ಪ್ರತಿ ದಿನ ಬಿಗ್ ಬಾಸ್ ಎಪಿಸೋಡ್‌ಗಳು ಜಿಯೋ ಹಾಟ್‌ಸ್ಟಾರ್‌ನಲ್ಲಿ ಯಾವಾಗ ಸ್ಟ್ರೀಮಿಂಗ್ ಆಗುತ್ತೆ ಅಂತ ಗೊತ್ತೇ?

ಭಾರತದ ಅತ್ಯಂತ ದುಬಾರಿ ರಿಯಾಲಿಟಿ ಶೋ ಬಿಗ್ ಬಾಸ್ 19ನೇ ಸೀಸನ್‌ನೊಂದಿಗೆ ಮತ್ತೆ ಮರಳಿದೆ. ಇದೇ ತಿಂಗಳು ಅಂದರೆ, ಆಗಸ್ಟ್ 24 ರಂದು ಗ್ರ್ಯಾಂಡ್ ಪ್ರೀಮಿಯರ್‌ನೊಂದಿಗೆ ಈ ಸೀಸನ್ ಪ್ರಾರಂಭವಾಗಿದೆ. ಹಿಂದಿ ಬಿಗ್‌ ಬಾಸ್ ಆರಂಭ ಆಯ್ತು ಅಂದರೆ, ಮನೆಯೊಳಗೆ ಸ್ಪರ್ಧಿಗಳ ಆರ್ಭಟ, ಕಿತ್ತಾಟ, ಪೈಪೋಟಿ, ಮೆಂಟಲ್‌ಗೇಮ್, ಅನಿರೀಕ್ಷಿತ ತಿರುವುಗಳನ್ನು ನಿರೀಕ್ಷೆ ಮಾಡಬಹುದು.

ಬಿಗ್ ಬಾಸ್ ಪ್ರತಿಬಾರಿಯಂತೆ 19ನೇ ಸೀಸನ್‌ನಲ್ಲೂ ಇಂತಹ ಹಲವು ಇಂಟ್ರೆಸ್ಟಿಂಗ್ ಎಲಿಮೆಂಟ್‌ಗಳಿಗಾಗಿ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. 19ನೇ ಸೀಸನ್‌ನಲ್ಲಿ ಮತ್ತೊಮ್ಮೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಿರೂಪಕನಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ 19ರ ಈ ಹೊಸ ಸೀಸನ್‌ನಲ್ಲಿ ಸ್ಪರ್ಧಿಗಳು ಕೂಡ ಇಂಟ್ರೆಸ್ಟಿಂಗ್ ಅನಿಸಿದ್ದಾರೆ. ಜನಪ್ರಿಯ ಟಿವಿ ನಟರು ಹಾಗೂ ಸೋಷಿಯಲ್ ಮೀಡಿಯಾ ಫೇಮಸ್ ಆಗಿರುವ ವ್ಯಕ್ತಿಗಳನ್ನು ಕರೆಸಲಾಗಿದೆ.

Bigg Boss 19 Episode Release Time When amp amp Where to Watch New Episodes on Weekdays and Weekends

ಕಳೆದ ಕೆಲವು ಸೀಸನ್‌ಗಳಿಂದ ಬಿಗ್ ಬಾಸ್ ಹಿಂದ ಸೀಸನ್‌ಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದೂ ಇದೆ. 19ನೇ ಸೀಸನ್ ಹೇಗಿರುತ್ತೆ. ಒಳಗಿರುವ ಸ್ಪರ್ಧಿಗಳು ಕ್ಯಾಮರಾ ಮುಂದೆ ಯಾವ ರೀತಿ ನಡೆದುಕೊಳ್ಳುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಜೊತೆಗೆ ವೀಕೆಂಡ್‌ನಲ್ಲಿ ಸಲ್ಮಾನ್ ಖಾನ್ ಎಂಟ್ರಿ ಕಿರುತೆರೆ ವೀಕ್ಷಕರಿಗೆ ಸಖತ್ ಕಿಕ್ ಕೊಡೋದು ಗ್ಯಾರಂಟಿ ಎನ್ನಲಾಗಿತ್ತಿದೆ.

ಇನ್ನು ಈ ಬಾರಿ ಬಿಗ್ ಬಾಸ್ ಸೀಸನ್ 19ರಲ್ಲಿ ಒಟ್ಟು 16 ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಯಾರೆಂದರೆ, ಆವೇಜ್ ದರ್ಬಾರ್, ಅಶ್ನೂರ್ ಕೌರ್, ನಗ್ಮಾ ಮಿರಾಜ್ಕರ್, ನೀಲಂ ಗಿರಿ, ಮೃದುಲ್ ತಿವಾರಿ, ಅಮಾಲ್ ಮಲಿಕ್, ತಾನಿಯಾ ಮಿತ್ತಲ್, ನಟಾಲಿಯಾ ಜಾನೋಸ್ಜೆಕ್, ಗೌರವ್ ಖನ್ನಾ, ಬಸೀರ್ ಅಲಿ, ಪ್ರಾಣಿತ್ ಮೋರೆ, ಅಭಿಷೇಕ್ ಬಜಾಜ್, ನೆಹಾಲ್ ಚೂಡಾಸಮಾ, ಕುನಿಕಾ ಸದಾನಂದ್, ಫರಹಾನಾ ಭಟ್ ಮತ್ತು ಜೈಶಾನ್ ಕ್ವಾದ್ರಿ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ.

