OTT News: ಜುಲೈ 14 ರಿಂದ ಜುಲೈ 20ರವರೆಗೆ ಓಟಿಟಿಯಲ್ಲಿ ಭರ್ಜರಿ ಬೇಟೆ; ಯಾವ ಸಿನಿಮಾನಾ ಕನ್ನಡದಲ್ಲೂ ನೋಡ್ಬಹುದು?

ಜನರು ಓಟಿಟಿ ಕಂಟೆಂಟ್‌ಗಳಿಗೆ ಅಡಿಕ್ಟ್ ಆಗಿರೋದು ಹೊಸ ವಿಷಯವೇನಲ್ಲ. ಕೆಲವರಂತೂ ಇತ್ತೀಚೆಗೆ ಥಿಯೇಟರ್‌ಗಳಿಗೆ ಹೋಗುವುದಕ್ಕೆ ಇಷ್ಟ ಪಡುವುದಿಲ್ಲ. ಹೊಚ್ಚ ಸಿನಿಮಾಗಳು ಥಿಯೇಟರ್‌ಗೆ ಯಾವಾಗ ಬರುತ್ತೆ ಅಂತ ಕಾದು ಕೂತಿದ್ದ ಕಾಲಗಳು ಮರೆಯಾಗುತ್ತಿದ್ದು, ಓಟಿಟಿಗಾಗಿ ಕಾಯುವಂತಹ ಕಾಲ ಶುರುವಾಗಿದೆ. ಇನ್ನು ಈ ವಾರ ಕೂಡ ಓಟಿಟಿಯಲ್ಲಿ ವೀಕ್ಷಕರಿಗಾಗಿ ಒಳ್ಳೊಳ್ಳೆ ಕಂಟೆಂಟ್‌ಗಳು ಕಾದು ಕೂತಿವೆ.

ಜುಲೈ 14 ರಿಂದ ಜುಲೈ 20ರವರೆಗೆ ಬಹಳ ದಿನಗಳಿಂದ ಕಾದು ಕೂತಿರುವ ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳು ಬಿಡುಗಡೆಯಾಗುತ್ತಿವೆ. ಈಗಾಗಲೇ ಓಟಿಟಿ ವೇದಿಕೆಗಳು ಕೂಡ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿವೆ. ಇದರಲ್ಲಿ ಕೆಲವು ಆಕ್ಷನ್‌, ಕೆಲವು ಕ್ರೈಂ ಡ್ರಾಮಾ, ಹಾರರ್ ಕಾಮಿಡಿ, ಎಲ್ಲೂ ನಿಮ್ಮನ್ನು ಎಂಟರ್‌ಟೈನ್ ಮಾಡುತ್ತವೆ. ಈ ವಾರ ಕೂಡ ಓಟಿಟಿಗೆ ಭರ್ಜರಿ ಮನರಂಜನೆ ಸಿಗೋದು ಗ್ಯಾರಂಟಿ.

Dhanush Kuberaa to The Bhootnii OTT Releases from July 14 to July 20th

ಈ ವಾರ ನೆಟ್‌ಫ್ಲಿಕ್ಸ್, ಪ್ರೈಂ ವಿಡಿಯೋ, ಜಿಯೋ ಹಾಟ್‌ಸ್ಟಾರ್, ಜೀ 5 ಅಂತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಕರು ನಿರೀಕ್ಷೆ ಮಾಡಿದಂತೆ ಕಂಟೆಂಟ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಹಿಂದಿ ಹಾಗೂ ದಕ್ಷಿಣ ಭಾರತದ ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳು ಈ ಓಟಿಟಿ ವೇದಿಕೆಗಳಲ್ಲಿ ವೀಕ್ಷಕರ ಮನ ಸೆಳೆಯುವುದಕ್ಕೆ ಬರುತ್ತಿವೆ. ಹಾಗಿದ್ದರೆ, ಈ ವಾರ ಯಾವೆಲ್ಲ ಸಿನಿಮಾಗಳು, ವೆಬ್ ಸೀರಿಸ್‌ಗಳು ರಿಲೀಸ್ ಆಗಲಿವೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಧನುಷ್-ರಶ್ಮಿಕಾ ಸಿನಿಮಾ 'ಕುಬೇರ'

