Bigg Boss Kannada OTT: ರಿವೆಂಜ್ ತೀರಿಸಿಕೊಳ್ಳುತ್ತಿದ್ದಾರಾ ಜಯಶ್ರೀ?

ಬಿಗ್ ಬಾಸ್ ಮನೆಯಲ್ಲಿ ಎಲ್ಲರು ಒಂದೊಂದು ರೀತಿ ವರ್ತಿಸುತ್ತಾರೆ. ಅದರಲ್ಲೂ ಜಯಶ್ರೀ ಕೊಂಚ ವಿಭಿನ್ನವಾಗಿಯೇ ವರ್ತಿಸುತ್ತಾರೆ. ಮಾತಾಡುವುದು ಓಕೆ, ಕೇಳುವುದು ಓಕೆ. ಆದರೆ ರಿವೆಂಜ್ ತೀರಿಸಿಕೊಳ್ಳುವ ಲೆವೆಲ್‌ಗೆ ಜಯಶ್ರೀ ವರ್ತನೆ ಮಾಡುತ್ತಾರೆ. ರಿವೇಂಜ್ ಎಂಬುದು ಇದ್ದಾಗ ಅಲ್ಲಿ ಕೆಟ್ಟದ್ದೆ ನಡೆಯುತ್ತೆ. ಬಿಗ್ ಬಾಸ್ ಮನೆಯಲ್ಲಿ ಇರುವುದೇ ಮೂರು ಮತ್ತೊಂದು. ರಿವೇಂಜ್ ತೀರಿಸಿಕೊಳ್ಳಲು ಹೊರಟರೆ ಅವಕಾಶ ಹೆಚ್ಚಾಗಿರುತ್ತೆ. ಅದಕ್ಕೆಂದೇ ಸುದೀಪ್ ಎಚ್ಚರಿಕೆ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಮನೆಯಲ್ಲಿ ಚೈತ್ರಾ ಹಾಗೂ ಜಯಶ್ರೀ ತುಂಬಾನೇ ಕ್ಲೋಸ್ ಫ್ರೆಂಡ್ಸ್ ಅಂತ ತೋರಿಸಿಕೊಳ್ಳುತ್ತಾರೆ. ಬೇರೆಯವರ ಬಗ್ಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ಆದರೆ ಚೈತ್ರಾ ಹೇಳಿದ ಬುದ್ದಿ ಮಾತನ್ನೇ ಜಯಶ್ರೀ ಕೇಳುವುದಿಲ್ಲ. ಇದು ಕೂಡ ವೇದಿಕೆಯಲ್ಲಿ ಅನಾವರಣವಾಗಿದೆ.

ಸುದೀಪ್ ಮಾತಿನಿಂದ ಕ್ಲಾರಿಟಿ ಸಿಕ್ತಾ

ಸುದೀಪ್ ಮಾತಿನಿಂದ ಕ್ಲಾರಿಟಿ ಸಿಕ್ತಾ

ಈ ವಾರ ಜಶ್ವಂತ್ ಕ್ಯಾಪ್ಟೆನ್ಸಿಯಲ್ಲಿದ್ದಾಗ ಚೈತ್ರಾಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಜಶ್ವಂತ್ ಆಟ ಆಡುವಾಗ ಎಲ್ಲಾ ಕ್ವಾಲಿಟಿಯನ್ನು ನೋಡಿ ಆಟಗಾರರನ್ನು ಆಯ್ಕೆ ಮಾಡುತ್ತಿದ್ದ. ಯಾವ ಆಟಕ್ಕೆ ಯಾವ ಆಟಗಾರರು ಸೂಕ್ತ ಎಂಬುದು ಕ್ಯಾಪ್ಟನ್ ಮೇಲೆಯೇ ಬಿಟ್ಟಿದ್ದು. ಒಂದೆರಡು ಗೇಮ್ ಆಡುವಾಗಲೂ ಜಯಶ್ರೀ ನಾನು ಆಡುತ್ತೇನೆ ಎಂದಾಗಲೂ ಜಶ್ವಂತ್ ಸೆಲೆಕ್ಟ್ ಮಾಡಿರಲಿಲ್ಲ. ಇದಕ್ಕೆ ವೇದಿಕೆಯಲ್ಲಿಯೇ ಉತ್ತರ ಸಿಕ್ಕಿದೆ. ಒಂದು ಆಟ ಅಂತ ಬಂದಾಗ ಯಾವ ಪ್ಯಾರಾ ಮೀಟರ್ಸ್ ಇಟ್ಟುಕೊಂಡು ಕಂಟೆಸ್ಟೆಂಟ್ ನ ಆಯ್ಕೆ ಮಾಡಬೇಕು ಎಂದು ಜಯಶ್ರೀಯನ್ನೇ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ನೀಡಿದ ಜಯಶ್ರೀಗೆ ಸುದೀಪ್ ಅರ್ಥ ಮಾಡಿಕೊಳ್ಳುವಂತ ಸಲಹೆ ನೀಡಿದ್ದಾರೆ.

