ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಬಿಗ್ ಬಾಸ್ ಓಟಿಟಿ ಸ್ಪರ್ಧಿ ಅಕ್ಷತಾ ಕುಕಿ: ವರನ ಹಿನ್ನೆಲೆಯೇನು?

ಅಕ್ಷತಾ ಕುಕಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಜನಪ್ರಿಯರ ನಟಿ. ಇಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲೂ ಫೇಮಸ್. ಇಷ್ಟೆಲ್ಲಾ ಇದ್ದರೂ, ಕನ್ನಡದ ಬಿಗ್ ಬಾಸ್ ಓಟಿಟಿಯ ಮೊದಲ ಸೀಸನ್‌ಗೆ ಸ್ಪರ್ಧಿಯಾಗಿ ಪ್ರವೇಶ ಮಾಡಿದಾಗ ಅಕ್ಷತಾ ಕುಕಿ ಮತ್ತಷ್ಟು ಜನರ ಮನಸ್ಸಿನಾಳಕ್ಕೆ ಹೋಗಿದ್ದರು.

ಹೌದು, 2022ರಲ್ಲಿ ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ಪ್ರಸಾರ ಆಗಿತ್ತು. ಈ ವೇಳೆ ಸ್ಪರ್ಧಿಯಾಗಿ ಬೆಳಗಾವಿ ಮೂಲದ ಅಕ್ಷತಾ ಕುಕಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರು. ಮನೆಯಲ್ಲಿ ಇದ್ದಷ್ಟು ದಿನವೂ ಉತ್ತರ ಕರ್ನಾಟಕ ಶೈಲಿಯಲ್ಲೇ ಮಾತನಾಡಿ ಗಮನ ಸೆಳೆಸಿದ್ದರು.

Bigg Boss OTT Kannada Contestant Akshata Kuki Got Married With Avinash In Belgaum Photos Viral

ಬಿಗ್ ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಸೈಲೆಂಟಾಗಿದ್ದ ಅಕ್ಷತಾ ಕುಕಿ ದಿಢೀರನೇ ಸುದ್ದಿಯಾಗಿದ್ದರು. ಸಿನಿಮಾ, ಕಿರುತೆರೆ, ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರೋ ಅಕ್ಷತಾ ಕುಕಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ, ಅಕ್ಷತಾ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಕ್ಷತಾ ಕುಕಿ

ಬಿಗ್ ಬಾಸ್ ಓಟಿಟಿ ಕನ್ನಡದ ಸ್ಪರ್ಧಿ ಅಕ್ಷತಾ ಕುಕಿ ವೈವಾಹಿಕಿ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನಿಶ್ಚಿತಾರ್ಥದ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ನಿನ್ನೆ (ಮಾರ್ಚ್ 27) ಅಕ್ಷತಾ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಸಪ್ತಪದಿ ತುಳಿಸಿದ್ದಾರೆ.

Bigg Boss OTT Kannada Contestant Akshata Kuki Got Married With Avinash In Belgaum Photos Viral

ಅಕ್ಷತಾ ಕುಕಿ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರೊ ಅವಿನಾಶ್‌ ಅವರನ್ನು ವಿವಾಹವಾಗಿದ್ದಾರೆ. ಬೆಳಗಾವಿಯಲ್ಲಿ ಅಕ್ಷತಾ ಕುಕಿ ಹಾಗೂ ಅವಿನಾಶ್ ಅವರ ವಿವಾಹ ಜರುಗಿದ್ದು, ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಕ್ಷತಾ ಮದುವೆಗೆ ಅಭಿಮಾನಿಗಳು ಶುಭಕೋರಿದ್ದಾರೆ.

ವೈರಲ್ ಆಗಿತ್ತು ಎಂಗೇಜ್ಮೆಂಟ್ ಫೋಟೊ

ಫೆಬ್ರವರಿ 16ರಂದು ಅಕ್ಷತಾ ಕುಕಿ ತಮ್ಮ ನಿಶ್ಚಿತಾರ್ಥದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. " ನಿನ್ನ ಮೇಲಿರುವ ನನ್ನ ಪ್ರೀತಿ ಪಯಣದಂತೆ, ಯಾವಾಗಲೂ ಆರಂಭ ಆಗುತ್ತೆ.. ಕೊನೆಯಾಗುವುದೇ ಇಲ್ಲ" ಎಂದು ಬರೆದುಕೊಂಡಿದ್ದರು. ಇಲ್ಲಿಂದ ಇವರ ಮದುವೆ ಯಾವಾಗ ಅನ್ನೋ ಚರ್ಚೆ ಆರಂಭ ಆಗಿತ್ತು.

ಈಗ ಅವಿನಾಶ್ ಜೊತೆ ವಿವಾಹವಾದ ಬಳಿಕ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ನೆಟ್ಟಿಗರು ಅಕ್ಷತಾ ಕುಕಿ ಹಾಗೂ ಅವಿನಾಶ್‌ಗೆ ಮದುವೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಮಾಡಲ್ ಆಗಿ ವೃತ್ತಿ ಜೀವನ ಆರಂಭ

ಅಕ್ಷತಾ ಕುಕಿ ಬೆಳಗಾವಿ ಮೂಲದವರು. 2016ರಲ್ಲಿ ಅಕ್ಷತಾ ಕುಕಿ ಮಾಡಲ್ ಆಗಿ ವೃತ್ತಿ ಜೀವನವನ್ನು ಆರಂಭ ಮಾಡಿದ್ದರು. 2018ರಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಹ್ವಾನಿದ್ದರು. ಬಳಿಕ 2019ರಲ್ಲಿ ಅಕ್ಷತಾ ಕುಕಿ ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿಂದ ಅಕ್ಷತಾ ಸಿನಿಮಾರಂಗಕ್ಕೂ ಕಾಲಿಟ್ಟಿದ್ದರು. ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

2022ರಲ್ಲಿ ಬಿಗ್ ಬಾಸ್ ಕನ್ನಡ ಓಟಿಟಿಯ ಮೊದಲ ಸೀಸನ್‌ಗೆ ಎಂಟ್ರಿ ಕೊಟ್ಟಾಗ ಮತ್ತಷ್ಟು ಜನಪ್ರಿಯರಾದರು. ಹಲವು ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಆಕ್ಟಿವ್ ಆಗಿದ್ದ ಅಕ್ಷತಾ ಕುಕಿಗೆ ಫೈನಲ್ ಹಂತ ತಲುಪಲು ಸಾಧ್ಯವಾಗಿರಲಿಲ್ಲ. ಬಿಗ್ ಬಾಸ್ ಕನ್ನಡ ಓಟಿಟಿಯಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದರೆ, ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದರು.

More from Filmibeat

English summary
Bigg Boss OTT Kannada Contestant Akshata Kuki Got Married With Avinash In Belgaum Photos Viral, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X