ಮೇ ತಿಂಗಳಲ್ಲಿ ಒಟಿಟಿ ಲಗ್ಗೆ ಇಡುತ್ತಿರೋ ಟಾಪ್ 5 ಸಿನಿಮಾ, ವೆಬ್ ಸೀರಿಸ್‌ ಲಿಸ್ಟ್ ಇಲ್ಲಿದೆ

ಜನರು ಈಗ ಥಿಯೇಟರ್‌ಗೆ ಹೋಗಿ ಸಿನಿಮಾಗಳನ್ನು ನೋಡುವುದಕ್ಕಿಂತ ಮನರಂಜನೆಗೆ ಒಟಿಟಿಯ ಮೋರೆ ಹೋಗಿದ್ದಾರೆ. ಒಳ್ಳೆಯ ಸಿನಿಮಾಗಳು ಬಂದಾಗ ಮಾತ್ರ ಥಿಯೇಟರ್‌ನಲ್ಲಿ ಸಿನಿಮಾಗಳನ್ನು ನೋಡುತ್ತಾರೆ. ಆದರೆ, ಒಟಿಟಿಯಲ್ಲಿ ಪ್ರತಿದಿನ ಯಾವುದಾದರೂ ಒಂದು ಹೊಸ ಕಂಟೆಂಟ್ ಸಿಗುತ್ತಿದೆ. ಅದಕ್ಕೆ ಹೆಚ್ಚಾಗಿ ಸಿನಿಪ್ರಿಯರು ಒಟಿಟಿಗೆ ಅಡಿಕ್ಟ್‌ ಆಗಿದ್ದಾರೆ.

ಇತ್ತ ಒಟಿಟಿ ವೇದಿಕೆಗಳು ಕೂಡ ವೀಕ್ಷಕರನ್ನು ಸೆಳೆಯುವುದಕ್ಕೆ ಹೊಸ ಹೊಸ ಕಂಟೆಂಟ್‌ಗಳನ್ನು ರಿಲೀಸ್ ಮಾಡುತ್ತಿವೆ. ಪ್ರತಿ ವೀಕೆಂಡ್‌ನಲ್ಲಿ ಹೊಸ ಕಂಟೆಂಟ್‌ಗಳನ್ನು ರಿಲೀಸ್ ಮಾಡುತ್ತಲೇ ಇರುತ್ತೆ. ಹಾಗಿದ್ದರೆ, ಮೇ ತಿಂಗಳಲ್ಲಿ ಜಿಯೋ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ವೆಬ್‌ ಸೀರಿಸ್ ಹಾಗೂ ಸಿನಿಮಾಗಳ ಪಟ್ಟಿ ಇಲ್ಲಿದೆ.

