3 ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ 'ಅವತಾರ್ 2' ರಿಲೀಸ್: ಲಿಸ್ಟ್‌ನಲ್ಲಿದೆ 'ಶೆಹಜಾದ', 'ಗ್ಯಾಸ್‌ಲೈಟ್'
ಈ ವಾರ ಓಟಿಟಿ ಪ್ರಿಯರಿಗೆ ಭರ್ಜರಿ ಮನರಂಜನೆ ಸಿಗೋದು ಗ್ಯಾರಂಟಿ. ಯಾಕಂದ್ರೆ, ಮಾರ್ಚ್ 28ರ ಬಳಿಕ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳು ರಿಲೀಸ್ ಆಗುತ್ತಿವೆ. ಅದರಲ್ಲೂ ವಿಶ್ವದ ಅತ್ಯಂತ ದುಬಾರಿ ಸಿನಿಮಾ ಈ ವಾರ ಓಟಿಟಿಗೆ ಲಗ್ಗೆ ಇಟ್ಟಿದೆ.
ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್: ದಿ ವೇ ಆಫ್ ವಾಟರ್' (ಅವತಾರ್ 2) ಓಟಿಟಿಗೆ ಲಗ್ಗೆ ಇಡುತ್ತಿದೆ. ಕಳೆದ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಬೇಜಾನ್ ಸದ್ದು ಮಾಡಿತ್ತು. ಈ ಸಿನಿಮಾ ಈಗ ಮಾರ್ಚ್ 28ರಿಂದ ಓಟಿಟಿಯಲ್ಲೂ ಸದ್ದು ಮಾಡಲಿದೆ.

3 ಓಟಿಟಿ ವೇದಿಕೆಯಲ್ಲಿ 'ಅವತಾರ್ 2'
2009ರಲ್ಲಿ ತೆರೆಕಂಡಿದ್ದ 'ಅವತಾರ್' ಸಿನಿಮಾದ ಸೀಕ್ವೆಲ್ ಕಳೆದ ವರ್ಷ (ಡಿಸೆಂಬರ್ 16, 2022) ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. 'ಅವತಾರ್: ದಿ ವೇ ಆಫ್ ವಾಟರ್' (ಅವತಾರ್ 2) ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಬಳಿಕ ಮಾರ್ಚ್ 28ರಂದು ಓಟಿಟಿಗೆ ಲಗ್ಗೆ ಇಟ್ಟಿದೆ. ಜಗ ಮೆಚ್ಚಿನ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಸಿನಿಮಾ ಓಟಿಟಿಯಲ್ಲಿ ಅದ್ಯಾವ ದಾಖಲೆ ಮಾಡುತ್ತೆ ಅನ್ನೋ ಕುತೂಹಲವಿದೆ. ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಸುಮಾರು 7 ಭಾಷೆಗಳಲ್ಲಿ ಲಗ್ಗೆ ಇಡುತ್ತಿದೆ.
ವಿಶೇಷ ಅಂದ್ರೆ, ರಿಲೀಸ್‌ಗೂ ಮುನ್ನವೇ 'ಅವತಾರ್ 2' ಎಲ್ಲರ ಗಮನ ಸೆಳೆದಿದೆ. ಈ ಸಿನಿಮಾ ಏಕಕಾಲಕ್ಕೆ ಮೂರು ಓಟಿಟಿ ವೇದಿಕೆಗಳಲ್ಲಿ ರಿಲೀಸ್ ಆಗಲಿದೆ. ಅಮೆಜಾನ್ ಪ್ರೈಂ ವಿಡಿಯೋ, ಆಪಲ್ ಟಿವಿ ಹಾಗೂ ವುಡು ಈ ಮೂರು ವೇದಿಕೆಗಳಲ್ಲಿ ರಿಲೀಸ್ ಆಗುತ್ತಿದೆ. ಮಾರ್ಚ್ 28ಯಿಂದ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರೋ ಬಗ್ಗೆ 'ಅವತಾರ್' ಅಧಿಕೃತ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಅನೌನ್ಸ್ ಮಾಡಲಾಗಿದೆ.
ಶೆಹಜಾದ
ಇದೇ ವಾರ ಓಟಿಟಿಗೆ ಎರಡು ಬಾಲಿವುಡ್ ಸಿನಿಮಾಗಳೂ ಲಗ್ಗೆ ಇಡುತ್ತಿವೆ. ಕಾರ್ತಿಕ್ ಆರ್ಯನ್ ನಟನೆಯ 'ಶೆಹಜಾದ' ಹಾಗೂ ಸಾರಾ ಅಲಿಖಾನ್ ನಟನೆಯ 'ಗ್ಯಾಪ್‌ಲೈಟ್'. ಕಳೆದ ವರ್ಷ ಸಕ್ಸಸ್‌ಪುಲ್ ಸಿನಿಮಾಗಳನ್ನು ಕೊಟ್ಟಿರೋ ಕಾರ್ತಿಕ್ ಆರ್ಯನ್ 'ಶೆಹಜಾದ' ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಮೋಡಿ ಮಾಡಿರಲಿಲ್ಲ. ಅದೇ ಸಿನಿಮಾವೀಗ ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 1ರಂದು ರಿಲೀಸ್ ಆಗುತ್ತಿದೆ. ಅಂದ್ಹಾಗೆ, ಇದು ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಸಿನಿಮಾದ ರಿಮೇಕ್.

