'ಅನಿಮಲ್' ಸಿನಿಮಾದಲ್ಲಿ 196 ಬಾರಿ 'ಪಾಪ' ಪದ ಬಳಕೆ? ನೆಟ್ಟಿಗರ ಲೆಕ್ಕ ಹೇಗಿದೆ ಅಂತ ಈ ವಿಡಿಯೋ ನೋಡಿ

2023, ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ 'ಅನಿಮಲ್' ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಲೂಟಿ ಮಾಡಿದ್ದು ಗೊತ್ತೇ ಇದೆ. ರಿಲೀಸ್ ಆದ ದಿನವೇ ಈ ಸಿನಿಮಾ ವಿರುದ್ಧ ಹಲವು ಮಂದಿ ಕಿಡಿಕಾರಿದ್ದರು. ಹಲವೆಡೆ ವಿವಾದ ಹುಟ್ಟಿಕೊಂಡಿತ್ತು. ಸಿನಿಮಾದಲ್ಲಿ ಅತಿಯಾದ ಹಿಂಸೆ, ಹೆಣ್ಣನ್ನು ಕೀಳಾಗಿ ತೋರಿಸಲಾಗಿದೆಂದು ಆರೋಪ ಮಾಡಲಾಗಿತ್ತು.

'ಅನಿಮಲ್' ರಿಲೀಸ್ ಬಳಿಕ ಅದೆಷ್ಟೇ ಟೀಕೆ ಟಿಪ್ಪಣಿಗಳು ಎದುರಾದರೂ, ಪ್ರೇಕ್ಷಕರು ಸಿನಿಮಾ ನೋಡುವುದನ್ನು ನಿಲ್ಲಿಸಿರಲಿಲ್ಲ. ಇದೇ ಜನವರಿ 26ರಂದು ಈ ಸಿನಿಮಾ ಓಟಿಟಿಗೂ ಲಗ್ಗೆ ಇಟ್ಟಿದೆ. ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ವೀಕ್ಷಕರು ಅಸಮಾಧಾನ ಹೊರ ಹಾಕಿದ್ದರು. ಥಿಯೇಟರ್‌ ರಿಲೀಸ್‌ಗಾಗಿ ಕತ್ತರಿ ಹಾಕಿದ ದೃಶ್ಯಗಳನ್ನು ಓಟಿಟಿ ಆವೃತ್ತಿಗೆ ಸೇರಿಸದೇ ಇದ್ದಿದ್ದಕ್ಕೆ ಕಿಡಿ ಕಾರಿದ್ದರು.

Audience recognised after Animal released on Netflix that Pappa word repeated 196 times

ಈಗ ಮತ್ತೆ 'ಅನಿಮಲ್' ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಈ ಬಾರಿ ಸುದ್ದಿಯಲ್ಲಿ ಇರುವುದಕ್ಕೆ ಕಾರಣ ಬೇರೆನೇ ಇದೆ. ಬಾಕ್ಸಾಫೀಸ್‌ನಲ್ಲಿ ವಿಶ್ವದಾದ್ಯಂತ 900 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರೋ ಈ ಸಿನಿಮಾ ಹೊಸ ವಿಷಯಕ್ಕೆ ಟ್ರೆಂಡಿಂಗ್‌ನಲ್ಲಿದೆ. ಇಷ್ಟು ದಿನ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುವಾಗಲೂ ಇಂತಹದ್ದೊಂದು ಅಂಶವನ್ನು ಗುರುತಿಸಲಾಗಿರಲಿಲ್ಲ. ಆದ್ರೀಗ ಓಟಿಟಿಗೆ ಲಗ್ಗೆ ಇಟ್ಟ ತಕ್ಷಣವೇ ಇಂಟ್ರೆಸ್ಟಿಂಗ್ ವಿಷಯವೊಂದು ಹೊರಬಿದ್ದಿದೆ. ಅದೇನು ಅಂತ ತಿಳಿಯಲು ಮುಂದೆ ಓದಿ..