Criminal Justice to Odela 2 TOP 5 May OTT Releases List

ಕ್ರಿಮಿನಲ್ ಜಸ್ಟಿಸ್- ಎ ಫ್ಯಾಮಿಲಿ ಮ್ಯಾಟರ್

ಒಟಿಟಿಯ ವೀಕ್ಷಕರು ಬಹಳ ದಿನಗಳಿಂದ ಕಾಯುತ್ತಿರುವ ವೆಬ್ ಸೀರಿಸ್‌ಗಳಲ್ಲಿ 'ಕ್ರಿಮಿನಲ್ ಜಸ್ಟಿಸ್- ಎ ಫ್ಯಾಮಿಲಿ ಮ್ಯಾಟರ್' ಕೂಡ ಒಂದು. ಇದು ಕ್ರಿಮಿನಲ್ ಜಸ್ಟಿಸ್‌ನ ನಾಲ್ಕನೇ ಸೀಸನ್. ಈ ಹಿಂದೆ ಬಂದಿರುವ ಮೂರು ಸೀಸನ್‌ಗಳು ಸೂಪರ್‌ ಹಿಟ್ ಆಗಿವೆ. ಈ ವೆಬ್ ಸೀರಿಸ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಮೇ 22 ರಂದು ರಿಲೀಸ್ ಆಗುತ್ತಿದೆ. ವಕೀಲ ಮಾಧವ ಮಿಶ್ರ ಪಾತ್ರದಲ್ಲಿ ಬಾಲಿವುಡ್‌ನ ಜನಪ್ರಿಯ ನಟ ಪಂಕಜ್ ತ್ರಿಪಾಠಿ ಮತ್ತೊಂದು ಕೇಸ್‌ನೊಂದು ಥ್ರಿಲ್ ಕೊಡಲಿದ್ದಾರೆ. ನಿಗೂಢ ಕೊಲೆಯನ್ನು ಭೇದಿಸುವ ಪಾತ್ರದಲ್ಲಿ ಪಂಕಜ್ ನಟಿಸಿದ್ದಾರೆ. ಈ ವೆಬ್ ಸೀರಿಸ್ ಅನ್ನು ರೋಹನ್ ಸಿಪ್ಪಿ ನಿರ್ದೇಶಿಸಿದ್ದಾರೆ. ಈ ಕೋರ್ಟ್‌ ರೂಮ್ ಡ್ರಾಮದಲ್ಲಿ ಪಂಕಜ್ ತ್ರಿಪಾಠಿ ಜೊತೆ ಸುರ್ವೀನ್ ಚಾವ್ಲಾ, ಜೀಶಾನ್ ಆಯುಬ್ ಹಾಗೂ ಆಶಾ ನೆಗಿ ನಟಿಸಿದ್ದಾರೆ.

ಅಂಡ್ ಜಸ್ಟ್ ಲೈಕ್ ದಟ್ ಸೀಸನ್ 3

ಹಾಲಿವುಡ್ ಸಿನಿಮಾ, ವೆಬ್‌ ಸೀರಿಸ್ ಪ್ರಿಯರಿಗೂ ಈ ತಿಂಗಳು ಮನರಂಜನೆ ಗ್ಯಾರಂಟಿ. ಜನಪ್ರಿಯ ವೆಬ್ ಸೀರಿಸ್ 'ಅಂಡ್ ಜಸ್ಟ್ ಲೈಕ್ ದಟ್' ಮೂರನೇ ಸೀಸನ್ ಇದೇ ತಿಂಗಳು ಸ್ಟ್ರೀಮಿಂಗ್ ಆಗಲಿದೆ. ಕ್ಯಾರಿ ಬ್ರಾಡ್‌ಶಾ (ಸಾರಾ ಜೆಸ್ಸಿಕಾ ಪಾರ್ಕರ್), ಮಿರಾಂಡಾ ಹಾಬ್ಸ್ (ಸಿಂಥಿಯಾ ನಿಕ್ಸನ್), ಮತ್ತು ಷಾರ್ಲೆಟ್ ಯಾರ್ಕ್ (ಕ್ರಿಸ್ಟಿನ್ ಡೇವಿಸ್) ನ್ಯೂಯಾರ್ಕ್‌ನಲ್ಲಿ ಇವರ ರೊಮ್ಯಾಂಟಿಕ್ ಲೈಫ್‌ ಜರ್ನಿಯನ್ನು ಈ ಸೀರಿಸ್‌ನಲ್ಲಿ ಮುಂದುವರೆಸಿದ್ದಾರೆ. ಸೀಸನ್ 3ನಲ್ಲಿ ಫ್ರೆಶ್ ಸ್ಟೋರಿ ಇದ್ದು, ಒಂದು ವಾರಕ್ಕೆ ಒಂದು ಎಪಿಸೋಡ್ ರಿಲೀಸ್ ಆಗುತ್ತಿದೆ. ಮೇ 30ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರೀಮಿಯರ್ ಆಗಲಿದೆ.

