ನಾಗಾರ್ಜುನ ಜೊತೆ ಮಿಂಚಿದ ಆಶಿಕಾ ಸಿನಿಮಾ 'ನಾ ಸಾಮಿ ರಂಗ' ಓಟಿಟಿ ರಿಲೀಸ್‌ಗೆ ಮುಹೂರ್ತ; ಎಲ್ಲಿ? ಯಾವಾಗ?

ಕನ್ನಡದ ನಟಿ ಆಶಿಕಾ ರಂಗನಾಥ್ ಈಗ ತೆಲುಗಿನಲ್ಲಿ ಬ್ಯುಸಿಯಾಗಿರುವಂತೆ ಕಾಣುತ್ತಿದೆ. ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿದ್ದ ಈ ನಟಿ ಟಾಲಿವುಡ್‌ನಲ್ಲಿ ಮೊದಲ ಸಕ್ಸಸ್ ಕಂಡಿದ್ದಾರೆ. ಟಾಲಿವುಡ್ ಮನ್ಮಥ ನಾಗಾರ್ಜುನ ನಟಿಸಿದ 'ನಾ ಸಾಮಿ ರಂಗ' ಸಂಕ್ರಾಂತಿಗೆ ತೆರೆಕಂಡಿತ್ತು. ಥಿಯೇಟರ್‌ನಲ್ಲಿ ತೆರೆಕಂಡು ಯಶಸ್ಸು ಕಂಡ ಈ ಸಿನಿಮಾ ಈಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

ಸಿನಿಮಾ ಮಂದಿಗೆ ಸಂಕ್ರಾಂತಿ ಲಾಭ ತಂದು ಕೊಡುವ ಹಬ್ಬ. ಅದಕ್ಕೆ ಬ್ಯಾಕ್ ಟು ಬ್ಯಾಕ್ ಸಿನಿಮಾ ರಿಲೀಸ್‌ ಆಗುತ್ತವೆ. ಸೂಪರ್‌ಸ್ಟಾರ್‌ಗಳು ಕೂಡ ಇದೇ ದಿನ ಸಿನಿಮಾ ರಿಲೀಸ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗೇ ಈ ಬಾರಿ ಕೂಡ ಸ್ಟಾರ್ ನಟರ ಸಿನಿಮಾ ತೆರೆಕಂಡಿದ್ದವು. ಮಹೇಶ್ ಬಾಬು ಸಿನಿಮಾ 'ಗುಂಟೂರು ಖಾರಂ', ವಿಕ್ಟರಿ ವೆಂಕಟೇಶ್ ಸಿನಿಮಾ 'ಸೈಂದವ್', ನಾಗಾರ್ಜುನ ಸಿನಿಮಾ 'ನಾ ಸಾಮಿ ರಂಗ' ರಿಲೀಸ್ ಆಗಿದ್ದವು.

Nagarjuna Ashika Ranganath Naa Saami Ranga Ott

ಇವೆಲ್ಲವುಗಳಿಗೆ ಟಕ್ಕರ್ ಕೊಟ್ಟಿದ್ದು 'ಹನುಮಾನ್' ಸಿನಿಮಾ. ಹೆಚ್ಚೇನು ಪ್ರಚಾರ ಮಾಡದೆ ತೆರೆಕಂಡಿದ್ದ ಸಿನಿಮಾ 'ನಾ ಸಾಮಿ ರಂಗ' ಥಿಯೇಟರ್‌ನಲ್ಲೂ ಅದ್ಭುತ ಕಲೆಕ್ಷನ್ ಮಾಡಿತ್ತು. ಈಗ ಈ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿ ನಿಂತಿದೆ. ಕನ್ನಡದ ನಟಿ ಆಶಿಕಾ ರಂಗನಾಥ್ ನಟಿಸಿದ ಈ ಸಿನಿಮಾವನ್ನು ಶೀಘ್ರದಲ್ಲಿಯೇ ಓಟಿಟಿಯಲ್ಲಿ ನೋಡಿಬಹುದು.

