ಈ ವೀಕೆಂಡ್‌ಗೆ ಓಟಿಟಿಯಲ್ಲಿ ಸಿನಿಮಾಗಳ ಹಬ್ಬ: ಬರೋಬ್ಬರಿ 6 ಸಿನಿಮಾ ರಿಲೀಸ್

ಒಂದ್ಕಡೆ ಥಿಯೇಟರ್.. ಇನ್ನೊಂದ್ಕಡೆ ಓಟಿಟಿ. ಜನರು ಎರಡೂ ಕಡೆ ರಿಲೀಸ್ ಆಗುವ ಸಿನಿಮಾಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ವಾರಾಂತ್ಯಕ್ಕೆ ಓಟಿಟಿಯಲ್ಲಿ ರಿಲೀಸ್ ಆಗುವ ಸಿನಿಮಾಗಳ ಮೇಲೆ ಸಿನಿಪ್ರಿಯರ ಒಂದು ಕಣ್ಣಿಟ್ಟಿರುತ್ತಾರೆ.

ಪ್ರತಿವಾರದಂತೆ ಈವಾರ ಕೂಡ ಬರೋಬ್ಬರಿ 6 ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್ ಆಗಲಿವೆ. ಒಂದೊಂದು ಸಿನಿಮಾವೂ ಒಂದಕ್ಕಿಂತ ಒಂದು ಮೆಚ್ಚುಗೆ ಗಳಿಸಿದೆ. ಹಾಗಿದ್ದರೆ ಈ ವಾರ ಯಾವ್ಯಾವ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ? ಆ ಸಿನಿಮಾಗಳ ವಿಶೇಷತೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

Bhediya, Kisi Ka Bhai Kisi Ki Jaan, Missing and others 6 movies releasing on OTT this week of May

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'

ಸಲ್ಮಾನ್ ಖಾನ್ , ಪೂಜಾ ಹೆಗ್ಡೆ, ವೆಂಕಟೇಶ್, ಜಗಪತಿ ಬಾಬು ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. 'ವೀರಂ' ಸಿನಿಮಾದ ರಿಮೇಕ್ ಆಗಿದ್ದರೂ, ಬಾಲಿವುಡ್‌ ಪ್ರೇಕ್ಷಕರಿಗೆ ತಕ್ಕಂತೆ ಸಿನಿಮಾ ಮಾಡಲಾಗಿತ್ತು. ಆದರೆ, ಥಿಯೇಟರ್‌ನಲ್ಲಿ ಈ ಸಿನಿಮಾ ಜನರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಈಗ ಇದೇ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಮೇ 26ರಂದು ಜೀ 5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

'ಭೇಡಿಯಾ'

ವರುಣ್ ಧವನ್, ಕೃತಿ ಸೆನನ್, ಅಭಿಷೇಕ್ ಬ್ಯಾನರ್ಜಿ ಹಾಗೂ ದೀಪಕ್ ಡೊಬ್ರಿಯಾಲ್ ಅಭಿನಯದ ಸಿನಿಮಾ 'ಭೇಡಿಯಾ'. ಬಾಲಿವುಡ್‌ ಹಾರರ್ ಕಮ್ ಕಾಮಿಡಿ ಸಿನಿಮಾ ಓಟಿಟಿಗೆ ಇದೇ ವಾರ ಲಗ್ಗೆ ಇಡುತ್ತಿದೆ. ಮೇ 26ರಂದು ಜಿಯೋ ಸಿನಿಮಾದಲ್ಲಿ ರಿಲೀಸ್ ಆಗಲಿದೆ. ಅಮರ್ ಕೌಶಿಕ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

Bhediya, Kisi Ka Bhai Kisi Ki Jaan, Missing and others 6 movies releasing on OTT this week of May

ಮಿಸ್ಸಿಂಗ್

'ಮಿಸ್ಸಿಂಗ್' ಸಿನಿಮಾ ಅಮೆರಿಕದ ಥ್ರಿಲ್ಲರ್ ಸಿನಿಮಾ. ವಿಲ್ ಮೆರ್ರಿಕ್ ಹಾಗೂ ನಿಕ್ ಜಾನ್ಸನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕೊಲಂಬೊದಲ್ಲಿ ನಾಯಕಿಯ ತಾಯಿಯ ಹೊಸ ಸಂಗಾತಿಯೊಂದಿಗೆ ಪ್ರವಾಸಕ್ಕೆ ತೆರಳಿದ್ದಾಗ ಕಾಣೆಯಾಗುತ್ತಾರೆ. ತನ್ನ ತಾಯಿಯನ್ನು ಹುಡುಕಲು ಹೊರಟಾಗ ಎದುರಾಗುವ ಸಮಸ್ಯೆಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಮೇ 24ರಂದು ರಿಲೀಸ್ ಆಗಲಿದೆ.

ಮದರ್ಸ್ ಡೇ

ಮತ್ತೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮದರ್ಸ್ ಡೇ' ಮೇ 24ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ. ಮಟೆಯುಸ್ಜ್ ರಾಕಿಯೋವಿಚ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ನ್ಯಾಟೋದ ಸ್ಪೆಷಲ್ ಆಪರೇಷನ್ ಏಜೆಂಟ್ ಸುತ್ತ ಈ ಸಿನಿಮಾದ ಕಥೆ ಸಾಗುತ್ತೆ.

ವಿಕ್ಟಿಮ್/ಸಸ್ಪೆಕ್ಟ್

'ವಿಕ್ಟಿಮ್/ಸಸ್ಪೆಕ್ಸ್' ಇದು ಪಕ್ಕಾ ಕ್ರೈಂ ಥ್ರಿಲ್ಲರ್ ಸಿನಿಮಾ. ನ್ಯಾನ್ಸಿ ಶ್ವಾರ್ಟ್ಜ್‌ಮನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಾಚೆಲ್ ಡೆ ಲೆಯೋನ್ ಹಾಗೂ ಅಮಂಡಾ ಪಿಕೆ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಬಳಿಕ ಪೊಲೀಸರು ಮಹಿಳೆಯೊಬ್ಬರು ದೂರು ನೀಡುತ್ತಾರೆ. ಅಲ್ಲಿಂದ ಸಂಕಷ್ಟವನ್ನು ಎದುರಿಸಬೇಕಾಗುತ್ತೆ. ಮುಂದೇನಾಗುತ್ತೆ? ಅನ್ನೋದೇ ಸಿನಿಮಾದ ಕಥೆ. ಈ ಸಿನಿಮಾ ಇಂದು (ಮೇ 23) ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿದೆ.

ಟಿನ್ & ಟೀನಾ

'ಟಿನ್ & ಟೀನಾ' ಇದೊಂದು ಸೈಕಾಲಜಿಕಲ್ ಹಾರರ್ ಥ್ರಿಲ್ಲರ್ ಸಿನಿಮಾ. ರಾಬಿನ್ ಸ್ಟೈನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮಿಲೆನಾ ಸ್ಮಿಟ್, ಜೈಮ್ ಲೊರೆಂಟೆ, ಕಾರ್ಲೋಸ್ ಗೊನ್ಜಾಲೆಜ್ ಮೊರೊಲೊನ್ ಮತ್ತು ಅನಸ್ತಾಸಿಯಾ ರುಸ್ಸೋ ನಟಿಸಿದ್ದಾರೆ. ಇದು ಮೇ 24ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
Varun Dhawan Bhediya, Salman Khan Kisi Ka Bhai Kisi Ki Jaan, Missing and others 6 movies releasing on OTT this week of May, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X