Peddi OTT: ರಾಮ್ ಚರಣ್ ಫ್ಯಾನ್ಸ್‌ಗೆ ಡಬಲ್ ಟ್ರೀಟ್? ಓಟಿಟಿಯಲ್ಲಿ ಅನ್‌ಕಟ್ ವೆರ್ಷನ್?
ಮೆಗಾ ಪವರ್ ಸ್ಟಾರ್ ರಾಮ್ ಚರಣ್, ನಿರ್ದೇಶಕ ಬುಚ್ಚಿಬಾಬು ಸಾನಾ ನಿರ್ದೇಶನದ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ 'ಪೆದ್ದಿ' ಥಿಯೇಟರ್‌ಗಲ್ಲಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಬಹಳ ದಿನಗಳಿಂದ ದೊಡ್ಡ ಹಿಟ್‌ಗಾಗಿ ಕಾಯುತ್ತಿದ್ದ ಟಾಲಿವುಡ್‌ಗೆ 'ಪೆದ್ದಿ' ರೂಪದಲ್ಲಿ ಭರ್ಜರಿ ಯಶಸ್ಸು ಸಿಕ್ಕಿದೆ. ಥಿಯೇಟರ್‌ಗಳಲ್ಲಿ 'ಪೆದ್ದಿ' ಹವಾ ಮುಂದುವರಿದಿರುವಾಗಲೇ, ಓಟಿಟಿಗೆ ಲಗ್ಗೆ ಇಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.
ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ' ಜೂನ್ 4ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ತೆಲುಗು ರಾಜ್ಯಗಳಲ್ಲಿ ಫಸ್ಟ್ ಡೇ ಫಸ್ಟ್ ಶೋಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈ ಸಿನಿಮಾ ರಾಮ್ ಚರಣ್ ವೃತ್ತಿ ಬದುಕಿನಲ್ಲಿಯೇ ಅತೀ ದೊಡ್ಡ ಓಪನಿಂಗ್ ಪಡೆದ ಸಿನಿಮಾಗಳಲ್ಲಿ ಒಂದಾಗಿದೆ. ಮೊದಲ ದಿನವೇ ಈ ಸಿನಿಮಾ 135 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಮೊದಲ ವಾರ ಮುಗಿಯುವ ವೇಳೆಗೆ ಈ ಸಿನಿಮಾ ವಿಶ್ವದಾದ್ಯಂತ 345 ಕೋಟಿ ರೂಪಾಯಿ (Gross) ಗಳಿಸಿದೆ ಎಂದು ವರದಿಯಾಗಿತ್ತು.

ಸಿನಿಮಾ ಬಿಡುಗಡೆಯಾಗಿ ಈಗಷ್ಟೇ 2ನೇ ವಾರಕ್ಕೆ ಕಾಲಿಟ್ಟಿದೆ. ಅಷ್ಟೋತ್ತಿಗಾಗಲೇ 'ಪೆದ್ದಿ' ಓಟಿಟಿ ರಿಲೀಸ್ ಬಗ್ಗೆ ಟಾಕ್‌ಗಳು ಶುರುವಾಗಿದೆ. ಮೊದಲ ವಾರದ ಬಳಿಕ ಸಿನಿಮಾದ ಕಲೆಕ್ಷನ್ ಡ್ರಾಪ್ ಆಗಿದ್ದು, ದಿಢೀರನೇ ಓಟಿಟಿ ರಿಲೀಸ್ ಬಗ್ಗೆ ಹೈಪ್ ಕ್ರಿಯೇಟ್ ಆಗಿದೆ.
ನೆಟ್‌ಫ್ಲಿಕ್ಸ್ ಜೊತೆ ಡೀಲ್
'ಪೆದ್ದಿ' ಸಿನಿಮಾ ಇನ್ನೂ ಥಿಯೇಟರ್‌ನಲ್ಲಿ ಇರುವಾಗಲೇ ಓಟಿಟಿ ರಿಲೀಸ್ ಬಗ್ಗೆ ಟಾಕ್ಸ್ ಶುರುವಾಗಿದೆ. ನೆಟ್‌ಫ್ಲಿಕ್ಸ್ ಈ ಸಿನಿಮಾವನ್ನು ಬೃಹತ್ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ. ನೆಟ್‌ಫ್ಲಿಕ್ಸ್ ಈ ಸಿನಿಮಾವನ್ನು ಸುಮಾರು 105 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಮೊತ್ತ ಕೊಟ್ಟು ಖರೀದಿ ಮಾಡುವುದಕ್ಕೆ ಸಾಕಷ್ಟು ಕಾರಣಗಳಿವೆ. ಅವುಗಳ ಬಗ್ಗೆನೂ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.
