For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಸಾನ್ಯ ಒಳ ಉಡುಪಿನ ಬಗ್ಗೆ ಉದಯ್ ಮಾತಾಡಿದ್ದು ತಪ್ಪು ಅನ್ನಿಸ್ತಾ ?

  |

  ಸ್ನೇಹ ಎಂದರೇನೆ ಅಲ್ಲೊಂದು ನಂಬಿಕೆ ಇರುತ್ತೆ. ಅಥವಾ ಸಲಿಗೆ ಇರುತ್ತೆ. ಮೊದ ಮೊದಲಿಗೆ ಈ ನಂಬಿಕೆ ಮತ್ತು ಸಲಿಗೆ ಎರಡು ಉದಯ್ ಹಾಗೂ ಸಾನ್ಯ ನಡುವೆ ಇತ್ತು. ಆದರೆ ಸಾನ್ಯಾ ಕೊಂಚ ಗ್ಯಾಪ್ ಮೆಂಟೈನ್ ಮಾಡಿದ ಮೇಲೆ, ರೂಪೇಶ್‌ಗೆ ಹತ್ತಿರವಾದ ಮೇಲೆ ಉದಯ್ ನಡವಳಿಕೆಯೇ ಚೆಂಜ್ ಆಗಿದೆ. ನಂಬಿಕೆಯಿಂದ, ಸಲಿಗೆಯಿಂದ ತೋರಿಸಿದ ವಸ್ತುವಿನ ಬಗ್ಗೆ ಚೈತ್ರಾ ಬಳಿ ಅಪಹಾಸ್ಯ ಮಾಡಿದ್ದಾನೆ. ಇದು ಚೈತ್ರಾಗೆ ಸ್ವಲ್ಪ ಮುಜುಗರ ತಂದಿದೆ. ಅದಕ್ಕೆ ಉದಯ್ ನಿಂದ ಸ್ವಲ್ಪ ಡಿಸ್ಟೆನ್ಸ್ ಮೆಂಟೈನ್ ಮಾಡಿದ್ದಾಳೆ.

  ಆದರೆ ಉದಯ್ ಆ ಬಗೆಗಿನ ನಡವಳಿಕೆಯನ್ನೇ ಕಡಿಮೆ ಮಾಡಿಕೊಳ್ಳುತ್ತಿಲ್ಲ. ಯಾವಾಗಲೂ ಬೇರೆಯವರ ಬಗ್ಗೆ ಮಾತನಾಡುತ್ತಲೇ ಇರುತ್ತಾನೆ. ಅದಕ್ಕೆಂದೇ ಮನೆಯವರೆಲ್ಲಾ ಸೇರಿ ಹೊಸ ಹೆಸರನ್ನೇ ಇಟ್ಟಿದ್ದಾರೆ. ಜೊತೆಗೆ ಎಲ್ಲರೂ ಅವೈಡ್ ಕೂಡ ಮಾಡುತ್ತಿದ್ದಾರೆ. ಇತ್ತೇಚೆಗೆ ಎಲ್ಲಾ ವಿಚಾರ ಸಾನ್ಯಾ ಹಾಗೂ ರೂಪೇಶ್‌ಗೆ ಗೊತ್ತಾಗಿದೆ. ಆದರೆ ಸುದೀಪ್ ಈ ಎಲ್ಲಾ ತಪ್ಪುಗಳಿಗೆ ವೇದಿಕೆ ಮೇಲೆಯೇ ಸಖತ್ ಪಶ್ಚಾತ್ತಾಪ ಆಗುವಂತೆ ಮಾಡಿದ್ದಾರೆ.

  ಪೋಸ್ಟ್ ಮ್ಯಾನ್ ಯಾರು ಗೊತ್ತಾ?

  ಪೋಸ್ಟ್ ಮ್ಯಾನ್ ಯಾರು ಗೊತ್ತಾ?

  ವಾರದ ಕಥೆ ಕಿಚ್ಚನ ಜೊತೆ ವೇದಿಕೆಯಲ್ಲಿ ಉದಯ್‌ನನ್ನು ಮಾತಾಡಿಸಿದಾಗ ಒಂದಷ್ಟು ವಿಚಾರಗಳು ಹೊರಗೆ ಬಂದಿದೆ. ಕಿಚ್ಚ ಸುದೀಪ್ ಉದಯ್ ಹತ್ತಿರ ಕೇಳಿದ್ದಾರೆ. ಈ ಮನೆಯಲ್ಲಿ ನಿಮಗೊಂದು ಅಡ್ಡ ಹೆಸರಿದೆ ಗೊತ್ತಾ ಎಂದಾಗ ಉದಯ್ ಇಲ್ಲ ಅಂತಾರೆ. ಯಾರಿಗಾದರೂ ಗೊತ್ತಿದ್ದರೆ ಹೇಳಿ ಎಂದಾಗ ಆರ್ಯವರ್ಧನ್ ನನಗೆ ಗೊತ್ತು ಎಂದಿದ್ದಾರೆ. ಪೋಸ್ಟ್ ಮ್ಯಾನ್ ಎಂದು ಅವರಿಗೆ ಹೆಸರಿದೆ. ಪೋಸ್ಟ್ ಮ್ಯಾನ್ ಕೆಲಸ ಮಾಡುತ್ತಾರೆ. ಅವರ ಬಾಯಿ ಸುಮ್ಮನೆ ಇರಲ್ಲ. ಅಲ್ಲಿ ಇಲ್ಲಿ ಹೇಳಿ ಬಿಡುತ್ತಾರೆ. ಜಗಳ ಆಡುವಾಗ ನನ್ನ ಬೇಡಿ ಹೋಗಿ ಎನ್ನುತ್ತಾರೆ. ಇದಕ್ಕೆ ಬೈಸಿಕೊಂಡು ಇದ್ದಾರೆ ಎಂದು ಹೇಳಿದ್ದಾರೆ.

