ಜೀ 5ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ 'ದೃಶ್ಯ 2': ರಿಲೀಸ್ ಯಾವಾಗ?

ಕನ್ನಡ ಸಿನಿಮಾಗಳನ್ನು ಒಟಿಟಿ ಸಂಸ್ಥೆಗಳು ಖರೀದಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದರ ಜೊತೆನೇ ದೊಡ್ಡ ದೊಡ್ಡ ಒಟಿಟಿ ಸಂಸ್ಥೆಗಳು ಕನ್ನಡ ಚಿತ್ರರಂಗದಿಂದ ನಿಧಾನವಾಗಿ ಹಿಂದೆ ಸರಿಯುತ್ತಿವೆ ಆರೋಪ ಕೂಡ ಇದೆ. ಇದೇ ವೇಳೆ ಜೀ 5 ಮಾತ್ರ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾವನ್ನು ಖರೀದಿ ಮಾಡುತ್ತಿದೆ. ಶಿವಣ್ಣನ 'ಭಜರಂಗಿ 2', 'ಗರುಡ ಗಮನ ವೃಷಭ ವಾಹನ' ಬಳಿಕ ಈ ಮತ್ತೊಂದು ಸಿನಿಮಾದ ಇದೇ ತಿಂಗಳು ಪ್ರಿಮಿಯರ್ ಮಾಡುತ್ತಿದೆ.

ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಓಡುವುದಿಲ್ಲ ಎನ್ನುವ ಆರೋಪಕ್ಕೆ ವಿರುದ್ಧವಾಗಿ ಮತ್ತೊಂದು ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸಲು ಜೀ 5 ಮುಂದಾಗಿದೆ. ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ದೃಶ್ಯಂ 2' ಸಿನಿಮಾವನ್ನು ಸಿನಿಪ್ರಿಯರಿಗೆ ತೋರಿಸಲು ಮುಂದಾಗಿದೆ. ದೃಶ್ಯ 2 ಬಿಡುಗಡೆ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ.

ಫೆ.25ಕ್ಕೆ ಜೀ 5ನಲ್ಲಿ 'ದೃಶ್ಯ-2' ಪ್ರಿಮಿಯರ್

ಕ್ರೇಜಿಸ್ಟಾರ್ ರವಿಚಂದ್ರನ್ 'ದೃಶ್ಯ 2' ಸಿನಿಮಾವನ್ನು ಮೊದಲು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದರು. ಅದರಂತೆಯೇ ಸಿನಿಮಾವನ್ನು ಥಿಯೇಟರ್‌ನಲ್ಲೇ ರಿಲೀಸ್ ಮಾಡಿದ್ದರು. ಈಗ ಅದೇ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಫೆಬ್ರವರಿ 25ಕ್ಕೆ ಕನ್ನಡದ 'ದೃಶ್ಯ 2' ಪ್ರಿಮಿಯರ್ ಆಗಲಿದೆ.

Crazy Star Ravichandran Starrer Drishya 2 released in Zee 5 ott

ರವಿಚಂದ್ರನ್ 'ರಾಜೇಂದ್ರ ಪೊನ್ನಪ್ಪ' ತೆರೆಮೇಲೆ ಮೋಡಿ ಮಾಡಿದ್ದರು. ಆದರೆ, ಚಿತ್ರಮಂದಿರಲ್ಲಿ 'ದೃಶ್ಯ-2' ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ. 2021ರ ಡಿಸೆಂಬರ್ 10ರಂದು ರಿಲೀಸ್ ಆಗಿದ್ದ 'ದೃಶ್ಯ-2' ನೋಡಲು ಮತ್ತೆ ಅವಕಾಶ ಸಿಕ್ಕಿದೆ. ಕೊರೊನಾ ಭಯದಿಂದ ಸಿನಿಮಾ ನೋಡಲು ಮಿಸ್ ಮಾಡಿಕೊಂಡವರು ಜೀ 5ನಲ್ಲಿ ಈ ಸಿನಿಮಾವನ್ನ ನೋಡಬಹುದಾಗಿದೆ.

ಮರ್ಡರ್ ಮಿಸ್ಟರಿ ಕಥೆ 'ದೃಶ್ಯ 2'

ಮೋಹನ್ ಲಾಲ್ ನಟಿಸಿದ ಮಲಯಾಳಂ ಸಿನಿಮಾ 'ದೃಶ್ಯಂ 2' ಸಿನಿಮಾ ಕನ್ನಡದ ಪ್ರೇಕ್ಷಕರಿಗಾಗಿ ನಿರ್ಮಾಣ ಮಾಡಲಾಗಿತ್ತು. ಒಂದು ಮರ್ಡರ್​ ಮಿಸ್ಟರಿ ಕಥೆಯನ್ನು ಕನ್ನಡದಲ್ಲೂ ಅಚ್ಚುಕಟ್ಟಾಗಿ ತೆರೆ ಮೇಲೆ ತರಲಾಗಿದೆ. ನಿರ್ದೇಶಕ ಪಿ. ವಾಸು. ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​ ಮುಂತಾದವರು ದೃಶ್ಯ 2' ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಫೆಬ್ರವರಿ 25ರಿಂದ ಜೀ5ಯಲ್ಲಿ 'ದೃಶ್ಯ 2' ಸಿನಿಮಾದ ಪ್ರಿಮಿಯರ್ ಆರಂಭವಾಗಲಿದೆ.

Crazy Star Ravichandran Starrer Drishya 2 released in Zee 5 ott

ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಪ್ರಮೋದ್ ಶೆಟ್ಟಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ. ಅನಂತ್ ನಾಗ್ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸುರೇಶ್​ ಅರಸ್​ ಸಂಕಲನ, ಜಿಎಸ್​ವಿ ಸೀತಾರಾಮ್​ ಛಾಯಾಗ್ರಹಣ, ಅಜನೀಶ್​ ಬಿ. ಲೋಕನಾಥ್​ 'ದೃಶ್ಯ 2'ಗೆ ಸಂಗೀತ ನೀಡಿದ್ದಾರೆ.

ಜೀ 5ನಲ್ಲಿ ಕನ್ನಡ ಸಿನಿಮಾಗಳದ್ದೇ ಹವಾ

ಜೀ 5 ಒಟಿಟಿಯಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿವೆ. 'ಗರುಡ ಗಮನ ವೃಷಭ ವಾಹನ' ಸಿನಿಮಾ ಸಲ್ಮಾನ್ ಖಾನ್ ನಟಿಸಿದ 'ಅಂತಿಮ್' ಚಿತ್ರವನ್ನೇ ಬೀಟ್ ಮಾಡಿತ್ತು. ಇದರ ಜೊತೆನೇ ಶಿವಣ್ಣ ನಟಿಸಿದ 'ಭಜರಂಗಿ 2' ಸಿನಿಮಾವನ್ನೂ ಪ್ರೇಕ್ಷಕರು ದಾಖಲೆ ನಿಮಿಷಗಳ ಕಾಲ ವೀಕ್ಷಣೆ ಮಾಡಿದ್ದರು. ಈಗ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ದೃಶ್ಯ 2' ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

More from Filmibeat

English summary
Crazy Star Ravichandran Starrer Drishya 2 released in Zee 5 ott. Drishya is a remake of Mohan lal starrer Drishyam 2 remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X