Bigg Boss Kannada OTT 1: ಬಿಗ್ ಬಾಸ್ ಮನೆ ಸೇರುವ ಸೆಲೆಬ್ರೆಟಿಗಳು ಇವರೇ!

ಬಿಗ್ ಬಾಸ್ ಶುರುವಾಯ್ತು ಅಂದ್ರೆ ಸಾಕು, ಮನೆಯೊಳಗೆ ಹೋಗುವ ಸ್ಪರ್ಧಿಗಳು ಯಾರು ಅನ್ನೋ ಬಗ್ಗೆ ದೊಡ್ಡ ಚರ್ಚೆನೇ ಆಗುತ್ತೆ. ಅದೆಷ್ಟು ಮುಚ್ಚಿಟ್ಟು ಬಟ್ಟಿಟ್ಟುಕೊಂಡರೂ ಲೀಕ್ ಆಗದೇ ಇರುವುದಿಲ್ಲ. ಈ ಬಾರಿಗೆ ಬಿಗ್ ಬಾಸ್ ಕನ್ನಡ ಓಟಿಟಿಯಲ್ಲಿ 24 ಗಂಟೆಗಳ ಕಾಲ ಪ್ರಸಾರ ಆಗಲಿದೆ. ಹೀಗಾಗಿ ಬಿಗ್ ಬಾಸ್ ಸ್ಪರ್ಧಿಗಳ್ಯಾರು ಮನೆ ಸೇರುತ್ತಾರೆ? ಅನ್ನೋ ಕುತೂಹಲವಂತೂ ಇದ್ದೇ ಇದೆ.

Recommended Video

Biggboss Kannada OTT Contestant 2 Sonu Srinivas Gowda | Filmibeat Kannada

ಈಗಾಗಲೇ ಬಿಗ್ ಬಾಸ್ ಮನೆ ಸೇರಿವ ಸಂಭಾವನೀಯ ಪಟ್ಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ, ಮೂಲಗಳ ಪ್ರಕಾರ ಬೇರೆದ್ದೇ ಒಂದು ಪಟ್ಟಿ ಇದೆ. ಓಟಿಟಿ ಬಿಗ್ ಬಾಸ್‌ಗಾಗಿ ವಿಶೇಷವಾದ ಪಟ್ಟಿ ಸಿದ್ದವಾಗಿದ್ದು, ಆ ಪಟ್ಟಿ ಇಲ್ಲಿದೆ.

ಬಿಗ್ ಬಾಸ್ ಓಟಿಟಿ ಸೀಸನ್ 1 ಮನೆಯೊಳಗೆ ಸೇರಲಿರುವ ಸ್ಪರ್ಧಿಗಳ ನಿಖರವಾದ ಪಟ್ಟಿ ಫಿಲ್ಮಿ ಬೀಟ್‌ಗೆ ಲಭ್ಯವಾಗಿದೆ. ಸಿನಿಮಾ, ಕಿರುತೆರೆ, ಪತ್ರಿಕೋದ್ಯಮ, ಜ್ಯೋತಿಷ್ಯ ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜನಪ್ರಿಯರಾದ ಸೆಲೆಬ್ರೆಟಿಗಳನ್ನು ಕಳುಹಿಸಿದ್ದಾರೆ. ಈ ಬಾರಿ ಹೆಚ್ಚು ಜನಪ್ರಿಯರಾದ ಮುಖವನ್ನೇ ಮನೆಯೊಳಗೆ ಕಳುಹಿಸಲಿದ್ದಾರೆ. ಹಾಗಿದ್ದರೆ, ಬಿಗ್ ಬಾಸ್ ಓಟಿಟಿ ಮನೆ ಸೇರುವ ಪಟ್ಟಿ ಹೀಗಿದೆ.

ಕೆಲವೇ ಕ್ಷಣಗಳಲ್ಲಿ ಬಿಗ್ ಬಾಸ್ ಓಟಿಟಿ ಶುರು

ಕೆಲವೇ ಕ್ಷಣಗಳಲ್ಲಿ ಬಿಗ್ ಬಾಸ್ ಓಟಿಟಿ ಶುರು

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಆಗಸ್ಟ್ 6 ರಿಂದ ಗ್ರ್ಯಾಂಡ್ ಆಗಿ ಆರಂಭ ಆಗುತ್ತಿದೆ. ದಕ್ಷಿಣ ಭಾರತದ ನಾಲ್ಕೂ ಭಾಷೆಗಳ ಪೈಕಿ ಕನ್ನಡದಲ್ಲೇ ಮೊದಲ ಬಾರಿಗೆ ಓಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಈಗಾಗಲೇ ಮಾಹಿತಿ ನೀಡಿರುವಂತೆ ಸುಮಾರು 16 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಕನ್ನಡ ಓಟಿಟಿಯಲ್ಲಿ ಭಾಗವಹಿಸಲಿದ್ದಾರೆ. 24 ಗಂಟೆ ಓಟಿಟಿಯಲ್ಲಿ ಈ ರಿಯಾಲಿಟಿ ಶೋ ಪ್ರಸಾರ ಆಗುತ್ತಿದ್ದು, ಈಗಾಗಲೇ ಕುತೂಹಲ ಕೆರಳಿಸಿದೆ.

