ಓಟಿಟಿಯಲ್ಲಿ ಮಲಯಾಳಂ ಸಿನಿಮಾ 'ನುನಕುಳಿ' ಥ್ರಿಲ್; ಜೀ5ನಲ್ಲಿ 100 ಮಿಲಿಯನ್ ಸ್ಕ್ರೀಮಿಂಗ್ ಮಿನಿಟ್ ದಾಖಲೆ

ಪ್ರೇಕ್ಷಕರು ಈಗೀಗ ಥಿಯೇಟರ್‌ಗಿಂತ ಹೆಚ್ಚಾಗಿ ಓಟಿಟಿಯ ಕಡೆಗೆ ಹೆಚ್ಚು ಒಲವನ್ನು ತೋರುತ್ತಿದ್ದಾರೆ. ಮನೆಯಲ್ಲಿ ಕೂತು ಸಿನಿಮಾ ನೋಡುವುದಕ್ಕೆ ಇಷ್ಟ ಪಡುತ್ತಿದ್ದಾರೆ. ಅದರಲ್ಲೂ ಈ ಕಾರಣಕ್ಕೆ ಫಿಲ್ಮ್‌ಮೇಕರ್ಸ್‌ ಕೂಡ ಓಟಿಟಿ ವೀಕ್ಷಕರಿಗೆ ಅಂತಾನೇ ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲೂ ಮಲಯಾಳಂ ಸಿನಿಮಾ ಮಂದಿಗೆ ಓಟಿಟಿಗೆ ಕಡೆಗೆ ಹೆಚ್ಚು ಒಲವು ತೋರಿದಂತೆ ಇದೆ.

ಓಟಿಟಿ ಪ್ಲಾಟ್‌ಫಾರ್ಮ್ ಕೂಡ ದೊಡ್ಡದಾಗಿ ಬೆಳೆಯುತ್ತಿದೆ. ವೀಕ್ಷಕರ ಆಸಕ್ತಿಯನ್ನು ಪರಿಗಣಿಸಿ, ಹೊಸ ಹೊಸ ಸಿನಿಮಾಗಳನ್ನು ಖರೀದಿ ಮಾಡುತ್ತಿದೆ. ಕನ್ನಡದ ಸಿನಿಮಾಗಳನ್ನು ಹೊರತು ಪಡಿಸಿದ ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಯ ಸಿನಿಮಾಗಳನ್ನು ಖರೀದಿ ಮಾಡುವಲ್ಲಿ ಆಸಕ್ತಿ ತೋರುತ್ತಿದೆ ಅನ್ನೋ ಆರೋಪ ಕೂಡ ಇದೆ.

Malayalam Crime Comedy Nunakkuzhi zee 5

ಅದೇನೇ ಇದ್ದರೂ ಮಲಯಾಳಂ ಸಿನಿಮಾಗಳನ್ನು ಖರೀದಿ ಮಾಡುವಲ್ಲಿ ಓಟಿಟಿ ವೇದಿಕೆಗಳು ಹೆಚ್ಚು ಆಸಕ್ತಿ ತೋರುತ್ತಿವೆ. ಮಲಯಾಳಂ ಕಂಟೆಂಟ್ ಅನ್ನು ಖರೀದಿ ಮಾಡುವಲ್ಲಿ ಓಟಿಟಿ ವೇದಿಕೆಗಳು ಕೂಡ ಪೈಪೋಟಿಗೆ ಬಿದ್ದಿವೆ. ಅದರಲ್ಲಿ 'ಜೀ5' ಕೂಡ ಮುಂದಿದೆ. ಸದ್ಯ ಜೀ 5 ಖರೀದಿ 'ನುನಕುಳಿ' ಅನ್ನೋ ಸಿನಿಮಾವನ್ನು ಸೆಪ್ಟೆಂಬರ್ 13ರಂದು ಸ್ಟ್ರೀಮಿಂಗ್ ಮಾಡಿತ್ತು. ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

