ನಿಮ್ಮ ಮಕ್ಕಳಿಗೆ ಕಿಕ್ ಕೊಡುತ್ತೆ 'ತೆನಾಲಿ ರಾಮ', 'ಮೊಟು ಪತ್ಲು', 'ಕುಂಗ್ ಫು ಪಾಂಡ'; ಎಲ್ಲಿ ನೋಡಬಹುದು?
ಇಂದು (ನವೆಂಬರ್ 14) ಮಕ್ಕಳ ದಿನಾಚರಣೆಯ ಸಂಭ್ರಮ ಎಲ್ಲೆಡೆ ಜೋರಾಗಿದೆ. ಕೇವಲ ಶಾಲೆಗಳಲ್ಲಷ್ಟೇ ಅಲ್ಲ. ಮನೆಯಲ್ಲೂ ಮಕ್ಕಳ ದಿನವನ್ನು ಆಚರಿಸುತ್ತಿದ್ದಾರೆ. ಇಡೀ ತಿಂಗಳು ಮಕ್ಕಳ ದಿನವನ್ನಾಗಿ ಕೆಲವೆಡೆ ಸಂಭ್ರಮಿಸಲಾಗುತ್ತೆ. ಈ ಸಮಯದಲ್ಲಿ ಮಕ್ಕಳು ನೋಡಬಹುದಾದ ಒಂದಿಷ್ಟು ಸಿನಿಮಾಗಳಿವೆ. ಅವುಗಳನ್ನು ನಿಶ್ಚಿಂತೆಯಿಂದ ತೋರಿಸಿ ಖುಷಿ ಪಡಿಸಬಹುದು.
ಈಗಿನ ಜನರೇಷನ್ ಮಕ್ಕಳು ಕಾರ್ಟೂನ್ಸ್, ಕಥೆಗಳು ಅಂತ ಟಿವಿ, ಮೊಬೈಲ್ ಮುಂದೆನೇ ಇರುತ್ತಾರೆ. ಕಾರ್ಟೂನ್ ಸಿನಿಮಾಗಳನ್ನು ಇಷ್ಟ ಪಡುವ, ಕಥೆಗಳನ್ನು ಕೇಳಲು ಆಸಕ್ತಿ ಇರುವ ಮಕ್ಕಳಿಗೆ ಕೆಲವು ಸಿನಿಮಾಗಳಿವೆ. ಮಕ್ಕಳಿಗಂತಲೇ ಇವರು ಅಪ್ಪಟ ಭಾರತದ ಸಿನಿಮಾ ಹಾಗೂ ಕಾರ್ಟೂನ್ ಸೀರಿಸ್‌ಗಳು ಜನಪ್ರಿಯೆಯನ್ನು ಪಡೆದುಕೊಂಡಿವೆ. ಹಾಗೇ ವಿದೇಶದ ಸೀರಿಸ್‌ಗಳು ಕೂಡ ಇಷ್ಟ ಪಡುತ್ತಾರೆ. ಇಂತಹ ಅತ್ಯುತ್ತಮ ಸಿನಿಮಾ, ಸೀರಿಸ್ ಜಿಯೋ ಸಿನಿಮಾದಲ್ಲಿ ಲಭ್ಯವಿದೆ. ಯಾವುದೆಲ್ಲ ಇದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ತೆನಾಲಿ ರಾಮ
'ತೆನಾಲಿ ರಾಮ' ಎಲ್ಲಾ ವರ್ಗದವರೂ ಇಷ್ಟ ಪಡುವ ವ್ಯಕ್ತಿತ್ವ. ಪಠ್ಯ ಪುಸ್ತಕಗಳಲ್ಲಿ ತೆನಾಲಿ ರಾಮನ ಕಥೆಗಳನ್ನು ಕೇಳಿಕೊಂಡು ಬೆಳೆದವರು ಅವರ ಮಕ್ಕಳಿಗೆ ತಿಳಿಸುವ ಸಮಯ. ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಸಲಹೆಗಾರನಾಗಿ ಹಾಗೂ ಕವಿಯಾಗಿ ಜನಪ್ರಿಯನಾಗಿದ್ದ ತೆನಾಲಿ ರಾಮನ ಕಥೆಗಳು ಮಕ್ಕಳ ಭೌತಿಕ ಬೆಳವಣಿಗೆಗೆ ತುಂಬಾನೇ ಮುಖ್ಯ. ತೆನಾಲಿ ರಾಮ ತನ್ನ ಹಾಸ್ಯ ಪ್ರಜ್ಞೆ ಹಾಗೂ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸುವ ವಿಧಾನ ಮಕ್ಕಳಿಗೆ ಖಂಡಿತಾ ಇಷ್ಟ ಆಗುತ್ತೆ. ಇದು ವೀಕ್ಷಕರಿಗೆ ಹಾಸ್ಯ, ಸಾಹಸದ ಜೊತೆಗೆ ನೀತಿ ಪಾಠವನ್ನು ಮಾಡುತ್ತೆ.