ಗ್ಯಾಸ್‌ಲೈಟ್
ಇದರೊಂದಿಗೆ ಸಾರಾ ಅಲಿಖಾನ್ ಅಭಿನಯದ 'ಗ್ಯಾಸ್‌ಲೈಟ್' ಸಿನಿಮಾ ಕೂಡ ಓಟಿಟಿಯಲ್ಲೇ ರಿಲೀಸ್ ಆಗುತ್ತಿದೆ. ಸಾರಾ ಅಲಿಖಾನ್, ಚಿತ್ರಾಂಗದ ಸಿಂಗ್ ಲೀಡ್‌ನಲ್ಲಲಿರೋ ಈ ಸಿನಿಮಾ ಮಾರ್ಚ್ 31ಕ್ಕೆ ಡಿಜ್ನಿ+ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗುತ್ತಿದೆ. 15 ವರ್ಷಗಳ ತನ್ನ ರಾಯಲ್ ಕುಟುಂಬಕ್ಕೆ ತನ್ನ ತಂದೆ ಹುಡುಕುವ ಸಲುವಾಗಿಯೇ ಮಿಶಾ ಹಿಂತಿರುಗುತ್ತಾಳೆ. ಆಮೇಲೆ ಏನಾಗುತ್ತೆ ಅನ್ನೋದೇ ಕಥೆ.
ಕಾಪಿಕ್ಯಾಟ್ ಕಿಲ್ಲರ್
ತೈವಾನ್-ಚೀನಾ ಭಾಷೆಯ ಕ್ರೈಂ ಥ್ರಿಲ್ಲರ್ ಸಿನಿಮಾ 'ಕಾಪಿಕ್ಯಾಪ್ ಕಿಲ್ಲರ್'. ಜಪಾನಿನ ಲೇಖಕ ಮಿಯುಕಿ ಮಯಾಬೆ ಬರೆದ ಕ್ರೈಂ ಮಿಸ್ಟರಿ ಕಾದಂಬರಿಯಿದು. ಈಗಾಗಲೇ ಜಪಾನ್ ಭಾಷೆಯಲ್ಲಿ ಈ ಕಾದಂಬರಿ ಸಿನಿಮಾ ಆಗಿದೆ. ತೈವಾನ್ ಕ್ರೈಂ ಡ್ರಾಮ ಕಾಪಿಕ್ಯಾಟ್ ಕಿಲ್ಲರ್ ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್ 31ಕ್ಕೆ ರಿಲೀಸ್ ಆಗುತ್ತಿದೆ.
ಮರ್ಡರ್ ಮಿಸ್ಟರಿ 2
ಈಗಾಗಲೇ ಸದ್ದು ಮಾಡಿರುವ 'ಮರ್ಡರ್ ಮಿಸ್ಟರಿ' ಸೀಕ್ವೆಲ್ ರಿಲೀಸ್‌ಗೆ ರೆಡಿಯಾಗಿದೆ. ಡಿಟೆಕ್ಟಿವ್ ಆಗಿರೋ ನಿಕ್ ಮತ್ತು ಆಡ್ರೆ ತಮ್ಮ ಏಜೆನ್ಸಿಯನ್ನು ಉಳಿಸಿಕೊಳ್ಳುವುದಕ್ಕೆ ಹೆಣಗಾಡುತ್ತಿದ್ದಾರೆ. ಹೀಗಾಗಿ ತನ್ನ ಸ್ನೇಹಿತನನ್ನುಅಪಹರಿಸಿದ್ದಾಗ, ಅಂತರಾಷ್ಟ್ರೀಯ ಮಟ್ಟದ ತನಿಖಾ ಜಾಲದೊಳೆಗೆ ಇಳಿಯುತ್ತಾರೆ. ಈ ಇಂಟ್ರೆಸ್ಟಿಂಗ್ ಸ್ಟೋರಿ ಮಾರ್ಚ್ 31, 2023ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ.
ALMOST PYAR WITH DJ MOHABBAT
ಅಲ್‌ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್
'ಅಲ್‌ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್' ಈ ಮ್ಯೂಸಿಕಲ್ ರೊಮ್ಯಾಂಟಿಕ್ ಡ್ರಾಮವನ್ನು ಬರೆದು ನಿರ್ದೇಶಿಸಿರೊದು ಅನುರಾಗ್ ಕಶ್ಯಪ್. ಅಲಿಯಾ ಹಾಗೂ ಮರನ್ ಮೆಹ್ತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದ್ದು, ಓಟಿಟಿ ಪ್ರಿಯರು ಮಾರ್ಚ್ 31ರಂದು ಥೀಯೇಟರ್ಗೆ ಲಗ್ಗು ಇಡುತ್ತಿದೆ.


Click it and Unblock the Notifications











