Chhaava OTT:ರಶ್ಮಿಕಾ- ವಿಕ್ಕಿ ಕೌಶಲ್ 'ಛಾವಾ' ಓಟಿಟಿಗೆ ಲಗ್ಗೆ ಇರೋದು ಯಾವಾಗ? ಇದೇ ದಿನ ಬರೋದು ಗ್ಯಾರಂಟಿ?

ಬಾಲಿವುಡ್‌ ನಟ ವಿಕ್ಕಿ ಕೌಶಲ್‌ಗೆ ಸೂಪರ್‌ ಸಕ್ಸಸ್ ಕೊಟ್ಟ ಸಿನಿಮಾ 'ಛಾವಾ'. ರಶ್ಮಿಕಾ ಮಂದಣ್ಣ ವೃತ್ತಿ ಬದುಕಿಗೆ ಮತ್ತೊಂದು ಮೆಗಾ ಸಕ್ಸಸ್ ಕೊಟ್ಟ ಸಿನಿಮಾವಿದು. ಮರಾಠರ ಆರಾಧ್ಯ ದೈವ ಛತ್ರಪತಿ ಸಾಂಭಾಜೀ ಮಹಾರಾಜ್ ಕುರಿತ ಈ ಸಿನಿಮಾ 2025, ಫೆಬ್ರವರಿ 14 ರಂದು ಅದ್ಧೂರಿಯಾಗಿ ರಿಲೀಸ್ ಆಗಿತ್ತು. ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಪರ್ಫಾಮೆನ್ಸ್‌ಗೆ ಪ್ರೇಕ್ಷಕರು ಕರಗಿ ನೀರಾಗಿದ್ದರು.

'ಛಾವಾ' ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ ಸರಿಯಾಗಿ 50 ದಿನಗಳನ್ನು ಪೂರೈಸಿದೆ. ರಿಲೀಸ್ ಆಗಿ ಇಷ್ಟು ದಿನಗಳು ಕಳೆದರೂ ಸಿನಿಮಾವನ್ನು ಇನ್ನೂ ಥಿಯೇಟರ್‌ನಲ್ಲಿ ಬಂದು ವೀಕ್ಷಿಸುತ್ತಿದ್ದಾರೆ. ಈ ಮಧ್ಯೆ 'ಛಾವಾ' ಓಟಿಟಿ ರಿಲೀಸ್ ಬಗ್ಗೆ ಗುಲ್ಲೆದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರಮಂದಿರದಲ್ಲಿ ಅಬ್ಬರಿಸಿ ಬೊಬ್ಬಿರಿದ 'ಛಾವಾ' ಓಟಿಟಿಗೆ ಲಗ್ಗೆ ಇಡುತ್ತಿದೆ ಎಂದು ಚರ್ಚೆಯಾಗುತ್ತಿದೆ.

Buzz on Vicky Kaushal-Rashmika Mandanna movie Chhaava OTT release when and where to watch

ಬಹಳ ದಿನಗಳ ಬಳಿಕ ಐತಿಹಾಸಿ ಸಿನಿಮಾವೊಂದು ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಎಳೆದು ತಂದಿದೆ. ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಹಾಗೇ ಕರ್ನಾಟಕ, ಆಂಧ್ರ, ತೆಲಂಗಾಣದಲ್ಲೂ 'ಛಾವಾ'ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಾಗಿದ್ರೆ, 'ಛಾವಾ' ಓಟಿಟಿಗೆ ಲಗ್ಗೆ ಇಡುವುದು ಯಾವಾಗ? ಈ ಸಿನಿಮಾವನ್ನು ಎಲ್ಲಿ ನೋಡಬಹುದು? ತಿಳಿಯುವುದಕ್ಕೆ ಮುಂದೆ ಓದಿ.

ವಿಕ್ಕಿ ಕೌಶಲ್ 'ಛಾವಾ' ಛತ್ರಪತಿ ಸಾಂಬಾಜಿ ಮಹಾರಾಜ್ ಅವತಾರದಲ್ಲಿ ಅಬ್ಬರಿಸಿದ್ದರು. ವಿಕ್ಕಿಯ ಅಭಿನಯಕ್ಕೆ ಕಂಡು ಭಾವುಕರಾಗಿದ್ದ ಪ್ರೇಕ್ಷಕರು ಕಣ್ಣೀರು ಹಾಕುತ್ತಾ ಚಿತ್ರಮಂದಿರದಿಂದ ಹೊರ ಬಂದಿದ್ದರು. ದೇಶ ಅಷ್ಟೇ ಅಲ್ಲ. ವಿದೇಶದಲ್ಲಿಯೂ 'ಛಾವಾ' ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದರು. ಈಗ ಓಟಿಟಿಯಲ್ಲಿ ಮತ್ತೆ ಕಣ್ತುಂಬಿಕೊಳ್ಳುವುದಕ್ಕೆ ಸಿನಿಪ್ರಿಯರು ಹಾದು ಕೂತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್ ಪ್ರಕಾರ 'ಛಾವಾ' ಏಪ್ರಿಲ್ 11 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ ಎಂದು ಚರ್ಚೆಯಾಗುತ್ತಿದೆ.