ಚೈತ್ರಾ ರಿವೇಂಜ್ ದಾರಿ ಹಿಡಿದರಾ?

ಚೈತ್ರಾ ರಿವೇಂಜ್ ದಾರಿ ಹಿಡಿದರಾ?

ಇನ್ನು ಚೈತ್ರಾ ಸ್ವಲ್ಪ ಒರಟುತನದ ದಾರಿ ಹಿಡಿದಿದ್ದಾರೆ ಎನಿಸುತ್ತಿದೆ. ಅದರಲ್ಲೂ ರಿವೇಂಜ್ ದಾರಿ. ಈ ಬಗ್ಗೆ ಪ್ರಸ್ತಾಪ ಮಾಡಿದ ಸುದೀಪ್ ಕ್ಲಾರಿಟಿ ತೆಗೆದುಕೊಂಡಿದ್ದಾರೆ. ಟಿಶ್ಯು ಪೇಪರ್ ಹೊರ ತರುವಾಗ ಉದಯ್ ಬೇಡ ಅಂತ ಹೇಳುತ್ತಾರೆ. ಕಂಟೆಸ್ಟೆಂಟ್ ಮೇಲೆ ನೀರು ಹಾಕುವಾಗ ಮೈಕ್ ಹಾಳಾಗುತ್ತೆ ಅಂತ ಕೆಲವರು ಹೇಳುತ್ತಾರೆ. ಆದರೂ ಗಮನಿಸಲಿಲ್ಲ. ಆ ಸಮಯದಲ್ಲಿ ನಿಮ್ಮ ಬಾಯಿಂದ ಬಂದ ಮಾತು ಏನಿತ್ತು ಗೊತ್ತಾ, ನನ್ನ ಮೈಕ್ ಚೇಂಜ್ ಮಾಡಿದ್ದಾರೆ ನಿಮ್ಮ ಮೈಕ್ ಚೇಂಜ್ ಮಾಡುತ್ತಾರೆ ಬಿಡಿ. ಬೇರೆ ಏನು ಕೆಲಸ ಇರುತ್ತೆ ಬಿಗ್ ಬಾಸ್‌ಗೆ ಎಂಬ ಅರ್ಥದಲ್ಲಿ ಹೇಳಿದ್ದೀರಿ ಎಂದಾಗ ಜಯಶ್ರೀ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಕಣ್ಣಿಗೆ ಸ್ಪ್ರೇ ಮಾಡುವಾಗ ಅದು ಡೇಂಜರ್ ಎಂದು ರಾಕೇಶ್ ಹೇಳಿದಾಗಲೂ ನಂದಿನಿ ಕಣ್ಣಿಗೆ ಸ್ಪ್ರೇ ಮಾಡಿದ್ದೀರಿ ಎಂದು ಸುದೀಪ್ ಜಯಶ್ರೀಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಚೈತ್ರಾಳ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ?

ಚೈತ್ರಾಳ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ?

