Jio Hotstar ನಲ್ಲಿ ಸಿನಿಮಾ, ವೆಬ್ ಸೀರಿಸ್ ಎಲ್ಲವೂ ಫ್ರೀ: ಆದರೆ, ಒಂದು ದಿನ ಮಾತ್ರ.. ಯಾವಾಗ?
ಓಟಿಟಿ ಪ್ರಿಯರಿಗೆ ಸ್ವಾತಂತ್ರ್ಯ ದಿನಾಚರಣೆ ಸಖತ್ ಕಿಕ್ ಕೊಡೋದು ಗ್ಯಾರಂಟಿ. ಇಡೀ ದೇಶ ಸಂಭ್ರಮ ಪಡುವ ದಿನ ಮನರಂಜನೆಗೆ ಏನೂ ಕಮ್ಮಿಯಿರುವುದಿಲ್ಲ. ಮನೆಯಿಂದ ಹೊರಗೆ ಹೋಗುವುದೇ ಬೇಡ ಅಂದುಕೊಂಡವರಿಗೆ ಜಿಯೋ ಹಾಟ್‌ಸ್ಟಾರ್ ಬಿಗ್ ಸರ್ಪ್ರೈಸ್ ಕೊಡುವುದಕ್ಕೆ ಮುಂದಾಗಿದೆ. 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಿನಿಮಾ ಪ್ರಿಯರು ನೆನೆಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತಿದೆ.
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಅಂತಹದ್ದೇನು ನಡೆಯುತ್ತಿದೆ ಅಂತ ನೋಡುವುದಾರೇ, ಜೊಯೋ ಹಾಟ್‌ಸ್ಟಾರ್ ಆ ಒಂದು ದಿನ ಸಂಪೂರ್ಣವಾಗಿ ಉಚಿತ ಉಡುಗೊರೆಯನ್ನು ನೀಡುತ್ತಿದೆ. ಈ ಮೂಲಕ ದೇಶದ ಜನರಿಗೆ ದಿನವಿಡೀ ಮನರಂಜನೆಯನ್ನು ನೀಡುವುದಕ್ಕೆ ಮುಂದಾಗಿದೆ. ಅಂದ್ಹಾಗೆ, ಈ ಆಫರ್ ಮೊಬೈಲ್ ಹಾಗೂ ಟಿವಿ ಎರಡಕ್ಕೂ ಅನ್ವಯ ಆಗಲಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಯಾವುದೇ ಕಂಟೆಂಟ್ ಅನ್ನು ಉಚಿತವಾಗಿ ನೋಡಬಹುದಾಗಿದೆ.

ಜಿಯೋ ಹಾಟ್‌ಸ್ಟಾರ್ ಸ್ವಾತಂತ್ರ್ಯದ ಸ್ಫೂರ್ತಿಯನ್ನು ಜನರೊಂದಿಗೆ ಹಂಚಿಕೊಳ್ಳುವುದಕ್ಕೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. 'ತಿರಂಗಾ ಏಕ್, ಕಹಾನಿ ಅನೇಕ್' (ತ್ರಿವರ್ಣ ಒಂದೇ, ಕಥೆಗಳು ಹಲವು) ಎಂಬ ಟ್ಯಾಗ್‌ಲೈನ್ ಮೂಲಕ ಸ್ವಾತಂತ್ರ್ಯ ದಿನ ಮಹತ್ವ, ತ್ರಿವರ್ಣ ಧ್ವಜ ಗುರುತು, ಭಾವನೆಗಳು ಹಾಗೂ ಆದರ್ಶಗಳನ್ನು ಬಿಂಬಿಸುವುದಕ್ಕೆ ಹೊರಟಿದೆ. ಈ ಅಭಿಯಾನದ ಭಾಗವಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿರುವ ಕಂಟೆಂಟ್‌ಗಳನ್ನು ಆಗಸ್ಟ್ 15 ಒಂದು ದಿನ ಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ. ಇದು ಭಾರತ ಎಲ್ಲಾ ಭಾಗಗಳಲ್ಲೂ ಉಚಿತವಾಗಿ ನೋಡಬಹುದಾಗಿದೆ.
ಜಿಯೋಹಾಟ್‌ಸ್ಟಾರ್ ಈಗಾಗಲೇ ತನ್ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳಲ್ಲಿ ಉಚಿತ ಸೇವೆಯ ಬಗ್ಗೆ ಪ್ರಚಾರವನ್ನು ಮಾಡಿದೆ. 24 ಗಂಟೆಗಳ ಕಾಲ ತನ್ನ ಲೈಬ್ರರಿಯಲ್ಲಿರುವ ಎಲ್ಲಾ ಕಂಟೆಂಟ್‌ಗಳನ್ನು ಅಂದರೆ, ಸಿನಿಮಾ, ವೆಬ್ ಸೀರಿಸ್, ಡ್ಯಾಕ್ಯೂಮೆಂಟರಿ ಎಲ್ಲವನ್ನೂ 24 ಗಂಟೆಗಳ ಕಾಲ ಉಚಿತವಾಗಿ ವೀಕ್ಷಣೆ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ. ಈ ಮೂಲಕ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸುವುದಕ್ಕೆ ಹೊರಟಿದೆ.
