OTT News:ಕೋಲ್ಡ್‌ಪ್ಲೇ ಸಂಗೀತ ಸಂಜೆ ಭರ್ಜರಿ ಸಕ್ಸಸ್; ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ 16.5 ಕೋಟಿ ನಿಮಿಷ ವೀಕ್ಷಕರಿಂದ ವೀಕ್ಷಣೆ
ಕೋಲ್‌ಪ್ಲೇ ಮ್ಯೂಸಿಕ್ ತಂಡ ವರ್ಲ್ಡ್ ಟೂರ್ ಮಾಡುತ್ತಿದೆ. ಇತ್ತೀಚೆಗೆ ಭಾರತದ ಅಹ್ಮದಾಬಾದ್‌ನಲ್ಲಿ ಈ ತಂಡ ಸಂಗೀತ ಸಂಜೆಯನ್ನು ನೀಡಿತ್ತು. ಈ ಸಂಗೀತ ಸಂಜೆಯನ್ನು ಭಾರತದ ಜನಪ್ರಿಯ ಓಟಿಟಿ ಸಂಸ್ಥೆಗಳಲ್ಲಿ ಒಂದಾದ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ವೀಕ್ಷಕರು ಭಾರತದ ಮೂಲೆ ಮೂಲೆಯಿಂದ ಲೈವ್ ಶೋ ಅನ್ನು ನೋಡಿ ಎಂಜಾಯ್ ಮಾಡಿದ್ದಾರೆ.
ಕೋಲ್ಡ್‌ಪ್ಲೇ ಈ ಲೈವ್ ಕಾನ್ಸರ್ಟ್ ಭಾರತದಾದ್ಯಂತ ಜನಪ್ರಿಯತೆ ಕಂಡಿದೆ. ಭಾರತದ ಬಹುತೇಕ ರಾಜ್ಯಗಳ ಜನರು ಈ ಶೋ ಅನ್ನು ಎಂಜಾಯ್ ಮಾಡಿದ್ದಾರೆ. ಅದರಲ್ಲೂ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ತಮಿಳುನಾಡು ಹಾಗೂ ಪಶ್ವಿಮ ಬಂಗಾಳದಲ್ಲಿ ಹೆಚ್ಚು ಮಂದಿ ವೀಕ್ಷಕರು ಈ ಲೈವ್ ಕಾನ್ಸರ್ಟ್ ಅನ್ನು ವೀಕ್ಷಣೆ ಮಾಡಿದ್ದಾರೆ. ಸುಮಾರು ಶೇ.85 ಮಂದಿ ವೀಕ್ಷಕರು ಈ ರಾಜ್ಯಗಳಿಂದಲೇ ಸಿಕ್ಕಿದ್ದಾರೆ.

ಈ ಲೈವ್ ಕಾನ್ಸರ್ಟ್ ಅನ್ನು ನೋಡುವುದಕ್ಕೆ ವೀಕ್ಷಕರ ಹೆಚ್ಚು ಆಸಕ್ತಿ ತೋರಿಸಿರುವುದು ಕಂಡು ಬಂದಿದೆ. ಕೋಲ್ಡ್ ಪ್ಲೇ ಲೈವ್ ಕಾನ್ಸರ್ಟ್ ಅನ್ನು ಸುಮಾರು 83 ಲಕ್ಷ ಮಂದಿ ವೀಕ್ಷಕಣೆ ಮಾಡಿದ್ದರೆ. ಹಾಗೇ ಭಾರತದಾದ್ಯಂತ ಸುಮಾರು 16.5 ಕೋಟಿ ನಿಮಿಷಗಳಿಗೂ ಅಧಿಕ ಈ ಶೋ ಅನ್ನು ವೀಕ್ಷಣೆ ಮಾಡಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಮೂಲಕ ಡಿಸ್ನಿ+ಹಾಟ್ ಅಭೂತಪೂರ್ವ ಯಶಸ್ಸನ್ನು ಕಂಡಿದೆ.
ಜನವರಿ 26, 2025ರಂದು ಕೋಲ್ಡ್‌ಪೇ ತಂಡ ಅಹ್ಮದಾಬಾದ್‌ನಲ್ಲಿ ಲೈವ್ ಪರ್ಫಾಮೆನ್ಸ್ ಅನ್ನು ನೀಡಿತ್ತು. ಇದನ್ನು ಓಟಿಟಿ ವೇದಿಕೆ ಡಿಸ್ನಿ+ಹಾಟ್ ಸ್ಟಾರ್ ವೇದಿಕೆಯಲ್ಲಿ ಸ್ಟ್ರೀಮಿಂಗ್ ಮಾಡಲಾಗಿತ್ತು. ಈ ಮೂಲಕ ಲೈವ್ ಕಾನ್ಸರ್ಟ್‌ಗೆ ಡಿಜಿಟಲ್ ಎಕ್ಸ್‌ಪೀರಿಯನ್ಸ್ ಅನ್ನು ನೀಡಲಾಗಿತ್ತು. ಈ ಮೂಲಕ ಕೋಲ್ಡ್‌ಪ್ಲೇ ಕ್ರೇಜ್ ಅನ್ನು ರಾಷ್ಟ್ರದಾದ್ಯಂತ ಸೆಲೆಬ್ರೆಟ್ ಮಾಡಲಾಗಿತ್ತು.