ಧನುಷ್, ರಶ್ಮಿಕಾ ಮಂದಣ್ಣ ಹಾಗೂ ನಾಗರ್ಜುನ ಕಾಂಬಿನೇಷನ್ ಸಿನಿಮಾ 'ಕುಬೇರ' ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಮೂವರ ಪಾತ್ರವನ್ನು ವೀಕ್ಷಕರು ಮೆಚ್ಚಿ ಕೊಂಡಿದ್ದರು. ಬಾಕ್ಸಾಫೀಸ್‌ನಲ್ಲಿಯೂ 'ಕುಬೇರ' ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಈ ವಾರ ನಿರೀಕ್ಷೆ ಮಾಡಿದಂತೆ ಈ ಸಿನಿಮಾ ಓಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜುಲೈ 18ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಧನುಷ್, ನಾಗಾರ್ಜುನ, ರಶ್ಮಿಕಾ ಜೊತೆಗೆ ಜಿಮ್ ಸರ್ಬ್, ಸುನೈನಾ ಸೇರಿದಂತೆ ಹಲವು ಮಂದಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ಡಬ್ ಆಗಿದ್ದು, ಕನ್ನಡಿಗರು ಕನ್ನಡ ಭಾಷೆಯಲ್ಲಿಯೇ ನೋಡಬಹುದು.

ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ 'ಭೈರವಂ'

ಟಾಲಿವುಡ್ ನಟ ಬೆಲ್ಲಂಕೊಂಡ ಸಾಯಿ ಶ್ರೀವಾಸ್, ನಾರಾ ರೋಹಿತ್ ಹಾಗೂ ಮಂಚು ಮನೋಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಭೈರವಂ' ಓಟಿಟಿಗೆ ಲಗ್ಗೆ ಇಡುತ್ತಿದೆ. ಜುಲೈ 18ರಂದು ಜೀ 5ನಲ್ಲಿ ಪ್ರಸಾರ ಆಗುತ್ತಿದೆ. ಪಕ್ಕಾ ಆಕ್ಷನ್ ಸಿನಿಮಾದಲ್ಲಿ ಮೂವರು ನಟರು ರಗಡ್ ಆಗಿದ್ದಾರೆ.

'ಸಟ್ಟಮಂ ನೀತಿಯುಂ'

'ಸಟ್ಟಮಂ ನೀತಿಯುಂ'.. ಇದು ಮಲಯಾಳಂ ಸಿನಿಮಾ. ಒಬ್ಬ ಸಾಮಾನ್ಯ ಜ್ಞಾನವಿರುವ ವ್ಯಕ್ತಿಯೊಬ್ಬ ತನ್ನಗೆ ಎದುರಾದ ಸವಾಲುಗಳನ್ನು ಹೇಗೆ ಎದುರಿಸಯತ್ತಾರೆ ಎನ್ನುವುದೇ ಕಥೆ. ಅಲ್ಲದೆ ಇದು ಕೋರ್ಟ್ ಡ್ರಾಮ ಆಗಿದ್ದರಿಂದ ಪ್ರೇಕ್ಷಕರು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಸಿನಿಮಾ ಜೀ5ನಲ್ಲಿ ಜುಲೈ 18ರಿಂದ ಪ್ರಸಾರ ಆಗುತ್ತಿದೆ.

ಬಾಲಿವುಡ್‌ನಲ್ಲಿ ಭರ್ಜರಿ ರಿಲೀಸ್‌ಗಳು

ದಕ್ಷಿಣ ಭಾರತ ಅಷ್ಟೇ ಅಲ್ಲ. ಬಾಲಿವುಡ್‌ ಸಿನಿಮಾಗಳು ಓಟಿಟಿಯಲ್ಲಿ ಸದ್ದು ಮಾಡುವುದಕ್ಕೆ ಸಜ್ಜಾಗಿ ನಿಂತಿವೆ. ಆ ಸಿನಿಮಾಗಳ ಪಟ್ಟಿ ಇಲ್ಲಿದೆ. ಈ ಬಾರಿ ಜೀ 5, ಜಿಯೋ ಹಾಟ್‌ಸ್ಟಾರ್ ಹಾಗೂ ನೆಟ್‌ಫ್ಲಿಕ್ಸ್ ಪೈಪೋಟಿಗೆ ಬಿದ್ದು ರಿಲೀಸ್ ಮಾಡುತ್ತಿವೆ. ಹೀಗಾಗಿ ಈ ವಾರ ಭರ್ಜರಿ ಮನರಂಜನೆ ಗ್ಯಾರಂಟಿ.

'ದಿ ಭೂತನಿ' (ಜೀ 5, ಜುಲೈ 18)
ಸ್ಪೆಷಲ್ ಓಪ್ಸ್ (ಜಿಯೋ ಹಾಟ್‌ಸ್ಟಾರ್ನಲ್ಲಿ ಜುಲೈ 18)
ವೀರ್‌ ದಾಸ್: ಪೂಲ್ ವಾಲ್ಯೂಮ್ (ನೆಟ್ಸ್‌ಪ್ಲಿಕ್ಸ್ ಜುಲೈ 18)

More from Filmibeat

English summary
Dhanush Kuberaa to The Bhootnii OTT Releases from July 14 to July 20th.
Read more about: movies dhanush
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X