ಅಪ್ಪು ಅಭಿಮಾನಿಗಳಿಗೊಂದು ಸಂದೇಶ ಕೊಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್; PRK App ಟ್ರೈಲರ್‌ಗೆ ಮುಹೂರ್ತ

ಅಪ್ಪು ಅನ್ನು ಜೀವಂತವಾಗಿರಿಸುವುದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಂದ ಹಿಡಿದು ಆಪ್ತರು, ಅಭಿಮಾನಿಗಳು ಎಲ್ಲರೂ ಒಂದು ಒಂದು ರೀತಿ ಶ್ರಮಿಸುತ್ತಿದ್ದಾರೆ. ಸದಾ ಅಭಿಮಾನಿಗಳ ಜೊತೆ ಇರುವುದಕ್ಕೆ ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂತಹದ್ದೇ ಒಂದು ವಿಭಿನ್ನ ಹಾಗೂ ವಿಶಿಷ್ಠ ಪ್ರಯತ್ನವೇ ಪಿಆರ್‌ಕೆ ಆಪ್. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದಂದು ಅಭಿಮಾನಿಗಳ ಮುಂದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ವಿಷಯ ಹಂಚಿಕೊಂಡಿದ್ದರು. ಅದೀಗ ಲಾಂಚ್ ಆಗುವ ಸಮಯ ಬಂದಿದೆ.

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಫ್ಯಾನ್ಸ್‌ಗೆ ಕೊಟ್ಟಿದ್ದ ಭರವಸೆ ಇನ್ನೇನು ಈಡೇರುವ ಸಮಯ ಬಂದಿದೆ. ಪಿಆರ್‌ಕೆ ಆಪ್ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳುತ್ತಿದೆ. ಅದರ ಮೊದಲ ಹೆಜ್ಜೆಯೇ ಪಿಆರ್‌ಕೆ ಆಪ್ ಟ್ರೈಲರ್. ಅಭಿಮಾನಿಗಳು ನೇರವಾಗಿ ಅಪ್ಪು ಜೊತೆ ಕನೆಕ್ಟ್ ಆಗಬೇಕು ಅನ್ನೋ ಕಾರಣಕ್ಕೆ ಇಂತಹದ್ದೇ ಒಂದು ಪ್ರಯತ್ನ ನಡೆಯುತ್ತಿದೆ. ಅದೀಗ ಕೊನೆಯ ಹಂತದಲ್ಲಿದ್ದು, ಲೋಕಾರ್ಪಣೆ ಆಗುವ ಸಮಯ ಬಂದಿದೆ. ಅದಕ್ಕೂ ಮುನ್ನ ಪಿಆರ್‌ಕೆ ಆಪ್‌ನ ಒಂದು ಟ್ರೈಲರ್ ಲಾಂಚ್ ಆಗಲಿದೆ.

Ashwini Puneeth Rajkumar announced PRK App trailer will be out on October 18th

ಪುನೀತ್ ರಾಜ್‌ಕುಮಾರ್‌ ಪರಂಪರೆಯನ್ನು ಮುಂದುವರೆಸುವುದಕ್ಕೆ ತಂಡವೊಂದು ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿತ್ತು. ಅದುವೇ ಪಿಆರ್‌ಕೆ ಆಪ್. ಈ ಆಪ್ ಹೇಗಿರುತ್ತೆ? ಅಪ್ಪು ಜೊತೆ ಅಭಿಮಾನಿಗಳು ಹೇಗೆ ಕನೆಕ್ಟ್ ಆಗಬಹುದು? ಆಪ್ ಒಳಗೆ ಏನೆಲ್ಲ ಇರುತ್ತೆ? ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಇದಕ್ಕೆ ಅಕ್ಟೋಬರ್ 18ರಂದು ರಿಲೀಸ್ ಆಗುತ್ತಿರುವ ಟ್ರೈಲರ್ ಉತ್ತರ ಕೊಡಬಹುದು.

