ಈ ವೀಕೆಂಡ್‌ನಲ್ಲಿ ಓಟಿಟಿಯಲ್ಲಿ ನೀವು ಈ 5 ಕನ್ನಡ ಸಿನಿಮಾಗಳನ್ನು ನೋಡಬಹುದು; ನಿಮ್ಮ ಆಯ್ಕೆ ಯಾವುದು?

ವೀಕೆಂಡ್ ಸಿನಿಮಾ: ವೀಕೆಂಡ್ ಬಂತು ಅಂದರೆ ಜನರು ರಿಲ್ಯಾಕ್ಸ್ ಮೂಡಿಗೆ ಜಾರುತ್ತಾರೆ. ನಿಮಗೆ ಹೊರಗಡೆ ಹೋಗುವ ಪ್ಲ್ಯಾನ್ ಏನೂ ಇಲ್ಲಾ ಅಂತಾದರೆ, ಮನೆಯಲ್ಲಿಯೇ ಕೂತು ಈ ಓಟಿಟಿಯಲ್ಲಿ ಕನ್ನಡ ಸಿನಿಮಾಗಳನ್ನು ನೋಡಬಹುದು. ನಾಲ್ಕೈದು ಪ್ರಮುಖ ಓಟಿಟಿ ವೇದಿಕೆಗಳಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ಇದ್ದಾವೆ.

ಈಗಾಗಲೇ ರಿಲೀಸ್ ಆಗಿರುವ ಸಿನಿಮಾಗಳನ್ನು ನೀವು ಥಿಯೇಟರ್‌ಗೆ ಹೋಗಿ ನೋಡುವುದನ್ನು ಮಿಸ್ ಮಾಡಿಕೊಂಡಿದ್ದರೆ, ಅಂತಹವು ಓಟಿಟಿಯಲ್ಲಿ ಲಭ್ಯವಿದೆ. ಇವುಗಳಲ್ಲಿ ಕೆಲವು ಸ್ಟಾರ್‌ಗಳ ಸಿನಿಮಾ ಆಗಿದ್ದರೆ, ಮತ್ತೆ ಕೆಲವು ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳು. ಈ ವಾರ ಮನೆಯಲ್ಲಿಯೇ ಫ್ರೀಯಾಗಿದ್ದರೆ, ಅಂತಹವರು ಈ ಐದು ಬೆಸ್ಟ್ ಕನ್ನಡ ಸಿನಿಮಾಗಳನ್ನು ನೋಡಬಹುದು.

ಅಮೆಜಾನ್ ಪ್ರೈಂ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಸಿನಿಮಾ, ಹಾಟ್ ಸ್ಟಾರ್, ಜೀ 5 ಅಂತಹ ಓಟಿಟಿ ವೇದಿಕೆಗಳಲ್ಲಿ ಸಾಕಷ್ಟು ಕನ್ನಡ ಸಿನಿಮಾಗಳು ಲಭ್ಯವಿದೆ. ಇವುಗಳಲ್ಲಿ ಈ ವಾರ 5 ಬೆಸ್ಟ್ ಸಿನಿಮಾಗಳನ್ನು ನೋಡಬಹುದು. ಹಾಗಿದ್ದರೆ, ಆ ಕನ್ನಡ ಸಿನಿಮಾಗಳು ಯಾವುವು? ಆ ಸಿನಿಮಾಗಳ ಹೈಲೈಟ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

Best Top 5 Kannada movies to watch this weekend on ott netflix amazon prime Hot star jio cinema

ನೆಟ್‌ಫ್ಲಿಕ್ಸ್‌ನಲ್ಲಿ 'ಬಘೀರ'

ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ 'ಬಘೀರ' ಥಿಯೇಟರ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಕನ್ನಡ ಮೊದಲ ಸೂಪರ್ ಹೀರೊನಾ ಥಿಯೇಟರ್‌ನಲ್ಲಿ ನೋಡುವುದನ್ನು ಮಿಸ್ ಮಾಡಿಕೊಂಡಿದ್ದರೆ ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಸದ್ಯ ನೆಟ್‌ಫ್ಲಿಕ್ಸ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾ 2ನೇ ಸ್ಥಾನದಲ್ಲಿ ಇದೆ. ಡಾ. ಸೂರಿ ನಿರ್ದೇಶಿಸಿದ ಈ ಸಿನಿಮಾಗೆ ಕಥೆ ಕೊಟ್ಟಿದ್ದು ಪ್ರಶಾಂತ್ ನೀಲ್. ಅಜನೀಶ್ ಬಿ ಲೋಕನಾಥ್ ಹಿನ್ನೆಲೆ ಸಂಗೀತ ಈ ಸಿನಿಮಾದ ಹೈಲೈಟ್. ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಜೋಡಿ ಕೂಡ ಇಷ್ಟ ಆಗುತ್ತಾರೆ.

