Bigg Boss OTT 3: ಪ್ರೈವೆಟ್ ಜೆಟ್‌ನಲ್ಲಿ ಪ್ರಯಾಣ ಮಾಡುವ ಈ ಬಿಗ್ ಬಾಸ್ ಸ್ಪರ್ಧಿ ಯಾರು ಗೊತ್ತೇ?

ರಿಯಾಲಿಟಿ ಶೋಗಳಲ್ಲಿ ಬಿಗ್‌ಬಾಸ್‌ಗೆ ಇರುವ ಕ್ರೇಜ್ ಬೇರೆ. ಒಮ್ಮೆ ರಿಯಾಲಿಟಿ ಶೋ ಆರಂಭ ಆಯ್ತು ಅಂದರೆ, ಟಿವಿ ಮುಂದೆ ಮಿಸ್ ಮಾಡದೇ ಹಾಜರಾಗುವ ಮಂದಿಗೇನು ಕಮ್ಮಿಯಿಲ್ಲ. ಇದೇ ಕ್ರೇಜ್ ಅನ್ನು ಗಮನದಲ್ಲಿಟ್ಟುಕೊಂಡು ಓಟಿಟಿಗಾಗಿಯೇ ಬಿಗ್ ಬಾಸ್ ಶೋ ಮಾಡುವುದಕ್ಕೆ ಮುಂದಾಗಿತ್ತು. ಹಿಂದಿ ಭಾಷೆಯಲ್ಲಿ ಮೊದಲಿಗೆ ಓಟಿಟಿ ಸೀಸನ್ ಶುರುವಾಗಿತ್ತು. ಬಳಿಕ ಕನ್ನಡದಲ್ಲೂ ಓಟಿಟಿ ಸೀಸನ್ ಆರಂಭ ಆಗಿತ್ತು.

ಸದ್ಯಕ್ಕೀಗ ಬಿಗ್‌ಬಾಸ್ ಓಟಿಟಿ ಸೀನಸ್ 3 (ಹಿಂದಿ) ಆರಂಭ ಆಗಿದೆ. ಈ ಸೀಸನ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳ ಅನಾವರಣ ಆಗಿದೆ. ಅದರಲ್ಲಿ ಗಮನ ಸೆಳೆಯುತ್ತಿರುವ ಸ್ಪರ್ಧಿ ಸನಾ ಸುಲ್ತಾನಾ. ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್ ಕಮ್ ನಟಿ ಸನಾ ಸುಲ್ತಾನಾ ಎಂಟ್ರಿ ಕೊಟ್ಟಿದ್ದು, ಆಕೆಯ ಬಗ್ಗೆ ಚರ್ಚೆಯಾಗುತ್ತಿದೆ. ಅಸಲಿಗೆ ಸನಾ ಸುಲ್ತಾನಾ ಯಾರು? ಈಕೆಯ ಹಿನ್ನೆಲೆಯೇನು? ಬಿಗ್ ಬಾಸ್ ಓಟಿಟಿ 3ಗೆ ಆಯ್ಕೆ ಆಗಿದ್ದೇಕೆ? ತಿಳಿಯಲು ಮುಂದೆ ಓದಿ.

Bigg Boss OTT 3 contestant Sana Sultana is trending who flies in private jet

ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಸನಾ ಸುಲ್ತಾನಾಗೆ ಕ್ವೀನ್ ಸುಲ್ತಾನಾ? ಅಂತಲೂ ಕರೆಯುತ್ತಾರೆ. 2014ರಲ್ಲಿ ಸಲಾ ಸುಲ್ತಾನಾ ಬ್ಲಾಗರ್ ಆಗಿ ತನ್ನ ವೃತ್ತಿ ಬದುಕನ್ನು ಆರಂಭಿಸಿದ್ದರು. ಆರಂಭದಲ್ಲಿ ಡಬ್‌ಸ್ಮ್ಯಾಶ್ ವಿಡಿಯೋ ಮಾಡುತ್ತಿದ್ದರು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಇಲ್ಲಿ ಜನಪ್ರಿಯತೆ ಗಳಿಸಿದ ಬಳಿಕ ಟಿಕ್ ಟಾಕ್‌ನಲ್ಲಿ ವಿಡಿಯೋ ಮಾಡಿ ಫೇಮಸ್ ಆದರು. ಆದರೆ, ಭಾರತದಲ್ಲಿ ಟಿಕ್ ಟಾಕ್ ಅನ್ನು ಬ್ಯಾನ್ ಮಾಡಲಾಗಿತ್ತು.

