ಬಿಗ್ ಬಾಸ್‌ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!

ಬಿಗ್‌ಬಾಸ್ ಕನ್ನಡ ಓಟಿಟಿ ಗ್ರ್ಯಾಂಡ್ ಆಗಿ ಆರಂಭ ಆಗಿದೆ. 16 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ತಮ್ಮ ಆಟ ಶುರು ಮಾಡಿದ್ದಾರೆ. ಅದರಲ್ಲೂ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದ ಮೊದಲೆರಡು ಸ್ಪರ್ಧಿಗಳ ಮೇಲೆ ವೀಕ್ಷಕರಲ್ಲಿ ಅಸಮಧಾನವಿದೆ.

ಈ ಮಧ್ಯೆನೇ ನಂಬರ್ ಗುರೂಜಿ ಆರ್ಯವರ್ಧನ್ ಹಾಗೂ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಸೋನು ಶ್ರೀನಿವಾಸ್ ಗೌಡ ತಮ್ಮದೇ ಸ್ಟೈಲ್‌ನಲ್ಲಿ ಆಟ ಆರಂಭಿಸಿದ್ದಾರೆ. ಆರ್ಯವರ್ಧನ್ ತಮ್ಮ ಗೆಟಪ್ ಬದಲಾಯಿಸಿಕೊಂಡಿದ್ದಾರೆ. ಇತ್ತ ಸೋನು ಶ್ರೀನಿವಾಸ್ ಗೌಡ ರೊಚ್ಚಿಗೇಳುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಓಟಿಟಿಯ ಮೊದಲ ಸೀಸನ್ ಸಿಕ್ಕಾಪಟ್ಟೆ ರಗಡ್ ಆಗಿದೆ. ಫೈಟ್, ಟಾಂಗ್, ಮೈಂಡ್‌ ಗೇಮ್, ಎಮೋಷನ್ಸ್ ಎಲ್ಲವೂ ಪ್ಲೇ ಆಗುತ್ತಿದೆ. ಅದರಲ್ಲೂ ಸೋನು ಶ್ರೀನಿವಾಸ್ ಗೌಡ ಮೇಲೆ ವೀಕ್ಷಕರು ಕಣ್ಣಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದ ಸೋನು ಬಿಗ್ ಬಾಸ್ ಮನೆಯಲ್ಲೂ ಟ್ರೋಲ್ ಆಗುತ್ತಿದ್ದಾರೆ.

ಬಿಗ್‌ಬಾಸ್‌ನಲ್ಲಿ ಸೋನು ಗೌಡ ಗರಂ

ಬಿಗ್‌ಬಾಸ್‌ನಲ್ಲಿ ಸೋನು ಗೌಡ ಗರಂ

ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಎಷ್ಟು ಫೇಮಸ್ ಆಗಿದ್ದಾರೋ, ಅಷ್ಟೇ ಟ್ರೋಲ್ ಕೂಡ ಆಗಿದ್ದಾರೆ. ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯೊಳಗೆ ಪ್ರವೇಶ್ ಪಡೆಯುವುದಕ್ಕೆ ಇದೂ ಒಂದು ಕಾರಣ. ಈಗ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡುತ್ತಿದ್ದಂತೆ ಸೋನು ಗೌಡ ಫೈಟ್ ಶುರುವಾಗಿದೆ. ಮನೆಯೊಳಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಆರ್ಯವರ್ಧನ್ ಮೇಲೆ ಎರಡನೆಯವರಾಗಿ ಎಂಟ್ರಿ ಕೊಟ್ಟಿದ್ದ ಸೋನು ಗೌಡ ತಿರುಗಿಬಿದ್ದಿದ್ದಾರೆ. ಅದೂ ಒಂದು ಮೊಟ್ಟೆ ವಿಚಾರಕ್ಕೆ ಅನ್ನೋದು ವಿಶೇಷ.

