ಬಾಲಕೃಷ್ಣ ಟಾಕ್‌ ಶೋಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು: ವಿರೋಧಿಗಳಿಗೆ ಟೆನ್ಷನ್!

ಟಾಲಿವುಡ್‌ನ ಓಟಿಟಿ ವೇದಿಕೆ ಆಹಾದಲ್ಲಿ ವಿನೂತನ ಕಾರ್ಯಕ್ರಮಗಳು ನೋಡೋಕೆ ಸಿಗುತ್ತಿವೆ. ಅದರಲ್ಲೂ ಟಾಲಿವುಡ್ 'ಲೆಜೆಂಡ್' ಬಾಲಕೃಷ್ಣ ನಡೆಸಿಕೊಡುವ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಈಗ ಇದೇ ಟಾಕ್ ಶೋ ಎರಡನೇ ಸೀಸನ್ ಆರಂಭ ಆಗುತ್ತಿದೆ.

ಬಾಲಕೃಷ್ಣ ವಿಭಿನ್ನ ಸೈಲ್‌ನಿಂದ ಟಾಕ್ ಶೋ ಅನ್ನು ಸೂಪರ್ ಹಿಟ್ ಮಾಡಿದ್ದರು. ಟಾಲಿವುಡ್‌ನ ಸೆಲೆಬ್ರೆಟಿಗಳು, ರಾಜಕೀಯ ನಾಯಕರು ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ನೇರಾ ನೇರಾ ಪ್ರಶ್ನೆಗಳನ್ನು ಕೇಳಿ ಮೆಚ್ಚುಗೆ ಗಳಿಸಿದ್ದರು.

ಶೀಘ್ರದಲ್ಲಿಯೇ ಬಾಲಯ್ಯ ನಡೆಸಿಕೊಡುವ ಟಾಕ್ ಶೋ ಮತ್ತೆ ಶುರುವಾಗಲಿದೆ. ಈಗಾಗಲೇ ಆ ಶೋ ಬಗ್ಗೆ ಟಾಕ್ ಶುರುವಾಗಿದೆ. ಈ ಬಾರಿ ವಿಭಿನ್ನ ಸೆಲೆಬ್ರಿಟಿಗಳನ್ನು 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ 2'ಗೆ ಕರೆದುಕೊಂಡು ಬರುವುದಕ್ಕೆ ಸಜ್ಜಾಗಿದ್ದಾರೆ. ಅದರಲ್ಲೂ ಆಂಧ್ರ ಪ್ರಭಾವಿ ನಾಯಕ ಚಂದ್ರಬಾಬು ನಾಯ್ಡು ಬರಲು ಗ್ರೀನ್ ಸಿಗ್ನಲ್ ಕೊಟ್ಟಿರೋ ಬಗ್ಗೆ ವರದಿಯಾಗಿದೆ.

ಡೈಲಾಗ್‌ನಿಂದಲೇ ಮನಸೆಳೆದಿರೋ ಬಾಲಯ್ಯ

ಡೈಲಾಗ್‌ನಿಂದಲೇ ಮನಸೆಳೆದಿರೋ ಬಾಲಯ್ಯ

ಬಾಲಕೃಷ್ಣ ಸಿನಿಮಾಗಳು ಪವರ್‌ಫುಲ್ ಆಗಿರುತ್ತೆ. ಯಾಕಂದರೆ, ಬಾಲಕೃಷ್ಣ ಯಾವಾಗಲೂ ತಮ್ಮ ಡೈಲಾಗ್‌ನಿಂದಲೇ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಇನ್ನು ಟಾಕ್ ಶೋ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ನಲ್ಲೂ ಅದೇ ಖದರ್ ಇತ್ತು. ಇದು ಅವರ ಅಭಿಮಾನಿಗಳನ್ನು ಮನಸೂರೆಗೊಳಿಸಿತ್ತು. ಈ ಹಿಂದೆಯೂ ಸ್ಟಾರ್ ನಟರು ನಿರೂಪಕರಾಗಿದ್ದರು. ಆದರೆ ಬಾಲಕೃಷ್ಣರಂತೆ ಯಾರೂ ಅವರನ್ನು ಮೆಚ್ಚಿಸಲಿಲ್ಲ.