'ಪೆದ್ದಿ'ಗೆ ಕತ್ತರಿ ಇಲ್ಲ
ಟಾಲಿವುಡ್‌ನಲ್ಲಿ 'ಪೆದ್ದಿ' ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಆಗುತ್ತಿರುವುದಕ್ಕೆ ಕಾರಣವಿದೆ. ರಾಮ್ ಚರಣ್ ಸ್ಟಾರ್‌ಡಮ್ ಅನ್ನೋದು ಒಂದು ಪ್ರಮುಖ ಕಾರಣವಾದರೆ, ಇನ್ನೊಂದು ಸಿನಿಮಾಗೆ ಕತ್ತರಿ ಹಾಕಿಲ್ಲ. ಸೆನ್ಸಾರ್ ಹಾಗೂ ಸಮಯದ ದೃಷ್ಠಿಯಿಂದ ಕತ್ತರಿ ಹಾಕಿದ ದೃಶ್ಯಗಳನ್ನು ಓಟಿಟಿಯಲ್ಲಿ ಪ್ರಸಾರ ಆಗುತ್ತಿರುವ ವರ್ಷನ್‌ನಲ್ಲಿ ಸೇರಿಸಲಾಗಿದೆ. "ಎಕ್ಸ್‌ಟೆಂಡೆಡ್ ಅನ್‌ಕಟ್ ವೆರ್ಷನ್" ಓಟಿಟಿ ವರ್ಷನ್‌ಗೆ ಸೇರಿಸುವುದಕ್ಕೆ ಮೇಕರ್ಸ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಓಟಿಟಿ ವರ್ಷನ್‌ನಲ್ಲಿ ಏನೇನಿರುತ್ತೆ?
ರಾಮ್ ಚರಣ್ ಸಿನಿಮಾ ರಿಲೀಸ್ ಆದ್ಮೇಲೆ ಎಡಿಟಿಂಗ್ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳು ಬಂದಿದ್ದವು. ಇದ್ದಕ್ಕಿದ್ದಂತೆ ಪಾತ್ರಗಳು ಕಣ್ಮರೆಯಾಗಿದ್ದವು. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಅದರಲ್ಲೂ ಹಿರಿಯ ನಟ ಜಗಪತಿ ಬಾಬು ಹಾಗೂ ರಾವ್ ರಮೇಶ್ ನಡುವಿನ ದೃಶ್ಯಗಳಿಗೆ ಅಸಂಬಂಧವಾಗಿ ಅಂತ್ಯ ಕಂಡಿದ್ದವು. ಆದರೆ, ಓಟಿಟಿ ವರ್ಷನ್‌ನಲ್ಲಿ ಇದೆಲ್ಲವೂ ಇರುತ್ತವೆ ಎಂದು ಹೇಳಲಾಗಿದೆ.
ಜಾನ್ವಿ ಕಪೂರ್ ಪಾತ್ರ ಸೇರ್ಪಡೆ?
'ಪೆದ್ದಿ' ಸಿನಿಮಾ ಬಿಡುಗಡೆಯಾದ ಬಳಿಕ ಜಾಹ್ನವಿ ಕಪೂರ್ ನಟಿಸಿದ ಕೆಲವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದವು. ಹೀಗಾಗಿ ಚಿತ್ರತಂಡ ಆ ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಆದರೆ, ಓಟಿಟಿ ವರ್ಷನ್‌ನಲ್ಲಿ ಈ ದೃಶ್ಯಗಳ ಬದಲಾಗಿ, ಜಾಹ್ನವಿ ಕಪೂರ್ ಅವರ ಭಾವನಾತ್ಮಕ ಸನ್ನಿವೇಶಗಳನ್ನು ಸೇರಿಸಲಾಗಿದೆ. ಹೀಗಾಗಿ ಒಟಿಟಿ ವೆರ್ಷನ್‌ನಲ್ಲಿ 'ಅಚ್ಚಿಯಮ್ಮ' ಪಾತ್ರದ ಭಾವುಕ ದೃಶ್ಯಗಳನ್ನು ಸೇರಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿಗಳು ನಿಜವೇ ಆಗಿದ್ದರೆ, ಥಿಯೇಟರ್‌ಗಳಲ್ಲಿ ಸಿನಿಮಾ ನೋಡಿದ್ದಕ್ಕಿಂತ ಒಟಿಟಿಯಲ್ಲಿ ಹೊಸ ಅನುಭವ ಸಿಗಲಿದೆ.


Click it and Unblock the Notifications