ಬಿಗ್‌ ಬಾಸ್ ಶೋ ಆರಂಭದ ದಿನವೇ ಸ್ಪರ್ಧಿಗಳ ಮೈಂಡ್ ಗೇಮ್ ಆರಂಭ ಆಗುತ್ತೆ. ಮೊದಲ ಎಪಿಸೋಡ್‌ನಲ್ಲಿ ಪರಿಚಯವಾದ ಬಳಿಕ ಸ್ಪರ್ಧಿಗಳಲ್ಲಿ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ. ಆಗಸ್ಟ್ 25 ರಂದು ಮೊದಲ ಎಪಿಸೋಡ್ ಪ್ರಸಾರವಾಗಿತ್ತು. ಮುಂದೆ ಸ್ಪರ್ಧಿಗಳ ನಡುವೆ ಪ್ರಬಲ ಪೈಪೋಟಿ ನೋಡುವುದಕ್ಕೆ ಬಿಗ್ ಬಾಸ್ ಈಗಾಗಲೇ ಟೋನ್ ಅನ್ನು ಸೆಟ್ ಮಾಡಿದೆ. ಬಿಗ್ ಬಾಸ್ ಮನೆಯ ಸದಸ್ಯರಿಗೆ ಮೊದಲ ದಿನವೇ ಒಬ್ಬ ಸ್ಪರ್ಧಿಯನ್ನು ಹೊರಹಾಕುವ ಟಾಸ್ಕ್ ನೀಡಿದೆ. ಈ ಅನಿರೀಕ್ಷಿತ ನಡೆ ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಇದು ಸದ್ಯ ಬಿಗ್ ಬಾಸ್ ಮನೆಯೊಳಗೆ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ.

ಬಿಗ್ ಬಾಸ್ 19ನೇ ಎಪಿಸೋಡ್‌ನಲ್ಲಿ ವಿಭಿನ್ನ ವ್ಯಕ್ತಿತ್ವ ಸ್ಪರ್ಧಿಗಳೊಂದಿಗೆ ಬಿಗ್ ಬಾಸ್ 19 ಆರಂಭವಾಗಿದೆ. ಇದು ಕಿರಿತೆರೆ ವೀಕ್ಷಕರಿಗೆ ಮಸ್ತ್ ಮನರಂಜನೆಯನ್ನು ನೀಡಲಿದೆ. ವಾರದಿಂದ ವಾರಕ್ಕೆ ವೀಕ್ಷಕರನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅನಿರೀಕ್ಷಿತ ತಿರುವುಗಳನ್ನು ನೀಡಲಿದೆ. ಸದ್ಯಕ್ಕೀಗ ಮೊದಲ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಯಾರು ಉಳಿದುಕೊಳ್ಳುತ್ತಾರೆ? ಯಾರು ಹೊರಗೆ ಹೋಗುತ್ತಾರೆ? ಅನ್ನೋದನ್ನು ನೋಡುವುದಕ್ಕೆ ಎಲ್ಲರೂ ಉತ್ಸುಕರಾಗಿದ್ದಾರೆ.

ಭಾರತದ ದುಬಾರಿ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ 19ರ ಹೊಸ ಎಪಿಸೋಡ್‌ಗಳನ್ನು JioHotstar ನಲ್ಲಿ ನೋಡಬಹುದು. ಇಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಮುಂಚಿತವಾಗಿ ಜಿಯೋ ಹಾಟ್‌ಸ್ಟಾರ್ ಓಟಿಟಿಯಲ್ಲಿ ವೀಕ್ಷಿಸಬಹುದು. ಓಟಿಟಿ ವೀಕ್ಷಕರಿಗೆ ಟಿವಿಯಲ್ಲಿ ಪ್ರಸಾರ ಆಗುವುದಕ್ಕಿಂತ ಮುಂಚಿತವಾಗಿ ನೋಡುವ ಅವಕಾಶ ನೀಡಲಾಗಿದೆ. ಇನ್ನು ಬಿಗ್ ಬಾಸ್ 19ರ ಎಪಿಸೋಡ್ ಪ್ರತಿದಿನ ರಾತ್ರಿ 10:30 ಕ್ಕೆ ಕಲರ್ಸ್ ಟಿವಿ (ಹಿಂದಿ)ಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
Do you know what time Bigg Boss 19 new episodes air? Here’s the daily telecast and OTT release schedule for weekdays and weekends. Don’t miss Salman Khan’s reality show drama.
Read more about: bigg boss tv show reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X