Best Top 5 Kannada movies to watch this weekend on ott netflix amazon prime Hot star jio cinema

ಪ್ರೈಂ ವಿಡಿಯೋದಲ್ಲಿ 'ಮಾರ್ಟಿನ್'

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ಆದರೆ, ಆರಂಭದ ದಿನಗಳಲ್ಲಿ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಸಿನಿಮಾದ ಆಕ್ಷನ್ ಸೀಕ್ವೆನ್ಸ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ. ಒಮ್ಮೆ ಆಕ್ಷನ್ ಬ್ಲಾಕ್‌ ಅನ್ನು ಎಕ್ಸ್‌ಪೀರಿಯನ್ಸ್ ಮಾಡಬಹುದು.

Best Top 5 Kannada movies to watch this weekend on ott netflix amazon prime Hot star jio cinema

ಸನ್‌ನೆಕ್ಸ್ಟ್‌ನಲ್ಲಿ 'ಕೃಷ್ಣಂ ಪ್ರಣಯ ಸಖಿ'

ಗೋಲ್ಡನ್ ಸ್ಟಾರ್ ಗಣೇಶ್‌ ಹಿಟ್ ಕೊಟ್ಟ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಶ್ರೀನಿವಾಸ್ ರಾಜು ನಿರ್ದೇಶಿಸಿದ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ವೀಕೆಂಡ್‌ನಲ್ಲಿ ಫ್ಯಾಮಿಲಿ ಜೊತೆ ಕೂಡ ಈ ಸಿನಿಮಾವನ್ನು ನೋಡಬಹುದು. ಇದು ನವೆಂಬರ್ 29 ರಿಂದ ಓಟಿಟಿಯಲ್ಲಿ ಲಭ್ಯ. ಹಾಡುಗಳಿಂದಲೇ ಥಿಯೇಟರ್‌ಗೆ ಸೆಳೆದ ಸಿನಿಮಾವನ್ನು ನೀವಿನ್ನೂ ನೋಡಿಲ್ಲ ಅಂದರೆ, ವೀಕೆಂಡ್‌ನಲ್ಲಿ ಉತ್ತಮ ಆಯ್ಕೆ.

Best Top 5 Kannada movies to watch this weekend on ott netflix amazon prime Hot star jio cinema

ಪ್ರೈಂ ವಿಡಿಯೋದಲ್ಲಿ 'ಶಾಖಾಹಾರಿ'

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬಂದ ಬೆಸ್ಟ್ ಸಿನಿಮಾಗಳಲ್ಲೊಂದು 'ಶಾಖಾಹಾರಿ'. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಬಹಳಷ್ಟು ಮಂದಿ ಸಿನಿಮಾ ಪ್ರಿಯರು ಮಿಸ್ ಮಾಡಿಕೊಂಡಿದ್ದಾರೆ. ಕಂಟೆಂಟ್ ಸಿನಿಮಾ ಬೇಕು ಅನ್ನುವವರಿಗೆ ಈ ಸಿನಿಮಾ ಉತ್ತಮ ಆಯ್ಕೆ. ರಂಗಾಯಣ ರಘು, ಗೋಪಾಲ ಕೃಷ್ಣ ದೇಶಪಾಂಡೆ ನಟನೆ ನಿಮಗೆ ಖಂಡಿತಾ ಖುಷಿ ಕೊಡುತ್ತೆ.

Best Top 5 Kannada movies to watch this weekend on ott netflix amazon prime Hot star jio cinema

ಪ್ರೈಂ ವಿಡಿಯೋದಲ್ಲಿ 'ಇಬ್ಬನಿ ತಬ್ಬಿದ ಇಳೆಯಲಿ'

ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಈ ವರ್ಷದ ಕನ್ನಡ ಬೆಸ್ಟ್ ಸಿನಿಮಾಗಳಲ್ಲಿ ಒಂದು. ಭಾವನಾತ್ಮಕ ಲವ್ ಸ್ಟೋರಿ ನೋಡುವ ಮೂಡಿನಲ್ಲಿ ನೀವು ಇದ್ದರೆ, ಈ ಸಿನಿಮಾ ವೀಕೆಂಡ್‌ನಲ್ಲಿ ನೋಡಬಹುದು. ವಿಹಾನ್ ಹಾಗೂ ಅಂಕಿತಾ ಅಮರ್, ಮಯೂರಿ ನಟರಾಜ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Best Top 5 Kannada movies to watch this weekend on ott netflix, amazon prime, Hot star, jio cinema;
Read more about: ott kannada movie filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X