OTT News: ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರೋ ಕ್ರಿಕೆಟ್ ಆಧಾರಿದ ಸಿನಿಮಾಗಳ ಪಟ್ಟಿ;
ಈಗಂತೂ ಜನರ ಮೇಲೆ ಒಟಿಟಿ ಪ್ರಭಾವ ಹೆಚ್ಚಿದೆ. ಕೇವಲ ಸಿನಿಮಾ ಅಷ್ಟೇ ಮನರಂಜನೆಗೆ ಬೇಕಿರೋ ವೆಬ್ ಸೀರಿಸ್ ನಿಂದ ಹಿಡಿದು ಕ್ರಿಕೆಟ್‌ವರೆಗೂ ಎಲ್ಲೂ ಒಂದೇ ವೇದಿಕೆಯಲ್ಲಿ ಸಿಗುತ್ತಿದೆ. ಅದಲ್ಲೂ ಈ ಐಪಿಎಲ್ ಸೀಸನ್‌ನಲ್ಲಿ ಓಟಿಟಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದವರು. ಈಗ ಮೊಬೈಲ್‌ನಲ್ಲಿಯೇ ಐಪಿಎಲ್ ಮ್ಯಾಚ್‌ಗಳನ್ನು ವೀಕ್ಷಿಸುತ್ತಿದ್ದಾರೆ.
ಜಿಯೋ ಹಾಟ್‌ಸ್ಟಾರ್ ಅಂತಹ ಒಟಿಟಿ ಪ್ಲಾಟ್‌ಫಾರ್ಮ್ ಐಪಿಎಲ್ ಪಂದ್ಯಗಳನ್ನು ವೀಕ್ಷಣೆ ಮಾಡುವುದಕ್ಕೆ ಜನರಿಗೆ ಅವಕಾಶವನ್ನು ಮಾಡಿಕೊಟ್ಟಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಒಟಿಟಿ ವೇದಿಕೆ ಮೂಲಕವೇ ಸಿನಿಮಾ ನೋಡುತ್ತಿದ್ದಾರೆ. ಹಾಗೇ ಕ್ರಿಕೆಟ್ ಮೂಡ್‌ನಲ್ಲಿರುವ ಜನರಿಗೆ ಇದೇ ಕ್ರೀಡೆಯನ್ನು ಆಧರಿಸಿದ ಸಿನಿಮಾಗಳನ್ನು ಒಟಿಟಿಯ ವೇದಿಕೆಗಳಲ್ಲಿ ನೋಡಬಹುದಾಗಿದೆ.
ಈಗಾಗಲೇ ಕ್ರಿಕೆಟ್ ಅನ್ನು ಆಧರಿಸಿದ ಸಿನಿಮಾಗಳು ಬಂದಿವೆ. ಅವುಗಳು ಒಟಿಟಿ ವೇದಿಕೆಗಳಲ್ಲಿ ಲಭ್ಯವಿದೆ. ಕ್ರಿಕೆಟ್, ಐಪಿಎಲ್ ಮೂಡಿನಲ್ಲಿರುವವರು ಈ ಸಿನಿಮಾಗಳನ್ನು ನೋಡಿ ಆನಂದಿಸಬಹುದು. ಹಾಗಿದ್ದರೆ, ಯಾವ್ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಯಾವ್ಯಾವ ಸಿನಿಮಾವಿದೆ ಎನ್ನುವುದನ್ನು ನೋಡೋಣ ಬನ್ನಿ.

ಆಮಿರ್ ಖಾನ್- 'ಲಗಾನ್'
2001ರಲ್ಲಿ ತೆರೆಕಂಡಿದ್ದ 'ಲಗಾನ್' ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದು. ಅಶುತೋಷ್ ಗೋವರಿಕರ್ ನಿರ್ದೇಶಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಇಂದಿಗೂ ಈ ಸಿನಿಮಾಗೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಆಮಿರ್ ಖಾನ್,ಗ್ರೇಸಿ ಸಿಂಗ್ ಸೇರಿದಂತೆ ಬಾಲಿವುಡ್‌ನ ಸ್ಟಾರ್ ನಟರು ಈ ಸಿನಿಮಾದಲ್ಲಿ ನಟಿಸಿದ್ದರು. ಬ್ರಿಟಿಷರ ತೆರಿಗೆಯಿಂದ ಬೇಸತ್ತು, ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಹಳ್ಳಿಯ ಜನರು ಕ್ರಿಕೆಟ್ ಆಡಿ ಅವರನ್ನು ಮಣಿಸುವ ಕಥೆಯೇ 'ಲಗಾನ್'. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