ಓಟಿಟಿ ವೇದಿಕೆಗಳಲ್ಲಿ ಲೈವ್ ಸ್ಟ್ರೀಮಿಂಗ್ ಆಗುತ್ತಿರುವುದಕ್ಕೆ ವಿಶ್ವದ ಮೂಲೆ ಮೂಲೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೋಲ್ಡ್‌ಪ್ಲೇ ಲೈವ್ ಸ್ಟ್ರೀಮಿಂಗ್ ಸಕ್ಸಸ್ ಕಂಡಿದ್ದು ಓಟಿಟಿ ವೇದಿಕೆಗಳಿಗೆ ಹೊಸ ಹುರುಪು ಸಿಕ್ಕಂತೆ ಆಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಲೈವ್ ಸ್ಟ್ರೀಮಿಂಗ್ ಕಾನ್ಸರ್ಟ್‌ಗಳು ಆರಂಭ ಆಗುವ ಸಾಧ್ಯತೆಯಿದೆ. ಈಗಾಗಲೇ ವೀಕ್ಷಕರಿಂದ ಬೇಡಿಕೆಗಳು ಬರುವುದಕ್ಕೆ ಶುರುವಾಗಿವೆ.
ಈ ಲೈವ್ ಶೋ ಸಕ್ಸಸ್ ಆಗಿದ್ದರಿಂದ ವೀಕ್ಷಕರಿಂದ ಬೇಡಿಕೆ ಹೆಚ್ಚಾಗಿದೆ. ಇಂತಹ ಲೈವ್ ಶೋಗಳನ್ನು ಹೆಚ್ಚು ಮಾಡುವಂತೆ ಬೇಡಿಕೆಯನ್ನು ವೀಕ್ಷಕರು ಇಟ್ಟಿದ್ದಾರೆ. ಭಾರತದ ಸಂಗೀತ ಲೋಕದ ದಿಗ್ಗಜರಾದ ಅರಿಜಿತ್ ಸಿಂಗ್ ಹಾಗೂ ಸೋನು ನಿಗಂ ಅವರ ಸಂಗೀತ ಸಂಜೆಯನ್ನು ಮಾಡುವಂತೆ ಒತ್ತಡ ಬರುತ್ತಿದೆ. ಇದಕ್ಕೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ ವೇದಿಕೆ ಹೇಗೆ ಪ್ರತಿಕ್ರಿಯೆ ನೀಡುತ್ತೆ ಅನ್ನೋದು ನೋಡಬೇಕಿದೆ. ಸದ್ಯ ವೀಕ್ಷಕರಿಂದ ಬೇಡಿಕೆಯಂತೂ ಹೆಚ್ಚಾಗಿದೆ.
ಕೋಲ್ಡ್‌ಪ್ಲೇ ಮ್ಯೂಸಿಕ್ ಕಾನ್ಸರ್ಟ್ ಭರ್ಜರಿ ಯಶಸ್ಸು ಕಂಡಿದೆ. ದೇಶಾದ್ಯಂತ ಈ ಲೈವ್ ಕಾನ್ಸರ್ಟ್ ಅನ್ನು ಕಣ್ತುಂಬಿಕೊಂಡಿರುವ ಸಂಗೀತ ಪ್ರೇಮಿಗಳು ಮನಸಾರೆ ಮೆಚ್ಚಿಕೊಂಡಿದ್ದಾರೆ. ಅಷ್ಟಕ್ಕೂ ಈ ಮಟ್ಟಿಗೆ ಯಶಸ್ಸು ಕಾಣುವುದಕ್ಕೆ ಹಲವು ಕಾರಣಗಳಿವೆ. ಕೋಲ್ಡ್‌ಪ್ಲೇ ಕಾನ್ಸರ್ಟ್‌ಗೆ ಹಲವು ವೇದಿಕೆಗಳಲ್ಲಿ ಪ್ರಚಾರ ಮಾಡಲಾಗಿತ್ತು. ಬು ಕ್ ಮೈ ಶೋ, ಸ್ವಿಗ್ಗಿ, ಸ್ಪೊಟಿಫೈ, ಯೂಟ್ಯೂಬ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳನ್ನು ಟಿಕೆಟ್ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು. ಹೀಗಾಗಿ ಭಾರತದಲ್ಲಿ ಕೋಲ್ಡ್‌ಪ್ಲೇ ಕಾನ್ಸರ್ಟ್‌ಗೆ ಹೆಚ್ಚು ಪ್ರಚಾರ ಸಿಕ್ಕಿತ್ತು.


Click it and Unblock the Notifications