ಸೋನು ಸಿಟ್ಟಿಗೆ ಆರ್ಯವರ್ಧನ್ ಸೈಲೆಂಟ್

ಸೋನು ಸಿಟ್ಟಿಗೆ ಆರ್ಯವರ್ಧನ್ ಸೈಲೆಂಟ್

ಸೋನು ಶ್ರೀನಿವಾಸ್ ಗೌಡ ಕೇವಲ ಒಂದು ಮೊಟ್ಟೆ ವಿಚಾರಕ್ಕೆ ಗಲಾಟೆ ಎಬ್ಬಿಸಿದ್ದಾರೆ. ಅದೂ ಸೋನುಗೌಡ ತಿರುಗಿಬಿದ್ದಿರೋದು ಆರ್ಯವರ್ಧನ್ ಗುರೂಜಿ ವಿರುದ್ಧ. "ನೀವು ಹೇಗೆ ನನ್ನೊಂದಿಗೆ ಚೆನ್ನಾಗಿದ್ದು ಬೇರೆಯವರೊಂದಿಗೆ ತಲೆ ಕುಣಿಸಿದ್ರಿ. ಈಗ ನಾನು ಹೇಳಿದಾಗಲೂ ತಲೆ ಕುಣಿಸಿಬೇಕು ನೀವು. ಗುರೂಜಿ ಯಾರ ಮಾತು ಕೇಳುವುದಕ್ಕೆ ಬಂದಿಲ್ಲ. ಅದನ್ನು ಹೇಳಬಹುದಿತ್ತು. ಬಿಡ್ರಿ ಹೆಣ್ಣು ಮಗಳು ಮಾಡಿಕೊಂಡು ತಿನ್ನೋದ್ರಲ್ಲಿ ಏನಿದೆ ಅಂತ ಹೇಳಬಹುದಿತ್ತು. ಒಂದು ದಿನಕ್ಕೆ 30ಕ್ಕಿಂತ ಹೆಚ್ಚು ಮೊಟ್ಟೆ ಆಗಿತ್ತು." ಎಂದು ಆರ್ಯವರ್ಧನ್ ಗುರೂಜಿ ವಿರುದ್ಧ ತಿರುಗಿಬಿದ್ದಿದ್ದಾರೆ.

ಒಂದು ಮೊಟ್ಟೆ ಕೊಟ್ಟಿಲ್ಲ ಎಂದ ಸೋನು!

ಒಂದು ಮೊಟ್ಟೆ ಕೊಟ್ಟಿಲ್ಲ ಎಂದ ಸೋನು!

ಮೊಟ್ಟೆ ಬಗ್ಗೆ ಖ್ಯಾತೆ ತೆಗೆದ ಸೋನು ಶ್ರೀನಿವಾಸ್ ಗೌಡ ಸಮಾಧಾನ ಪಡಿಸೋಕೆ ಚೈತ್ರ ಹಳ್ಳಿಕೇರಿ ಮುಂದಾಗಿದ್ದರು. ಆದರೆ, ಸೋನು ಶ್ರೀನಿವಾಸ್ ಗೌಡ ನಿಲ್ಲೋ ಹಾಗೇ ಕಾಣಿಸಲೇ ಇಲ್ಲ. ಸೋನುಗೆ ಜಯಶ್ರೀ ಆರಾಧ್ಯ ಕೂಡ ಸಾಥ್ ನೀಡಿದ್ದಕ್ಕೆ ಮತ್ತಷ್ಟು ಪವರ್ ಬಂದಂತಾಗಿತ್ತು. ಚೈತ್ರ ಹಳ್ಳಿಕೇರಿ ಮೊಟ್ಟೆ ಟ್ರೇ ತೋರಿಸಿ, ಇನ್ನೂ ಎನ್ನುತ್ತಿದ್ದಂತೆ. " ಟ್ರೇ ಇದೆ. ಒಂದು ಮೊಟ್ಟೆ ಕೊಟ್ಟಿದ್ದರೆ ಏನಾಗುತ್ತಿತ್ತು. ಇಲ್ಲಿ ಒಬ್ಬೊಬ್ಬರಿಗೆ ಒಂದು ರೀತಿ ಬೇಧ-ಭಾವನಾ? ನಾವು ಬಂದಾಗಿನಿಂದನೂ ನೋಡುತ್ತಿದ್ದೇವೆ. ಯಾರಿಗೂ ಗೊತ್ತಾಗಿಲ್ಲ ಅಂದ್ರೆ, ಬಿಗ್ ಬಾಸ್‌ಗೆ ಗೊತ್ತಾಗುತ್ತೆ." ಎಂದು ಸೋನು ಗೌಡ ಕಿಡಿಕಾರಿದ್ದಾರೆ.

