ಪಿಆರ್‌ಕೆ ಸಂಸ್ಥೆಯ 3 ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್: ಅಶ್ವಿನಿ ಪುನೀತ್ ರಾಜ್‌ಕುಮಾರ್ ಘೋಷಣೆ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಸಾಲು ಸಾಲು ಖುಷಿ ಸುದ್ದಿಗಳು ಸಿಗುತ್ತಿವೆ. ಒಂದು ಕಡೆ ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಸಿನಿಮಾದಲ್ಲಿ ಶಿವಣ್ಣ ಹಾಗೂ ರಾಘಣ್ಣ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇನ್ನೊಂದು ಕಡೆ ಅಮೆಜಾನ್ ಪುನೀತ್ ರಾಜ್‌ಕುಮಾರ್‌ಗೆ ಗೌರವ ಸೂಚಿಸಲು 5 ಸಿನಿಮಾ ಉಚಿತವಾಗಿ ಸ್ಟ್ರೀಮಿಂಗ್ ಮಾಡಲು ನಿರ್ಧರಿಸಿದೆ.

Recommended Video

ಈಡೇರಿತು ಅಪ್ಪು ಕನಸು, ಅಮೆಜಾನ್ ನಲ್ಲಿ ಪುನೀತ್ 3 ಸಿನಿಮಾ

ಅಮೆಜಾನ್ ಅಪ್ಪು ನಿರ್ಮಿಸಿದ ನಾಲ್ಕು ಸಿನಿಮಾ ಹಾಗೂ ನಟಿಸಿದ ಒಂದು ಸಿನಿಮಾವನ್ನು ವೀಕ್ಷಕರಿಗೆ ಉಚಿತವಾಗಿ ನೋಡಲು ಅವಕಾಶ ನೀಡುತ್ತಿದೆ. ಇದೇ ಬೆನ್ನಲೇ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಸಂಸ್ಥೆಯಿಂದ ಹೊಸ ಮೂರು ಸಿನಿಮಾಗಳನ್ನು ಘೋಷಿಸಿದ್ದಾರೆ. ಈ ಮೂರು ಸಿನಿಮಾಗಳೂ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

3 ಹೊಸ ಸಿನಿಮಾ ಘೋಷಿಸಿದ ಅಪ್ಪು ಪತ್ನಿ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಸಂಸ್ಥೆಯನ್ನು ಆರಂಭ ಮಾಡಿದ್ದರಿಂದ ಅಮೆಜಾನ್ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಈಗಾಗಲೇ ಪಿಆರ್‌ಕೆ ನಿರ್ಮಿಸಿದ ನಾಲ್ಕು ಸಿನಿಮಾಗಳು ಅಮೆಜಾನ್‌ನಲ್ಲಿ ಬಿಡುಗಡೆಯಾಗಿದೆ. ಈಗ ಇನ್ನೂ ಮೂರು ಸಿನಿಮಾಗಳನ್ನು ಅಮೆಜಾನ್‌ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಅಪ್ಪು ಪತ್ನಿ ಅಶ್ವಿನಿ ತಿಳಿಸಿದ್ದಾರೆ. ' ಮ್ಯಾನ್ ಆಫ್ ದಿ ಮ್ಯಾಚ್', 'ಫ್ಯಾಮಿಲಿ ಪ್ಯಾಕ್' ಹಾಗೂ ದಾನಿಶ್ ಸೇಠ್ ನಟನೆಯ 'ಒನ್ ಕಟ್ ಟು ಕಟ್' ಪ್ರೈಮ್‌ನಲ್ಲಿ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.

 3 ಸಿನಿಮಾಗಳ ಬಗ್ಗೆ ಅಪ್ಪು ಪತ್ನಿ ಹೇಳಿದ್ದೇನು?

3 ಸಿನಿಮಾಗಳ ಬಗ್ಗೆ ಅಪ್ಪು ಪತ್ನಿ ಹೇಳಿದ್ದೇನು?

