Daaku Maharaj OTT:'ಡಾಕು ಮಹಾರಾಜ್‌' ಓಟಿಟಿ ವರ್ಷನ್‌ನಲ್ಲಿ ಊರ್ವಶಿ ಸೀನ್‌ಗಳು ಇರುತ್ತಾ? ಇಲ್ವಾ?

ಟಾಲಿವುಡ್‌ ಸ್ಟಾರ್ ನಟ ಬಾಲಕೃಷ್ಣ ನಟಿಸಿರುವ ಡಾಕು ಮಹಾರಾಜ್ ಇತ್ತೀಚೆಗಷ್ಟೇ ರಿಲೀಸ್‌ ಆಗಿತ್ತು. ಸಂಕ್ರಾಂತಿ ಹಬ್ಬದಂದು ಅದ್ಧೂರಿಯಾಗಿ ರಿಲೀಸ್ ಆಗಿದ್ದ ಈ ಸಿನಿಮಾ ನೋಡಿ ಬಾಲಯ್ಯನ ಫ್ಯಾನ್ಸ್ ಎಂಜಾಯ್ ಮಾಡಿದ್ದರು. ಈ ಸಿನಿಮಾ ಥಿಯೇಟರ್‌ನಲ್ಲಿ ಸದ್ದು ಮಾಡಿದ ಬಳಿಕ ಈಗ ಓಟಿಟಿಗೆ ಲಗ್ಗೆ ಇಡುತ್ತಿದೆ. ಫೆಬ್ರವರಿ 21ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ.

'ಡಾಕು ಮಹಾರಾಜ್' ಓಟಿಟಿಗೆ ಲಗ್ಗೆ ಇಡುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕುರಿತಾದ ಸುದ್ದಿಯೊಂದು ಹರಿದಾಡುವುದಕ್ಕೆ ಶುರು ಮಾಡಿತ್ತು. ಬಾಲಯ್ಯನ ಸಿನಿಮಾದಲ್ಲಿ ಊರ್ವಶಿ ರೌಟೇಲಾ ಸಿನಿಮಾ ದೃಶ್ಯಗಳಿಗೆ ನೆಟ್‌ಫ್ಲಿಕ್ಸ್ ಕತ್ತರಿ ಹಾಕಿದೆ. ಓಟಿಟಿ ವರ್ಷನ್‌ನಲ್ಲಿ ಊರ್ವಶಿ ರೌಟೇಲಾ ನಟಿಸಿದ ದೃಶ್ಯಗಳು ಇರುವುದಿಲ್ಲ ಅಂತ ಹೇಳಲಾಗಿತ್ತು.

Balakrishan film Daaku Maharaj releasing on OTT netflix Urvashi Rautela s scenes retained

ಅಷ್ಟಕ್ಕೂ 'ಡಾಕು ಮಹಾರಾಜ್' ಸಿನಿಮಾದ ಸ್ಟ್ರೀಮಿಂಗ್ ಪೋಸ್ಟರ್‌ ಅನ್ನು ನೆಟ್‌ಫ್ಲಿಕ್ಸ್ ರಿಲೀಸ್ ಮಾಡಿತ್ತು. ಅದರಲ್ಲಿ ಊರ್ವಶಿ ರೌಟೇಲಾ ಕಾಣಿಸಲಿಲ್ಲ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಊರ್ವಶಿ ರೌಟೇಲಾ ದೃಶ್ಯಗಳಿಗೆ ನೆಟ್‌ಫ್ಲಿಕ್ಸ್ ಕತ್ತರಿ ಹಾಕಿದೆ. ಓಟಿಟಿ ವರ್ಷನ್‌ನಲ್ಲಿ ಊರ್ವಶಿ ರೌಟೇಲ ದೃಶ್ಯಗಳು ಇರುವುದಿಲ್ಲ ಅನ್ನೋ ಸುದ್ದಿ ಹರಿದಾಡುವುದಕ್ಕೆ ಶುರುವಾಗಿತ್ತು. ಅಷ್ಟಕ್ಕೂ ಊರ್ವಶಿ ದೃಶ್ಯಗಳು ಕತ್ತರಿ ಬಿದ್ದಿಲ್ಲ ಅನ್ನೋ ಸುದ್ದಿ ಹೊಸದಾಗಿ ಸದ್ದು ಮಾಡುತ್ತಿದೆ.

ಊರ್ವಶಿ ರೌಟೇಲಾ ಈ ಸಿನಿಮಾದಲ್ಲಿ ಬಾಲಕೃಷ್ಣ ಜೊತೆ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು. ಈ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಲ್ಲದೆ, ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಬಾಲಕೃಷ್ಣ ಹಾಗೂ ಊರ್ವಶಿ ರೌಟೇಲಾ ಹಾಕಿದ ಸ್ಟೆಪ್ಟ್ ಕೆಲವರ ಕಣ್ಣು ಕುಕ್ಕಿತ್ತು. ಇಂತಹ ಸ್ಟೆಪ್ಸ್‌ಗಳು ಅಗತ್ಯವಿತ್ತೇ? ತನಗಿಂತ ದುಪ್ಪಟ್ಟು ವಯಸ್ಸಾಗಿರುವ ನಟನೊಂದಿಗೆ ಊರ್ವಶಿ ಹೀಗೆ ಹೆಜ್ಜೆ ಹಾಕಬಹುದೇ? ಎಂದು ಪ್ರಶ್ನೆ ಮಾಡಿದ್ದರು.

