Bigg Boss Kannada OTT: ಜೈಲಿಗೆ ಹೋಗಿದ್ದಕ್ಕೆ ಬಿಗ್ ಬಾಸ್‌ಗೆ ಅವಾಜ್ ಹಾಕಿದ ಸೋನು ಗೌಡ?

ಬಿಗ್ ಬಾಸ್ ಮನೆಯಲ್ಲಿ ಕಳಪೆ ಪ್ರದರ್ಶನ ನೀಡಿದವರಿಗೆ ಜೈಲಿಗೆ ಹಾಕುತ್ತಾರೆ. ಅಟ್ ದಿ ಸೇಮ್ ಟೈಮ್ ಬೆಸ್ಟ್ ಪರ್ಫಾಮರ್ ನನ್ನು ಗುರುತಿಸುತ್ತಾರೆ. ಮನೆ ಮಂದಿಯೆಲ್ಲಾ ಸೇರಿಕೊಂಡು ಯಾರು ಕಳಪೆ ಪ್ರದರ್ಶನ ನೀಡಿದವರು ಎಂದು ಹೇಳಬೇಕು. ಹೆಚ್ಚು ವೋಟ್ ಬಂದವರನ್ನು ಜೈಲಿಗೆ ಹಾಕಲಾಗುತ್ತದೆ. ಕಳೆದ ವಾರ ಜಯಶ್ರೀ ಕಳಪೆ ಪ್ರದರ್ಶನ ನೀಡಿದ್ದರು. ಹಾಗಾಗಿ ಜೈಲಿನಲ್ಲಿ ಇದ್ದರು. ಆದರೆ ಈ ವಾರ ಜಯಶ್ರೀ ಆ ಕಳಂಕವನ್ನು ಬ್ರೇಕ್ ಮಾಡಿದ್ದಾಳೆ. ಬೆಸ್ಟ್ ಪರ್ಫಾಮರ್ ಎಂಬ ಬಿರುದನ್ನು ಪಡೆದಿದ್ದಾರೆ.

ಆದರೆ ಈ ವಾರದ ಕಳಪೆಯಾಗಿ ಸೋನುಗೌಡ ಜೈಲುಪಾಲಾಗಿದ್ದಾರೆ. ಇಷ್ಟು ದಿನ ಆರಾಮವಾಗಿ ಇದ್ದ ಸೋನು, ತಾನು ಯಾವತ್ತಿಗೂ ಕಳಪೆ ಪ್ರದರ್ಶನದ ಬೋರ್ಡ್ ಹಿಡಿಯುತ್ತೀನಿ ಎಂದು ಭಾವಿಸಿರಲಿಲ್ಲ ಎನಿಸುತ್ತದೆ. ಅನಿರೀಕ್ಷಿತವಾಗಿ ಸಿಕ್ಕ ಉಡುಗೊರೆಯನ್ನು ಒಪ್ಪಿಕೊಳ್ಳುವುದಕ್ಕೆ ಸೋನು ಪಟ್ಟ ಪಾಡು ಅಷ್ಟಿಷ್ಟಲ್ಲ.

ಸೋನುಗೆ ಕಳಪೆ ಬಿರುದು

ಸೋನುಗೆ ಕಳಪೆ ಬಿರುದು

ಬಿಗ್ ಬಾಸ್ ಮನೆಯಲ್ಲಿ ಗೆಲುವು ಸಾಧಿಸಬೇಕು ಎಂದರೆ ಎಲ್ಲದರಲ್ಲೂ ಆಕ್ಟಿವ್ ಆಗಿರಬೇಕು. ಮನೆ ಸದಸ್ಯರ ಜೊತೆಗೆ ಬಾಂಧವ್ಯ ಚೆನ್ನಾಗಿರಬೇಕು, ಮನೆ ಕೆಲಸವನ್ನು ಮಾಡಬೇಕು, ನೋಡುಗರಿಗೆ ಎಂಟರ್ಟೈನ್ ಮಾಡಬೇಕು. ತನ್ನಲ್ಲಿರುವ ಕಲೆಯನ್ನು ಪ್ರದರ್ಶನ ಮಾಡಬೇಕು. ಇಲ್ಲವಾದರೆ ನಾಮಿನೇಟ್ ಆಗುವ ಸಂದರ್ಭದಲ್ಲಿಇದೆಲ್ಲವೂ ಮ್ಯಾಟರ್ ಆಗುತ್ತದೆ. ಮನೆಯಿಂದ ಹೊರ ಬರಬೇಕಾಗುತ್ತದೆ. ಇದೀಗ ಮನೆಯ ಕೆಲಸ ಮಾಡಲು ಸೋಮಾರಿತನ ಪ್ರದರ್ಶಿಸುವ ಸೋನುಗೆ ಕಳಪೆ ಪ್ರದರ್ಶನ ಸಿಕ್ಕಿದೆ.

