'ಲೆಜೆಂಡ್' ಬಾಲಕೃಷ್ಣ ಎದುರು ಸಿಂಹದ ಡೈಲಾಗ್ ಬಿಟ್ಟ ರಣ್‌ಬೀರ್ ಕಪೂರ್: ಯಾವುದು ಆ ಪವರ್ ಫುಲ್ ಡೈಲಾಗ್?

ಟಾಲಿವುಡ್‌ನ ಸ್ಟಾರ್ ಹೀರೋಗಳಲ್ಲಿ ಬಾಲಕೃಷ್ಣ ಕೂಡ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಈಗಾಗಲೇ 110ನೇ ಸಿನಿಮಾ ಗ್ರೀನ್ ಸಿಗ್ನಲ್ ಕೊಟ್ಟಿರೋ ಬಾಲಯ್ಯನ ಖದರ್ ಮಾತ್ರ ಎಂದಿಗೂ ಕುಗ್ಗಿಲ್ಲ. ಅವರ ಪವರ್‌ಫುಲ್ ಡೈಲಾಗ್ ಹೇಳುವುದಕ್ಕಾಗಿಯೇ ಸಿನಿಪ್ರಿಯರು ಸಿನಿಮಾ ನೋಡುವುದಕ್ಕೆ ಹೋಗುವುದು ಉಂಟು.

ಇಂದಿಗೂ ಇವರ ಫ್ಯಾನ್ಸ್ ಬಾಲಯ್ಯ ಅಂದರೆ ಡೈಲಾಗ್‌.. ಡೈಲಾಗ್ ಅಂದರೆ ಬಾಲಯ್ಯ ಅಂತ ಕೂಗಿ ಹೇಳ್ತಾರೆ. ಬಾಲಯ್ಯನಷ್ಟು ಸ್ಪೀಡ್ ಆಗಿ ಡೈಲಾಗ್ ಹೀರೋ ಟಾಲಿವುಡ್‌ನಲ್ಲೇ ಯಾರೂ ಇಲ್ಲ. ಹೀಗಾಗಿ ಇವರು ಸಿನಿಮಾದಲ್ಲಿ ಹೊಡೆದ ಡೈಲಾಗ್ ಅನ್ನು ಅದೇ ಸ್ಪೀಡ್‌ನಲ್ಲಿ ಹೇಳುವವರು ಇದ್ದಂಗಿಲ್ಲ. ಅಂತದ್ರಲ್ಲಿ ಟಾಲಿವುಡ್‌ನಲ್ಲೊಂದು ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ.

balakrishna-ranbir-kapoor-aha-show

ಬಾಲಯ್ಯ ಆಹಾ ಓಟಿಟಿ ವೇದಿಕೆಗಾಗಿ 'ಅನ್‌ಸ್ಟಾಪಬಲ್ ವಿಥ್ ಎನ್‌ಬಿಕೆ' ಟಾಕ್ ಶೋ ನಡೆಸಿ ಕೊಡುತ್ತಿರೋದು ಗೊತ್ತೇ ಇದೆ. ಈಗಾಗಲೇ ಎರಡು ಸೀಸನ್ ಯಶಸ್ವಿಯಾಗಿದೆ. ಹೀಗಾಗಿ ಮೂರನೇ ಸೀಸನ್ ಕೂಡ ಆರಂಭ ಆಗಿದೆ. ಈ ಬಾರಿ ಸೀಮಿತ ಆವೃತ್ತಿ ಅನ್ನೋ ಹೆಸರಿನಲ್ಲಿ ಪ್ರಸಾರ ಆಗುತ್ತೆ ಅನ್ನೋ ಸುದ್ದಿನೂ ಇದೆ.

ಆದರೆ, ಸಿನಿಪ್ರಿಯರನ್ನು ಸೆಳೆಯುವ ಸಂಗತಿಯೊಂದು ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.'ಅನ್‌ಸ್ಟಾಪಬಲ್ ವಿಥ್ ಎನ್‌ಬಿಕೆ' ಶೋ ನೋಡುವುದಕ್ಕೆ ಈ ಬಾರಿ ಟಾಲಿವುಡ್ ಮಂದಿ ಅಷ್ಟೇ ಅಲ್ಲ. ಬಾಲಿವುಡ್ ಪ್ರೇಕ್ಷಕರು ಕೂಡ ಕಾದು ಕೂತಿದ್ದಾರೆ. ಅದಕ್ಕೆ ಈ ಶೋಗೆ ಬಾಲಿವುಡ್ ನಟ ರಣ್‌ಬೀರ್ ಕಪೂರ್ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.

