Jailer OTT: ಬಾಕ್ಸಾಫೀಸ್‌ನಲ್ಲಿ ಜೈಲರ್ ದಿಢೀರ್ ಕುಸಿತ.. ಅಂದ್ಕೊಂಡಿದ್ದಕ್ಕಿಂತ ಬೇಗನೇ OTTಗೆ ಲಗ್ಗೆ ಇಡುತ್ತಾ?

ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಮತ್ತೆ ಸಕ್ಸಸ್ ಕೊಟ್ಟ ಸಿನಿಮಾ 'ಜೈಲರ್'. ಬಾಕ್ಸಾಫೀಸ್‌ನಲ್ಲಿ ಈಗಾಗಲೇ 500 ಕೋಟಿ ರೂ. ಕಲೆ ಹಾಕುವ ಮೂಲಕ ಮತ್ತೆ ರಜನಿ ದರ್ಬಾರ್ ಶುರುವಾಗಿದೆ. 'ಜೈಲರ್' ಲುಕ್‌ನಲ್ಲಿ ರಜನಿ ಖದರ್ ಅಭಿಮಾನಿಗಳು ಸಖತ್ ಕಿಕ್ ಕೊಟ್ಟಿದೆ.

ಜೈಲರ್ ಬಾಕ್ಸಾಫೀಸ್‌ ಮೆಗಾ ಸಕ್ಸಸ್ ಅನ್ನೋದರಲ್ಲಿ ಡೌಟೇ ಇಲ್ಲ. ಕಳೆದ ಎರಡು ವಾರಗಳಿಂದ ಬಾಕ್ಸಾಫೀಸ್‌ ಅನ್ನು ಬೇರೆ ಯಾರಿಗೂ ಬಿಟ್ಟು ಕೊಟ್ಟಿಲ್ಲ. ಆದರೆ, ಕಳೆದೆರಡು ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಕೊಂಚ ಹಿನ್ನಡೆ ಕಂಡಿದೆ. ಜೈಲರ್ ಸಿನಿಮಾ 14ನೇ ದಿನ ಕೇವಲ 3.78 ಕೋಟಿ ರೂ. ಕಲೆಕ್ಷನ್ ಮಾಡಿದೆ.

rajinikanth-movie-jailer-ott-netflix

ಬಾಕ್ಸಾಫೀಸ್‌ನಲ್ಲಿ ರಜನಿಕಾಂತ್ 'ಜೈಲರ್' ದಿಢೀರ್ ಕುಸಿತ ಕಂಡಿದ್ದರಿಂದ ನಿರ್ಮಾಪಕರು ಅಂದುಕೊಂಡಿದ್ದಕ್ಕಿಂತ ಬೇಗನೇ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಸೆಪ್ಟೆಂಬರ್ ಕೊನೆಯ ವಾರ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಲಿದೆ ಅನ್ನೋ ಮಾತು ಕೇಳಿ ಬಂದಿತ್ತು.

'ಜೈಲರ್' ಬಾಕ್ಸಾಫೀಸ್ ಕಲೆಕ್ಷನ್ ಏನು?

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ರಿಲೀಸ್ ಆಗಿ 15ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 14 ದಿನಗಳಲ್ಲಿ 'ಜೈಲರ್' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ವಿಶ್ವದಾದ್ಯಂತ ಸುಮಾರು 566 ಕೋಟಿ ರೂ. ಆಗಿದೆ. ಕೇವಲ ಭಾರತದಲ್ಲಿಯೇ 295.78 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ. ಆದರೆ, 14ನೇ ದಿನ ದಿಢೀರ್ ಕುಸಿತ ಕಂಡಿದ್ದು, ಅಂದುಕೊಂಡಿದ್ದಕ್ಕಿಂತ ಬೇಗನೇ 'ಜೈಲರ್' ಓಟಿಟಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

rajinikanth-movie-jailer-ott-netflix

ಓಟಿಟಿಗೆ ಬರೋದು ಯಾವಾಗ?

'ಜೈಲರ್' ಸಿನಿಮಾದ ನಿರ್ಮಾಪಕರು ನಾಲ್ಕು ವಾರಗಳ ಬಳಿಕ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ, ನೆಟ್‌ಫ್ಲಿಕ್ಸ್ ಸಂಸ್ಥೆ ಸೆಪ್ಟೆಂಬರ್ 7ರಂದು ಬಿಡುಗಡೆ ಮಾಡುವುದಾಗಿ ಪಟ್ಟು ಹಿಡಿದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಂದುಕೊಂಡಿದ್ದಕ್ಕಿಂತ ಮೊದಲೇ 'ಜೈಲರ್' ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಲಿದೆ ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಆದರೆ, ಯಾರೂ ಅಧಿಕೃತವಾಗಿ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಓಟಿಟಿ ವೇದಿಕೆ ಕೂಡ ಫಿಕ್ಸ್ ಆಗಿಲ್ಲ?

ರಜನಿಕಾಂತ್ 'ಜೈಲರ್' ಸಿನಿಮಾ ಯಾವ ಓಟಿಟಿ ವೇದಿಕೆಯಲ್ಲಿ ಪ್ರಸಾರ ಆಗುತ್ತೆ ಅನ್ನೋದು ಅಧಿಕೃತವಾಗಿ ಹೊರಬಿದ್ದಿಲ್ಲ. ಕೆಲವೆಡೆ ನೆಟ್‌ಫ್ಲಿಕ್ಸ್‌ನಲ್ಲಿ 'ಜೈಲರ್‌' ಪ್ರಸಾರ ಆಗಲಿದೆ ಎಂದು ಹೇಳಲಾಗುತ್ತಿದೆ. ಅದೇ ಇನ್ನೊಂದು ಕಡೆ ಸನ್‌ನೆಕ್ಸ್ಟ್‌ನಲ್ಲಿ ಪ್ರಸಾರ ಆಗುತ್ತಿದೆ ಅನ್ನೋ ವರದಿಗಳೂ ಬಂದಿವೆ. ಆದರೆ, ನೆಟ್‌ಫ್ಲಿಕ್ಸ್ ಜೊತೆ ದೊಡ್ಡ ಮೊತ್ತಕ್ಕೆ ಡೀಲ್ ಆಗಿದೆ ಅನ್ನೋದು ಹೆಚ್ಚು ಹರಿದಾಡುತ್ತಿರುವ ಸುದ್ದಿ.

ಇನ್ನೆರಡು ವಾರ ಮುಂದೂಡಲು ಬೇಡಿಕೆ

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ಇನ್ನೂ ಎರಡು ವಾರ ಮುಂದೂಡುವಂತೆ ಬೇಡಿಕೆ ಕೇಳಿ ಬರುತ್ತಿದೆ. ಸಿನಿಮಾ ಇನ್ನೂ ಥಿಯೇಟರ್‌ನಲ್ಲಿ ಇದೆ. ಅಲ್ಲದೆ ಬಾಕ್ಸಾಫೀಸ್‌ನಲ್ಲಿ 600 ಕೋಟಿ ರೂ. ಕಲೆಕ್ಷನ್ ಮಾಡುವ ಸಾಧ್ಯತೆಗಳಿವೆ. ಈ ಬೆನ್ನಲ್ಲೇ ಇನ್ನೂ ಎರಡು ವಾರ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡದೇ ಇದ್ದರೆ ಒಳ್ಳೆಯದು ಎಂದು ಅನ್ನೋ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

More from Filmibeat

English summary
Rajinikanth movie Jailer will release Early in OTT in Netflix in September 7th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X