'ನುನಕುಳಿ' ಮಲಯಾಳಂ ಕಾಮಿಡಿ ಕಮ್ ಕ್ರೈಂ ಡ್ರಾಮ. ಮೋಹನ್‌ಲಾಲ್‌ ನಟಿಸಿದ ಜನಪ್ರಿಯ ಸಿನಿಮಾ 'ದೃಶ್ಯಂ'ನ ನಿರ್ದೇಶಕ ಜೀತು ಜೋಸೆಫ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಮುಖ ಪಾತ್ರದಲ್ಲಿ ಬೇಸಿಲ್ ಜೋಸೆಫ್, ಗ್ರೇಸ್ ಆಂಟೋನಿ, ಸಿದ್ದಿಕಿ, ಬೈಜು ಸಂತೋಷ್, ನಿಖಿಲಾ ವಿಮಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೇ ಸೆಪ್ಟಂಬರ್ 13ರಂದು Zee 5 ಒಟಿಟಿಯಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. 'ನುನಕುಳಿ' ರಿಲೀಸ್ ಆದ ಕೇವಲ ಏಳು ದಿನಗಳಲ್ಲಿ ಓಟಿಟಿಯಲ್ಲಿ ದಾಖಲೆ ಸೃಷ್ಟಿಸಿದೆ. ಸುಮಾರು 100 ಮಿಲಿಯನ್ಸ್ ಸ್ಟ್ರೀಮಿಂಗ್ ಮಿನಿಟ್ ಕಾಣುವ ಮೂಲಕ ಹೊಸ ರೆಕಾರ್ಡ್ ಮಾಡಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಜೀ 5 ಕೇರಳದ ನಡೆದ ಕ್ರೀಡಾ ಸಮಾರಂಭದಲ್ಲಿ ಅಲ್ಲಿನ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ ಶಿವನ್‌ಕುಟ್ಟಿ ಕೈಯಿಂದ 'ನುನಕುಳಿ' ಚಿತ್ರದ 10,000 ಸ್ಕ್ವೇರ್ ಫೀಟ್ ಪೋಸ್ಟರ್‌ ಅನ್ನು ಜೀ5 ರಿಲೀಸ್ ಮಾಡಿತ್ತು.

ಅಂದ್ಹಾಗೆ, ಈ ಕ್ರೈಮ್ ಕಾಮಿಡಿ ಥ್ರಿಲ್ಲರ್ ಸಿನಿಮಾ 'ನುನಕುಳಿ'ಯನ್ನು ಕೇವಲ ಮಲಯಾಳಂ ಅಷ್ಟೇ ಅಲ್ಲ ಕನ್ನಡದಲ್ಲಿಯೂ ನೋಡಬಹುದು. ಹಾಗೇ ತೆಲುಗು ಭಾಷೆಯಲ್ಲಿಯೂ ಈ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಓಟಿಟಿಯಲ್ಲಿ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಹೇಮಾ ವರದಿ ಟೆನ್ಷನ್‌ನಲ್ಲಿದ್ದ ಮಲಯಾಳಂ ಚಿತ್ರರಂಗಕ್ಕೆ ಹೊಸ ಹುರುಪು ಸಿಕ್ಕಿದೆ.

'ದೃಶ್ಯಂ' ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಜೀತು ಜೋಸೆಫ್ 'ನುನಕುಳಿ' ಸಿನಿಮಾದ ನಿರ್ದೇಶಕ. ಈ ಸಿನಿಮಾ ಕೂಡ ಅವರ ಹಿಟ್ ಸಿನಿಮಾಗಳ ಪಟ್ಟಿಯನ್ನು ಸೇರಿಕೊಂಡಿದೆ. ಅಂದ್ಹಾಗೆ ಈ ಸಿನಿಮಾದ ಕಥೆ ಏನಂದ್ರೆ, ಐಟಿ ಅಧಿಕಾರಿಯ ಲ್ಯಾಪ್‌ಟಾಪ್ ವಶಕ್ಕೆ ಪಡೆದ ಸಂದರ್ಭದಲ್ಲಿ ಆತ ಅದರೊಳಗಿರುವ ಅಶ್ಲೀಲ ವಿಡಿಯೋಗಳನ್ನು ಹೇಗೆ ಯಾರಿಗೂ ಗೊತ್ತಾಗದ ಹಾಗೆ ತೆಗೆದುಹಾಕುತ್ತಾನೆ ಎಂಬುದೇ ಸಿನಿಮಾ ತಿರುಳು. ಜೀ 5ನಲ್ಲಿ ಕನ್ನಡ ಭಾಷೆಯಲ್ಲೂ ಈ ಸಿನಿಮಾ ನೋಡಬಹುದು.

More from Filmibeat

English summary
Basil Joseph Malayalam Crime Comedy Nunakkuzhi recorded 100 million streaming minutes in ZEE5
Read more about: malayalam ott filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X