ರಣ್‌ಬೀರ್ ಕಪೂರ್ ಸದ್ಯ ತಮ್ಮ 'ಎನಿಮಲ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ತೆಲುಗಿನಲ್ಲೂ ರಿಲೀಸ್ ಆಗಲಿದೆ. ಹೀಗಾಗಿ 'ಅನ್‌ಸ್ಟಾಪಬಲ್ ವಿಥ್ ಎನ್‌ಬಿಕೆ' ಶೋನಿಂದಲೇ ಆರಂಭ ಮಾಡುತ್ತಿದ್ದು, ಈಗಾಗಲೇ ಶೂಟಿಂಗ್ ಕೂಡ ನಡೆದಿದೆ ಎಂದು ಟಾಲಿವುಡ್‌ನಲ್ಲಿ ಸುದ್ದಿ ಹಬ್ಬಿದೆ.

balakrishna-ranbir-kapoor-aha-show

ಇಷ್ಟೇ ಆಗಿದ್ದರೆ ಸುದ್ದಿ ಇಷ್ಟೊಂದು ಸಂಚಲನ ಸೃಷ್ಟಿಸುತ್ತಿತ್ತೋ ಇಲ್ಲವೋ. ಈ ಶೋನಲ್ಲಿ ರಣ್‌ಬೀರ್ ಕಪೂರ್ 'ಲೆಜೆಂಡ್' ಬಾಲಯ್ಯನ ಮುಂದೆ ಕೂತು ಅವರದ್ದೇ ಸಿನಿಮಾದ ಡೈಲಾಗ್ ಅನ್ನು ತೆಲುಗಿ ಭಾಷೆಯಲ್ಲೇ ಹೇಳಿದ್ದಾರಂತೆ. ಅದೂ ಬಾಲಯ್ಯನ ಮೋಸ್ಟ್ ಪವರ್‌ಫುಲ್ ಸಿನಿಮಾ ಡೈಲಾಗ್‌ಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಆ ಡೈಲಾಗ್ ಯಾವುದು ಗೊತ್ತಾ?

ಟಾಲಿವುಡ್‌ ಹಬ್ಬಿರುವ ಸುದ್ದಿ ಪ್ರಕಾರ, ರಣ್‌ಬೀರ್ ಕಪೂರ್ ಸ್ವಯಂ ಪ್ರೇರಿತರಾಗಿ ಬಾಲಯ್ಯ ಸಿನಿಮಾ ಡೈಲಾಗ್ ಹೇಳುತ್ತಾ ಸ್ಟೇಜ್ ಮೇಲೆ ಬರುತ್ತಾರೆ. ಅದೂ ಬಾಲಯ್ಯ ನಟಿಸಿದ 'ಲೆಜೆಂಡ್' ಸಿನಿಮಾ ಡೈಲಾಗ್. "ಫ್ಲೂಟು ಜಿಂಕ ಮುಂದು ಊದು, ಸಿಂಹಂ ಮುಂದು ಕಾದು" ಅನ್ನೋ ಡೈಲಾಗ್. ಅಂದರೆ, ಬಾಲಯ್ಯನ ಮುಂದೆ ಕೂತು ಅವರದ್ದೇ ಸಿನಿಮಾದ ಡೈಲಾಗ್ "ಕೊಳಲು ಜಿಂಕೆ ಮುಂದೆ ಊದು, ಸಿಂಹದ ಮುಂದೆ ಅಲ್ಲ" ಅಂತ ಡೈಲಾಗ್ ಬಿಟ್ಟಿದ್ದಾರಂತೆ.

ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಾಲಯ್ಯ ಜೊತೆ ರಣ್‌ಬೀರ್ ಕಫೂರ್ ಎಪಿಸೋಡ್ ಅನ್ನು ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಅಂದ್ಹಾಗೆ ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ನಟಿಸಿರುವ 'ಎನಿಮಲ್' ಸಿನಿಮಾವನ್ನು ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Buzz is that Ranbir Kapoor said Balakrishna dialogue in Unstoppable with NBK.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X