ಥಿಯೇಟರ್‌ನಲ್ಲಿ ದಾಖಲೆ ಬರೆದ 'ಕಾಟೇರ' ಓಟಿಟಿಗೆ ಬರೋ ಡೇಟ್ ಲಾಕ್; 43ನೇ ದಿನಕ್ಕೇ ಪ್ರೀಮಿಯರ್!
ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆದ ಸಿನಿಮಾ 'ಕಾಟೇರ'. ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಬದುಕಿನಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ ಸಿನಿಮಾವಿದು. ಥಿಯೇಟರ್‌ನಲ್ಲಿ ಧೂಳೆಬ್ಬಿಸಿದ ಸಿನಿಮಾ ಈಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾ ಈಗಾಗಲೇ ಜೀ 5 ಜೊತೆ ವ್ಯಾಪಾರ ವಹಿವಾಟು ಮುಗಿಸಿದೆ. ಬಾಕ್ಸಾಫೀಸ್‌ನಲ್ಲಿ 200 ಕೋಟಿ ರೂಪಾಯಿ ಲೂಟಿ ಮಾಡಿದ ಸಿನಿಮಾ 43ನೇ ದಿನಕ್ಕೆ ಓಟಿಟಿಗೆ ಲಗ್ಗೆ ಇಡುತ್ತಿದೆ. ನಿರ್ಮಾಪಕರು ಹಾಗೂ ಓಟಿಟಿ ವೇದಿಕೆ ಜೊತೆ ಮಾಡಿಕೊಂಡ ಒಡಂಬಡಿಕೆಯಂತೆ 'ಕಾಟೇರ' ಮುಂದಿನ ವಾರ ಪ್ರೀಮಿಯರ್ ಆಗುತ್ತಿದೆ.

ಪ್ಯಾನ್ ಇಂಡಿಯಾಗಳ ಅಬ್ಬರದ ನಡುವೆ ದರ್ಶನ್ ಕೇವಲ ಕನ್ನಡದಲ್ಲಷ್ಟೇ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದರು. ವಿಶಿಷ್ಠ ಕಥೆ ಹಾಗೂ ಗೆಟಪ್ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡಿಗರನ್ನು ಮೆಚ್ಚಿಸಿದ್ದರು. ಇದು ಅವರಿಗೆ ಸಿಕ್ಕ ಅತೀ ದೊಡ್ಡ ಯಶಸ್ಸು ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳೇ ಹೇಳುತ್ತಿದ್ದಾರೆ. ಹೀಗಾಗಿ ಓಟಿಟಿಯಲ್ಲಿ ಯಾವಾಗ ರಿಲೀಸ್ ಆಗುತ್ತೆ? ಅಲ್ಲಿ ಇನ್ನೇನು ದಾಖಲೆ ಬರೆಯುತ್ತೆ? ಅನ್ನೋದನ್ನು ನೋಡುವುದಕ್ಕೆ ಡಿ ಬಾಸ್ ಫ್ಯಾನ್ಸ್ ಕಾತುರರಾಗಿದ್ದಾರೆ.
ಜೀ 5 ತಾನು ಖರೀದಿಸಿದ ಹೊಸ ಸಿನಿಮಾಗಳನ್ನು ಪ್ರತಿ ಶುಕ್ರವಾರ ಬಿಡುಗಡೆ ಮಾಡುತ್ತೆ. ಅಲ್ಲದೆ ನಿರ್ಮಾಪಕರು ಹಾಗೂ ಓಟಿಟಿ ಸಂಸ್ಥೆಯೊಂದಿಗೆ ಸಿನಿಮಾ ಬಿಡುಗಡೆಯಾದ 30 ರಿಂದ 40 ದಿನಗಳ ಅಂತರದಲ್ಲಿ ಓಟಿಟಿಯಲ್ಲಿ ಪ್ರೀಮಿಯರ್ ಮಾಡುವ ಬಗ್ಗೆ ಸಹಜವಾಗಿ ಒಪ್ಪಂದ ಆಗುತ್ತೆ. ಚಿತ್ರರಂಗದ ಮೂಲದ ಪ್ರಕಾರ, 'ಕಾಟೇರ' ಬಿಡುಗಡೆಯಾದ 40 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಮಾಡುವ ಮಾತುಕತೆ ನಡೆದಿದ್ದು, ಅದರಂತೆಯೇ ಫೆಬ್ರವರಿ 9ರಂದು ಜೀ 5ನಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ.

'ಕಾಟೇರ' ಸಿನಿಮಾ ಇನ್ನೂ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಿ ಮತ್ತು ಸಿ ಸೆಂಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಈ ಸಿನಿಮಾ ಕನೆಕ್ಟ್ ಆಗಿದ್ದು, ದರ್ಶನ್ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಆಗಾಗ ರೈತರ ಬಗ್ಗೆ ಕಾಳಜಿ ತೋರಿಸುವ ದರ್ಶನ್ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಇನ್ನು 'ಕಾಟೇರ' ಬಾಕ್ಸಾಫೀಸ್‌ನಲ್ಲಿ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಆದರೆ, ಈ ಬಗ್ಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಹೀಗಾಗಿ 'ಕಾಟೇರ'ದ ಕಲೆಕ್ಷನ್ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ ಹೊರಬಿದ್ದಿದೆಯೇ ಹೊರತು, ಚಿತ್ರತಂಡದಿಂದ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.
'ಕಾಟೇರ' ಸಿನಿಮಾದಲ್ಲಿ ದರ್ಶನ್ ಜೊತೆಗೆ ಕುಮಾರ್ ಗೋವಿಂದ್, ಹಿರಿಯ ನಟಿ ಶ್ರುತಿ, ಬಿರಾದರ್, ವಿನೋದ್ ಆಳ್ವಾ, ಜಗಪತಿ ಬಾಬು ಸೇರಿದಂತೆ ಹಲವು ಮಂದಿ ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಥಿಯೇಟರ್‌ನಲ್ಲಿ ಸಿನಿಮಾ ಸದ್ದು ಮಾಡಿದಂತೆ ಓಟಿಟಿಯಲ್ಲೂ ಸದ್ದು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