ರಣ್‌ವೀರ್-ದೀಪಿಕಾ- '83'
ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಸಿನಿಮಾ '83'. ಭಾರತ ಮೊದಲ ವರ್ಲ್ಡ್ ಕಪ್ ಗೆದ್ದ ಕ್ಷಣಗಳನ್ನು ಈ ಸಿನಿಮಾದಲ್ಲಿ ರಿ ಕ್ರಿಯೇಟ್ ಮಾಡಲಾಗಿತ್ತು. ರಣ್‌ವೀರ್ ಸಿಂಗ್ ಈ ಸಿನಿಮಾದಲ್ಲಿ ಮೊದಲ ಬಾರಿಗೆ ವರ್ಲ್ಡ್ ಕಪ್ ಗೆದ್ದ ತಂಡದ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದರು. ಕಪಿಲ್ ದೇವ್ ಪತ್ನಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಅಷ್ಟಾಗಿ ಸದ್ದು ಮಾಡದೇ ಹೋದರೂ, ಓಟಿಟಿಯಲ್ಲಿ ವೀಕ್ಷಕರನ್ನು ಮನಗೆದ್ದಿದೆ. ಈ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

'ಸಚಿನ್: ಎ ಬಿಲಿಯನ್ ಡ್ರೀಮ್ಸ್'
ಭಾರತದ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಕುರಿತಾದ ಡಾಕ್ಯೂಮೆಂಟರಿ ಸ್ಪೋರ್ಟ್ಸ್ ಸಿನಿಮಾ 'ಸಚಿನ್: ಎ ಬಿಲಿಯನ್ ಡ್ರೀಮ್ಸ್'. ಈ ಡಾಕ್ಯೂ ಸಿನಿಮಾದಲ್ಲಿ ಖುದ್ದಾಗಿ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಹಾಗೂ ವಿರೇಂದ್ರ ಶೆಹ್ವಾಗ್ ಕಾಣಿಸಿಕೊಂಡಿದ್ದಾರೆ. ಇದು ಹಿಂದಿ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಯಲ್ಲಿ ಲಭ್ಯವಿದೆ. 39 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದ್ದ ಈ ಡಾಕ್ಯೂ ಸಿನಿಮಾ 76 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು ಎಂದು ವರದಿಯಾಗಿದೆ. ಇದು ಸೋನಿ ಲಿವ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.

'ಎಂಎಸ್ ಧೋನಿ: ಅನ್‌ಟೋಲ್ಡ್ ಸ್ಟೋರಿ'
ಭಾರತದ ಮೋಸ್ಟ್ ಸಕ್ಸಸ್‌ಫುಲ್ ಕ್ಯಾಪ್ಟನ್ 'ಎಂಎಸ್ ಧೋನಿ: ಅನ್‌ಟೋಲ್ಡ್ ಸ್ಟೋರಿ' 2016ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದರು. ಹಾಗೇ ದಿಶಾ ಪಟಾನಿ, ಕಿಯಾರಾ ಅಡ್ವಾನಿ, ಅನುಪಮ್ ಖೇರ್ ಅಂತಹ ನಟರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸಾಫೀಸ್ ಧೂಳೆಬ್ಬಿಸಿತ್ತು. 216 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

ನಾನಿಯ 'ಜೆರ್ಸಿ'
ತೆಲುಗಿನ ನ್ಯಾಚುಲರ್ ಸ್ಟಾರ್ ನಾನಿ ನಟಿಸಿದ ಕ್ರಿಕೆಟ್ ಆಧರಿಸಿದ ಸಿನಿಮಾ 'ಜೆರ್ಸಿ'. 2019ರಲ್ಲಿ ತೆರೆಕಂಡಿದ್ದ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. 'ಜೆರ್ಸಿ' ಬಾಕ್ಸಾಫೀಸ್‌ನಲ್ಲಿ ಅಷ್ಟೇ ಅಲ್ಲದೇ ಭಾರತದಲ್ಲಿ ನಿರ್ಮಾಣಗೊಂಡಿರುವ ಅತ್ಯುತ್ತಮ ಸ್ಟೋರ್ಟ್ಸ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ಅತ್ಯುತ್ತಮ ಸಿನಿಮಾ ಹಾಗೂ ಸಂಕಲನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.


Click it and Unblock the Notifications