ಮೋಟು ಪತ್ಲು
ಮೋಟು ಹಾಗೂ ಪತ್ಲು ಈ ಎರಡೂ ಕಾರ್ಟೂನ್ ಕ್ಯಾರೆಕ್ಟರ್‌ಗಳು ಮಕ್ಕಳ ಫೇವರಿಟ್. ಕ್ರಿಮಿನಲ್‌ಗಳನ್ನು ಹಿಡಿಯುವುದು, ರಹಸ್ಯಗಳನ್ನು ಭೇದಿಸುವುದು ಮಕ್ಕಳಿಗೆ ಇಷ್ಟ. ಇಲ್ಲಿ ಪತ್ಲು ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿದರೆ, ಮೋಟು ಬಲವನ್ನು ಉಪಯೋಗಿಸುತ್ತಾನೆ. ಇವರಿಬ್ಬರು ಟೀಮ್ ವರ್ಕ್, ನಂಬಿಕೆ ಹಾಗೂ ಸ್ನೇಹವನ್ನು ಪ್ರತಿನಿಧಿಸುತ್ತಾರೆ.
ಕುಂಗ್ ಫು ಪಾಂಡ
'ತೆನಾಲಿ ರಾಮ', 'ಮೋಟು ಪತ್ಲು' ಜೊತೆಗೆ ಇನ್ನೊಂದು ಕಾರ್ಟೂನ್ ಸೀರಿಸ್ ತುಂಬಾನೇ ಫೇಮಸ್. ಅದುವೇ 'ಕುಂಗ್ ಫು ಪಾಂಡ'. ಪು ಅನ್ನೋ ಪಾಂಡದ ಸುತ್ತ ಹೆಣೆದ ಕಥೆ ಕುಟುಂಬ ಸಮೇತ ಕೂತು ನೋಡಬಹುದು. ಕುಂಗ್ ಫು ಪಾಂಡ ತನ್ನ ಸ್ನೇಹಿತರೊಂದಿಗೆ ಸೇರಿ ಶಾಂತಿಯನ್ನು ಕಾಪಾಡುವುದು ಸ್ಟೋರಿ ಕಾನ್ಸೆಪ್ಟ್. ಇದರಲ್ಲಿ ಹಾಸ್ಯ ಹಾಗೂ ಸಾಹಸ ಎರಡನ್ನೂ ನೋಡಬಹುದು.
ಪೆಪ್ಪ ಪಿಗ್
ಮಕ್ಕಳು ಇಷ್ಟ ಪಡುವ ಇನ್ನೊಂದು ಆನಿಮೆಡೆಟ್ ಸೀರಿಸ್ 'ಪೆಪ್ಪ ಪಿಗ್'. ಪೆಪ್ಪ ಅನ್ನು ಹಂದಿ ಮರಿ ಕಥೆಯನ್ನು ಮಕ್ಕಳು ಎಂಜಾಯ್ ಮಾಡುತ್ತವೆ. ಸರಳವಾಗಿ ಕಥೆ ಹೇಳುವ ವಿಧಾನ, ಸೆಳೆಯುವ ಹಾಡುಗಳಿಂದ 'ಪೆಪ್ಪ ಪಿಗ್' ಸೀರಿಸ್ ಅನ್ನು ಮಕ್ಕಳು ಇಷ್ಟ ಪಡುತ್ತಾರೆ. ಅಷ್ಟೇ ಅಲ್ಲ ವಯಸ್ಕರಿಗೂ ಕೂಡ ಈ ಸೀರಿಸ್ ತುಂಬಾನೇ ಇಷ್ಟ.
ಡೆಸ್ಪಿಕಬಲ್ ಮಿ 4
'ಡೆಸ್ಪಿಕಬಲ್ ಮಿ 4' ಇದೂ ಕೂಡ ಅನಿಮೆಡ್ ಸೀರಿಸ್. ಇದಕ್ಕೂ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಗ್ರು, ಲುಸಿ ಹಾಗೂ ಮಿನಿಯೊನ್ಸ್ ಮಕ್ಕಳ ಫೇವರಿಟ್. ಈ ಸೀರಿಸ್‌ನಲ್ಲಿ ಗ್ರು ಜೂ. ಬಂದ್ಮೇಲೆ ಗ್ರು ಲೈಫ್ ಹೊಸ ಟ್ವಿಸ್ಟ್ ಅನ್ನು ಪಡೆದುಕೊಳ್ಳುತ್ತೆ. ಹೊಸ ಚಾಲೆಂಜ್‌ಗಳು ಎದುರಾಗುತ್ತವೆ. ಇದನ್ನು ಮಕ್ಕಳಿಗೆ ಕಿಕ್ ಕೊಡುತ್ತಿದೆ.


Click it and Unblock the Notifications











