BBK10: ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್.. 'ಬಿಗ್ ನ್ಯೂಸ್','ಅನ್‌ಸೀನ್‌ ಕಥೆಗಳು' ಏನೇನೋ ಇವೆ

ಬಿಗ್ ಬಾಸ್ ಮತ್ತೆ ಆರಂಭ ಆಗುತ್ತಿದೆ. ಈ ಬಾರಿ ನಡೆಯುತ್ತಿರೋದು 10ನೇ ಸೀಸನ್. ಪ್ರತಿಕ್ಷಣವೂ ಕುತೂಹಲ ಹಾಗೂ ರೋಮಾಂಚಕ ಕಂಟೆಂಟ್ ಅನ್ನು ಹೊತ್ತು ತರುವ ಬಿಗ್ ಬಾಸ್ ಇಂದು (ಅಕ್ಟೋಬರ್ 8) 6 ಗಂಟೆಯಿಂದ ಆರಂಭಗೊಂಡಿದೆ. ಪ್ರತಿದಿನ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆದರೆ, ಜಿಯೋ ಸಿನಿಮಾ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ 24 ಗಂಟೆನೂ ಲೈವ್ ಆಗಿ ನೋಡಬಹುದಾಗಿದೆ.

100 ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋದ ಪ್ರತಿ ಕ್ಷಣ ಜಿಯೋ ಸಿನಿಮಾದಲ್ಲಿ (Jio Cinema) 24 ಗಂಟೆ ಉಚಿತವಾಗಿ ನೋಡಬಹುದಾಗಿದೆ. ಇಷ್ಟೆ ಅಲ್ಲದೆ ವೀಕ್ಷಕರಿಗೆ ಮನರಂಜನೆ ನೀಡುವುದಕ್ಕೆ ಕೆಲವು ವಿಶೇಷ ಯೋಜನೆಗಳನ್ನೂ ಹಮ್ಮಿಕೊಳ್ಳಲಾಗಿದೆ. ಅವುಗಳು ಏನಂದರೆ?

BBK10 Jio Cinema Highlights

'ಬಿಗ್‌ ನ್ಯೂಸ್‌'

ಬಿಗ್ ಬಾಸ್ ಕನ್ನಡದ 10ನೇ ಸೀಸನ್‌ನ ಪ್ರಮುಖ ಘಟನೆಗಳನ್ನು ನ್ಯೂಸ್ ಬುಲೆಟಿನ್ ಮಾದರಿಯಲ್ಲಿ ವೀಕ್ಷಕರ ಮುಂದೆ ಇಡಲಾಗುತ್ತಿದೆ. ಈ ಮೂಲಕ ನ್ಯೂಸ್ ಬುಲೆಟಿನ್‌ಲ್ಲಿ ಬಿಗ್ ಬಾಸ್ ಮನೆಯೊಳಗೆ ನಡೆದ ಘಟನೆಗಳ ಪ್ರಮುಖ ಸಂಗತಿಗಳನ್ನು ನ್ಯೂಸ್ ಶೈಲಿಯಲ್ಲಿ ತಿಳಿದುಕೊಳ್ಳಬಹುದಾಗಿದೆ.

ಅನ್‌ಸೀನ್‌ ಕಥೆಗಳು

ಪ್ರತಿದಿನ ಪ್ರಸಾರ ಆಗುವ ಕೆಲವು ಆಯ್ದ ಘಟನೆಗಳನ್ನಷ್ಟೇ ಪ್ರಸಾರ ಮಾಡಲು ಸಾಧ್ಯವಾಗಿರುತ್ತೆ. ಕೆಲವು ಘಟನೆಗಳಿಗೆ ಕತ್ತರಿ ಹಾಕಲಾಗಿರುತ್ತೆ. ಇಂತಹ ನೋಡಿರದ ಘಟನೆಗಳನ್ನು ಜಿಯೋ ಸಿನಿಮಾದ ಮೂಲಕ 'ಅನ್‌ಸೀನ್ ಕಥೆ'ಗಳ ಮೂಲ ನೋಡಬಹುದಾಗಿದೆ.