ತಂಡಾ ಹೊಡೆದ ಆರ್ಯವರ್ಧನ್

ತಂಡಾ ಹೊಡೆದ ಆರ್ಯವರ್ಧನ್

ಮೊಟ್ಟೆ ವಿಚಾರಕ್ಕೆ ಸೋನು ಶ್ರೀನಿವಾಸ್ ಗೌಡ ತಗಾದೆ ತೆಗೆಯುತ್ತಿದ್ದಂತೆ ಆರ್ಯವರ್ಧನ್ ಗುರೂಜಿ ಪುಲ್ ಸೈಲೆಂಟ್ ಆಗಿದ್ದರು. ಸೋನು ಮಾಡಿದ ಆರೋಪಗಳಿಗೆ ಆರ್ಯವರ್ಧನ್ ತಪ್ಪೊಪ್ಪಿಕೊಂಡ ಹಾಕಿತ್ತು. ಆರ್ಯವರ್ಧನ್ ಸಮಾಧಾನ ಮಾಡುವುದಕ್ಕೆ ಮುಂದಾಗಿದ್ದರೂ, ಸೋನು ಗೌಡ ಕೇಳುವ ತಾಳ್ಮೆ ಇರಲಿಲ್ಲ. ಸದ್ಯ ಮೊಟ್ಟೆ ವಿಚಾರಕ್ಕೆ ಸೋನು ಗೌಡ ಗದ್ದಲ ಎಬ್ಬಿಸಿದ್ದರೆ. ಅತ್ತ ಜಯಶ್ರೀ ಆರಾಧ್ಯ ಟಾಸ್ಕ್ ವಿಚಾರಕ್ಕೆ ತಿರುಗಿಬಿದ್ದಾರೆ.

ಟಾಸ್ಕ್ ವಿಚಾರಕ್ಕೆ ಲೋಕೇಶ್-ಜಯಶ್ರೀ ನಡುವ ವಾಗ್ಯದ್ಧ

ಟಾಸ್ಕ್ ವಿಚಾರಕ್ಕೆ ಲೋಕೇಶ್-ಜಯಶ್ರೀ ನಡುವ ವಾಗ್ಯದ್ಧ

ಜಯಶ್ರೀ ಆರಾಧ್ಯ ಹಾಗೂ ಲೋಕೇಶ್ ನಡುವೆ ವಾಗ್ಯುದ್ಧ ಶುರುವಾಗಿದೆ. 'ಜಿಗಿ ದಂಡ' ಟಾಸ್ಕ್ ವೇಳೆ ಎದುರಾಳಿಗಳನ್ನು ಗಮನ ಬೇರೆಡೆಗೆ ಸೆಳೆಯಲು ಜಯಶ್ರೀ ಆರಾಧ್ಯ ನೀರನ್ನು ಬಳಸಿದ್ದರು. ಇದು ಮಾಡಿದ್ದು ತಪ್ಪು ಎಂದಿದ್ದರು ಲೋಕೇಶ್. ಈ ವಿಚಾರಕ್ಕೆ ಜಯಶ್ರೀ ತಿರುಗಿಬಿದ್ದಿದ್ದಾರೆ. ಟಾಸ್ಕ್ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಿದ್ದಾರೆ.

More from Filmibeat

English summary
Bigg Boss Kannada OTT: Sonu Gowda Egg Fight Infornt Of Aryavardhan Guruji And Chaitra Hallikeri. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X