ಏರ್‌ಪೋರ್ಟ್ 77 (1977)

ಹಾಲಿವುಡ್‌ನ ಮತ್ತೊಂದು ಥ್ರಿಲ್ಲರ್ ಏರ್‌ಪೋರ್ಟ್ 77 ನೆಟ್‌ಫ್ಲಿಕ್‌ನಲ್ಲಿ ಈಗಾಗಲೇ ಸ್ಟ್ರೀಮಿಂಗ್ ಆಗುತ್ತಿದೆ. ಇದು ಏರ್‌ಪೋರ್ಟ್ ಸೀರಿಸ್‌ನ ಮೂರನೇ ಸಿನಿಮಾ 1977ರಲ್ಲಿ ರಿಲೀಸ್ ಆಗಿ ಸೂಪರ್‌ ಹಿಟ್ ಆಗಿದ್ದ ಸಿನಿಮಾವಿದು. ಎರಡು ಆಸ್ಕರ್‌ ಪ್ರಶಸ್ತಿಗೂ ನಾಮಿನೇಟ್ ಆಗಿತ್ತು. ಬರ್ಮುಡಾ ಟ್ರಯಾಂಗಲ್‌ನಲ್ಲಿ ಸಿಕ್ಕಿಕೊಳ್ಳುವ ಏರೋಪ್ಲೆನ್‌ನ ಥ್ರಿಲ್ಲಿಂಗ್ ಕತೆಯನ್ನು ಹೇಳಲಾಗಿತ್ತು. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮೇ 1 ರಿಂದ ಸ್ಟ್ರೀಮಿಂಗ್ ಆಗುತ್ತಿದೆ.

Criminal Justice to Odela 2 TOP 5 May OTT Releases List

ಪೋಕರ್ ಫೇಸ್ ಸೀಸನ್ 2

ಪೋಕರ್ ಫೇಸ್ ಸೀಸನ್ 2 ಇದೊಂದು ಮಿಸ್ಟರಿ ಕಾಮಿಡಿ ಸೀರಿಸ್. ರಿಯಾನ್ ಜಾನ್ಸನ್ ಕ್ರಿಯೇಟ್ ಮಾಡಿದ್ದ ಈ ಸೀರಿಸ್‌ನಲ್ಲಿ ನತಾಶಾ ಲಿಯೋನೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 12 ಹೊಸ ಎಪಿಸೋಡ್‌ಗಳು ಈ ಸೀರಿಸ್‌ನಲ್ಲಿ ಪ್ರಸಾರ ಆಗುತ್ತಿವೆ. ಚಾರ್ಲಿ ಪಾತ್ರದಲ್ಲಿ ನಟಿಸುತ್ತಿರುವ ನತಾಶಾ ಲಿಯೋನೆ ಪ್ರತಿಯೊಂದು ಎಪಿಸೋಡ್‌ನಲ್ಲಿ ಹೊಸ ರಹಸ್ಯವನ್ನು ಭೇದಿಸುತ್ತಾ ಹೋಗುತ್ತಾರೆ. ಮೇ 9 ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರೀಮಿಯರ್ ಆಗುತ್ತಿದ್ದು, ಮೊದಲ ದಿನ ಮೂರು ಎಪಿಸೋಡ್ ನೋಡಬಹುದು. ಉಳಿದದ್ದು ಪ್ರತಿ ಗುರುವಾರ ರಿಲೀಸ್ ಆಗಲಿದೆ.

ಒಡೆಲಾ 2

ಒಡೆಲಾ 2 ಸಿನಿಮಾ ಸೂಪರ್‌ ನ್ಯಾಚುಲರ್ ಥ್ರಿಲ್ಲರ್ ಸಿನಿಮಾ. ಈ ಸಿನಿಮಾದಲ್ಲಿ ಕನ್ನಡದ ನಟ ವಸಿಷ್ಠ ಸಿಂಹ, 'ಅಧ್ಯಕ್ಷ' ನಟಿ ಹೆಬಾ ಪಟೇಲ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಏಪ್ರಿಲ್ 17ರಂದು ರಿಲೀಸ್ ಆಗಿತ್ತು. ಆದರೆ, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಬಹುಬೇಗನೇ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಮೇ 16, 2025ರಂದು ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
Criminal Justice to Odela 2 TOP 5 May OTT Releases List;
Read more about: movies bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X