ಕನ್ನಡದ ನಟಿ ಆಶಿಕಾ ರಂಗನಾಥ್ ನಟಿಸಿದ ಮೊದಲ ಸಿನಿಮಾ 'ಅಮಿಗೋಸ್' ಥಿಯೇಟರ್‌ನಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಅಲ್ಲಿಗೆ ಆಶಿಕಾ ಟಾಲಿವುಡ್ ಪಯಣ ಕಠಿಣ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ನಾಗಾರ್ಜುನ ಸಿನಿಮಾ ಆಶಿಕಾ ಕೈ ಹಿಡಿದಿದೆ. ಇಷ್ಟು ದಿನ ಈ ಸಿನಿಮಾ ಥಿಯೇಟರ್‌ನಲ್ಲಿ ಸದ್ದು ಮಾಡಿತ್ತು. ಅದೀಗ ಓಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ.

ಅಂದ್ಹಾಗೆ, ನೃತ್ಯ ನಿರ್ದೇಶಕ ವಿಜಯ್ ಬಿನ್ನಿ 'ನಾ ಸಾಮಿ ರಂಗ' ಸಿನಿಮಾ ಮೂಲಕ ನಿರ್ದೇಶಕರಾಗಿ ಬದಲಾಗಿದ್ದರು. ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿಯೇ ನಾಗಾರ್ಜುನಗೆ ಆಕ್ಷನ್ ಕಟ್ ಹೇಳಿದ್ದಾರೆ. ಫ್ಯಾಮಿಲಿ ಕಮ್ ಮಾಸ್ ಎಂಟರ್‌ಟೈನರ್ ಸಿನಿಮಾಗೆ ಮೊದಲ ದಿನವೇ ಪಾಸಿಟಿವ್ ಟಾಕ್ ಸಿಕ್ಕಿತ್ತು. ಟಾಲಿವುಡ್ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

Nagarjuna Ashika Ranganath Naa Saami Ranga Ott

'ನಾ ಸಾಮಿ ರಂಗ' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಅದ್ಭುತ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಿದ್ದಾರೆ. ಥಿಯೇಟರ್‌ನಲ್ಲಿ ಉತ್ತರ ಪ್ರತಿಕ್ರಿಯೆ ಸಿಕ್ಕ ಬಳಿಕ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ತಿಂಗಳು ಅಂದ್ರೆ, ಫೆಬ್ರವರಿ 17ರಂದು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.

ಆಶಿಕಾ ರಂಗನಾಥ್ ನಟಿಸಿದ ಈ ಸಿನಿಮಾವನ್ನು ಇದೂವರೆಗೂ ಯಾರು ನೋಡಿಲ್ಲವೋ? ಅವರಿಗೆ ಈ ಸಿನಿಮಾ ಓಟಿಟಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಸಿಗಲಿದೆ. ತೆಲುಗು ಸಿನಿಮಾಗಳಲ್ಲಿ ಕನ್ನಡದ ನಟಿ ಹೇಗೆ ನಟಿಸಿದ್ದಾರೆ ಅನ್ನೋದನ್ನು ನೋಡಿ ರಿವ್ಯೂ ಮಾಡಬಹುದು.

ಈ ಸಿನಿಮಾದಲ್ಲಿ ನಾಗಾರ್ಜುನ ಜೊತೆಗೆ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಅಲ್ಲರಿ ನರೇಶ್, ರಾಜ್ ತರುಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್‌ನಲ್ಲಿ ಶ್ರೀನಿವಾಸ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷ ಅಂದ್ರೆ, ಆಸ್ಕರ್ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ.

More from Filmibeat

English summary
Ashika Ranganath and Nagarjuna Starrer Naa Saami Ranga streaming on Disney Hoststar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X