ಜಗತ್ತು ಗೆದ್ದ 'ಅವತಾರ್ 2' ಓಟಿಟಿಗೆ ಎಂಟ್ರಿ: ಅದೇ ದಿನ ಮಲಯಾಳಂ ಸಿನಿಮಾ '2018' ಟಕ್ಕರ್
ಥಿಯೇಟರ್‌ಗಳಲ್ಲಿ ಅದ್ಭುತ ಸಿನಿಮಾ ಇಲ್ಲಾ ಅಂದ್ರೆ, ಸಿನಿಪ್ರಿಯರು ಓಟಿಟಿ ಮೊರೆ ಹೋಗುತ್ತಾರೆ. ಕೋವಿಡ್ ಶುರುವಾದ ದಿನದಿಂದ ಮನರಂಜನೆಗೆ ಹೊಸ ತಾಣವೊಂದು ಸಿಕ್ಕಿದೆ. ಹೀಗಾಗಿ ಪ್ರತಿವಾರ ಹೊಸ ಸಿನಿಮಾಗಳು ಯಾವುದು ರಿಲೀಸ್ ಆಗುತ್ತಿದೆ ಅಂತ ಎದುರು ನೋಡುತ್ತಲೇ ಇರುತ್ತಾರೆ.
ಈ ವಾರ ಕೂಡ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ದೊಡ್ಡ ಸಿನಿಮಾಗಳು ಗ್ರ್ಯಾಂಡ್ ಎಂಟ್ರಿ ಕೊಡುತ್ತಿವೆ. ಸದ್ಯ ಓಟಿಟಿಯಲ್ಲಿ ಮನೋಜ್ ಬಾಜಪೇಯಿ ನಟನೆಯ 'ಸಿರ್ಫ್ ಏಕ್ ಬಂದಾ ಕಾಫಿ ಹೇ' ಸಿನಿಮಾ ಓಟಿಟಿಯಲ್ಲಿ ಸೂಪರ್ ಹಿಟ್ ಆಗಿದೆ. ಹೀಗಾಗಿ ಸಿನಿಮಾವನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡೋಕೆ ಆಲೋಚನೆ ಮಾಡಲಾಗುತ್ತಿದೆ.

ಇನ್ನೊಂದು ಕಡೆ ಜೀ 5ನಲ್ಲಿ 'ಅಸುರ್ 2' ವೆಬ್ ಸೀರಿಸ್ ರಿಲೀಸ್ ಆಗಿದೆ. ಮೊದಲ ಸೀಸನ್‌ಗೆ ತುಂಬಾ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಎರಡನೇ ಸೀಸನ್‌ಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವುಗಳ ಮಧ್ಯೆ ಮತ್ತೆರಡು ಬಿಗ್ ಬ್ಲಾಕ್ ಬಸ್ಟರ್ ಸಿನಿಮಾಗಳು ಓಟಿಟಿಗೆ ಸೇರ್ಪಡೆಯಾಗುತ್ತಿವೆ. ಆ ಸಿನಿಮಾಗಳ್ಯಾವುವು? ಯಾವಾಗ ರಿಲೀಸ್? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಓಟಿಟಿಗೆ ಜಗತ್ತು ಗೆದ್ದ 'ಅವತಾರ್ 2'
'ಅವತಾರ್ 2' ಜಗತ್ತಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿತ್ತು. ಈ ಸಿನಿಮಾ ನೋಡುವುದಕ್ಕೆ ಇಡೀ ಜಗತ್ತೇ ಕಾದು ಕೂತಿತ್ತು. ಥಿಯೇಟರ್‌ನಲ್ಲಿ ನೋಡುವುದಕ್ಕೆಂದೇ ನಿರ್ಮಿಸಿರುವ 'ಅವತಾರ್ 2' ಡಿಸೆಂಬರ್ 16, 2022ರಂದು ಗ್ರ್ಯಾಂಡ್ ರಿಲೀಸ್ ಆಗಿತ್ತು. 2009ರಲ್ಲಿ 'ಅವತಾರ್' ಮೊದಲ ಚಾಪ್ಟರ್ ರಿಲೀಸ್ ಆಗಿತ್ತು. ಆ ಯಶಸ್ಸಿನ ಬೆನ್ನಲ್ಲೇ ಐದು ಸೀರಿಸ್ ಅನ್ನಿ ಘೋಷಿಸಿದ್ದರು.
'ಅವತಾರ್ 2' ಜಗತ್ತಿನಾದ್ಯಾಂತ ಬಾಕ್ಸಾಫೀಸ್ ಲೂಟಿ ಹೊಡೆದ ಬಳಿಕ ಓಟಿಟಿ ರಿಲೀಸ್‌ಗೆ ಮುಂದಾಗಿದೆ. ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಇದೇ ಜೂನ್ 7ರಂದು ಭಾರತದಲ್ಲಿ ಪ್ರೀಮಿಯರ್ ಆಗುತ್ತಿದೆ. ಥಿಯೇಟರ್‌ನಲ್ಲಿ 'ಅವತಾರ್ 2' ನೋಡದವರಿಗೆ ಓಟಿಟಿಯಲ್ಲಿ ನೋಡುವ ಅವಕಾಶ ಸಿಗುತ್ತಿದೆ.