Buzz on Vicky Kaushal-Rashmika Mandanna movie Chhaava OTT release when and where to watch

'ಛಾವಾ' ಹಿಂದಿ, ತೆಲುಗು ಜೊತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ನೆಟ್‌ಫ್ಲಿಕ್ಸ್ ಹಾಗೂ ಚಿತ್ರತಂಡ ಇದೂವರೆಗೂ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಶಂಭಾಜಿ ಮಹಾರಾಜನ ಪರಾಕ್ರಮ, ತ್ಯಾಗವನ್ನು ಈ ಸಿನಿಮಾದಲ್ಲಿ ಬಿಂಬಿಸಲಾಗಿದೆ. ವಿಕ್ಕಿ ಕೌಶಲ್ ಜೊತೆಗೆ ರಶ್ಮಿಕಾ ಮಂದಣ್ಣ ಪಾತ್ರ ಕೂಡ ಗಮನ ಸೆಳೆದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಔರಂಗಜೇಬ್‌ನ ಪಾತ್ರದಲ್ಲಿ ಅಕ್ಷಯ್ ಖನ್ನ ನಟನೆಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಲಕ್ಷ್ಮಣ್ ಉಟೇಕರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನು 'ಛಾವಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ 597.16 ಕೋಟಿ ರೂಪಾಯಿ (Net)ಕಲೆಕ್ಷನ್ ಮಾಡಿದೆ. ಇನ್ನು ಒಂದೆರಡು ದಿನಗಳಲ್ಲಿ 600 ಕೋಟಿ ಕ್ಲಬ್ ಸೇರಲಿದೆ. ಹಾಗೇ ವಿಶ್ವದಾದ್ಯಂತ ಸುಮಾರು 801 ಕೋಟಿ ರೂಪಾಯಿ ಗಳಿಸಿದ್ದು, 710 ಕೋಟಿ ರೂಪಾಯಿ (Gross) ಭಾರತದ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಆಗಿದೆ. ಇನ್ನು 91 ಕೋಟಿ ರೂಪಾಯಿ ವಿದೇಶದಿಂದ ಬಂದಿದೆ ಎಂದು ವರದಿಯಾಗಿದೆ.

'ಛಾವಾ' ಬಾಲಿವುಡ್ ನಟ ವಿಕ್ಕಿ ಕೌಶಲ್ ವೃತ್ತಿ ಬದುಕಿನ ಅತೀ ದೊಡ್ಡ ಸಕ್ಸಸ್ ಸಿಕ್ಕಿದ ಸಿನಿಮಾ. 'ಉರಿ' ಸಿನಿಮಾ ಬಳಿಕ ವಿಕ್ಕಿ ಕೌಶಲ್‌ಗೆ ಮತ್ತೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಛಾವಾ' ಥಿಯೇಟರ್‌ನಲ್ಲೇನೋ ಜೋರಾಗಿ ಸದ್ದು ಮಾಡಿದೆ. ಆದ್ರೀಗ ಓಟಿಟಿಯಲ್ಲೂ ಗೆದ್ದರೆ, ಬಾಲಿವುಡ್‌ನಲ್ಲಿ ವಿಕ್ಕಿ ಕೌಶಲ್‌ಗೆ ಡಿಮ್ಯಾಂಡ್ ದುಪ್ಪಟ್ಟು ಆಗುತ್ತೆ.

Disclaimer:'ಛಾವಾ' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಈ ವರದಿಯನ್ನು OTT Guru ಎನ್ನುವ ಎಕ್ಸ್‌ ಖಾತೆಯಿಂದ ಪಡೆದುಕೊಳ್ಳಲಾಗಿದೆ. ಹಾಗೇ ಬಾಕ್ಸಾಫೀಸ್ ಗಳಿಕೆಯನ್ನು https://www.sacnilk.com ನಿಂದ ಪಡೆದುಕೊಳ್ಳಲಾಗಿದೆ. ಇದನ್ನು ಫಿಲ್ಮಿಬೀಟ್ ಕನ್ನಡ ಅಧಿಕೃತವಾಗಿ ಧೃಡೀಕರಿಸುವುದಿಲ್ಲ.

More from Filmibeat

English summary
Buzz on Vicky Kaushal-Rashmika Mandanna movie Chhaava OTT release: when and where to watch;
Read more about: vicky kaushal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X