ತಪ್ಪು ಎಂದು ಬಂದಾಗ ಕ್ಷಮೆ ಕೇಳಿದರೆ ಜಗಳ ಮುಂದುವರೆಯಲ್ಲ. ಆದರೆ ಕ್ಷಮೆ ಕೇಳುವುದರಲ್ಲಿ ಪ್ರಾಮಾಣಿಕತೆ ತುಂಬಾ ಮುಖ್ಯವಾಗುತ್ತದೆ. ಸುದೀಪ್, ಮನೆ ಮಂದಿ ಕ್ಷಮೆ ಕೇಳುವುದರಲ್ಲಿ ಪ್ರಾಮಾಣಿಕತೆ ಇತ್ತಾ ಎಂಬ ಪ್ರಶ್ನೆ ಮಾಡಿದರು. ಸಾನ್ಯಾ ಹಾಗೂ ನಂದಿನಿ ಇಬ್ಬರು ಕೂಡ ಜಯಶ್ರೀ ವಿಚಾರವಾಗಿಯೇ ಮಾತನಾಡಿದರು. ಖಂಡಿತ ಇಲ್ಲ ಸರ್. ಕ್ಷಮೆ ಕೇಳಿದರೆ ಆ ಮೂಮೆಂಟ್‌ಗೆ ಜಗಳ ಎಂಡ್ ಆಗುತ್ತೆ ಎಂಬಂತೆ ಕ್ಷಮೆ ಕೇಳಿದ್ದುಂಟು. ಆ ಕ್ಷಣಕ್ಕೆ ಅದು ಮುಗಿದು ಹೋಗಲಿ. ಮೀನ್ ಮಾಡಿಲ್ಲ ಎಂದಿದ್ದಾರೆ. ಈ ಕ್ಷಮೆ ಬಗ್ಗೆ ಜಯಶ್ರೀ ಬಳಿಯೂ ಸುದೀಪ್ ಸ್ಪಷ್ಟನೆ ಕೇಳಿದ್ದಾರೆ. ಇದಕ್ಕೆ ಸುದೀಪ್ ಉದಾಹರಣೆ ಕೊಟ್ಟು ಬುದ್ದಿ ಮಾತು ಹೇಳಿದ್ದಾರೆ. ಯಾರಾದರೂ ಬುದ್ದಿ ಹೇಳಿದರೆ ಅದಕ್ಕೆ ತಿರುಗಿ ಉತ್ತರ ನೀಡುತ್ತೀರಿ. ಚೈತ್ರಾ ಅವರಿಗೆ ಕೇಳುತ್ತೀರಿ ನೀವೂ ಲಿಪ್ ಸ್ಟಿಕ್ ತಂದಿಲ್ವಾ ಅಂತ ಹೇಳಿ ಓಲೆ ತರುತ್ತೀರಿ. ನೀವೂ ನಿಮ್ಮ ತಪ್ಪನ್ನು ಹೇಳಿದಾಗ ಅವರು ಮಾಡಿದಾರೆ ನಾನು ಮಾಡಿದ್ದೀನಿ ಎಂದು ರಕ್ಷಣೆ ಮಾಡಿಕೊಳ್ಳುತ್ತೀರಿ ಎಂದಿದ್ದಾರೆ.

ಚೈತ್ರಾ ಕಣ್ಣೀರು ಹಾಕಿದ್ದೇಕೆ?

ಚೈತ್ರಾ ಕಣ್ಣೀರು ಹಾಕಿದ್ದೇಕೆ?

ಸುದೀಪ್ ಇಷ್ಟೆಲ್ಲಾ ಹೇಳಿದಾಗ ಜಯಶ್ರೀ ಕಣ್ಣಲ್ಲಿ ಕಣ್ಣೀರು ಬಂದಿದೆ. ನನಗೆ ಈ ಬಗ್ಗೆ ಗೊತ್ತಾಗಲಿಲ್ಲ. ಆದರೆ ನಿನ್ನೆ ಯೋಚನೆ ಮಾಡಿದಾಗ ಎಷ್ಟು ತಪ್ಪು ಮಾಡಿದೆ ಎಂಬ ಅರಿವಾಗಿದೆ. ಕೆಲವೊಂದು ನಡವಳಿಕೆಯನ್ನು ನಾನು ಬದಲಾಯಿಸಿಕೊಳ್ಳಬೇಕು ಎಂದು ಕಣ್ಣೀರು ಹಾಕಿದ್ದಾರೆ.

More from Filmibeat

English summary
Bigg Boss Kannada OTT August 28th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X