ಟಿಕ್ ಟಾಕ್ ಬ್ಯಾನ್ ಆಗುತ್ತಿದ್ದಂತೆ ಲಿಪ್ ಸಿಂಕ್ ವಿಡಿಯೋಗಳನ್ನು ಮಾಡುವುದಕ್ಕೆ ಶುರು ಮಾಡಿದ್ದರು. ತಕ್ಷಣವೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿತ್ತು. ಈ ಮೂಲಕ ದೊಡ್ಡ ಮಟ್ಟದಲ್ಲಿ ಫಾಲೋವರ್ಸ್ ಹುಟ್ಟಿಕೊಂಡರು. ಸನಾ ಸುಲ್ತಾನಾ ಜಾಹೀರಾತುಗಳಲ್ಲಿ ಮಾಡಲಿಂಗ್ ಕೂಡ ಮಾಡಿದ್ದಾರೆ. 2019ರಲ್ಲಿ 'ಯುಸಿ ಮಿಸ್ ಕ್ರಿಕೆಟ್' ಪಟ್ಟ ಗಿಟ್ಟಿಸಿಕೊಂಡ ಬಳಿಕ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನ ಬಿಲ್ ಬೋರ್ಡ್‌ನಲ್ಲಿ ಕಾಣಿಸಿಕೊಂಡರು.

ಹಾಗಂತ ಕೇವಲ ವಿಡಿಯೋ ಅಷ್ಟೇ ಅಲ್ಲ. ಹಿಂದಿ ಶಾರ್ಟ್ ಫಿಲ್ಮ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. 2016ರ 'ಲಾಸ್ಟ್ ಡ್ರೀಮ್'ನಲ್ಲಿ ಕಾಣಿಸಿಕೊಂಡಿದ್ದರು. ಹಾಗೇ 2019ರಲ್ಲಿ ಬಂದಿದ್ದ 'ಎವರ್‌ಲಾಸ್ಟಿಂಗ್ ಲವ್' ನಲ್ಲಿ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈಕೆಗೆ 6.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಜೋಷ್ ಆಪ್‌ನಲ್ಲಿ 25 ಮಿಲಿಯನ್ ಫಾಲೋವರ್ಸ್ ಹಾಗೂ ಫೇಸ್‌ಬುಕ್‌ನಲ್ಲಿ 4 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈಕೆಯೆ ಐಶಾರಾಮಿ ಜೀವನ ಅನಾವಣವಾಗಿದೆ. ಕೆಲವು ದಿನಗಳ ಹಿಂದಷ್ಟೇ ಪ್ರೈವೆಟ್ ಜೆಟ್‌ನಲ್ಲಿ ಓಡಾಡಿ ಸುದ್ದಿಯಾಗಿದ್ದರು.

Bigg Boss OTT 3 contestant Sana Sultana is trending who flies in private jet

ಸೋಶಿಯಲ್ ಮೀಡಿಯಾ ಫಾಲೋವರ್ಸ್‌ನಲ್ಲಿ ಸನಾ ಸುಲ್ತಾನಾ ಬಾಲಿವುಡ್‌ನ ಸ್ಟಾರ್‌ ಕಿಡ್‌ಗಳಿಗಿಂತ ಮುಂದಿದ್ದಾರೆ. ಶಾರುಖ್ ಖಾನ್ ಪುತ್ರಿ ಸನಾ ಖಾನ್, ಇಬ್ರಾಹಿಂ ಅಲಿ ಖಾನ್, ಬಾಬಿಲ್ ಖಾನ್, ಖುಷಿ ಕಪೂರ್ ಅವರಿಗಿಂತ ಸನಾ ಸುಲ್ತಾನಾಗೆ ಹೆಚ್ಚು ಫಾಲೋವರ್ಸ್ ಇದ್ದಾರೆ. ಹೀಗಾಗಿ ಬಿಗ್‌ಬಾಸ್ ಓಟಿಟಿ 3ರ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿ ಬಿಗ್‌ಬಾಸ್ ಓಟಿಟಿ 3ಯನ್ನು ಅನಿಲ್ ಕಪೂರ್ ನಿರೂಪಣೆ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಓಟಿಟಿ ಸೀಸನ್ 3 ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಸನಾ ಸುಲ್ತಾನಾ ಈ ರಿಯಾಲಿಟಿ ಶೋ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

More from Filmibeat

English summary
Social media influencer-turned-actress Sana Sultana is Bigg Boss OTT 3 contestant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X