20 ದೇಶಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ ಸೂಪರ್‌ಸ್ಟಾರ್ 'ಕೂಲಿ'; ಓಟಿಟಿಯಲ್ಲಿ ಬರೆದ ದಾಖಲೆಗಳೇನು?
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ನಿರ್ಮಾಣ ಆಗಿದ್ದ ಸಿನಿಮಾ 'ಕೂಲಿ'. ಥಿಯೇಟರ್‌ನಲ್ಲಿ ₹500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಬಳಿಕ ಓಟಿಟಿಗೆ ಲಗ್ಗೆ ಇಟ್ಟಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ 'ಕೂಲಿ' ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾ ಮೂಲಕ ರಜನಿಕಾಂತ್ 50 ವರ್ಷಗಳ ಸಿನಿಮಾ ಜರ್ನಿಯನ್ನು ಸಂಭ್ರಮಿಸಲಾಗಿತ್ತು.
'ಕೂಲಿ' ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕಿತ್ತು. ಆದರೆ, ಫಸ್ಟ್ ಡೇ ಫಸ್ಟ್ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಲೋಕೇಶ್ ಕನಕರಾಜ್ ಮೇಲೆ ಭಾರಿ ನಿರೀಕ್ಷೆಯನ್ನಿಟ್ಟುಕೊಂಡಿದ್ದ ರಜನಿಕಾಂತ್ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದಿನ ಕಳೆದಂತೆ ಕ್ರೇಜ್ ಕಮ್ಮಿಯಾಗುತ್ತಾ ಹೋಯ್ತು. ಆದರೆ, ಓಟಿಟಿಯಲ್ಲಿ 'ಕೂಲಿ'ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ತಮಿಳು ಚಿತ್ರರಂಗದ ಈ ಬಹು ನಿರೀಕ್ಷೆಯ ಸಿನಿಮಾ 'ಕೂಲಿ' ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ. ವಿಶ್ವದ ಸುಮಾರು 240 ದೇಶಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ರಜನಿಕಾಂತ್ ಸ್ಟೈಲ್‌ಗೆ, ಮ್ಯಾನರಿಸಂಗೆ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ಇದೇ ವೇಳೆ ಯಾವ್ಯಾವ ದೇಶದಲ್ಲಿ 'ಕೂಲಿ' ಟ್ರೆಂಡಿಂಗ್‌ನಲ್ಲಿದೆ ಅನ್ನೋದನ್ನು ಅಮೆಜಾನ್ ಪ್ರೈಂ ವಿಡಿಯೋ ರಿವೀಲ್ ಮಾಡಿದೆ.
'ಕೂಲಿ' ಸಿನಿಮಾಗೆ ಥಿಯೇಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕಿದರೂ, ಸೂಪರ್‌ಸ್ಟಾರ್ ನಟನೆಯನ್ನು ಬಾಯ್ತುಂಬ ಹೊಗಳಿದ್ದರು. 73ನೇ ವಯಸ್ಸಿನಲ್ಲೂ ರಜನಿಕಾಂತ್ ಎನರ್ಜಿ ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದರು. ರಜನಿಯ ಡೈಲಾಗ್ ಡಿಲೇವರಿ, ಆಕ್ಷನ್, ಮ್ಯಾನಸರಿಂ ಅವರ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಓಟಿಟಿಯಲ್ಲೂ ರಜನಿ ಸಿನಿಮಾ ಆ ಜಾದುವನ್ನು ಮುಂದುವರೆಸಿದೆ.