ಫಸ್ಟ್ ಸೀಸನ್ ಸೂಪರ್ ಹಿಟ್

ಫಸ್ಟ್ ಸೀಸನ್ ಸೂಪರ್ ಹಿಟ್

ಬಾಲಕೃಷ್ಣ ಆಹಾ ಓಟಿಟಿಗಾಗಿ ನಡೆಸಿಕೊಟ್ಟ ಮೊದಲ ಸೀಸನ್ ಸೂಪರ್‌ ಡೂಪರ್ ಹಿಟ್ ಆಗಿದೆ. ಕಳೆದ ವರ್ಷ ಅತೀ ಹೆಚ್ಚು ವೀಕ್ಷಿಸಿದ ಟಾಕ್ ಶೋಗಳ ಪೈಕಿ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ಕೂಡ ಒಂದು. ಹೀಗಾಗಿ ತೆಲುಗು ಪ್ರೇಕ್ಷಕರು ಎರಡನೇ ಸೀಸನ್ ನೋಡುವುದಕ್ಕೆ ಕಾದು ಕೂತಿದ್ದಾರೆ. ಇದೇ ವೇಳೆ ಈ ಟಾಕ್‌ನಲ್ಲಿ ಚಂದ್ರಬಾಬು ನಾಯ್ಡು ಹೆಚ್ಚು ಕೇಳಿಬರುತ್ತಿದೆ. ಈಗಾಗಲೇ ಈ ಕಾರ್ಯಕ್ರಮದ ತುಣುಕುಗಳು ಬಿಡುಗಡೆಯಾಗಿವೆ. ಸ್ಪೆಷಲ್ ಸಾಂಗ್ ಕೂಡ ರಿಲೀಸ್ ಆಗಿದೆ. ಅದರಲ್ಲಿ ಬಾಲಕೃಷ್ಣ ವಾಯ್ಸ್ ಹೈಲೈಟ್ ಆಗಿತ್ತು.

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಎಂಟ್ರಿ

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಎಂಟ್ರಿ

'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ 2' ಶೋ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ವಿವಾದಾತ್ಮಕ ಪ್ರಶ್ನೆಗಳೂ ಇದರಲ್ಲಿವೆ. ಬಾಲಯ್ಯ ಟಾಕ್ ಶೋಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆಗಮಿಸಲಿದ್ದಾರೆ. ಅಲ್ಲದೆ ಅವರೊಂದಿಗೆ ಪುತ್ರ ನಾರಾ ಚಂದ್ರಬಾಬು ನಾಯ್ಡು ಕೂಡ ಎಂಟ್ರಿ ಕೊಡುತ್ತಿದ್ದಾರೆ ಅನ್ನೋದು ಸುದ್ದಿ. ಹೀಗಾಗಿ ಎದುರಾಳಿಗಳಿಗೆ ಈ ಶೋನಲ್ಲಿ ಇಬ್ಬರೂ ಸೇರಿ ಖಡಕ್ ಡೈಲಾಗ್ ಬಿಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಚಂದ್ರಬಾಬು ನಾಯ್ಡು ಬರೋದ್ಯಾವಾಗ?

ಚಂದ್ರಬಾಬು ನಾಯ್ಡು ಬರೋದ್ಯಾವಾಗ?

ಎನ್‌ಬಿಕೆ ಸೀಸನ್ 2 ಮೊದಲ ಸಂಚಿಕೆ ಶೀಘ್ರದಲ್ಲೇ ಶುರುವಾಗುತ್ತದೆ. ಆದರೆ, ಚಂದ್ರಬಾಬು ನಾಯ್ಡು ಯಾವಾಗ ಎಂಟ್ರಿ ಕೊಡುತ್ತಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಮೂಲಗಳ ಪ್ರಕಾರ, ಶೋ ಆರಂಭ ಆದ ಕೆಲವು ಸಂಚಿಕೆಗಳ ಬಳಿಕ ಮಧ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

More from Filmibeat

English summary
Chandrababu Naidu Guest For Balakrishna Hosted Unstoppable With NBK 2 In Aha, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X