ಲೈವ್ ಶಾರ್ಟ್ಸ್‌

ಬಿಗ್ ಬಾಸ್ ಮನೆಯೊಳಗೆ ನಡುವೆ ಪ್ರಮುಖ ಘಟನೆಗಳನ್ನು ಸಂಕ್ಷಿಪ್ತವಾಗಿ ತೋರಿಸುವುದೇ ಲೈವ್ ಶಾರ್ಟ್ಸ್. ಈ ಮೂಲಕ ಶೋ ಮಿಸ್ ಮಾಡಿಕೊಂಡಿವರಿಗೆ ಲೈವ್ ಶಾರ್ಟ್ಸ್ ಮೂಲಕ ರಿಕ್ಯಾಪ್ ನೋಡಬಹುದಾಗಿದೆ.

ಹೈಪ್ ಚಾಟ್‌

ಬಿಗ್ ಬಾಸ್ ನೋಡಿದ ಬಳಿಕ ವೀಕ್ಷಕರಿಗೆ ಏನಾದರೂ ಹೇಳಬೇಕು ಅನಿಸಿದರೆ, ಪ್ರತಿಕ್ರಿಯಿಸಬೇಕು ಅಂತ ಅನಿಸಿದರೆ, ಆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿದೆ. ಈ ಮೂಲಕ ವೀಕ್ಷಕರು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಬಹುದಾಗಿದೆ.

ವಿಡಿಯೊ ವಿಚಾರ

ಇಷ್ಟೇ ಅಲ್ಲದೆ ವೀಕ್ಷಕರಿಗೆ ಇನ್ನೊಂದು ವಿನೂತನ ಅವಕಾಶಗಳನ್ನು ಮಾಡಿಕೊಡಲಾಗಿದೆ. ಜಿಯೋ ಸಿನಿಮಾ 'ವಿಡಿಯೋ ವಿಚಾರ' ವೇದಿಕೆ ಮೂಲಕ ಜನರು ರಿಯಾಲಿಟಿ ಶೋ ಬಗ್ಗೆ, ಟಾಸ್ಕ್‌ ಬಗ್ಗೆ, ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿಡಿಯೋ ಮಾಡುವುದರ ಮೂಲಕ ಶೇರ್ ಮಾಡಬಹುದಾಗಿದೆ.

ಮೀಮ್‌ ದ ಮೊಮೆಂಟ್

ಬಿಗ್ ಬಾಸ್ ಮನೆಯೊಳಗಿನ ರೋಚಕ ಕ್ಷಣಗಳು ನಡೆಯುತ್ತಲೇ ಇರುತ್ತವೆ. ಈ ಘಟನೆಗಳನ್ನು ನೋಡಿದ ಬಳಿಕ ಮೀಮ್ಸ್ ಮಾಡಬೇಕು ಅಂದುಕೊಂಡವರಿಗೂ ಅವಕಾಶ ನೀಡಲಾಗಿದೆ. ಮೀಮ್‌ ದ ಮೊಮೆಂಟ್ ಮೂಲಕ ಅವಕಾಶ ನೀಡಲಾಗಿದೆ.

ವಾಚ್‌ ಆಂಡ್ ವಿನ್

ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ನೋಡುವುದರ ಜೊತೆಗೆ ಬಹುಮಾನ ಕೂಡ ಗೆಲ್ಲಬಹುದಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನ ಎಪಿಸೋಡ್ ನೋಡಿ, ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಬೇಕು. ಉತ್ತರ ನೀಡುವ ಪ್ರತಿಯೊಬ್ಬರಿಗೆ ಈ ಸುವರ್ಣ ಅವಕಾಶ ನೀಡಲಾಗುತ್ತೆ.

More from Filmibeat

English summary
Bigg Boss Kannada Season 10: Jio Cinema offering these highlights
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X