ಆಗಸ್ಟ್ 15ರಂದು ಉಚಿತ ಆಫರ್ ನಡೆಯುವ ವೇಳೆಯೇ ಜಿಯೋ ಹಾಟ್‌ಸ್ಟಾರ್ ಹೊಸ ಸ್ಪೈ ಸೀರಿಸ್ ಅನ್ನು ಸ್ಟ್ರೀಮಿಂಗ್ ಮಾಡುತ್ತಿದೆ. 'ಸಲಾಕರ್' ಎಂಬುವ ಗೂಢಚಾರಿ ಸರಣಿಯನ್ನೂ ಸಹ ಉಚಿತವಾಗಿಯೇ ವೀಕ್ಷಣೆ ಮಾಡಬಹುದಾಗಿದೆ. ಇನ್ನೊಂದು ವಿಶೇಷ ಅಂದರೆ, ಈ ಉಚಿತ ಸೇವೆಯನ್ನು ಪಡೆದುಕೊಳ್ಳುವುದಕ್ಕೆ ಜಿಯೋ ಹಾಟ್‌ಸ್ಟಾರ್ ಅನ್ನು ಸಬ್‌ಸ್ಕ್ರೈಬ್ ಮಾಡಬೇಕು ಎಂದೇನೂ ಇಲ್ಲ. ಯಾರು ಬೇಕಾದರೂ ಉಚಿತವಾಗಿ ವೀಕ್ಷಣೆಯನ್ನು ಮಾಡಬಹುದಾಗಿದೆ.
'ಸಲಾಕಾರ್' ರಿಲೀಸ್‌ನಿಂದ ಆರಂಭ ಆಗುವ ಉಚಿತ ಅಭಿಯಾನ ಶೌರ್ಯ, ತ್ಯಾಗ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳನ್ನು ವೀಕ್ಷಕರ ಮುಂದೆ ಇಡುತ್ತಿದೆ. 'ಟೇಕ್ ಆಫ್', 'ಮದ್ರಾಸ್ ಕೆಫೆ', 'ಐಬಿ71', 'ನೀರಜಾ', 'ಮಂಗಲ್ ಪಾಂಡೆ: ದಿ ರೈಸಿಂಗ್' 'ಸರ್ಝಮೀನ್', 'ಕೇಸರಿ 2' ಮತ್ತು 'ಏರ್ ಲಿಫ್ಟ್' ಅಂತಹ ದೇಶಭಕ್ತಿಯನ್ನು ಸಾರುವ ಸಿನಿಮಾಗಳು ಜಯೋಹಾಟ್‌ಸ್ಟಾರ್ ಉಚಿತ ಅಭಿಯಾನದ ಭಾಗವಾಗಿದೆ.
ಜಿಯೋ ಹಾಟ್‌ಸ್ಟಾರ್ ಅನ್ನು ಕೇವಲ ಜಿಯೋ ಬಳಸುತ್ತಿರುವವರು ಅಷ್ಟೇ ಅಲ್ಲ. ಏರ್‌ಟೆಲ್ ಹಾಗೂ ವಿಐ ಚಂದಾದಾರರು ಸಹ ಈ ಉಚಿತ ಕೊಡುಗೆಗಳನ್ನು ಬಳಸಿಕೊಳ್ಳಬಹುದು. ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್‌ಗೆ ಲಾಗಿನ್ ಆಗುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯಂದು ಲಭ್ಯವಿರುವ ಎಲ್ಲಾ ಕಂಟೆಂಟ್ ಅನ್ನೂ ವೀಕ್ಷಿಸಲು ಸಾಧ್ಯವಾಗುತ್ತದೆ. ಜಿಯೋಹಾಟ್‌ಸ್ಟಾರ್‌ನಲ್ಲಿ ಕೆಲವು ಆಯ್ದ ವಿಷಯಗಳು ಯಾವಾಗಲೂ ಉಚಿತವಾಗಿ ಲಭ್ಯವಿದ್ದರೂ, ಆಗಸ್ಟ್ 15 ರಂದು ಎಲ್ಲಾ ಕಂಟೆಂಟ್‌ಗಳು ಸಂಪೂರ್ಣವಾಗಿ ಉಚಿತವಾಗಿರುತ್ತೆ. ಈ ಎಲ್ಲಾ ಆಫರ್‌ಗಳು ಸ್ವಾತಂತ್ರ್ಯ ದಿನದ ಆಚರಣೆಯ ಭಾಗವಾಗಿ ವೀಕ್ಷಕರಿಗೆ ಹೆಚ್ಚಿನ ಮನರಂಜನೆ ನೀಡಲಿವೆ.


Click it and Unblock the Notifications