ಬಿಗ್ ಬಾಸ್ ಓಟಿಟಿ ನಿಖರ ಪಟ್ಟಿ ಇಲ್ಲಿದೆ

ಬಿಗ್ ಬಾಸ್ ಓಟಿಟಿ ನಿಖರ ಪಟ್ಟಿ ಇಲ್ಲಿದೆ

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್‌ನಲ್ಲಿ ಈ ಬಾರಿ ಮನೆಯೊಳಗೆ ಪ್ರವೇಶ ಮಾಡುವವರ ಪಟ್ಟಿ ಫಿಲ್ಮಿ ಬೀಟ್‌ಗೆ ಲಭ್ಯವಾಗಿದೆ. ಸಿನಿಮಾ ಕ್ಷೇತ್ರದಿಂದ ನಟಿ ಸೋನು ಶ್ರೀನಿವಾಸ್ ಗೌಡ, ಅಕ್ಷತಾ ಕುಕ್ಕಿ, ರಾಕೇಶ್ ಅಡಿಗ, ರಾಗಿಣಿ, ರೇಖಾ ದಾಸ್, ಇನ್ನೂ ರಾಜಕೀಯ ಕ್ಷೇತ್ರದಿಂದ ಮುಖ್ಯಮಂತ್ರಿ ಚಂದ್ರು ಭಾಗವಹಿಸಲಿದ್ದಾರೆ. ಕಿರುತೆರೆಯಿಂದ ಪುಟ್ಟಗೌರಿ ಮದುವೆ ಧಾರಾವಾಹಿಯ ಸಾನ್ಯ ಐಯ್ಯರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಎಂಟ್ರಿ ಆಗಲಿದೆ. ಪ್ರತಿಕೋದ್ಯಮದಿಂದ ಸೋಮಣ್ಣ ಮಾಚೀಮಡ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್, ಕ್ರಿಕೆಟ್ ಕ್ಷೇತ್ರದಿಂದ ವಿನಯ್ ಕುಮಾರ್ ಎಂಟ್ರಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1ರ 10 ಸ್ಪರ್ಧಿಗಳ ಪಟ್ಟಿ ಹೀಗಿದೆ.

ಸೋನು ಶ್ರೀನಿವಾಸ್ ಗೌಡ, ರಾಕೇಶ್ ಅಡಿಗ, ಅಕ್ಷತಾ ಕುಕ್ಕಿ, ರೇಖಾ ದಾಸ್, ಮುಖ್ಯಮಂತ್ರಿ ಚಂದ್ರು, ಸಾನ್ಯ ಐಯ್ಯರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್, ಸೋಮಣ್ಣ ಮಾಚೀಮಡ, ಆರ್ಯವರ್ಧನ್,
ಕಾಫಿ ನಾಡು ಚಂದು ಎಂಟ್ರಿ

ಕಾಫಿ ನಾಡು ಚಂದು ಎಂಟ್ರಿ

ಸೋಶಿಯಲ್ ಮೀಡಿಯಾ ಸ್ಟಾರ್ ಚಿಕ್ಕಮಗಳೂರಿನ ಕಾಫಿ ನಾಡು ಚಂದು ಬಿಗ್ ಬಾಸ್ ಓಟಿಟಿ ಸೀಸನ್ ಒನ್‌ಗೆ ಪ್ರವೇಶ ಪಡೆದಿದ್ದಾರೆ ಎನ್ನಲಾಗಿದೆ.

ಜಶ್ವಂತ್ ಬೋಪಣ್ಣ-ನಂದು

ಜಶ್ವಂತ್ ಬೋಪಣ್ಣ-ನಂದು

ಇದೇ ಮೊದಲ ಬಾರಿಗೆ ಜೋಡಿಯೊಂದು ಬಿಗ್ ಬಾಸ್ ಮನೆ ಪ್ರವೇಶಿಸಿದೆ. ಎಂಟಿವಿ ರೋಡೀಸ್ 18 ವಿಜೇತರಾದ ಜಶ್ವಂತ್ ಬೋಪಣ್ಣ ಹಾಗೂ ನಂದು ಬಿಗ್ ಮನೆ ಪ್ರವೇಶಿಸಿದ್ದಾರೆ.

