Depp vs Heard: ವಿವಾದಕ್ಕೀಡಾದ ನೆಟ್‌ಫಿಕ್ಸ್ ಸೀರಿಸ್.."ಸ್ಟಾರ್ ಪವರ್‌ ನ್ಯಾಯಾಧೀಶರನ್ನು ಪ್ರೇರೇಪಿಸಿರಬಹುದು"-ನಿರ್ದೇಶಕಿ!

ಹಾಲಿವುಡ್‌ನ ಇಬ್ಬರು ಜನಪ್ರಿಯ ತಾರೆಯರ ನಡುವಿನ ಕಾನೂನು ಸಮರವನ್ನು ಜಗತ್ತು ಬೆರಗು ಕಣ್ಣಿನಿಂದ ನೋಡುತ್ತಿತ್ತು. ಹಾಲಿವುಡ್ ಸೂಪರ್‌ಸ್ಟಾರ್ ಜಾನಿ ಡೆಪ್ ಹಾಗೂ ಮಾಜಿ ಪತ್ನಿ-ನಟಿ ಅಂಬರ್ ಹರ್ಡ್ ಮಾಡಿದ ಆರೋಪ-ಪ್ರತ್ಯಾರೋಪಗಳು ವಿಶ್ವದ ಗಮನ ಸೆಳೆದಿತ್ತು.

ಜಾನಿ ಡೆಪ್ ಹಾಗೂ ಅಂಬರ್ ಹರ್ಡ್ ಇಬ್ಬರೂ ಒಬ್ಬರಿಗೊಬ್ಬರು ದುಬಾರಿ ಮಾನನಷ್ಟ ಮೊಕದ್ದಮೆ, ಕೌಟುಂಬಿಕ ಹಿಂಸೆ, ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಆರೋಪ ಮಾಡಿದ್ದರು. ಇದು ಕೋರ್ಟ್ ಮೆಟ್ಟೇರಿಲಿತ್ತು. ಅಲ್ಲಿ ಜಾನಿ ಡೆಪ್ ಗೆದ್ದಿದ್ದರು. ಮಾಜಿ ಪತ್ನಿ ಹಾಗೂ ನಟಿ ಅಂಬರ್ ಹರ್ಡ್‌ರದ್ದೇ ತಪ್ಪು ಎಂದು ತೀರ್ಪು ಬಂದಿತ್ತು. ಇದನ್ನು ಈ ದಶಕದ ಅತೀ ಜನಪ್ರಿಯ ಕಾನೂನು ಮೊಕದ್ದಮೆ ಅಂತಲೇ ಬಿಂಬಿಸಲಾಗಿದೆ.

Depp vs Heard docu-series directed by Emma Cooper released on Netflix is trending

ಈ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು 'ಡೆಪ್ Vs ಹರ್ಡ್' ಅನ್ನುವ ಡಾಕ್ಯೂಮೆಂಟರಿ ಸೀರಿಸ್‌ ಅನ್ನು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಮಾಡಲಾಗಿದೆ. ಈ ಸೀರಿಸ್ ರಿಲೀಸ್ ಆಗಿತ್ತಿದ್ದಂತೆ ವಿವಾದಕ್ಕೀಡಾಗಿದೆ. ಇವರಿಬ್ಬರ ಕೇಸ್‌ನಲ್ಲಿ ಸಾರ್ವಜನಿಕರು ಹೇಗೆ ಭಾವನಾತ್ಮಕವಾಗಿ ಸೇರಿಕೊಂಡರು ಅನ್ನೋದನ್ನು ತೋರಿಸಲಾಗಿದೆ. ಇದರ ವಿರುದ್ಧ ವೀಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

'ಡೆಪ್ Vs ಹರ್ಡ್' ಡಾಕ್ಯೂ-ಸೀರಿಸ್ ನಿರ್ದೇಶಿಸಿರುವ ಎಮ್ಮ ಕೂಪರ್ ಇತ್ತೀಚೆಗೆ ಸಂದರ್ಶನ ನೀಡಿದ್ದು, ತಾನೇಕೆ ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡೆ ಅನ್ನೋದನ್ನು ವಿವರಿಸಿದ್ದಾರೆ. ಜುಲೈನಲ್ಲಿ ಈ ಸೀರಿಸ್‌ನ ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿತ್ತು. ಅಲ್ಲಿಂದ ಜಾನಿ ಡೆಪ್ ಹಾಗೂ ಅಂಬರ್ ಹರ್ಡ್ ಬೆಂಬಲಿಗರು ನಿರ್ದೇಶಕಿಯ ವಿರುದ್ಧ ತಿರುಗಿಬಿದ್ದಿದ್ದಾರೆ.