ಪಿಆರ್‌ಕೆ ಆಪ್ ಅಪ್ಪು ಡೈ ಹಾರ್ಡ್‌ ಫ್ಯಾನ್ಸ್‌ಗಾಗಿ ಮಾಡಿರುವಂತಹ ಒಂದು ಆಪ್. ಈ ಆಪ್‌ ಬಗ್ಗೆ ಕಿರು ಪರಿಚಯ ಮಾಡಿಸುವುದಕ್ಕೆ ಟ್ರೈಲರ್ ಅನ್ನು ಬಿಡುಗಡೆ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದೆ. ಇನ್ನು ಮೂರು ದಿನಗಳಲ್ಲಿ ಆ ಟ್ರೈಲರ್ ಮೂಲಕ ಅಪ್ಪು ಜೊತೆ ಅಭಿಮಾನಿಗಳು ಹೇಗೆ ಕನೆಕ್ಟ್ ಆಗಬಹುದು ಎಂಬುವುದು ಗೊತ್ತಾಗಲಿದೆ. ಅದಕ್ಕೂ ಮುನ್ನ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗಾಗಿ ಒಂದು ಸಂದೇಶವನ್ನು ರವಾನೆ ಮಾಡಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿಡಿಯೋವನ್ನು ಅಪ್ಪು ಅಭಿಮಾನಿಗಳಿಗೆ ಪಿಆರ್‌ಕೆ ಆಪ್‌ ಟ್ರೈಲರ್ ಲಾಂಚ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಅಭಿಮಾನ, ನಗು, ನೆನಪುಗಳೆಲ್ಲ ಒಂದೇ ವೇದಿಕೆಯಲ್ಲಿ ಸೇರುವ ಸಮಯ." ಎಂದು ಹೇಳುವ ಮೂಲಕ ಫ್ಯಾನ್ಸ್‌ಗೆ ಭಾವನಾತ್ಮಕ ಸಂದೇಶವನ್ನು ಕೊಟ್ಟಿದ್ದಾರೆ. ಈ ಪಿಆರ್‌ಕೆ ಆಪ್ ಟ್ರೈಲರ್ ಇದೇ ಶನಿವಾರದಂದು (ಅಕ್ಟೋಬರ್ 18) ಬೆಳಗ್ಗೆ 11.55ಕ್ಕೆ ರಿಲೀಸ್ ಆಗುತ್ತಿದೆ. ನಿಮ್ಮ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ಮತ್ತೆ ಅಪ್ಪ ಅನ್ನು ಕಣ್ತುಂಬಿ ಕೊಳ್ಳುವುದಕ್ಕೆ ರೆಡಿಯಾಗಿ ಎಂದು ತಂಡ ಹೇಳಿಕೊಂಡಿದೆ.

Ashwini Puneeth Rajkumar announced PRK App trailer will be out on October 18th

ಸ್ಟಾರ್ ಹೀರೊ ಅಭಿಮಾನಿಗಳಿಗಾಗಿ ಆಪ್ ಮಾಡಿರುವುದು ಭಾರತದಲ್ಲಿಯೇ ಮೊದಲು. ಹೀಗಾಗಿ ಹೇಗೆ ಮೂಡಿ ಬರುತ್ತೆ ಅನ್ನೋ ಕುತೂಹಲ ಮನೆ ಮಾಡಿದೆ. ಪಿಆರ್‌ಕೆ ಆಪ್‌ ಅನ್ನು ಡಾ.ಸಮರ್ಥ್ ನಾಗಭೂಷಣಂ ಎಂಬುವವರು ಡೆವೆಲಪ್ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅಭಿಮಾನಿಗಳಿಗೆ ವಿಭಿನ್ನ ಅನುಭವ ನೀಡಬೇಕು ಎಂಬುವ ಕಾರಣಕ್ಕೆ ಪ್ರಯೋಗ ನಡೆಯುತ್ತಲೇ ಇತ್ತು. ಕೊನೆಗೂ ಆ ಆಪ್ ಈಗ ಸಿದ್ಧವಾಗಿದೆ.

ಪಿಆರ್‌ಕೆ ಆಪ್ ಅನೌನ್ಸ್ ಮಾಡುವಾಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದರು. "ಈ ಆಪ್‌ ಬಗ್ಗೆ ಆಶ್ವಿನಿ ಪುನೀತ್ ರಾಜ್‌ಕುಮಾರ್ ಏನು ಹೇಳಿದ್ದಾರೆ ಅಂತ ನೋಡುವುದಾರೇ, "ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ನಮ್ಮ ಮೇಲೆ ಇಟ್ಟಿರುವ ನಂಬಿಕೆ ಪ್ರೀತಿ ಗೌರವನೇ ಅಪ್ಪು ಇನ್ನೂ ನಮ್ಮ ಜೊತೆ ಇದ್ದಾರೆ ಅನ್ನುವುದಕ್ಕೆ ಸಾಕ್ಷಿ. ನಿಮ್ಮೆಲ್ಲರ ನಗುವಲ್ಲೇ ನಾನು ಅಪ್ಪುವನ್ನು ಕಾಣುತ್ತಿದ್ದೇನೆ. ಪ್ರತಿದಿನ ನಮಗೂ ನಿಮಗೂ ಅಪ್ಪುವನ್ನು ಸೆಲೆಬ್ರೆಟ್ ಮಾಡುವ ಆಸೆ. ಪ್ರತಿ ಕ್ಷಣ ಅಪ್ಪುವನ್ನು ನೋಡುವ ಆಸೆ. ಮರೆಯಾದರೂ ಮರೆಯಲು ಸಾಧ್ಯವಿಲ್ಲ. ನಿಮ್ಮ ನಗುವಿನ ಒಡೆಯ ನಾನು. ನಿಮಗಾಗಿ ಕಾದಿದೆ ಒಂದು ಗುಡ್ ನ್ಯೂಸ್. ಅಪ್ಪು ಹೆಸರಿನಲ್ಲಿ ಒಂದು ದಿಟ್ಟ ಹೆಜ್ಜೆ. ಪಿಆರ್‌ಕೆ ಸ್ಟಾರ್ ಫ್ಯಾಂಡಮ್‌ ಆಪ್. ಈ ಆಪ್‌ ಅನ್ನು ಡಾ.ಸಮರ್ಥ ಅಂಡ್ ಟೀಮ್ ಡೆವೆಲಪ್ ಮಾಡುತ್ತಿದೆ." ಎಂದು ಹೇಳಿದ್ದರು.

More from Filmibeat

English summary
Ashwini Puneeth Rajkumar announced PRK App trailer will be out on October 18th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X