'ಡಾಕು ಮಹಾರಾಜ್' ಓಟಿಟಿಯಲ್ಲಿ ರಿಲೀಸ್ ಆಗುತ್ತಿರುವ ವೇಳೆ ಈಗ ಮತ್ತೆ ಊರ್ವಶಿ ರೌಟೇಲಾ ಹೆಸರು ಹರಿದಾಡುವುದಕ್ಕೆ ಶುರು ಮಾಡಿದೆ. ಊರ್ವಶಿ ರೌಟೇಲಾ ದೃಶ್ಯಗಳನ್ನು ನೆಟ್‌ಫ್ಲಿಕ್ಸ್ ಡಿಲೀಟ್ ಮಾಡುವುದಕ್ಕೆ ಹೋಗಿಲ್ಲ. ಥಿಯೇಟರ್‌ನಲ್ಲಿ ಹೇಗೆ ಸಿನಿಮಾ ಇತ್ತೋ ಹಾಗೇ ಓಟಿಟಿಯಲ್ಲೂ ಸ್ಟ್ರೀಮಿಂಗ್ ಮಾಡುತ್ತಿದೆ. ಇದು ಕೇವಲ ರೂಮರ್‌ಗಳು ಅಷ್ಟೇ. ಈ ಸಿನಿಮಾದಲ್ಲಿ ನಟಿಯಿಂದಲೇ ಇಂತಹ ಸುದ್ದಿ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಹಾಗಿದ್ದರೆ, ಊರ್ವಶಿ ರೌಟೇಲಾ ಗಿಮಿಕ್ ಮಾಡಿದ್ರಾ? ಪಬ್ಲಿಸಿಟಿಗೋಸ್ಕರ ಇಂತಹ ಪ್ರಯತ್ನ ಮುಂದಾದರೇ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕಂದ್ರೆ ಊರ್ವಶಿ ರೌಟೇಲಾ ಈ ಹಿಂದೆ ಕೂಡ ಪಬ್ಲಿಸಿಟಿಗೆ ಇಂತಹ ಗಿಮಿಕ್‌ಗಳನ್ನು ಮಾಡಿದ್ದಾರೆ. ಅವರಿಗೆ ಸಿನಿಮಾ ಪ್ರಚಾರಕ್ಕೆ ಗಿಮಿಕ್ ಮಾಡೋದು ಹೊಸದೇನು ಅಲ್ಲ. ಹಿಂದೊಮ್ಮೆ ಬಾತ್‌ರೂಮ್ ದೃಶ್ಯಗಳನ್ನು ಲೀಕ್ ಮಾಡಿ ಗಿಮಿಕ್ ಮಾಡಿದ್ದರು. ಆಗಲೂ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು.

ಹಾಗಂತ ನೆಟ್‌ಫ್ಲಿಕ್ಸ್ ಆಗಲಿ, 'ಡಾಕು ಮಹಾರಾಜ್' ತಂಡ ಆಗಲಿ ಅಥವಾ ಊರ್ವಶಿ ರೌಟೇಲಾ ಆಗಲಿ ಸೀನ್‌ಗಳಿಗೆ ಕತ್ತರಿ ಬೀಳುತ್ತಿದೆ ಅನ್ನೋದನ್ನು ಎಲ್ಲೂ ಹೇಳಿಕೊಂಡಿಲ್ಲ. ಇದು ಹೇಗೆ ಈ ಮಟ್ಟಿಗೆ ಹಬ್ಬಿತು ಅನ್ನೋ ಬಗ್ಗೆನೂ ಸ್ಪಷ್ಟ ಮಾಹಿತಿ ಇಲ್ಲ. ನೆಟ್‌ಫ್ಲಿಕ್ಸ್ ರಿಲೀಸ್ ಮಾಡಿದ ಪೋಸ್ಟರ್‌ನಲ್ಲಿ ಊರ್ವಶಿ ರೌಟೇಲಾ ಫೋಟೊ ಇಲ್ಲದೆ ಇಷ್ಟೆಲ್ಲ ತಲೆನೋವಾಗಿತ್ತು. ಹೀಗಾಗಿ ಮತ್ತೆ ಸಿನಿಮಾದಲ್ಲಿರುವ ಪ್ರಮುಖ ಪಾತ್ರಗಳ ಪೋಸ್ಟ್‌ ಅನ್ನು ಮತ್ತೆ ನೆಟ್‌ಫ್ಲಿಕ್ಸ್ ರಿಲೀಸ್ ಮಾಡಿದೆ.

More from Filmibeat

English summary
Balakrishan film Daaku Maharaj releasing on OTT netflix Urvashi Rautela's scenes retained
Read more about: urvashi rautela
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X