" ಇದೊಂತರ ಎರಡೂ ಕಡೆಯಿಂದ ಬ್ಯಾಲೆನ್ಸ್ ಆಗಿರುವ ದ್ವೇಷ. ಇಬ್ಬರ ಅಭಿಮಾನಿಗಳ ಕಡೆಯಿಂದ 50/50 ದ್ವೇಷವಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಲೈವ್ ಫೀಡ್ ಅನ್ನು ಒತ್ತಾಯ ಪೂರ್ವಕವಾಗಿ ವೀಕ್ಷಣೆ ಮಾಡುತ್ತಿದ್ದೇನೆ. ಆ ಬಳಿಕ ನಾನು ಅದನ್ನು ನನ್ನ ಸ್ನೇಹಿತರೊಂದಿಗೆ ಚರ್ಚೆ ಮಾಡುತ್ತಿದ್ದೇನೆ. ಎಲ್ಲರೂ ಏನು ಹೇಳುತ್ತಿದ್ದಾರೆಂದು ಗಮನಿಸುತ್ತಿದ್ದೇನೆ." ನಿರ್ದೇಶಕಿ ಎಮ್ಮ ಕೂಪರ್ ಹೇಳಿದ್ದಾರೆ.

Depp vs Heard docu-series directed by Emma Cooper released on Netflix is trending

ಈ ಕೇಸ್‌ನಲ್ಲಿ ಸಂದರ್ಶನಗಳು ಹಾಗೂ ತಜ್ಞರನ್ನು ಬಳಸದೇ ಇದ್ದಿದ್ದರಿಂದ ಯಾವ ಪರಿಣಾಮ ಬೀರಿದೆ ಎಂಬುವ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸುವುದಕ್ಕೆ ಈ ಡಾಕ್ಯೂ ಸೀರಿಸ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. 'ಡೆಪ್ Vs ಹರ್ಡ್' ಡಾಕ್ಯೂ ಸೀರಿಸ್ ಯೂಟ್ಯೂಬ್ ಕಮೆಂಟ್‌ಗಳು, ಟಿಕ್‌ಟಾಕ್ ವೀಡಿಯೊಗಳು ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಹೊರಬಿದ್ದ ಚರ್ಚೆಯನ್ನು ಆವಲಂಬಿಸಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ನಿರ್ದೇಶಕಿ ಎಮ್ಮ ಕೂಪರ್‌ಗೆ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಇಂತಹ ಸಂದರ್ಭಗಳಲ್ಲಿ ಮಹಿಳೆಯನ್ನು ಒಂದೇ ರೀತಿ ನಡೆಸಿಕೊಳ್ಳಬೇಕೆ ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ನಿರ್ದೇಶಕಿ "ಈ ಆದರ್ಶ ಜಗತ್ತಿನಲ್ಲಿ, ಸಾರ್ವಜನಿಕವಾಗಿ ಮಹಿಳೆಯರನ್ನು ಒಂದೇ ರೀತಿ ನಡೆಸಿಕೊಳ್ಳುವುದು ಬಹಳ ಬೇಗ ನಿಲ್ಲುತ್ತದೆ." ಎಂದು ಹೇಳಿದ್ದಾರೆ.

ಜಾನಿ ಡೆಪ್ ಹಾಲಿವುಡ್‌ನ ಮೆಗಾಸ್ಟಾರ್. ಅವರ ಅಭಿಮಾನಿಗಳು ಕೋರ್ಟ್‌ನಲ್ಲಿ ಪೈರೆಟ್ಸ್ ಸಿನಿಮಾ ನೋಡುತ್ತಿದ್ದೇವೆ ಎಂದು ಭಾವಿಸಿದ್ದರು. ನಟನನ್ನು ಅಷ್ಟು ಪ್ರೀತಿ ಮಾಡುತ್ತಾರೆ. 60 ವರ್ಷದ ನಟನನ್ನು ಪ್ರೀತಿಸುವ ಮಂದಿ ಅಷ್ಟಿದ್ದಾರೆ. ಅವರ ಪಾತ್ರವನ್ನು ಇಷ್ಟ ಪಡುತ್ತಾರೆ. ಇದು ಹಾಲಿವುಡ್ ಪವರ್" ಎಂದು 'ಡೆಪ್ Vs ಹರ್ಡ್' ನಿರ್ದೇಶಕಿ ಎಮ್ಮ ಕೂಪರ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಸ್ಟಾರ್ ಪವರ್ ಅಧಿಕಾರಿಗಳನ್ನು ಅಥವಾ ಜಡ್ಜ್ ಅನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರೇರಿತರಾಗಿರಬಹುದು ಎಂದೂ ಹೇಳಿದ್ದಾರೆ.

ಸದ್ಯ ಜಾನಿ ಡೆಪ್ ಹಾಗೂ ಅಂಬರ್ ಹರ್ಡ್ ಇಬ್ಬರೂ ಈ ಕೇಸ್‌ ಮರೆತು ಮುಂದಿನ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅಂಬರ್ ಹರ್ಡ್ ಸದ್ಯ ಪ್ಯಾರೀಸ್‌ನಲ್ಲಿ ನೆಲೆಸಿದ್ದು, ಅಲ್ಲಿಂದಲೇ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ.

More from Filmibeat

English summary
Depp vs Heard docu-series directed by Emma Cooper released on Netflix.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X