ಸೂಪರ್‌ಸ್ಟಾರ್ ಅನಾಮಿಕಾಳಾಗಿ ಒಟಿಟಿಗೆ ಎಂಟ್ರಿ ಕೊಟ್ಟ ಎವರ್‌ಗ್ರೀನ್ ಬ್ಯೂಟಿ ಮಾಧುರಿ ದೀಕ್ಷಿತ್

ಕೊರೊನಾ ಭಾರತಕ್ಕೆ ಎಂಟ್ರಿ ಕೊಟ್ಟಲ್ಲಿಂದ ಒಟಿಟಿ ಜನರ ಮನರಂಜನೆಯ ಪ್ರಮುಖ ವೇದಿಕೆಯಾಗಿದೆ. ಉತ್ತರದಿಂದ ದಕ್ಷಿಣದವರೆಗೂ ಸ್ಟಾರ್‌ಗಳಿಂದ ಹಿಡಿದು ಸೂಪರ್‌ಸ್ಟಾರ್‌ಗಳೂ ಕೂಡ ಒಟಿಟಿ ಮೊರೆ ಹೋಗಿದ್ದಾರೆ. ಒಬ್ಬೊಬ್ಬರಾಗೇ ವೆಬ್‌ ಸಿರೀಸ್‌ ಕಡೆ ಮುಖ ಮಾಡುತ್ತಿದ್ದಾರೆ. ಈಗ ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ ಮಾಧುರಿ ದೀಕ್ಷಿತ್ ವೆಬ್ ಸಿರೀಸ್ ಮೂಲಕ ಒಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

ಸಿನಿಮಾಗಳಲ್ಲಿ ರಂಜಿಸಿದ್ದ ಮಾಧುರಿ ದೀಕ್ಷಿತ್ ಅಭಿಮಾನಿಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ವಿಶ್ವದ ಉದ್ದಗಲಕ್ಕೂ ಮಾಧುರಿ ದೀಕ್ಷಿತ್‌ಗೆ ಅಭಿಮಾನಿಗಳು ಇದ್ದಾರೆ. ಆದರೆ, ವಿವಾಹದ ಬಳಿಕ ಸಿನಿಮಾಗಳಿಂದ ದೂರವಿದ್ದರೂ, ಸಿನಿಮಾರಂಗದಿಂದ ದೂರವಿರಲಿಲ್ಲ. ಆಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸಿದ್ದು ಬಿಟ್ಟರೆ ಹೆಚ್ಚಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿರಲಿಲ್ಲ. ಈಗ ವೆಬ್ ಸಿರೀಸ್ ಮೂಲಕ ಒಟಿಟಿಗೆ ಅದ್ಧೂರಿಯಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಒಟಿಟಿಗೆ ಮಾಧುರಿ ದೀಕ್ಷಿತ್ ಅದ್ಧೂರಿ ಎಂಟ್ರಿ

ನೆಟ್‌ಫ್ಲಿಕ್ಸ್ ನಿರ್ಮಿಸುತ್ತಿರುವ ವೆಬ್‌ ಸಿರೀಸ್‌ನಲ್ಲಿ ಮಾಧುರಿ ದೀಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ. ಈ ವೆಬ್ ಸಿರೀಸ್ ಹೆಸರು 'ದಿ ಫೇಮ್ ಗೇಮ್'. ಮೊದಲು ಈ ವೆಬ್ ಸಿರೀಸ್‌ಗೆ ನೆಟ್‌ಫ್ಲಿಕ್ಸ್ 'ಫೈಂಡಿಂಗ್ ಅನಾಮಿಕಾ' ಎನ್ನುವ ಹೆಸರು ಇಟ್ಟಿತ್ತು. ಆದರೆ, ವೆಬ್ ಸಿರೀಸ್ ಬಿಡುಗಡೆ ವೇಳೆ ಟೈಟಲ್ ಬದಲಾವಣೆ ಮಾಡಿ ಪ್ರಚಾರಕ್ಕೆ ಇಳಿದಿದೆ. ಮಾಧುರಿ ದೀಕ್ಷಿತ್ ಈ ವೆಬ್ ಸಿರೀಸ್‌ನಲ್ಲೂ ಸೂಪರ್‌ಸ್ಟಾರ್ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ.