ಸಿನಿಮಾ ಕ್ಷೇತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ 50 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಅಮೆಜಾನ್ ಪ್ರೈಂ ವಿಡಿಯೋ ಗೌರವ ಅರ್ಪಿಸಿದೆ. ರಜನಿಕಾಂತ್ ಜರ್ನಿಯನ್ನು ನೆನೆಪಿಸುವ ವಿಡಿಯೋವನ್ನು ಅವರ ಅಭಿಮಾನಿಗಳಿಗಾಗಿ ರಿವೀಲ್ ಮಾಡಲಾಗಿದೆ. ಆ ವಿಡಿಯೋದಲ್ಲಿ ರಜನಿ ಸ್ಟೈಲ್, ಮ್ಯಾನರಿಸಂ ಅನ್ನು ಬಿಂಬಿಸಿ ಗೌರವ ಅರ್ಪಿಸಲಾಗಿದೆ. ಈ ಮೂಲಕ 50ನೇ ವರ್ಷದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ 'ಕೂಲಿ' ಸಿನಿಮಾ ದಾಖಲೆಗಳನ್ನು ಪ್ರೈಂ ವಿಡಿಯೋ ರಿವೀಲ್ ಮಾಡಿದೆ.

ರಜನಿಕಾಂತ್ ಜೊತೆ 'ಕೂಲಿ' ಸಿನಿಮಾದಲ್ಲಿ ನಾಗಾರ್ಜುನ, ಆಮಿರ್ ಖಾನ್, ಉಪೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದ್ದ ಕೂಲಿ ಓಟಿಟಿಯಲ್ಲೂ ಈ ಎಲ್ಲಾ ಭಾಷೆಗಳಲ್ಲಿ ಲಭ್ಯವಿದೆ. ಅಮೆಜಾನ್ ಪ್ರೈಂ ವಿಡಿಯೋ ಮಾಹಿತಿ ನೀಡಿದಂತೆ ಭಾರತ ಸೇರಿ ಸುಮಾರು 240 ದೇಶಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಅದರಲ್ಲಿ 20 ದೇಶಗಳಲ್ಲಿ ಟಾಪ್ 10 ಸ್ಥಾನದಲ್ಲಿದೆ.
'ಕೂಲಿ' ಓಟಿಟಿಯಲ್ಲಿ ರಿಲೀಸ್ ಆದಲ್ಲಿಂದ ಸುಮಾರು 20 ದೇಶಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. ಆಸ್ಟ್ರೇಲಿಯಾ, ಸಿಂಗಾಪುರ್, ಹಾಂಕ್ ಕಾಂಗ್, ಯುಎಇ, ಸೇರಿದಂತೆ ಹಲವು ದೇಶಗಳಲ್ಲಿ ಈ ಸಿನಿಮಾ ಟ್ರೆಂಡ್ ಕ್ರೇಜಿಯಾಗಿದೆ ಎಂದು ಹೇಳಿಕೊಂಡಿದೆ. ಈ ಮೂಲಕ ರಜನಿಕಾಂತ್‌ಗೆ ಗ್ಲೋಬಲ್ ಲೆವೆಲ್‌ನಲ್ಲಿ ಕ್ರೇಜ್ ಇದೆ ಅನ್ನೋದು ಮತ್ತೊಮ್ಮೆ ಸಾಬೀತಾದಂತೆ ಆಗಿದೆ. ರಜನಿಕಾಂತ್ 'ಕೂಲಿ' ಬಳಿಕ 'ಜೈಲರ್ 2' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಜೈಲರ್' ಮೆಗಾ ಬ್ಲಾಕ್‌ಬಸ್ಟರ್ ಆದ ಬೆನ್ನಲ್ಲೇ ಪಾರ್ಟ್ 2 ನಿರ್ಮಾಣ ಮಾಡಲಾಗುತ್ತಿದ್ದು, ಶೂಟಿಂಗ್ ನಡೆಯುತ್ತಿದೆ. 'ಕೂಲಿ' ಬಳಿಕ ಸೂಪರ್‌ಸ್ಟಾರ್ ರಜನಿ ಅಭಿಮಾನಿಗಳು 'ಜೈಲರ್ 2'ಗಾಗಿ ಎದುರು ನೋಡುತ್ತಿದ್ದಾರೆ.


Click it and Unblock the Notifications











