati Ott Release details When And Where to Watch

ಕನ್ನಡದಲ್ಲೂ 'ಘಾಟಿ' ನೋಡಿ

ಅನುಷ್ಕಾ ಶೆಟ್ಟಿ ಕನ್ನಡದವರು. ಹೀಗಾಗಿ ಇಲ್ಲೂ ಅವರ ಫ್ಯಾನ್ಸ್ ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ ಕನ್ನಡದಲ್ಲಿಯೇ ಸಿನಿಮಾ ನೋಡಬೇಕು ಅನ್ನೋರಿಗೂ ಅವಕಾಶವಿದೆ. ಸೆಪ್ಟೆಂಬರ್ 26 ರಿಂದ ಕನ್ನಡದಲ್ಲಿಯೂ ಘಾಟಿ ಸಿನಿಮಾವನ್ನು ವೀಕ್ಷಣೆ ಮಾಡಬಹುದು. ಸಾಮಾನ್ಯ ಮಹಿಳೆ ಪರಿಸ್ಥಿತಿಗೆ ಸಿಲುಕಿ ಹೇಗೆ ಅಂಡರ್‌ವರ್ಲ್ಡ್‌ಗೆ ಎಂಟ್ರಿ ಕೊಡುತ್ತಾಳೆ. ಅಲ್ಲಿಂದ ಅವಳ ಬದುಕು ಹೇಗೆಲ್ಲ ತಿರುವುಗಳನ್ನು ಪಡೆದುಕೊಳ್ಳುತ್ತೆ ಅನ್ನೋದೇ 'ಘಾಟಿ'ಯ ಕಥೆ. ಈ ಮಹಿಳೆಯ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದು, ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿತ್ತು.

ಬಾಕ್ಸಾಫೀಸ್‌ ಕಥೆ ಏನು?

ಅನುಷ್ಕಾ ಶೆಟ್ಟಿ ಅಭಿನಯದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದ್ದರೂ, ಸಿನಿಮಾ ಕಥೆ, ಚಿತ್ರಕಥೆ ಇಷ್ಟ ಆಗಿರಲಿಲ್ಲ. ಹೀಗಾಗಿ ಥಿಯೇಟರ್‌ನಲ್ಲಿ ಸದ್ದು ಮಾಡಲಿಲ್ಲ. Sacnilk ಪ್ರಕಾರ, 'ಘಾಟಿ' ಸಿನಿಮಾ ಕೇವಲ 7 ಕೋಟಿ ರೂಪಾಯಿಯನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ಇನ್ನು ಅನುಷ್ಕಾ ಶೆಟ್ಟಿ ಜೊತೆ, ವಿಕ್ರಮ್ ಪ್ರಭು, ಚೈತನ್ಯಾ ರಾವ್, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಓಟಿಟಿಯಲ್ಲಿ 'ಘಾಟಿ'ಗೆ ಹೇಗೆ ರೆಸ್ಪಾನ್ಸ್ ಸಿಗುತ್ತೆ ಅನ್ನೋದು ನೋಡಬೇಕಿದೆ.

More from Filmibeat

English summary
Anushka Shetty and Krish Jagarlamudi movie Ghaati Ott Release details When And Where to Watch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X