Jailer OTT: ಅಮೆಜಾನ್ ಪ್ರೈಮ್ 'ಜೈಲರ್' ಕೊಟ್ಟ ಹಣವೆಷ್ಟು? ಹಿಂದೆಂದೂ ಸಿಕ್ಕಿರಲಿಲ್ಲ ಇಷ್ಟು ದೊಡ್ಡ ಮೊತ್ತ!

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಮೂಲಕ ಮತ್ತೆ ಟ್ರ್ಯಾಕ್‌ಗೆ ಮರಳಿದ್ದಾರೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ದಾಖಲೆ ಕಲೆಕ್ಷನ್ ಮಾಡಿದೆ. ರಜನಿ ಹಾಗೂ ನೆಲ್ಸನ್ ಕಾಂಬಿನೇಷನ್‌ನ ಮೊದಲ ಸಿನಿಮಾ ಈ ವರ್ಷದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲೊಂದಾಗಿದೆ.

'ಜೈಲರ್' ರಿಲೀಸ್ ಆದ ಮೊದಲ ಎರಡು ವಾರಗಳಲ್ಲೇ ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಬಾಚಿಕೊಂಡಿತ್ತು. ಇದೂವರೆಗೂ ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿ ರಜನಿಕಾಂತ್ ಸೇರಿದಂತೆ ಇಡೀ ತಂಡ ಸಿನಿಮಾ ಯಶಸ್ಸನ್ನು ಸಂಭ್ರಮಿಸಿತ್ತು.

Buzz is that Amazon Prime Video purchased Rajinikanths movie Jailer for around 100 crore

ಆಗಸ್ಟ್ 10ರಂದು ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಈ ಸಿನಿಮಾ ಇನ್ನು ಒಂದು ತಿಂಗಳು ಪೂರೈಸುವ ಮುನ್ನವೇ ಓಟಿಟಿಗೆ ಲಗ್ಗೆ ಇಟ್ಟಿದೆ. ಸೆಪ್ಟೆಂಬರ್ 7 ರಂದು ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ಪ್ರೀಮಿಯರ್ ಆಗುತ್ತಿದೆ. ಇದೇ ವೇಳೆ 'ಜೈಲರ್' ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಅನ್ನೋ ಸುದ್ದಿ ಓಡಾಡುತ್ತಿದೆ.

'ಜೈಲರ್' ಓಟಿಟಿ ರಿಲೀಸ್ ಎಲ್ಲಿ? ಯಾವಾಗ?

ಸೂಪರ್‌ಸ್ಟಾರ್ ರಜನಿಕಾಂತ್ ಮತ್ತೆ ಸಕ್ಸಸ್ ಕೊಟ್ಟ ಸಿನಿಮಾ 'ಜೈಲರ್' ಓಟಿಟಿಯಲ್ಲಿ ರಿಲೀಸ್ ಆಗಿದೆ. ಒಂದು ತಿಂಗಳ ಒಳಗೆ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಅಮೆಜಾನ್ ಪ್ರೈಂನಲ್ಲಿ ಐದು ಭಾಷೆಗಳಲ್ಲೂ 'ಜೈಲರ್' ರಿಲೀಸ್ ಆಗಿದೆ. ಇದುವರೆಗೂ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದ್ದ ಸಿನಿಮಾ ಈಗ ಓಟಿಟಿಯಲ್ಲಿ ಸದ್ದು ಮಾಡುವುದಕ್ಕೆ ಸಜ್ಜಾಗಿದೆ. ಇದೇ ವೇಳೆ ಅಮೆಜಾನ್ ಪ್ರೈಮ್‌ಗೆ ಭಾರೀ ಮೊತ್ತಕ್ಕೆ 'ಜೈಲರ್' ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ.