ಡಿಜಿಟಪ್ ಕ್ರಿಯೇಟರ್ ಕಿರಣ್ ಯೋಗೇಶ್ವರ್

ಡಿಜಿಟಪ್ ಕ್ರಿಯೇಟರ್ ಕಿರಣ್ ಯೋಗೇಶ್ವರ್

ಇದೇ ಮೊದಲ ಬಾರಿಗೆ ಡಿಜಿಟಲ್ ಕ್ರಿಯೇಟರ್ ಎಂಟ್ರಿ ಕೊಟ್ಟಿದ್ದಾರೆ. ಯೋಗ ಹಾಗೂ ಸೋ ಟ್ರಾವಲರ್ ಕೂಡ ಹೌದು.

ಉದಯ್ ಸೂರ್ಯ

ಉದಯ್ ಸೂರ್ಯ

ಬಡ್ಡೀಸ್ ಅನ್ನೋ ಸಿನಿಮಾದಲ್ಲಿ ನಟಿಸಿರುವ ಉದಯೋನ್ಮುಖ ನಟ ಉದಯ್ ಸೂರ್ಯ ಕೂಡ ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಸ್ಪರ್ಧಿಗಳ ಆಯ್ಕೆ ಹೇಗಾಯ್ತು?

ಸ್ಪರ್ಧಿಗಳ ಆಯ್ಕೆ ಹೇಗಾಯ್ತು?

ಈಗಾಗಲೇ ತಿಳಿಸಿದ್ದಂತೆ ಬಿಗ್ ಬಾಸ್ ಕನ್ನಡ ಓಟಿಟಿಯ ಸೀಸನ್‌ 1 ಸಖತ್ ಚಾಲೆಂಜ್ ಆಗಿದೆ. ವೂಟ್‌ನಲ್ಲಿ ಪ್ರಸಾರ ಆಗುತ್ತಿರುವ ಈ ರಿಯಾಲಿಟಿ ಶೋ ಗೆಲ್ಲಲೇ ಬೇಕಿದೆ. ಹೀಗಾಗಿ ಸಿಕ್ಕಾಪಟ್ಟೆ ಯೋಚನೆ ಮಾಡಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಸಿನಿಮಾ ಕ್ಷೇತ್ರ, ಕಿರುತೆರೆ, ಪತ್ರಿಕೋದ್ಯಮ, ಕ್ರೀಡೆ, ಜ್ಯೋತಿಷ್ಯ ಸೇರಿದಂತೆ ಎಲ್ಲಾ ವಿಭಾಗದಿಂದಲೂ ಜನಪ್ರಿಯರಾಗಿರುವವನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ವಿವಾದಕ್ಕೆ ಎಡೆ ಮಾಡಿಕೊಡುವ ಪರ್ಸನಾಲಿಟಿಗಳ ಕಡೆ ಹೆಚ್ಚು ಗಮನ ನೀಡುತ್ತಿಲ್ಲ.

24 ಗಂಟೆ ಪ್ರಸಾರ.. ಸ್ಪರ್ಧಿಗಳ ಅವಾಂತರ!

24 ಗಂಟೆ ಪ್ರಸಾರ.. ಸ್ಪರ್ಧಿಗಳ ಅವಾಂತರ!

ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 24 ಗಂಟೆ ಪ್ರಸಾರ ಆಗುತ್ತಿರುವುದರಿಂದ ವೂಟ್‌ಗೂ ಸಖತ್ ಚಾಲೆಂಜಿಂಗ್ ಆಗಿರುತ್ತೆ. ಇದೇ ಮೊದಲ ಬಾರಿಗೆ ರಿಯಾಲಿಟಿ ಶೋನಲ್ಲಿ ಎಕ್ಸ್‌ಪೆರಿಮೆಂಟ್ ಆಗುತ್ತಿದೆ. ಹೀಗಾಗಿ ಕ್ಯಾಮರಾಗಳು ಏನು ತೋರಿಸಬೇಕು? ಏನು ತೋರಿಸಬಾರದು ಅನ್ನೋ ಪ್ರಶ್ನೆನೇ ಉದ್ಭವಿಸುವುದಿಲ್ಲ. ಹೀಗಾಗಿ ಜಗತ್ತಿನ ಮುಂದೆ ಸೆಲೆಬ್ರೆಟಿಗಳ ವ್ಯಕ್ತಿತ್ವ 42 ದಿನಗಳ ಕಾಲ ತೆರೆದ ಪುಸ್ತಕದಂತೆ ಇರುತ್ತೆ.

More from Filmibeat

English summary
Sonu Gowda, Somanna Machimada, Aryavardhan, Rakesh, Sanya Aiyyar, Will Enter Bigg Boss Kannada OTT, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X