  ಉದಯ್‌ಗೆ ಉತ್ತರ ಕೊಡಲು ಆಗಲೇ ಇಲ್ಲ

  ಉದಯ್‌ಗೆ ಉತ್ತರ ಕೊಡಲು ಆಗಲೇ ಇಲ್ಲ

  ಉದಯ್, ಸುದೀಪ್ ಈ ರೀತಿಯ ಪ್ರಶ್ನೆ ಕೇಳುತ್ತಾರೆ ಎಂದು ಭಾವಿಸಿರಲಿಲ್ಲ. ಉದಯ್ ಅವರೇ ಚೈತ್ರಾ ಬಳಿ ಹೋಗಿ ಸಾನ್ಯಾ ಬಗ್ಗೆ ಅಂದು ಹೇಳಿದ ಮಾತು, ನಂದಿನಿ ಮತ್ತು ಜಶ್ವಂತ್ ಅವರ ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ್ದು, ತುಂಬಾ ಗೊಂದಲಕ್ಕೆ ಕಾರಣವಾಗಿದೆ. ಅದು ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಜನ ನೋಡಿದ್ದಾರೆ, ನಾವೂ ನೋಡಿದ್ದೀವಿ. ನೋಡಿದವರಿಗೆ ಒಂದು ಕ್ಲಾರಿಟಿ ಇದೆ. ಆದರೆ ಮನೆಯವರಿಗೆ ಇನ್ನು ಕ್ಲಾರಿಟಿ ಇಲ್ಲ. ಹೀಗಾಗಿ ಎಲ್ಲಿಂದ, ಯಾಕೆ ಸ್ಟಾರ್ಟ್ ಆಯ್ತು, ಹೇಗೆ ಎಂಡ್ ಆಯ್ತು, ಚೈತ್ರಾ ಅವರ ಬಳಿ ಹೋಗಿ ನೀವೂ ಹೇಳಿದ್ದೇನು ಅನ್ನೋದನ್ನು ಕ್ಲಿಯರ್ ಆಗಿ ಹೇಳಿ ಎಂದಿದ್ದಾರೆ. ಉದಯ್ ಕೊಂಚ ನಲುಗಿ ಹೋಗಿದ್ದಾನೆ.

  ಉದಯ್ ಬಾಯಿಂದ ಹೊರ ಬಂತು ಸತ್ಯ

  ಉದಯ್ ಬಾಯಿಂದ ಹೊರ ಬಂತು ಸತ್ಯ


  ಈ ಮಧ್ಯೆ ಉದಯ್ ಯಾವುದನ್ನು ಸರಿಯಾಗಿ ಹೇಳಲಿಲ್ಲ. ಹೇಳುವಾಗ ತಡಬಡಯಿಸಿದ್ದ. ಈ ನಡುವೆ ಸುದೀಪ್ ಸ್ವಲ್ಪ ಖಡಕ್ ಆಗಿಯೇ ಹೇಳಿದ್ದಾರೆ. ಆಗ ಉದಯ್ ಸತ್ಯ ಹೇಳಿದ್ದಾರೆ. ಗುರೂಜಿ ಹತ್ರ ನಾನು ಕಲರ್ ಕೇಳಿನೇ ಪ್ರತಿ ದಿನ ಬಟ್ಟೆ ಹಾಕುವುದು. ಒಂದು ದಿನ ನಾನು ಕಲರ್ ಕೇಳುವಾಗ ಸಾನ್ಯಾ ಕೂಡ ನನ್ನ ಪಕ್ಕದಲ್ಲಿ ಇದ್ರು. ಆಗ ನನ್ನನ್ನು ಕೇಳಿದ್ರು. ಆ ಕಲರ್‌ದು ಒಳ ಉಡುಪು ತೋರಿಸಿದರು. ಆಗ ನಾನು ಹೇಳಿದೆ, ಬೇಕಾದರೇ ಗುರೂಜಿ ಹತ್ರ ಹೋಗಿ ತೋರಿಸು ಅವರು ಖುಷಿ ಖುಷಿಯಾಗಿ ಒಪ್ಪಿಕೊಳ್ಳುತ್ತಾರೆ ಎಂದಿದ್ದೆ ಎಂದು ಉದಯ್ ಹೇಳಿದ್ದಾರೆ.

  ಕಿಚ್ಚನಿಂದ ಚೈತ್ರಾಗೆ ಭೇಷ್

  ಕಿಚ್ಚನಿಂದ ಚೈತ್ರಾಗೆ ಭೇಷ್


  ಇದೇ ವಿಚಾರವನ್ನು ಉದಯ್ ಚೈತ್ರಾ ಬಳಿ ಹೇಳಿದ್ದಾಗ ಚೈತ್ರಾ ಬೇಸರ ಮಾಡಿಕೊಂಡು ಉದಯ್ ಬಳಿ ಮಾತು ಬಿಟ್ಟಿದ್ದರು. ಇದೀಗ ಇದೇ ವಿಚಾರಕ್ಕೆ ಸುದೀಪ್ ಹೊಗಳಿದ್ದಾರೆ. ಒಂದು ಹೆಣ್ಣು ಮಗುವಿನ ಬಗ್ಗೆ ಆ ರೀತಿ ಮಾತಾಡಿದಾಗ ನಿಮ್ಮ ಗೌರವವನ್ನು ಹೆಚ್ಚಿಸಿದೆ ಎಂದು ಚೈತ್ರಾಗೆ ಹೊಗಳಿದ್ದಾರೆ.

  English summary
  Bigg Boss Kannada OTT August 28th Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X