'ಅನಿಮಲ್' ಓಟಿಟಿಯಲ್ಲಿ ರಿಲೀಸ್ ಆಗುತ್ತಿದ್ದಂತೆ ಸಣ್ಣ ಸಣ್ಣ ವಿಷಯಕ್ಕೂ ಗಮನ ಹರಿಸುತ್ತಿದ್ದಾರೆ. ಪ್ರತಿಯೊಂದು ದೃಶ್ಯ, ಡೈಲಾಗ್ ಅನ್ನೂ ಗಮನವಿಟ್ಟು ನೋಡುತ್ತಿದ್ದಾರೆ. 'ಅನಿಮಲ್' ಇದೇ ವಿಷಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಸಿನಿಮಾದಲ್ಲಿ 'ಪಾಪಾ' (ಅಪ್ಪ) ಅನ್ನುವ ಪದವನ್ನು ಎಷ್ಟು ಬಾರಿ ಬಳಸಲಾಗಿದೆ ಅಂತ ಚರ್ಚೆಯಾಗುತ್ತಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ಸಿನಿಮಾದಲ್ಲಿ 'ಪಾಪಾ' (ಅಪ್ಪ) ಅನ್ನೋ ಪದವನ್ನು ಸುಮಾರು 196 ಬಾರಿ ಬಳಸಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ. ಹಾಗಂತ ಬರೀ ಬಾಯಿ ಮಾತಲ್ಲಿ ಹೇಳುತ್ತಿಲ್ಲ. ಇಡಿ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಸೇರಿದಂತೆ ಎಲ್ಲಾ ಪಾತ್ರಗಳು 'ಪಾಪ' ಪದವನ್ನು ಡೈಲಾಗ್‌ನಲ್ಲಿ ಬಳಸಿದ್ದನ್ನು ಕತ್ತರಿಸಿ, ಅದನ್ನು ಎಡಿಟ್ ಮಾಡಿ, ಕೌಂಟ್ ಕೂಡ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇದೇ ಸಂದರ್ಭದಲ್ಲಿ ತೆಲುಗು ಪ್ರೇಕ್ಷಕರು ಆಚಾರ್ಯರು ಪಾದಘಟ್ಟಂ ಅನ್ನೋ ಪದವನ್ನು 100ಕ್ಕೂ ಹೆಚ್ಚು ಬಾರಿ ಬಳಸಿದ್ದರು. ಅದನ್ನು 'ಅನಿಮಲ್' ಸಿನಿಮಾ ಹಿಂದಿಕ್ಕಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಅದು ಏನೇ ಇದ್ದರೂ, ಅನಿಮಲ್ ಸಿನಿಮಾದಲ್ಲಿ 196 ಬಾರಿ 'ಪಾಪಾ' ಪದ ಬಳಕೆ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಸಿನಿಮಾ ರಿಲೀಸ್ ಆದಾಗ ಕೆಲವು ಟೀಕೆ ಮಾಡಿದ್ದರು. ಸಂದೀಪ್ ರೆಡ್ಡಿ ವಂಗಾ ಸಿನಿಮಾ ಮೇಕಿಂಗ್ ಬಗ್ಗೆ ಆಕ್ರೋಶ ಹೊರ ಹಾಕಿದ್ದರು. ಆದರೆ, ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ವ್ಯತಿರಿಕ್ತ ಫಲಿತಾಂಶ ಸಿಕ್ಕಿದ್ದು, ಮುಂದೆ ಇಂತಹ ಕತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾ? ಬೇಡವಾ? ಅನ್ನೋ ಪ್ರಶ್ನೆ ಫಿಲ್ಮ್‌ಮೇಕರ್‌ಗಳ ಗೊಂದಲಕ್ಕಂತೂ ಎಡೆ ಮಾಡಿಕೊಟ್ಟಿದೆ.

More from Filmibeat

English summary
Papa Word repeated 196 times Ranbir Kapoor Rashmika Mandanna movie Animal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X