"ಪುನೀತ್ ರಾಜ್‌ಕುಮಾರ್ ಅವರ ವಿಭಿನ್ನ ದೃಷ್ಟಿಕೋನವು ಹಲವಾರು ವರ್ಷಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದೆ. ಅಪ್ಪುಗೆ ಇದು ಸಾಕಷ್ಟು ಅಭಿಮಾನಿಗಳನ್ನು ಹಾಗೂ ಗೌರವವನ್ನು ತಂದು ಕೊಟ್ಟಿದೆ. ಆ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಮೂರು ಸಿನಿಮಾಗಳನ್ನು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪ್ರೈಮ್ ವೀಡಿಯೋ ಜೊತೆಗೆ ನಮ್ಮ ಯಶಸ್ವಿ ಒಡನಾಟ ಮತ್ತು ನಮ್ಮ ಚಲನಚಿತ್ರಗಳನ್ನು ಪ್ರಪಂಚದಾದ್ಯಂತದ ವೀಕ್ಷಕರಿಗೆ ಕೊಂಡೊಯ್ಯುವುದಕ್ಕೆ ನಾವು ಸಂತಸ ಪಡುತ್ತೇವೆ." ಎಂದು ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಿಳಿಸಿದ್ದಾರೆ.

 ಪುನೀತ್ ಪರಂಪರೆ ಮುಂದುವರೆಸುವ ಗುರಿ

ಪುನೀತ್ ಪರಂಪರೆ ಮುಂದುವರೆಸುವ ಗುರಿ

ಪುನೀತ್ ರಾಜ್‌ಕುಮಾರ್ ಕನಸು ಹಾಗೂ ಪರಂಪರೆಯನ್ನು ಮುಂದುವರೆಸುವ ದೃಷ್ಟಿ ಕೋನದಿಂದ ಮೂರು ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಭಾವನೆಗಳು ಮತ್ತು ಸಾಮಾಜಿಕ ಸವಾಲುಗಳ ಪ್ರತಿಬಿಂಬವಾಗಿರುವ ಸಿನಿಮಾ 'ಮ್ಯಾನ್ ಆಫ್ ದಿ ಮ್ಯಾಚ್'. ಅಥರ್ವ ಪ್ರಕಾಶ್ ಕೆ ಜಯರಾಮ್, ಧರ್ಮಣ್ಣ ಕಡೂರ್ ಮತ್ತು ನಟರಾಜ್ ರಂತಹ ಅತ್ಯುತ್ತಮ ನಟರು ಅಭಿನಯಿಸಿದ್ದಾರೆ. ಒಂದೇ ದಿನದಲ್ಲಿ ನಡೆಯುವ ಕಥೆ 'ಒನ್ ಕಟ್ ಟು ಕಟ್'. ದಾನಿಶ್ ಸೇಠ್. ಪ್ರಕಾಶ್ ಬೆಳವಾಡಿ ಹಾಗೂ ಸಂಯುಕ್ತ ಹೊರನಾಡು ನಟಿಸಿದ್ದಾರೆ. ಈ ಮೂರು ಚಲನಚಿತ್ರಗಳೊಂದಿಗೆ ಪ್ರಪಂಚದಾದ್ಯಂತ 240 ದೇಶಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪರಂಪರೆಯನ್ನು ಮುಂದುವರಿಸುವ ಆಲೋಚನೆ ಹೊಂದಿದ್ದಾರೆ.

 ಪಿಆರ್‌ಕೆ ಜೊತೆ ಅಮೆಜಾನ್ ಒಡಂಬಡಿಕೆ

ಪಿಆರ್‌ಕೆ ಜೊತೆ ಅಮೆಜಾನ್ ಒಡಂಬಡಿಕೆ

"ಕೆಲವು ವರ್ಷಗಳಿಂದ ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಈ ಸಹಯೋಗವು, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಸೃಜನಶೀಲ ಪ್ರತಿಭೆ ಮತ್ತು ಕಥೆ ಹೇಳುವ ಅವರ ವಿಶಿಷ್ಟ ದೃಷ್ಟಿಯನ್ನು ನಾವು ಗೌರವಿಸುತ್ತೇವೆ. ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪ್ರೀತಿಯ ನೆನಪಿಗಾಗಿ ಕೆಲವು ಅತ್ಯುತ್ತಮ ಕಥೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ." ಎಂದು ಅಮೆಜಾನ್ ಪ್ರೈಮ್ ಸಂಸ್ಥೆ ತಿಳಿಸಿದೆ.

More from Filmibeat

English summary
Ashwini Puneeth Rajkumar announced 3 films with amazon prime videos. Danish sait starrer One Cut Two Cut, Family Pack, Man of the Match will be releasing on Amazon prime.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X