ಮಲಯಾಳಂ ಸಿನಿಮಾ '2018'
'2018:ಎವರಿಒನ್ ಈಸ್ ಎ ಹೀರೊ' ಕೇರಳದಲ್ಲಿ ಸದ್ದು ಮಾಡುತ್ತಿರುವ ಬ್ಲಾಕ್ ಬಸ್ಟರ್ ಸಿನಿಮಾವಿದು. ಮಲಯಾಳಂ ಆಲ್‌ಟೈಮ್ ಹಿಟ್ ಸಿನಿಮಾ ಎಂದು ವರದಿಯಾಗಿದೆ. ಕಳೆದ ತಿಂಗಳು ಮೇ 5ರಂದು ಈ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಅದೇ ಸಿನಿಮಾವೀಗ ನಾಳೆ (ಜೂನ್ 7) ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಅಂದ್ಹಾಗೆ, 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಪ್ರಮುಖ ಪಾತ್ರದಲ್ಲಿ ಟೊವಿನೋ ಥಾಮಸ್ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 90 ಕೋಟಿ ರೂ.ಗೂ ಕಲೆ ಹಾಕಿದೆ ಎನ್ನಲಾಗಿದೆ. ಕಲೆಕ್ಷನ್ ಚೆನ್ನಾಗೇ ಇದ್ದರೂ ಓಟಿಟಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಸೋನಿಲೈವ್‌ನಲ್ಲಿ ಜೂನ್ 7ರಂದು ರಿಲೀಸ್ ಆಗುತ್ತಿದೆ.
ಚಿತ್ರತಂಡದ ವಿರುದ್ಧ ಆಕ್ರೋಶ
ಮಲಯಾಳಂ ಸಿನಿಮಾ '2018' ಬಿಡುಗಡೆಯಾದ ಒಂದು ತಿಂಗಳಲ್ಲೇ ಓಟಿಟಿಗೆ ಲಗ್ಗೆ ಇಡುತ್ತಿರುವುದರಿಂದ ಸಿನಿಪ್ರೇಮಿಗಳು ಬೇಜಾರಾಗಿದ್ದಾರೆ. " ತುಂಬಾ ಬೇಗನೇ ಆಯ್ತು.. ಓಟಿಟಿಯಲ್ಲಿ ಸಿನಿಮಾ ಬಿಡುಗಡೆಯನ್ನು ಪೋಸ್ಟ್ ಪೋನ್ ಮಾಡಬಹುದಿತ್ತು. ಈ ಸಿನಿಮಾ 100 ಕೋಟಿ ರೂ. ಸಂಪಾಧನೆ ಮಾಡುತ್ತಿತ್ತು. ಈಗ 90 ಕೋಟಿ ರೂ. ಕೊನೆಯಾಗುತ್ತೆ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಹಾಗೇ ಇನ್ನೊಬ್ಬರು "ಯಾಕಿಷ್ಟು ಬೇಗ? ಬಾಕ್ಸಾಫೀಸ್‌ನಲ್ಲಿ ಸಿನಿಮಾ ಇನ್ನೂ ಸ್ಟ್ರಾಂಗ್ ಆಗಿದೆ. ಅಲ್ಲದೆ ಈಗಷ್ಟೇ ಬೇರೆ ಭಾಷೆಯಲ್ಲಿ ಸಿನಿಮಾವನ್ನು ರಿಲೀಸ್ ಮಾಡಿದ್ದಾರೆ. ಬೇರೆ ಭಾಷೆಯಲ್ಲೂ ಬಾಯಿಂದ ಬಾಯಿಗೆ ಹರಡುವುದಕ್ಕೆ ಸಮಯ ಕೊಡಿ" ಎಂದು ಕಮೆಂಟ್ ಮಾಡಿ ಕೋಪವನ್ನು ಹೊರ ಹಾಕಿದ್ದಾರೆ.


Click it and Unblock the Notifications











