ಓಟಿಟಿಯಲ್ಲಿ ಸದ್ದು ಮಾಡುತ್ತಿರೋ ಕನ್ನಡದ ಬೆಸ್ಟ್ ಕ್ರೈಮ್ ಥ್ರಿಲ್ಲರ್‌ಗಳ್ಯಾವುವು? ಇಲ್ಲಿದೆ ಲಿಸ್ಟ್

ಸಿನಿಪ್ರಿಯರಿಗೆ ಓಟಿಟಿ ಇನ್ನೊಂದು ಮನರಂಜನೆಯ ತಾಣವಾಗಿಬಿಟ್ಟಿದೆ. ಅದಕ್ಕೆ ಜನಪ್ರಿಯ ಓಟಿಟಿ ಫ್ಲಾಟ್‌ಫಾರ್ಮ್‌ಗಳು ಮುಗಿಬಿದ್ದು ಹೊಚ್ಚ ಹೊಸ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುತ್ತಲೇ ಇವೆ. ಇತ್ತೀಚೆಗೆ ಓಟಿಟಿಗಳು ಕನ್ನಡ ಸಿನಿಮಾಗಳನ್ನು ಖರೀದಿ ಮಾಡುತ್ತಿಲ್ಲ ಅನ್ನೋದ ಆರೋಪ ಕೇಳಿ ಬರುತ್ತಿದೆ. ಆದರೂ, ಈಗಾಗಲೇ ಸ್ಟ್ರೀಮಿಂಗ್ ಆಗುತ್ತಿರುವ ಸಿನಿಮಾಗಳು ಸಿನಿಪ್ರಿಯರನ್ನು ರಂಜಿಸುತ್ತಿವೆ.

ಓಟಿಟಿಯಲ್ಲಿ ಹೆಚ್ಚಾಗಿ ಆಕ್ಷನ್ ಹಾಗೂ ಥ್ರಿಲ್ಲರ್ ಸಿನಿಮಾಗಳಿಗೆ ಹೆಚ್ಚು ಬೇಡಿಕೆಯಿದೆ. ಆಗ ರೊಮ್ಯಾಂಟಿಕ್ ಲವ್ ಸ್ಟೋರಿಗಳು ಸದ್ದು ಮಾಡುತ್ತವೆ. ಈ ಕಾರಣಕ್ಕೆ ಅಮೆಜಾನ್ ಪ್ರೈಂ, ಜೀ 5, ಸೋನಿ ಲೈವ್, ಡಿಸ್ನಿ+ಹಾಟ್‌ಸ್ಟಾರ್ ಅಂತಹ ಓಟಿಟಿ ವೇದಿಕೆಗಳು ಹೆಚ್ಚಾಗಿ ಕ್ರೈಂ ಥ್ರಿಲ್ಲರ್ ಕಡೆಗೆ ಗಮನ ಹರಿಸುತ್ತವೆ. ಈಗಾಗಲೇ ಓಟಿಟಿಯಲ್ಲಿ ರಿಲೀಸ್ ಆಗಿರುವ ಕನ್ನಡದ ಬೆಸ್ಟ್ ಕ್ರೈಂ ಥ್ರಿಲ್ಲರ್‌ಗಳನ್ನು ವೀಕ್ಷಕರಿಂದ ಮೆಚ್ಚುಗೆ ಗಳಿಸಿವೆ. ಅಂತಹ ಕನ್ನಡದ ಕ್ರೈಂ ಥ್ರಿಲ್ಲರ್‌ಗಳ ಪಟ್ಟಿ ಇಲ್ಲಿದೆ.

Best Kannada Crime Thiller movies in Amazon prime video zee 5 sony liv jio cinema


ಕಾಂತಾರ- ಅಮೆಜಾನ್ ಪ್ರೈಂ

ರಿಷಬ್ ಶೆಟ್ಟಿಯನ್ನು ಸೂಪರ್‌ಸ್ಟಾರ್ ಮಾಡಿದ 'ಕಾಂತಾರ' ಸಿನಿಮಾಗೆ ಓಟಿಟಿಯಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ 'ಕಾಂತಾರ' ಸ್ಟ್ರೀಮಿಂಗ್ ಆಗುತ್ತಿದೆ. ಓಟಿಟಿಯಲ್ಲಿ ಇತ್ತೀಚೆಗೆ ಅತೀ ಹೆಚ್ಚು ಸದ್ದು ಮಾಡುತ್ತಿರುವ ಕ್ರೈಂ ಥ್ರಿಲ್ಲರ್ ಪಟ್ಟಿಯಲ್ಲಿ 'ಕಾಂತಾರ' ಸಿನಿಮಾವಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿತ್ತು. ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿದೆ.

ಟೋಬಿ- ಸೋನಿ ಲೈವ್

ರಾಜ್‌ ಬಿ ಶೆಟ್ಟಿಯ ಮಾಸ್ ಕಮರ್ಷಿಯಲ್ ಸಿನಿಮಾ 'ಟೋಬಿ'. ಥಿಯೇಟರ್‌ನಲ್ಲಿ ಈ ಸಿನಿಮಾ ಹೆಚ್ಚು ಮಾಡಲಿಲ್ಲ. ಆದರೆ, ಓಟಿಟಿಯಲ್ಲಿ 'ಟೋಬಿ'ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ವಿಭಿನ್ನ ಅವತಾರದಲ್ಲಿ ರಾಜ್‌ ಬಿ ಶೆಟ್ಟಿ ಕಾಣಿಸಿಕೊಂಡಿದ್ದರು. ಚೈತ್ರಾ ಆಚಾರ್ ಅವರ ಅಭಿನಯಕ್ಕೂ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಸದ್ಯ ಕ್ರೈಂ ಥ್ರಿಲ್ಲರ್ ಇಷ್ಟ ಪಡುವವರಿಗೆ 'ಟೋಬಿ' ಕೂಡ ಬೆಸ್ಟ್ ಚಾಯ್ಸ್. ಈ ಸಿನಿಮಾ ಸೋನಿ ಲೈವ್‌ನಲ್ಲಿದೆ.