Bollywood Star Madhuri Dixit Is Making Her OTT Debut With the Netflix Series the Fame Game

ನೆಟ್‌ಫ್ಲಿಕ್ಸ್ ಈ ' ದಿ ಫೇಮ್ ಗೇಮ್' ವೆಬ್ ಸಿರೀಸ್ ಅನ್ನು ಫೆಬ್ರವರಿ 25ರಂದು ಪ್ರೀಮಿಯರ್ ಮಾಡುತ್ತಿದೆ. ಬಾಲಿವುಡ್ ಐಕಾನ್ ಅನಾಮಿಕಾ ಆನಂದ್ ಅವತಾರದಲ್ಲಿ ಮಾಧುರಿ ದೀಕ್ಷಿತ್ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಅನಾಮಿಕ ಬದುಕಿನ ಸುತ್ತ ನಡೆಯುವ ಕಥೆಯೇ ' ದಿ ಫೇಮ್ ಗೇಮ್'. ಧರ್ಮಾಟಿಕ್ ಪ್ರೊಡಕ್ಷನ್ ಈ ವೆಬ್ ಸಿರೀಸ್ ಅನ್ನು ನಿರ್ಮಾಣ ಮಾಡಿದ್ದು, ನೆಟ್‌ಫ್ಲಿಕ್ಸ್ ಈ ವೆಬ್ ಸಿರೀಸ್ ಅನ್ನು ಬಿಡುಗಡೆ ಮಾಡುತ್ತಿದೆ. ತನ್ನ ಹೊಸ ಹೆಜ್ಜೆಯ ಬಗ್ಗೆ ಮಾಧುರಿ ದೀಕ್ಷಿತ್ ಇನ್‌ಸ್ಟಾಗ್ರಾಂ ಮೂಲಕ ಫ್ಯಾನ್ಸ್‌ಗೆ ತಿಳಿಸಿದ್ದಾರೆ.

ಹೊಸ ಸಿರೀಸ್ ಬಗ್ಗೆ ಮಾಧುರಿ ದೀಕ್ಷಿತ್ ಹೇಳಿದ್ದೇನು?

ಮಾಧುರಿ ದೀಕ್ಷಿತ್ ಇನ್‌ಸ್ಟಾಗ್ರಾಂನಲ್ಲಿ 'ದಿ ಫೇಮ್ ಗೇಮ್' ವೆಬ್ ಸಿರೀಸ್ ಫಸ್ಟ್ ಲುಕ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. "ಇವರ ಪ್ರಪಂಚ ನಿಗೂಢವಾಗಿದೆ. ವಿಚಿತ್ರವಾಗಿದೆ ಅವಳ ಕಹಾನಿ. ಆದರೂ ಅವಳ ಕಥೆಯನ್ನು ತೆಗೆದು ಪ್ರಪಂಚದ ಮುಂದೆ ಬರುತ್ತಿದ್ದಾಳೆ. 'ದಿ ಫೇಮ್ ಗೇಮ್' ಸಿರೀಸ್ ಫೆಬ್ರವರಿ 25ರಂದು ಪ್ರೀಮಿಯರ್ ಆಗುತ್ತಿದೆ." ಎಂದು ಮಾಧುರಿ ದೀಕ್ಷಿತ್ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇದೊಂದು ಫ್ಯಾಮಿಲಿ ಡ್ರಾಮ ಆಗಿದ್ದು, ಮಾಧುರಿ ದೀಕ್ಷಿತ್ ಜೊತೆ ಸಂಜಯ್ ಕಪೂರ್, ಮಾನವ್ ಕೌಲ್,ಲಕ್ಷ್‌ವೀರ್ ಸರನ್, ಸುಹಾಸಿನಿ ಮುಲೈ ಹಾಗೂ ಮುಸ್ಕಾನ್ ಜಾಫ್ರಿ ನಟಿಸುತ್ತಿದ್ದಾರೆ. ಶ್ರೀರಾವ್ ಕಥೆ ಹೆಣೆದಿದ್ದು, ಬಿಜೋಯ್ ನಂಬಿಯಾರ್ ಮತ್ತು ಕರಿಷ್ಮಾ ಕೊಹ್ಲಿ ಈ ವೆಬ್ ಸಿರೀಸ್ ನಿರ್ದೇಶನ ಮಾಡಿದ್ದಾರೆ. ಮಾಧುರಿ ದೀಕ್ಷಿತ್ ಕರಣ್ ಜೋಹರ್ ನಿರ್ಮಿಸಿದ ಕಳಂಗ್ ಸಿನಿಮಾದಲ್ಲಿ ನಟಿಸಿದ್ದರು. ಇದು 2019ರಂದು ಬಿಡುಗಡೆಯಾಗಿತ್ತು.

More from Filmibeat

English summary
Bollywood star Madhuri Dixit is making her OTT debut with the Netflix series. Madhuri Dixit playing superstar Anamika The Fame Game. The series will premiere on February 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X