Buzz is that Amazon Prime Video purchased Rajinikanths movie Jailer for around 100 crore

ಎಷ್ಟು ಕೋಟಿಗೆ ಜೈಲರ್ ಖರೀದಿ

'ಜೈಲರ್' ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿದ್ದಂತೆ ಓಟಿಟಿಯಲ್ಲೂ ಬೇಡಿಕೆ ಹೆಚ್ಚಾಗಿತ್ತು. ಸಿನಿಮಾ ರಿಲೀಸ್ ಆದಾಗಲೇ ನೆಟ್‌ಫ್ಲಿಕ್ಸ್ ಹಾಗೂ ಅಮೇಜಾನ್ ಪ್ರೈಂ ಸಂಸ್ಥೆಗಳು ಖರೀದಿಗೆ ಮುಗಿಬಿದ್ದಿದ್ದವು ಎಂದು ಸುದ್ದಿಯಾಗಿತ್ತು. ಕೊನೆಗೂ 'ಜೈಲರ್' ಸಿನಿಮಾವನ್ನು ಅಮೆಜಾನ್ ಪ್ರೈಂ ದಾಖಲೆ ಮೊತ್ತಕ್ಕೆ ಖರೀದಿ ಮಾಡಿದೆ. ರಜನಿಕಾಂತ್ 'ಜೈಲರ್' ಸುಮಾರು 100 ಕೋಟಿ ರೂಪಾಯಿಗೆ ಅಮೆಜಾನ್ ಪ್ರೈಂ ಖರೀದಿ ಮಾಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದೇ ಆದರೆ, ತಮಿಳು ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಮೊತ್ತಕ್ಕೆ ಓಟಿಟಿಗೆ ಸೇಲ್ ಸಿನಿಮಾ ಎನಿಸಿಕೊಳ್ಳಲಿದೆ.

ಕರ್ನಾಟಕದಲ್ಲೂ ದಾಖಲೆ ಗಳಿಕೆ

ರಜನಿಕಾಂತ್ ಸಿನಿಮಾಗೆ ಕರ್ನಾಟಕದಲ್ಲಿ ಈ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆಗಸ್ಟ್ 10ರಂದು ರಿಲೀಸ್ ಆಗಿದ್ದ ಈ ಸಿನಿಮಾ ಇದೂವರೆಗೂ ಕೇವಲ ಕರ್ನಾಟಕದಲ್ಲಿಯೇ 70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಹಾಕಿದ್ದಾರೆ. ಇತ್ತೀಚೆಗೆ ಪರಭಾಷೆಯ ಸಿನಿಮಾವೊಂದು ನಮ್ಮ ರಾಜ್ಯದಲ್ಲಿ ಈ ಮಟ್ಟಿಗೆ ಗಳಿಕೆ ಮಾಡಿರಲಿಲ್ಲ. ಹೀಗಾಗಿ ಕರ್ನಾಟಕದಲ್ಲೂ 'ಜೈಲರ್' ದಾಖಲೆ ಕಲೆಕ್ಷನ್ ಅಂತಲೇ ಹೇಳಬಹುದು.

ಕೇರಳದಲ್ಲೂ 50 ಕೋಟಿ ಕಲೆಕ್ಷನ್

ಕರ್ನಾಟಕ ಅಷ್ಟೇ ಅಲ್ಲ.. ಕೇರಳದಲ್ಲೂ 'ಜೈಲರ್' ಸಿನಿಮಾ ದಾಖಲೆ ಕಲೆಕ್ಷನ್ ಮಾಡಿದೆ. ಕೇವಲ 20 ದಿನಗಳಲ್ಲಿ 50 ಕೋಟಿ ರೂಪಾಯಿ ಗಳಿಕೆ ಮಾಡಿ ಹೊಸ ದಾಖಲೆ ಬರೆದಿದೆ. ರಜನಿ ಜೊತೆ ಶಿವಣ್ಣ, ಮೋಹನ್‌ಲಾಲ್, ಜಾಕಿ ಶ್ರಾಫ್ ಅಂತಹ ದಿಗ್ಗಜರು ನಟಿಸಿದ್ದು, ಸಿನಿಮಾಗೆ ಬಲ ಬಂದಂತಾಗಿತ್ತು. ಈಗ ಓಟಿಟಿಯಲ್ಲೂ ದಾಖಲೆ ಬ್ಯುಸಿನೆಸ್ ಮಾಡಿದೆ ಎಂದು ವರದಿಯಾಗಿದೆ. ಒಂದು ವೇಳೆ ಈ ಲೆಕ್ಕ ನಿಜವೇ ಆಗಿದ್ದರೆ, ನಿರ್ಮಾಪಕರಿಗೆ ಬಂಪರ್ ಬೆಳೆದಂತೆ ಲೆಕ್ಕ.

More from Filmibeat

English summary
Rajinikanth Jailer movie purchased by Amazon Prime around 100 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X