ರಾಕಿ ಮೇಲೆ ಸೋನು ಕೆಂಡಾಮಂಡಲ

ರಾಕಿ ಮೇಲೆ ಸೋನು ಕೆಂಡಾಮಂಡಲ

ಈ ವಾರದ ಕಳಪೆ ಪ್ರದರ್ಶನದಲ್ಲಿ ಸೋನು ಜೈಲು ಪಾಲಾಗಿದ್ದೆ ತಡ, ಜೈಲಿನ ಒಳಗೆ ಹೋಗಿ ಗಳಗಳನೆ ಕಣ್ಣೀರು ಸುರಿಸಿದ್ದಾಳೆ. ಸೋನು ಜೈಲಿಗೆ ಹೋಗುವುದಕ್ಕೆ ರಾಕೇಶ್ ಕಾರಣನಾಗಿದ್ದಾನೆ. ಹಾಗಂತ ರಾಕೇಶ್ ಒಬ್ಬನ ಮಾತು ನಡೆಯುವುದಿಲ್ಲ. ಮನೆ ಮಂದಿಯ ಅಭಿಪ್ರಾಯದಿಂದ ಯಾರಿಗೆ ಹೆಚ್ಚು ಅಂಕ ಬಂದಿರುತ್ತದೋ ಅಂಥವರಿಗೆ ಬಿಗ್ ಬಾಸ್ ಶಿಕ್ಷೆ ನೀಡುತ್ತದೆ. ಆದರೆ ರಾಕೇಶ್ ಕೂಡ ಕಳಪೆ ಎಂದುಬಿಟ್ಟ ಅನ್ನೋ ಕಾರಣಕ್ಕೆ ಸೋನುಗೆ ತೀರಾ ಹರ್ಟ್ ಆಗಿದೆ.

ಇನ್ನಾದರೂ ಸರಿಯಾಗುತ್ತಾಳಾ ಸೋನು?

ಇನ್ನಾದರೂ ಸರಿಯಾಗುತ್ತಾಳಾ ಸೋನು?

ಬಿಗ್ ಬಾಸ್ ಮನೆಯೊಳಗೆ ಮನೆ ಕೆಲಸದ ವಿಚಾರದಲ್ಲಿ ದೊಡ್ಡ ಸೋಮಾರಿಗಳು ಎಂದರೆ ಅದು ಸೋನು, ಚೈತ್ರಾ ಮತ್ತು ಜಯಶ್ರೀ. ಮೂರು ಜನ ಮಾತನಾಡುತ್ತಾ ಕುಳಿತು ಬಿಟ್ಟರೆ ಮುಗಿಯಿತು, ಯಾರೇ ಕೆಲಸ ಮಾಡುತ್ತಿದ್ದರು ಮನಸ್ಸು ಕರಗಲ್ಲ. ಮಾಡಬೇಕು ಎಂದು ಎನಿಸುವುದಿಲ್ಲ. ಮೊನ್ನೆಯಷ್ಟೇ ಇದೇ ವಿಚಾರಕ್ಕೆ ಸೋನುಗೆ, ರಾಕೇಶ್ ಸಮಾಧಾನವಾಗಿ ಬುದ್ದಿ ಹೇಳಿಕೊಟ್ಟಿದ್ದರು. ಮನೆ ಕೆಲಸ ಮಾಡಲು ಉರಿದುಂಬಿಸಿದ್ದರು. ಆದರೆ ಸೋನುದು ಒಂದೇ ಹಠ. ನಾವೇನು ಇಲ್ಲಿ ಕೆಲಸ ಮಾಡಲು ಬಂದಿದ್ದೀವಾ ಅಂತ. ಇದೇ ಕಾರಣಕ್ಕೆ ರಾಕೇಶ್ ಕಳಪೆ ಬಿರುದು ನೀಡಿದ್ದಾರೆ.

ಬಿಗ್ ಬಾಸ್ ಅನ್ನೇ ತರಾಟೆಗೆ ತೆಗೆದುಕೊಂಡ ಸೋನು

ಬಿಗ್ ಬಾಸ್ ಅನ್ನೇ ತರಾಟೆಗೆ ತೆಗೆದುಕೊಂಡ ಸೋನು

ಇಷ್ಟು ವರ್ಷ ನಡೆದುಕೊಂಡ ಬಂದ ಬಿಗ್ ಬಾಸ್ ಶೋನಲ್ಲಿ ಯಾವ ಸ್ಪರ್ಧಿಗಳು ಬಿಗ್ ಬಾಸ್ ಅನ್ನು ಬೈದಿದ್ದು ಇಲ್ಲ. ಆದರೆ ಸೋನು ಸಾಕಷ್ಟು ಬಾರಿ ಬಿಗ್ ಬಾಸ್ ಮೇಲೆ ಗರಂ ಆಗಿದ್ದಾಳೆ. ಇದೀಗ ಕಳಪೆ ಬೋರ್ಡ್ ಹೊತ್ತು, ಜೈಲು ಸೇರಿದ ಸೋನು, ಮತ್ತೆ ಗರಂ ಆಗಿದ್ದಾರೆ. ನಾವೇನು ಇಲ್ಲಿ ಮನೆ ಕೆಲಸ ಮಾಡಲು ಬಂದಿದ್ದೀವಾ..? ಯಾವನು ಹೇಳಿದ್ದು. ಇವತ್ತು ಬುದ್ದಿ ಕಲಿತಂತೆ ಆಯ್ತು. ನಂಬಿದವರೆ ದ್ರೋಹ ಮಾಡಿದರು. ಸರಿಯಾಗಿ ಆಯಿತು ಬಿಡು ಎಂದು ಆಕ್ರೋಶ ಹೊರ ಹಾಕಿದ್ದಾಳೆ.

More from Filmibeat

English summary
Bigg Boss Kannada OTT Sonu Gowda Scold Bigg Boss In Jail. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X