ಗರುಡ ಗಮನ ವೃಷಭ ವಾಹನ-ಜೀ 5

ರಿಷಬ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಗರುಡ ಗಮನ ವೃಷಭ ವಾಹನ'. ಈ ಸಿನಿಮಾವನ್ನು ಬಾಲಿವುಡ್‌ನ ಕ್ರೈಂ ಸಿನಿಮಾಗಳ ನಿರ್ದೇಶಕ ಅನುರಾಗ್ ಕಶ್ಯಪ್ ಮೆಚ್ಚಿ, ಹಾಡಿ ಹೊಗಳಿದ್ದರು. ಕರಾವಳಿ ಭಾಗದ ಕ್ರೈಂ ಸ್ಟೋರಿಯನ್ನು ಜನರು ಕೂಡ ಮೆಚ್ಚಿಕೊಂಡಿದ್ದರು. ಈ ಸಿನಿಮಾ ಜೀ 5ನಲ್ಲಿ ಲಭ್ಯವಿದೆ.

ಶಿವಾಜಿ ಸೂರತ್ಕಲ್- ಜೀ 5

ಕ್ರೈಂ ಥ್ರಿಲ್ಲರ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮತ್ತೊಂದು ಸಿನಿಮಾ 'ಶಿವಾಜಿ ಸೂರತ್ಕಲ್'. ರಮೇಶ್ ಅರವಿಂದ್ ಮರ್ಡರ್ ಮಿಸ್ಟರಿಯನ್ನು ಬಗೆಹರಿಸುವ ಈ ಸಿನಿಮಾಗೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. 2020ರಲ್ಲಿ ತೆರೆಂಡಿದ್ದ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಷ್ಟೇ ಅಲ್ಲ, ಓಟಿಟಿಯಲ್ಲೂ ಸದ್ದು ಮಾಡುತ್ತಿದೆ. ಓಟಿಟಿಯಲ್ಲಿರುವ ಬೆಸ್ಟ್ ಕ್ರೈಂ ಥ್ರಿಲ್ಲರ್ ಸಿನಿಮಾಗಳಲ್ಲಿ 'ಶಿವಾಜಿ ಸೂರತ್ಕಲ್' ಕೂಡ ಒಂದು. ಶಿವಾಜಿ ಸೂರತ್ಕಲ್ ಕೂಡ ಜೀ 5ನಲ್ಲಿದೆ.

ಕೇಸ್ ಆಫ್ ಕೊಂಡಾಣ- ಅಮೆಜಾನ್ ಪ್ರೈಮ್

ವಿಜಯ್ ರಾಘವೇಂದ್ರ ಹಾಗೂ ಭಾವನಾ ಮೆನನ್ ನಟಿಸಿದ 'ಕೇಸ್ ಆಫ್ ಕೊಂಡಾಣ' ಹೆಚ್ಚು ಸದ್ದು ಮಾಡಿದ ಸಿನಿಮಾ. ಓಟಿಟಿಯಲ್ಲಿ ಈ ಸಿನಿಮಾ ರಿಲೀಸ್ ಆದಾಗ ವೀಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶಿಸಿದ ಈ ಸಿನಿಮಾ ಮರ್ಡರ್‌ ಕೇಸ್‌ನ ಸುತ್ತ ಸಾಗುವ ಕಥೆ. ಕ್ರೈಂ ಕಥೆಯಾಗಿದ್ದರೂ, ಥ್ರಿಲ್ಲಿಂಗ್ ಎಲಿಮೆಂಟ್‌ಗಳ ಮೂಲಕ ಸದ್ದು ಮಾಡುತ್ತಿದೆ. ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿದೆ.


ವೃತ್ರ-ಅಮೆಜಾನ್ ಪ್ರೈಂ

ಅಮೆಜಾನ್‌ ಪ್ರೈಂನಲ್ಲಿರುವ ಕನ್ನಡದ ಮತ್ತೊಂದು ಕ್ರೈಂ ಥ್ರಿಲ್ಲರ್ ಸಿನಿಮಾ 'ವೃತ್ರ'. ಒಂದು ಸೂಸೈಡ್ ಕೇಸ್‌ ಅನ್ನು ತನಿಖೆ ಮಾಡುವಾಗ ತೆರೆದುಕೊಳ್ಳುವ ರಹಸ್ಯಗಳನ್ನು ಬೇಧಿಸುವ ಕತೆ. ನಿತ್ಯಶ್ರೀ ಸಬ್‌ ಇನ್‌ಸ್ಪೆಕ್ಟರ್ ಇಂದಿರಾ ರಾವ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ನೋಡಬಹುದು.

More from Filmibeat

English summary
Best Kannada Crime Thiller movies in Amazon prime video zee 5 sony liv, jio cinema
Read more about: kannada movies ott filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X